Infinite Thoughts

Thoughts beyond imagination

ಸ್ವಾತಂತ್ರ್ಯ ದಿನ ಹಾಗೂ ರಕ್ಷಾ ಬಂಧನ ದಿನದ ಶುಭಾಶಯಗಳು!

ಇಂದಿನ ಸ್ವಾತಂತ್ರ್ಯ ದಿನಕ್ಕೆ ವಿಶೇಷ ಅರ್ಥವನ್ನು ದೇಶದ ಜನರೇ ಕಂಡು ಕೊಂಡಿದ್ದಾರೆ.  

ಸ್ವಾತಂತ್ರ್ಯ ಘೋಷಣೆಯಾಗಿ ೭ ದಶಕಕ್ಕೂ ಹೆಚ್ಚು ಸಮಯ ತೆಗೆದು ಕೊಂಡರು, ದೇಶ ಸಂಪೂರ್ಣವಾಗಿ ಐಕ್ಯಗೊಂಡ ಭಾವನೆ ದೇಶದ ಜನತೆಯಲ್ಲಿ ಎಂದು ಮೂಡಿರಲಿಲ್ಲ.  ಆಡಳಿತ ಸುಧಾರಣೆ, ಪ್ರಗತಿಯ ವೇಗ, ಬದಲಾಗುತ್ತಿದ್ದ ತಲೆಮಾರುಗಳ ಆಶೋತ್ತರಗಳು, ಬಡತನ, ನಿರುದ್ಯೋಗ, ಹಸಿವು, ಬ್ರಷ್ಟಾಚಾರ.... ಹೀಗೆ ಹತ್ತು ಹಲವು ಪೆಡಂಬೂತ ಸಮಸ್ಯೆಗಳ ಹೊರೆಯನ್ನು ಇಷ್ಟೂ ವರ್ಷಗಳ ಕಾಲ ಹೊತ್ತು ದೇಶದ ಜನ ಬಸವಳಿದಿದ್ದರು.  

ಬದಲಾದ ನಾಯಕತ್ವದಡಿಯಲ್ಲಿ, ಆರ್ಥಿಕ ಸುಧಾರಣೆ, ಬಲಗೊಂಡ ದೇಶದ ಸುರಕ್ಷತೆ, ಬಡಿದೆಬ್ಬಿಸಿದ ಮಾತೃಭೂಮಿಯ ಅಸ್ಮಿತೆ ಇಂದು ನಮ್ಮೆಲ್ಲರನ್ನು ಒಟ್ಟುಗೂಡಿಸಿದೆ.  ಕಾಶ್ಮೀರ ಸಹ ನಮ್ಮ ದೇಶದಲ್ಲಿ ಒಂದಾಗಿ ಬೆರೆತು ನಮಗೂ ಕಾಶ್ಮೀರದ ಪುರವಾಸಿನಿಯ ಸಾನಿಧ್ಯ ಸಿಗುವಂತೆ ಮಾಡಿದ ಈ ಐತಿಹಾಸಿಕ ಸಂದರ್ಭ ನಿಜಕ್ಕೆ ಇಂದಿನ ಸ್ವಾತಂತ್ರ್ಯ ದಿನಕ್ಕೆ ಹಿಂದಿನ ಆಚರಣೆಗಳಿಗಿಂತ ಹೆಚ್ಚು ಅರ್ಥಪೂರ್ಣಗೊಳಿಸಿದೆ.  ಕಾಶ್ಮೀರ,  ದೇಶದ ವಿಲೀನದೊಂದಿಗೆ ಅಖಂಡ ಭಾರತದ ಸಂಕಲ್ಪಕ್ಕೆ ಒಂದು ಮಹೋನ್ನತವಾದ ಮುನ್ನುಡಿಯನ್ನು ಬರೆದ ಸಂಭ್ರಮ ಇಂದು ದೇಶದ ಜನತೆಯಲ್ಲಿ ಮೂಡಿದೆ.

ಬ್ರಾತೃತ್ವ ಸಂಕೇತವೆನಿಸಿದ ರಕ್ಷಾ ಬಂಧನ ಕೂಡ ಇಂದು ಆಚರಿಸಲಾಗುತ್ತಿದೆ.  ಇಂದಿನ ಈ ಶುಭ ದಿನದಲ್ಲಿ ದೇಶದ ಐಕ್ಯತೆಯನ್ನು, ಸಹೋದರತೆಯ ಭಾವನೆ ಮೂಲಕ ಸ್ವಾತಂತ್ರ್ಯ ದಿನ ಆಚರಣೆ ಸಂಭ್ರಮವನ್ನು ಹೆಚ್ಚಿಸಿದೆ.

ಆದರೆ ಇತ್ತೀಚಿನ ಭೀಕರ ನೆರೆಯ ಹಾವಳಿಯಿಂದ ನಡೆದ ದುರಂತಗಳು, ಆಚರಣೆಯ ಸಂಭ್ರಮವನ್ನು ಕಿತ್ತುಕೊಂಡಿರುವುದು ಬೇಸರದ ಸಂಗತಿಯಾಗಿದೆ.

ಸ್ವಾತಂತ್ರ್ಯ ದಿನ ಹಾಗೂ ರಕ್ಷಾ ಬಂಧನ ದಿನದ ಶುಭಾಶಯಗಳು!

#ಅನಂತಕುಮಾರಹೆಗಡೆ

Related posts