Infinite Thoughts

Thoughts beyond imagination

ನೇತಾಜೀ ಸುಭಾಷ್ ಚಂದ್ರ ಬೋಸ್ ಜಯಂತಿಯ ಶುಭಾಶಯಗಳು!

ಭಾರತ ದೇಶಕಂಡ ಅಪ್ರತಿಮ ದೇಶಭಕ್ತ, ವೀರ ಸೇನಾನಿ ಹಾಗು ನಾಯಕ ಶ್ರೀ ಸುಭಾಷ ಚಂದ್ರ ಬೋಸ್.  ಈ ಮಹಾನ್ ರಾಷ್ಟ್ರ ನಾಯಕನು ತನ್ನ ಜೀವನ ಉದ್ದಕ್ಕೂ ನಡೆದು ಬಂದ ಹಾದಿ ನಮಗೆ ಮಾದರಿ ಹಾಗು ಸ್ಫೂರ್ತಿ. 

ರಾಷ್ಟ್ರ ನಿರ್ಮಾಣದ ಜವಾಬ್ದಾರಿಯುತ ಸ್ಥಾನದಲ್ಲಿದ್ದು ರಾಷ್ಟ್ರಹಿತಕ್ಕೆ ಧಕ್ಕೆಯಾಗುವ ಯಾವುದೇ ವಿಷಯಗಳಲ್ಲಿ ದುರ್ಬಲನೀತಿ ಹೊಂದಿರಬಾರದೆಂಬ ನಿಲುವು ಸುಭಾಷರದ್ದಾಗಿತ್ತು.  ಕಾಂಗ್ರೆಸ್‌ನ ಬಲಹೀನ ನಾಯಕತ್ವ, ದುರ್ಬಲ ಒಪ್ಪಂದಗಳು, ಸ್ವಾಭಿಮಾನಶೂನ್ಯ ವರ್ತನೆಗೆ ಪ್ರತಿಯಾಗಿ ಆತ್ಮಾಭಿಮಾನದ ಸ್ವರಾಜ್ಯಹೋರಾಟಕ್ಕೆ ಬಲತುಂಬಿದವರು ಸುಭಾಷರು. ಅಲ್ಪಾಯಸ್ಸಿನಲ್ಲಿ ಇತಿಹಾಸಾರ್ಹ ಸಾಧನೆಗೈದ ನೇತಾಜಿ, ಕ್ರಾಂತಿಮಾರ್ಗದ ವೇಳೆಯಲ್ಲೂ ವಿವೇಕಾನಂದ – ಅರವಿಂದರಿಂದ ಪಡೆದ ಆಧ್ಯಾತ್ಮನಿಷ್ಠೆಯನ್ನು ಮೈಗೂಡಿಸಿಕೊಂಡವರು.  ಅಭಿಪ್ರಾಯ ಭಿನ್ನತೆಯಿದ್ದರೂ ಬೋಸ್‌ರ ದೇಶಭಕ್ತಿ, ಸ್ವಾತಂತ್ರ್ಯ ನಿಷ್ಠೆಕುರಿತು ಗಾಂಧೀಜಿ ಹಾಗೂ ಅನುಯಾಯಿಗಳಿಗೆ ಅಪಾರ ಗೌರವವಿತ್ತು.

ಅಂಡಮಾನ್ ನಿಕೋಬಾರ್ ಪ್ರದೇಶವನ್ನು ತಮ್ಮ ವಶಕ್ಕೆ ತಗೆದುಕೊಂಡು ದೇಶವನ್ನು ಪ್ರಪ್ರಥಮಬಾರಿಗೆ ದಾಸ್ಯಮುಕ್ತವನ್ನಗಿ ಮಾಡಿದ ವೀರರು ಸುಭಾಷರು.  ಇವರು ನಾಡುಕಂಡ ಶ್ರೇಷ್ಠ ಸ್ವರಾಜ್ಯ ಹೋರಾಟಗಾರರಲ್ಲಿ ಒಬ್ಬರು. ಭಾರತದ ಸೈನ್ಯಬಲದ ಕುರಿತು, ಗಡಿ ರಕ್ಷಣೆ ಕುರಿತು ಅವರಿಗಿದ್ದ ದೃಷ್ಟಿಕೋನ ಅಗಾಧವಾದದ್ದು. 

ಅತ್ಯುತ್ತಮ ರಾಜತಾಂತ್ರಿಕ ಸಂಬಂಧ ಹೊಂದಿದ್ದ ಬೋಸರು ರಾಷ್ಟಕ್ಕೇ ದಿಗ್ದರ್ಶನ ಮಾಡಿದವರು.  ಆ ಧೀಮಂತ ನಾಯಕನ ಜೀವನದಿಂದ ಸಿಗುವ ಅಖಂಡ ಪ್ರೇರಣೆ ಯುವಜನತೆಗೆ ದಾರಿದೀಪವಾಗಲಿ ಎಂದು ಆಶಿಸುತ್ತಾ ಅವರ ಜನುಮ ದಿನದಂದು ಅವರನ್ನು ಸ್ಮರಿಸುತ್ತಾ ನನ್ನ ಅನಂತ ನಮನಗಳನ್ನು ಸಲ್ಲಿಸುತ್ತೇನೆ.

#ಅನಂತಕುಮಾರಹೆಗಡೆ

Related posts