Infinite Thoughts

Thoughts beyond imagination

ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಯಂತಿಯ ಶುಭಾಶಯಗಳು !

ಈ  ದೇಶ ಕಂಡುಕೊಂಡ ಹಲವು ನಾಯಕರುಗಳಲ್ಲಿ, ಲಾಲ್‌ ಬಹದ್ದೂರ್‌ ಶಾಸ್ತ್ರಿ ವಿಶಿಷ್ಟರಾಗಿ ವಿಜೃಂಭಿಸಿದವರು.  ಸ್ವತಂತ್ರ ಭಾರತದ ಎರಡನೇ ಪ್ರಧಾನಿಯಾಗಿದ್ದ ಇವರು ದೇಶದ ಸ್ವಾತಂತ್ರ್ಯಕ್ಕಾಗಿ ಅವಿರತವಾಗಿ ಹೋರಾಟ ನಡೆಸಿದವರು. 

ದೇಶದ ರೈತರು ಮತ್ತು ಸೇನೆಯ ಬಗ್ಗೆ ಅಪಾರ ಗೌರವ, ಪ್ರೀತಿ ಹೊಂದಿದ್ದ ಶಾಸ್ತ್ರಿಯವರು "ಜೈ ಜವಾನ್, ಜೈ ಕಿಸಾನ್" ಘೋಷಣೆ ದೇಶದೆಲ್ಲೆಡೆ ಮಾರ್ದನಿಗೊಳಿಸಿತು.  ರೈತರಿಗಾಗಿ ಹಲವು ಯೋಜನೆಗಳನ್ನು ಅರಂಭಿಸಿದ್ದ, ಸನ್ಮಾನ್ಯ ಶಾಸ್ತ್ರಿಯವರು ಪ್ರಧಾನ ಮಂತ್ರಿ ಆಗಿದ್ದರು ಸಹ ಸರಳತೆಯಿಂದಲೇ ಬದುಕಿ ಭಾರತೀಯರಿಗೆ ಅಂದೆ ಆದರ್ಶಪ್ರಾಯರಾಗಿದ್ದರು. 

ಭಾರತ ಕಂಡ ಅತ್ಯಂತ ಪ್ರಾಮಾಣಿಕ, ದಕ್ಷ ಪ್ರಧಾನಿಗಳ ಸಾಲಿನಲ್ಲಿ ಶಾಸ್ತ್ರಿಗಳು ಅಗ್ರಮಾನ್ಯರು.  ದೇಶಕ್ಕಾಗಿ ಒಂದು ಹೊತ್ತಿನ ಊಟವನ್ನು ತ್ಯಾಗಮಾಡುವಂತೆ ಕರೆ ನೀಡಿದ ಶಾಸ್ತ್ರಿಯವರ ಕೋರಿಕೆಯಂತೆ ಅಂದು ಸಹಸ್ರ-ಸಹಸ್ರ ಜನ ಅವರ ಮಾತಿಗೆ ಬೆಲೆಕೂಟ್ಟು ಆಹಾರ ಮೇಲಿದ್ದ ಬಳಕೆಯ ಒತ್ತಡವನ್ನು ಕಡಿಮೆಗೊಳಿಸಿದ್ದರು.  ನಾಯಕರೆನಿಸಿ ಕೊಂಡವರು ಸಮಾಜವನ್ನು ಜೋಡಿಸಿ ಸೂಕ್ತವಾಗಿ ಹಾಗೂ ನಿರ್ಣಯಾತ್ಮಕವಾಗಿ ಮುನ್ನೆಡೆಸುವಲ್ಲಿ ಶಾಸ್ತ್ರಿಗಳು ನಿಜವಾದ ನಾಯಕರಾಗಿದ್ದರು.  ದೇಶಕ್ಕಾಗಿ ಇವರ ಪ್ರಾಮಾಣಿಕತೆ, ಸ್ವಾಭಿಮಾನ, ದೇಶಾಭಿಮಾನ ಇಂದಿಗೂ ದೇಶದ ಜನತೆಗೆ ಪ್ರೇರಣೆಯಾಗಿದೆ.  ಇಂತಹ ಮಹಾನ್ ಚೈತನ್ಯ ಹುಟ್ಟಿದ ಈ ಶುಭ ಸಂದರ್ಭದಂದು ಅವರನ್ನು ಸ್ಮರಿಸುತ್ತ, ನನ್ನ ಅನಂತ ನಮನಗಳನ್ನು ಸಲ್ಲಿಸುತ್ತೇನೆ. 

ಅಂದ ಹಾಗೆ ಇಂದು ಅಹಿಂಸವಾದಿಯಾದ ಗಾಂಧಿಯವರ ಜನ್ಮ ದಿನವೂ ಹೌದು!

 

#ಅನಂತಕುಮಾರಹೆಗಡೆ

Related posts