Infinite Thoughts

Thoughts beyond imagination

ಭಾರತದ ಮಹಾನ್ ಟೆಫ್ ಧಾನ್ಯ; ಬಾಣಸಿಗರಿಂದ ಟೆಫ್ ಖಾದ್ಯ! - (-ಭಾಗ ೧)

ಉತ್ತರ ಕರ್ನಾಟಕದ ರೈತ ಸಮುದಾಯ, ಕದಂಬ, ಟ್ಯಾಗ್ ಟೇಸ್ಟ್ ಮತ್ತು ಐಎಫ್‌ಸಿಎ (ಭಾರತೀಯ ಪಾಕಶಾಲೆಯ ಬಾಣಸಿಗರ ಒಕ್ಕೂಟ) ನಡುವಿನ ಸಹಯೋಗದ ಒಂದು ಪ್ರಯತ್ನ-

ಕದಂಬವು ೨೦೦೦ದಲ್ಲಿ ಪ್ರಾರಂಭವಾದಾಗಿನಿಂದ ಕೃಷಿ ಉತ್ಪನ್ನಗಳನ್ನು ಉತ್ತೇಜಿಸುತ್ತಿದೆ, ಜೊತೆಗೆ ಕೃಷಿ ಸಮುದಾಯವನ್ನು ಮಾರುಕಟ್ಟೆ ಸಂಪರ್ಕದೊಂದಿಗೆ ಪೋಷಿಸುವುದು ಮತ್ತು ಹೊಸ ಉದಯೋನ್ಮುಖ ತಂತ್ರಜ್ಞಾನಗಳನ್ನು ಕೃಷಿ ರಂಗಕ್ಕೆ ಪರಿಚಯಿಸುವುದು, ಆದ್ಯತೆಯ ಕಾರ್ಯವಾಗಿದೆ. ಕದಂಬದ ಪ್ರಾಥಮಿಕ ಧ್ಯೇಯವೆಂದರೆ ಬದಲಾಗುತ್ತಿರುವ ಜೀವನಶೈಲಿಗೆ ಹೊಂದಿಕೊಳ್ಳುವ ಕೃಷಿ ಸಮುದಾಯದ ಸಮಗ್ರ ಬೆಳವಣಿಗೆಯನ್ನು ಖಚಿತಪಡಿಸುವುದು, ಜೊತೆಗೆ ಸಂಕೀರ್ಣವಾಗುತ್ತಿರುವ, ಆದರೆ ಇನ್ನೂ ಕ್ರಿಯಾತ್ಮಕವಾಗಿರುವ ನೈಸರ್ಗಿಕ ಸಂಪನ್ಮೂಲಗಳ ಅಲಭ್ಯತೆಯ ನಡುವೆಯೂ ಹೆಚ್ಚಿನ ಫಸಲು ತೆಗೆಯುವುದು.

ಸಾಮಾನ್ಯವಾಗಿ ನಮ್ಮ ಪ್ರಾದೇಶಿಕ ರೈತರು ಸಾಂಪ್ರದಾಯಿಕ ಬೆಳೆಗಳಿಗೆ ಒಡ್ಡಿಕೊಂಡು, ಇತರ ನಿರೀಕ್ಷಿತ ಬೆಳೆಗಳ ತಮ್ಮ ಪರಿಧಿಯನ್ನು ಮೀರಿ ಅನ್ವೇಷಿಸಲು ಧೈರ್ಯ ಮಾಡುತ್ತಿರಲಿಲ್ಲ. ಕೃಷಿ ಉತ್ಪನ್ನಗಳ ಮಾರುಕಟ್ಟೆ ಹೀರಿಕೊಳ್ಳುವಿಕೆಯ ಅನಿಶ್ಚಿತತೆ ಮತ್ತು ಅದರ ಆರ್ಥಿಕತೆಯು ರೈತರ ಮೇಲೆ ತೀವ್ರ ಪರಿಣಾಮ ಬೀರಿತು. ಮತ್ತು ಹೊಸ ಮಾರ್ಗಗಳನ್ನು ತೆಗೆದುಕೊಳ್ಳುವಲ್ಲಿ ರೈತ ಸಮುದಾಯ ಯಾವುದೇ ಸ್ವಯಂಪ್ರೇರಿತ ಪಾಲ್ಗೊಳ್ಳುವಿಕೆಯನ್ನು ಮಾಡುತ್ತಿರಲಿಲ್ಲ. ಅಲ್ಲೊಂದು ಇಲ್ಲೊಂದು ಸಣ್ಣ ಪ್ರಯತ್ನಗಳು ನಡೆಯುತ್ತಿದ್ದರೂ, ವಿಫಲತೆ ರೈತರನ್ನು ಕಂಗಲ್ಲು ಮಾಡುತ್ತಿತ್ತು. ಅವರು ಯಾವುದೇ ಪ್ರಗತಿಯಿಲ್ಲದೆ ಪಯಣಿಸಿದ ಹಾದಿಯಲ್ಲೇ ಸಾಗುತ್ತಿದ್ದರು.

ಕೃಷಿ, ತೋಟಗಾರಿಕೆ ಕ್ಷೇತ್ರದಲ್ಲಿ ನೀರು, ರಸಗೊಬ್ಬರಗಳು ಮತ್ತು ಕೃಷಿ ಪದ್ಧತಿಗಳು ಬಹಳ ನಿರ್ಣಾಯಕ ಒಳಹರಿವುಗಳಾಗಿವೆ. ಮತ್ತು ಈ ಪ್ರಕ್ರಿಯೆಗೆ ಪೂರಕವಾಗಿ, ನಮ್ಮ ರೈತರು ಸಾಂಪ್ರದಾಯಿಕ ಹಾಗು ದೇಶೀಯ ಜ್ಞಾನ-ಸಂಪತ್ತಿನಲ್ಲಿ ತುಂಬಾ ಶ್ರೀಮಂತರಾಗಿದ್ದರು. ಆದಾಗ್ಯೂ, ಇವುಗಳನೆಲ್ಲಾ ಕಸಿದುಕೊಂಡು, ಕೃತಕ-ಸಂಶ್ಲೇಷಿತ ರಾಸಾಯನಿಕ ಗೊಬ್ಬರಗಳನ್ನು, ನಿಷ್ಪ್ರಯೋಜಕ ಸಬ್ಸಿಡಿ ಆರ್ಥಿಕತೆಗಳೊಂದಿಗೆ, ಕೃಷಿ ಸಮುದಾಯಗಳನ್ನು ಹೊಸ ಆಧುನಿಕ ಕೃಷಿ ಪದ್ಧತಿಗಳೆಂದು ರೈತರ ಹಾದಿ ತಪ್ಪಿಸಲಾಯ್ತು. ನೀರು ತೀವ್ರವಾಗಿ ಒತ್ತಡಕ್ಕೊಳಪಟ್ಟು, ರೈತರು ಭಾರಿ ವೆಚ್ಚದೊಂದಿಗೆ ಅವುಗಳನ್ನು ಪಡೆಯಲು ಹೆಚ್ಚಿನ ಆಳಕ್ಕೆ ಇಳಿದರು.

ಈ ಸಂದರ್ಭದಲ್ಲಿ ರೈತರಿಗೆ ಶಿಕ್ಷಣ ನೀಡಲು ನಮ್ಮ ಸರ್ಕಾರಗಳು, ಸಂಬಂದಿಸಿದ ಸಂಸ್ಥೆಗಳು ಮತ್ತು ಇತರ ಕೃಷಿ ಉದ್ಯಮಗಳು ಮುಂದೆ ಬಂದಿದ್ದು ಅತಿ ಕಡಿಮೆಯೇ. ರೈತರನ್ನು ಅದೇ ಜಾಲದಲ್ಲಿ ಸಿಲುಕಿಸುವುದನ್ನು ಮುಂದುವರೆಸಿದವು, ಇದರ ಪರಿಣಾಮವಾಗಿ ಈ ದೇಶದಲ್ಲಿ, ವಿಶೇಷವಾಗಿ ಕಳೆದ ಎರಡು ದಶಕಗಳಲ್ಲಿ ರೈತರ ಆತ್ಮಹತ್ಯೆ ಪ್ರಮಾಣವು ಹೆಚ್ಚಾಗುತ್ತಲೇ ಇದೆ.

ಆದ್ದರಿಂದ ಕೃಷಿ ರಂಗದ ಬೆಳವಣಿಗೆ ಒಂದೋ ಕುಂಠಿತಗೊಂಡಿತು ಅಥವಾ ನಕಾರಾತ್ಮಕ ಪ್ರವೃತ್ತಿಯನ್ನು ತೆಗೆದುಕೊಂಡಿತು!

ಪ್ರಾಸಂಗಿಕವಾಗಿ, ರಾಜಕೀಯ ಕ್ಷೇತ್ರದಿಂದ ದೂರ ಸರಿದು, ೧೯೯೯-೨೦೦೦ದಲ್ಲಿ ನಾವು ಕದಂಬವನ್ನು ಸ್ಥಾಪಿಸಿದೆವು. ಇದರ ಮೂಲ ಉದ್ದೇಶ ರೈತ ಸಮುದಾಯಕ್ಕೆ ಹೊಸ ಭರವಸೆ ತರುವುದು, ಪೂರಕವಾದ ಗ್ರಾಮೀಣಾಭಿವೃದ್ಧಿ ಮತ್ತು ಸುಸ್ಥಿರ ಪರಿಸರ ಕಾಯ್ದುಕೊಳ್ಳುವುದನ್ನು ಗುರಿಯಾಗಿಸಿಕೊಂಡಿರುವುದು.

ಈ ನಿಟ್ಟಿನಲ್ಲಿ, ಕದಂಬದಲ್ಲಿ ನಾವು, ಹಲವು ಅನಿಶ್ಚಿತತೆಗಳ ನಡುವೆಯೂ ಆರ್ಥಿಕ ವೈಭವವನ್ನು ಸಾಧಿಸಬಲ್ಲ ಹೊಸ ಬೆಳೆಗಳನ್ನು ನಮ್ಮ ರೈತರಿಗೆ ಪರಿಚಯಿಸಲು ಪ್ರಯತ್ನಿಸಿದ್ದೇವೆ. ಇದು ಅಗರ್ ವುಡ್, ಗಮ್-ಲ್ಯಾಕ್ ಕೃಷಿ ಮತ್ತು ವೆನಿಲ್ಲಾ, ಕೋಕೊ ಮತ್ತು ಗೋಡಂಬಿ ಬೆಳೆಗಳ ಪುನಶ್ಚೇತನಕ್ಕೆ ನಮ್ಮ ರಾಷ್ಟ್ರದ ಈ ಭಾಗದಲ್ಲಿ ಪ್ರಯತ್ನವಾಗಿದೆ. ರೈತರಿಗೆ ಸಂಬಂದಿಸಿದ ಅಧಿಕೃತ ಸಂಸ್ಥೆಗಳೊಂದಿಗೆ ಸರಿಯಾದ ತರಬೇತಿ ಮತ್ತು ಸೂಕ್ತ ಕ್ಷೇತ್ರಿಯ ಅಭ್ಯಾಸಗಳನ್ನು ನೀಡಲಾಯಿತು. ಈ ಎಲ್ಲ ಬೆಳೆಗಳು ಹೆಚ್ಚಿನ ನೀರಿನ ಬೇಡಿಕೆ ಅಥವಾ ನುರಿತ ಮಾನವಶಕ್ತಿಗಳ ಬೇಡಿಕೆಯಿಲ್ಲದ ಬೆಳೆಗಳಾಗಿದ್ದವು. ಮಾರುಕಟ್ಟೆಗಳನ್ನು ಹೊಲಗಳಿಗೆ ಜೋಡಿಸಿ ಈ ಹೊಸ ಬೆಳೆಗಳಿಗೆ ಸಂಪರ್ಕ ಕಲ್ಪಿಸಲಾಯಿತು. ಈ ಉಪಕ್ರಮಗಳನ್ನು ನಮ್ಮ ಕ್ಷೇತ್ರದೊಳಗಿನ ಕೃಷಿ ಸಮುದಾಯವು ತುಂಬು ವಿಶ್ವಾಸದಲ್ಲಿ ಅಂದೇನು ಸ್ವಾಗತಿಸಲಿಲ್ಲ; ಆದರೆ ದೂರದ ಪ್ರದೇಶಗಳ ರೈತರು ಈ ಪ್ರಗತಿಯನ್ನು ತಿಳಿದುಕೊಳ್ಳುವಲ್ಲಿ ಹೆಚ್ಚಿನ ಉತ್ಸಾಹ ತೋರಿ, ನಂತರ ಅವುಗಳನ್ನು ತಮ್ಮ ಸ್ವಂತ ಸ್ಥಳಗಳಿಗೆ ಪರಿಚಯಿಸಿದರು.

ಇದರ ಫಲ, ಈ ಪ್ರವರ್ತಕ ಚಟುವಟಿಕೆಗಳ ಪರಿಣಾಮದಿಂದಾಗಿ, ಅಗರ್‌ವುಡ್ ಅನ್ನು ಜಿಲ್ಲೆಯ ೧೩೮೧+ ರೈತರು ಸುಮಾರು ೦.೩೦ ಕೋಟಿ ರೂಪಾಯಿಗಳ ಸಬ್ಸಿಡಿ ಅನುದಾನದೊಂದಿಗೆ ಮತ್ತು ಗಮ್ ಲ್ಯಾಕ್ ಅನ್ನು ಒಟ್ಟು ೨೬೪ ಹೆಕ್ಟೇರ್ ಪ್ರದೇಶದಲ್ಲಿ ೪೬೩+ ರೈತರು ಬೆಳೆಸಿ, ಸಂಸ್ಕರಿಸುತ್ತಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಮತ್ತು ಅದಕ್ಕೂ ಮೀರಿ. ಅಂತೆಯೇ, ಕೋಕೊವನ್ನು ಜಿಲ್ಲೆಯ ೫೮೨೯+ ರೈತರು ಬೆಳೆದಿದ್ದಾರೆ ಮತ್ತು ಬಿಡುಗಡೆಯಾದ ಸಬ್ಸಿಡಿ ೩.೮೯ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನದಾಗಿದೆ. ಈ ಸಾಧನೆಯ ಸಂಗತಿಗಳು ಮತ್ತು ಅಂಕಿ ಅಂಶಗಳ ಇನ್ನಿತರ ಬೆಳೆಗಳಾದ ಗೋಡಂಬಿ, ಟೆಫ್ ಬೀಜಗಳು, ಪಾಲ್ಮರೋಸಾ ಮುಂತಾದ ಬೆಳೆಗಳಲ್ಲಿಯೂ ಸಹ ಪ್ರತಿಫಲಿಸುತ್ತಲೇ ಇದೆ. ಹೆಚ್ಚಿನ ಮಾಹಿತಿಗಾಗಿ ಈ ಜಾಲ-ತಾಣಕ್ಕೆ ಭೇಟಿ ನೀಡಿ ಪಡೆಯಬಹುದಾಗಿದೆ. www.kadambafoundation.in

ಇಂದು, ನಾವು ನಮ್ಮ ಸಾಧನೆಗಳ ಬಗ್ಗೆ ಸುಲಭವಾಗಿ ಮಾತನಾಡುತ್ತೇವೆ. ಆದರೆ ಈ ನಿಟ್ಟಿನಲ್ಲಿ ಸುಮ್ಮನೆ ಒಂದು ಸಂವಹನ ನಡೆಸಿ ಈ ಸಾಧನೆಗಳು ಸಂಭವಿಸಿದ್ದಲ್ಲ. ಬದಲಿಗೆ ನಮ್ಮ ಸಾಂಪ್ರದಾಯಿಕ ರೈತರಿಗೆ ಮನವರಿಕೆ ಮಾಡುವ ವಿಧಾನವು ತನ್ನದೇ ಆದ ಸಮಯವನ್ನು ತೆಗೆದುಕೊಂಡಿತ್ತು ಮತ್ತು ನಮಗೆ ಹಲವು ಅಮೂಲ್ಯವಾದ ಪಾಠಗಳನ್ನು ಈ ಜಂಟಿ ಪ್ರಯಾಣ ಕಲಿಸಿದೆ. ಇದು ನಿಜಕ್ಕೂ ಕಲಿಕೆ ಮತ್ತು ಅರಿಯದ ವಿವಿಧ ಪ್ರಕ್ರಿಯೆಗಳ ಜ್ಞಾನ ಸಂಪಾದನೆಯ ಪ್ರಯಾಣವಾಗಿತ್ತು.

ವಿವಿಧ ಕಾರ್ಯಾಗಾರಗಳು, ಸೆಮಿನಾರ್‌ಗಳು, ಕ್ಷೇತ್ರ ಭೇಟಿಗಳು, ಸರಿಯಾದ ಸಂಪನ್ಮೂಲಗಳನ್ನು ಪೂರೈಸುವುದು, ವೈಜ್ಞಾನಿಕ ಮತ್ತು ಸಂಶೋಧನಾ ಸಮುದಾಯದೊಂದಿಗೆ ಚರ್ಚೆ, ಮಾರುಕಟ್ಟೆಯನ್ನು ಸಂಪರ್ಕಿಸುವುದು, ಸರ್ಕಾರಿ ಸಂಸ್ಥೆಗಳ ಪಾಲ್ಗೊಳ್ಳುವಿಕೆ, ವಿವಿಧ ನಿಗಮಗಳ ಆಸಕ್ತಿ, ಹೀಗೆ ಹತ್ತು ಹಲವು ಕಾರ್ಯ ಚಟುವಟಿಕೆಗಳಲ್ಲಿ, ನಮ್ಮ ಪಾತ್ರ ಹಾಗು ವೈಯಕ್ತಿಕ ಪಾಲ್ಗೊಳ್ಳುವಿಕೆ ಸಾರ್ವಜನಿಕರ ಗಮನಕ್ಕೆ ಹೆಚ್ಚಾಗಿ ಬಾರದಿರುವುದು ಸಹ ಅಷ್ಟೇ ಸತ್ಯ.

ಜಿಲ್ಲೆಯ ತೋಟಗಾರಿಕಾ ಬೆಳವಣಿಗೆಯ ಸೂಚ್ಯಂಕವು ಒಂದು ದಶಕದಲ್ಲಿ ಕೇವಲ ಶೇ.೨೬ ರಿಂದ ಶೇ.೫೬ ಕ್ಕೆ ಏರಿದೆಯೆಂದರೆ, ಈ ದಿಕ್ಕಿನಲ್ಲಿ ಕದಂಬ ಮಾಡಿದ ಪ್ರಯತ್ನಗಳ ಪ್ರಮಾಣವನ್ನು ಈ ಬೆಳವಣಿಗೆ ಸೂಚಿಸುತ್ತದೆ.

ಪ್ರತಿಯೊಂದು ಬೆಳೆಗಳನ್ನು ಉತ್ತೇಜಿಸುವಲ್ಲಿ ನಮ್ಮ ಪ್ರಯತ್ನಗಳು ಸಮಗ್ರವಾಗಿ ವಿಕಸನಗೊಂಡಿದೆ. ಕೇವಲ ಬೀಜಗಳನ್ನು-ಸಸಿಗಳನ್ನು ವಿತರಿಸುವ ಪರಿಚಯದೊಂದಿಗೆ ಅದು ನಿಲ್ಲುವುದಿಲ್ಲ; ವಾಸ್ತವವಾಗಿ, ಇದು ಕೃಷಿ ಪದ್ಧತಿಗಳಲ್ಲಿ ರೈತನ ಕೈ ಹಿಡಿಯುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ. ಈ ಪ್ರಕ್ರಿಯೆಯಲ್ಲಿ, ಸಬ್ಸಿಡಿ ನೀಡುವುದು ಸಹ ಸಂಕಷ್ಟದಲ್ಲಿರುವ ರೈತರಿಗೆ ಸಹಾಯ ಮಾಡಲು ತರಲಾದ ಒಂದು ಪ್ರಬಲ ಅಂಶವಾಗಿದೆ. ನಂತರ ಬೆಳೆ ಉತ್ಪಾದನೆಗಳನ್ನು ನೇರವಾಗಿ ಕದಂಬ ಅಥವಾ ಖಾಸಗಿ ಕಂಪನಿಗಳು ಖರೀದಿಸುತ್ತವೆ, ಇವುಗಳನ್ನು ಪ್ರಮುಖ ಮಾರುಕಟ್ಟೆಗಳಾಗಿ ಜೋಡಿಸಿ ಮತ್ತು ಆದ್ದರಿಂದ ರೈತನು ಯಾವುದೇ ಅನಿಶ್ಚಿತತೆಗಳಿಂದ ಹಾನಿಯನ್ನು ತಡೆದುಕೊಳ್ಳುತ್ತಾನೆ ಹಾಗು ಅನಿಶ್ಚತೆ-ಮುಕ್ತ ಖರೀದಿಯನ್ನು ಸಹ ಪಡೆಯುತ್ತಾನೆ.

 

ಕದಂಬ ಈಗ ಗ್ರಾಹಕ ಉಪಯುಕ್ತತೆಗಳ ಕ್ಷೇತ್ರದಲ್ಲಿ ಹೊಸದಾಗಿ ಪರಿಚಯಿಸಲಾದ ಕೆಲವು ಬೆಳೆಗಳಿಗೆ ಹೊಸ ದಿಗಂತಗಳನ್ನು ರಚಿಸುವ ಮತ್ತೊಂದು ವಿಸ್ತೃತ ರಂಗಕ್ಕೆ ಇಳಿದಿದೆ.

ಕದಂಬದ ಕೃಷಿ-ಉತ್ಪನ್ನಗಳ ಪಟ್ಟಿಗೆ ಟೆಫ್ ಧಾನ್ಯವು ಹೊಸದಾಗಿ ಪ್ರವೇಶ ಪಡೆದಿದೆ. ಟೆಫ್ ಆಫ್ರಿಕನ್ ಖಂಡದ ಸಾಂಪ್ರದಾಯಿಕ ಇಥಿಯೋಪಿಯನ್ ಮತ್ತು ಎರಿಟ್ರಿಯನ್ ಆಹಾರವನ್ನು ರೂಪಿಸುತ್ತದೆ ಮತ್ತು ಅದರ ಘಟಕಗಳ ವಿಷಯದಲ್ಲಿ ಬಹಳ ಸಮೃದ್ಧವಾಗಿದೆ. ಪ್ರಾಚೀನ ಧಾನ್ಯವಾದ ಟೆಫ್ ಶೇ. ೧೦೦ ರಷ್ಟು ಅಂಟು ರಹಿತವಾಗಿದೆ ಮತ್ತು ಹೆಚ್ಚು ಅಮೈನೊ ಆಸಿಡ್ ಲೈಸಿನ್, ಅಗತ್ಯ ಕೊಬ್ಬಿನಾಂಶಗಳು, ಆಹಾರದ ನಾರು, ಕ್ಯಾಲ್ಸಿಯಂ ಮತ್ತು ಕಬ್ಬಿಣದ ರೂಪದಲ್ಲಿ ಖನಿಜಗಳು, ಫೈಟೊಕೆಮಿಕಲ್ಸ್ ಮತ್ತು ಸಾಮಾನ್ಯ ಪ್ರೋಟೀನ್-ಭರಿತ ಅಂಶಗಳನ್ನು ಒಳಗೊಂಡಿದೆ. ಹೀಗಾಗಿ, ಆಫ್ರಿಕನ್ ಕ್ರೀಡಾಪಟುಗಳ ಸಾಹಸಗಳಲ್ಲಿ ಸಹಿಷ್ಣುತೆಯ ಯಶಸ್ಸಿನ ಹಿಂದಿನ ಮೂಲ ಶಕ್ತಿ, ಟೆಫ್ ಧಾನ್ಯಗಳಾಗಿವೆ.

ಟೆಫ್ ಧಾನ್ಯಗಳೊಳಗಿನ ಮ್ಯಾಕ್ರೋ (ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್ ಗಳು ಮತ್ತು ಕೊಬ್ಬುಗಳು) ಮತ್ತು ಸೂಕ್ಷ್ಮ ಪೋಷಕಾಂಶಗಳು (ಜೀವಸತ್ವಗಳು ಮತ್ತು ಖನಿಜಗಳು) ಸಂಯೋಜನೆಯು ಸುಸ್ಥಿರ ಚಟುವಟಿಕೆಗಳಿಗೆ ಅಗತ್ಯವಾದ ಇಂಧನವನ್ನು ರೂಪಿಸುತ್ತದೆ ಮತ್ತು ಆದ್ದರಿಂದ ಆಫ್ರಿಕನ್ ಕ್ರೀಡಾಪಟುಗಳು ತಮ್ಮ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚಿನ ಯಶಸ್ಸನ್ನು ಪಡೆಯುತ್ತಿದ್ದಾರೆ. ಅಂತೆಯೇ, ಧಾನ್ಯದಲ್ಲಿ ಸಮೃದ್ಧವಾದ ಆಹಾರದ ನಾರಿನ ಉಪಸ್ಥಿತಿಯು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಆಹಾರ ಸೇವನೆಯ ನಂತರ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಕಬ್ಬಿಣ ಮತ್ತು ಕ್ಯಾಲ್ಸಿಯಂ ರೂಪದಲ್ಲಿ ಹೇರಳವಾಗಿರುವ ಸೂಕ್ಷ್ಮ ಪೋಷಕಾಂಶಗಳು ಜೀರ್ಣಕಾರಿ ಅಸ್ವಸ್ಥತೆಗಳನ್ನು ನಿವಾರಿಸುವುದರೊಂದಿಗೆ, ಜೊತೆಗೆ ಅವುಗಳ ಮಧುಮೇಹ ವಿರೋಧಿ, ಕ್ಯಾನ್ಸರ್ ವಿರೋಧಿ ಮತ್ತು ಆಂಟಿ-ಆಕ್ಸಿಡೇಟಿವ್ ಗುಣ-ಲಕ್ಷಣಗಳೊಂದಿಗೆ ಸ್ವಾಸ್ಥ್ಯವನ್ನು ಉತ್ತೇಜಿಸುತ್ತವೆ.

ಟೆಫ್ ಧಾನ್ಯಗಳು, ನಮ್ಮ ಆಹಾರದಲ್ಲಿ ಸೇವಿಸಿದಾಗ, ಪೌಷ್ಠಿಕಾಂಶ ಮತ್ತು ಪ್ರೋಟೀನ್ ಆವರಣಗಳಿಂದ ಬಳಲುತ್ತಿರುವ ಅಸೌಖ್ಯ ಜನಗಳು ಸೇರಿದಂತೆ ಸಮಾಜದ ದುರ್ಬಲ ವರ್ಗಗಳಲ್ಲಿನ ಕಬ್ಬಿಣಾ೦ಶ ಕೊರತೆಯನ್ನು, ಸಂಪೂರ್ಣವಾಗಿ ನಿರ್ಮೂಲನೆ ಮಾಡಬಹುದಾಗಿದೆ. ಈ ರೀತಿಯ ಸಮೃದ್ಧ ಕಬ್ಬಿಣದ ಅಂಶವು ಜಗತ್ತಿನಾದ್ಯಂತ ಇದೇ ರೀತಿಯಲ್ಲಿ ಇನ್ಯಾವುದೇ ಆಹಾರ ಧಾನ್ಯಗಳಲ್ಲು ಸಿಗುವುದಿಲ್ಲ. ಕ್ರೀಡಾ ವ್ಯಕ್ತಿತ್ವಗಳನ್ನು ಉತ್ತೇಜಿಸುವುದರ ಜೊತೆಗೆ ಬಳಲುತ್ತಿರುವ ಇಲ್ಲಿನ ನಮ್ಮ ಜನಸಂಖ್ಯೆಗೆ ಈ ಧಾನ್ಯವು ಬಹಳ ವರದಾನವಾಗಿದೆ.

ಈ ಅಗತ್ಯ ಘಟಕಗಳು ಮತ್ತು ಅದರ ಹೆಚ್ಚಿನ ಉಪಯುಕ್ತತೆಯ ಗುಣ-ಲಕ್ಷಣಗಳೊಂದಿಗೆ, ಟೆಫ್ ಎಲ್ಲಾ ವಯಸ್ಸಿನವರಿಗೆ ಸರಿಯಾದ ಆಹಾರವಾಗಿದೆ ಮತ್ತು ಇಲ್ಲಿರುವ ನಮ್ಮ ಜನರಿಗೆ ಸರಿಯಾದ ಸೂಕ್ತ ಆಹಾರದ ಮೂಲ ಎಂದು ಕರೆಯಬಹುದಾಗಿದೆ. ಇದೀಗ ಒಟ್ಟಾರೆ, ಇಂದಿನ ಭಾರತೀಯ ಪರಿಸ್ಥಿತಿಗಳಲ್ಲಿ ನಮ್ಮ ಆಹಾರ ತಟ್ಟೆಯಲ್ಲಿ ಅಗತ್ಯವಿರುವ ಎಲ್ಲಾ ಪೌಷ್ಠಿಕಾಂಶದ ಅವಶ್ಯಕತೆಗಳನ್ನು ಇದು ಹೇರಳವಾಗಿ ನೀಡುತ್ತದೆ. ಅದರಲ್ಲೂ ನಮ್ಮ ಕ್ರೀಡಾಪಟುಗಳಿಗೆ, ತಮ್ಮ ಕ್ರೀಡಾ ಪ್ರದರ್ಶನಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು, ಸುಸ್ಥಿರವಾಗಿ ಶಕ್ತಿಯನ್ನು ಪಡೆಯಲು, ಸದೃಡವಾಗಿರಲು ಮತ್ತು ಆರೋಗ್ಯವಾಗಿರಲು ಧಾನ್ಯಗಳಂತಹ ಟೆಫ್ ತೀವ್ರ ಅಗತ್ಯವಿದೆ..... ಅಲ್ಲವೇ?

ಟೆಫ್ ತಟಸ್ಥ ರುಚಿಗೆ ಹೆಸರುವಾಸಿಯಾಗಿದೆ ಮತ್ತು ಆದ್ದರಿಂದ ಎಲ್ಲಾ ರೀತಿಯ ಪಾಕವಿಧಾನಗಳನ್ನು, ಉಪ್ಪು-ಸಿಹಿ-ಖಾರ ತಿಂಡಿಗಳು, ಮುಖ್ಯ ಕೋರ್ಸ್ ಆಹಾರವನ್ನು ಒಳಗೊಂಡಂತೆ ತಯಾರಿಸಬಹುದು ಮತ್ತು ಇತರ ಆಹಾರ ಧಾನ್ಯಗಳೊಂದಿಗೆ ಬೆರೆಸಲುಬಹುದಾಗಿದೆ. ಟೆಫ್ ಅನ್ನು ಭಾರತೀಯ, ಚೈನೀಸ್, ಆಫ್ರಿಕನ್ ಅಥವಾ ಯಾವುದೇ ಖಂಡಾಂತರ ಭಕ್ಷ್ಯಗಳಲ್ಲಿ ಬಳಸಬಹುದಾಗಿದೆ.

ಹೆಚ್ಚು ಪೌಷ್ಠಿಕವಾದ ಟೆಫ್ ಅನ್ನು, ರೈತರು ಯಾವುದೇ ತೊಂದರೆಗಳಿಲ್ಲದೆ ಬೆಳೆ ಬೆಳೆಯಬಹುದಾಗಿದೆ. ಟೆಫ್ ಬೆಳೆಗಳನ್ನು ಬೆಳೆಯಲು ನೀರಿನ ಅವಶ್ಯಕತೆ ಸಹ ತುಂಬಾ ಕಡಿಮೆ.

ಹೀಗಾಗಿ, ನಿಸ್ಸಂಶಯವಾಗಿ, ಟೆಫ್ ಧಾನ್ಯವನ್ನು ಇಂದಿನ ಮತ್ತು ಭವಿಷ್ಯದ ದಿನಗಳ superfood ಎಂದೇ ಕರೆಯಲಾಗುತ್ತಿದೆ!

ಟೆಫ್‌ ಧಾನ್ಯವನ್ನು ಆಯ್ಕೆ ಮಾಡಿಕೊಂಡ ನಂತರ, ಭಾರತೀಯ ನೆಲದಲ್ಲಿ ಇದನ್ನು ಬೆಳೆಸುವ ಸವಾಲನ್ನು, ಸಿಎಫ್‌ಟಿಆರ್‌ಐ - ಮೈಸೂರು (ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನೆ ಕೇಂದ್ರ) ವಿಶೇಷವಾಗಿ ಅಭಿವೃದ್ಧಿಪಡಿಸಿದ ಕೃಷಿ ತಂತ್ರಜ್ಞಾನವನ್ನು ಮೂಲಕ ಯಶಸ್ವಿಯಾಗಿ ಎದುರಿಸಲಾಯಿತು. ಟೆಫ್ ಧಾನ್ಯ ಬಹಳ ಕಠಿಣ ಬರ-ನಿರೋಧಕ ಬೆಳೆ ಮತ್ತು ಒಣ-ಭೂ ಪ್ರದೇಶದ ರೈತರಿಗೆ ಹೇಳಿ ಮಾಡಿಸಿದಂತ ಬೆಳೆಯಾಗಿದೆ. ಮುಂದುವರಿದು, ಕದಂಬ, ಟೆಫ್ ಕೃಷಿ ಪ್ರಕ್ರಿಯೆಯನ್ನು ಅದರ ನಾಲ್ಕನೆ ಪೀಳಿಗೆಯ ಹೈಬ್ರಿಡ್ ಜೈವಿಕ ಗೊಬ್ಬರದ ಬಳಕೆಯನ್ನು ಉತ್ತರ ಕನಾಟಕದ ರೈತರು ಪ್ರಯೋಗಿಸಿ ಬೆಲೆ ತೆಗೆಯುವುದರಲ್ಲಿ ಸಫಲರಾದರು.

ಮತ್ತು, ಫಲಿತಾಂಶಗಳು ಸಹ ಅದ್ಭುತವಾದವು!!

ಟೆಫ್‌ ಬೆಳೆಯುವಲ್ಲಿ ಕೂಡ ಆಗುವ ಖರ್ಚು ಸಹ ಕನಿಷ್ಠ ಸವಾಲುಗಳೊಂದಿಗೆ ತುಂಬಾ ಕೈಗೆಟುಕುವಂತಾಯಿತು. ನೀರಿನ ಕೊರತೆ, ಇದುವರೆಗೂ ಪ್ರಬಲ ಸವಾಲೆಂದೇ ಪರಿಗಣಿಸಲ್ಪಟ್ಟಿತ್ತು, ಆದರೆ ಅದು ಈಗ ಸ್ನೇಹಪರವಾಗಿ ಬದಲಾಗಿದೆ. ಇತ್ತೀಚಿನವರೆಗೂ ಕೇವಲ ಎರೆಡು ಹೊತ್ತಿನ ಊಟಾಕ್ಕಾಗಿ ಪರಿತಪಿಸುತ್ತಿದ್ದ ರೈತರು ಈಗ ದೊಡ್ಡ ಆರ್ಥಿಕತೆಯ ಕನಸು ಕಾಣಬಹುದು ಮತ್ತು ಅದನ್ನು ದಕ್ಕಿಸಿಕೊಳ್ಳಲೂಬಹುದು!

ನಿಜಕ್ಕೂ, ಕದಂಬ ಟೆಫ್ ಧಾನ್ಯವನ್ನು ಭಾರತೀಯ ಆಹಾರ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ super-food ಆಗಿ ಮಾರ್ಪಡಿಸಿದಲ್ಲದೆ, ಅದನ್ನು “Make in India” ಕೃಷಿ ಉತ್ಪನ್ನವನ್ನಾಗಿ ಸಹ ಪರಿವರ್ತಿಸಿದೆ!

...... ಮುಂದುವರಿಯುವುದು.....

#ಅನಂತಕುಮಾರಹೆಗಡೆ

Related posts