Infinite Thoughts

Thoughts beyond imagination

ತಬ್ಲೀಘಿನದ್ದು ವೈರಸ್ ಜಿಹಾದಾ...?

ತಬ್ಲೀಘಿನದ್ದು  ವೈರಸ್ ಜಿಹಾದಾ...?

ವಿಶ್ವಸಂಸ್ಥೆ ಮುಖ್ಯಸ್ಥರ ಕೊರೋನಾ ಬಯೋ ಟೆರರಿಸಂ ವಾರ್ನಿಂಗ್ ಬಳಿಕ ಸಂಶಯ ದಟ್ಟವಾಗುತ್ತಿದೆ...

ಇಸ್ಲಾಮಿಕ್  ಮೂಲಭೂತವಾದಿಗಳ ಕೈಯಲ್ಲಿ  ಕೊರೋನಾದಂಥಾ ಅಪಾಯಕಾರೀ ವೈರಾಣು ಕೂಡಾ ಒಂದು ಅಸ್ತ್ರವಾಯಿತೇಎಂಬ ಪ್ರಶ್ನೆಯನ್ನು ನಾನು ಕಳೆದ ಬಾರಿಯ ಲೇಖನದಲ್ಲಿ ಮುಂದಿಟ್ಟಿದ್ದೆ. ಹೌದು, ಪ್ರಶ್ನೆ ಇವತ್ತಿನ ಸಂದರ್ಭದಲ್ಲಿ  ನನ್ನನ್ನೂ ಸೇರಿಸಿ ಭಾರತದ ಅಸಂಖ್ಯಾತ ಮಂದಿಗೆ, ಕೊರೋನಾ ಮಹಾಮಾರಿಯ ವಿರುದ್ಧದ ಭಾರೀ ಹೋರಾಟದಲ್ಲಿ ಹಗಲಿರುಳು ದುಡಿಯುತ್ತಿರುವ ವೈದ್ಯಕೀಯ ಸಿಬ್ಬಂದಿಗಳಿಗೆ, ಆರಕ್ಷಕ ಸಿಬ್ಬಂದಿಗಳಿಗೆಭಾರತದ ಬಹುತೇಕ ಮಾಧ್ಯಮಗಳ ಮಂದಿಗೆ, ಅಷ್ಟೇ ಅಲ್ಲ... ದೇಶದಲ್ಲಾಗುತ್ತಿರುವ ಪ್ರತಿಯೊಂದೂ ಬೆಳವಣಿಗೆಗಳನ್ನು ಗಮನಿಸುತ್ತಿರುವ ಪ್ರತಿಯೊಬ್ಬ ದೇಶಾಭಿಮಾನೀ ಭಾರತೀಯ ಪ್ರಜೆಗೂ  ಕಾಡುತ್ತಿದೆ. ಕೊರೋನಾ ಜಿಹಾದ್, ವೈರಸ್ ಜಿಹಾದ್ ಎಂಬ ಹೆಸರಿನಲ್ಲಿ ಒಂದು ರಹಸ್ಯ ಮತ್ತು ಸಂಘಟಿತ ವಿಧ್ವಂಸಕ ಕೃತ್ಯವೊಂದು ಸದ್ದಿಲ್ಲದೆಯೇ ಪ್ರಪಂಚದಾದ್ಯಂತ ನಡೆಯುತ್ತಿದೆಯೇ ಎಂಬ ಸಕಾರಣ ಸಂಶಯ ಬಹುತೇಕಎಲ್ಲರಲ್ಲಿಯೂ ಮನೆಮಾಡಿದೆ

ದೇವರ ಹೆಸರಿನಲ್ಲಿ, ಧರ್ಮದ (ಮತದ) ಹೆಸರಿನಲ್ಲಿ ಪ್ರಪಂಚಾದಾದ್ಯಂತ ಭಯೋತ್ಪಾದನಾ ಕೃತ್ಯಗಳನ್ನೆಸಗಿ ಅಸಂಖ್ಯಾತ ನಿಷ್ಪಾಪಿ ಅಮಾಯಕ ಜನರ ಸಾವಿಗೆ ಕಾರಣವಾದ ಇಸ್ಲಾಮಿಕ್ ಜಿಹಾದ್ ಈಗ ಮನುಕುಲಕ್ಕೇ ಬಂದೊದಗಿರುವ ಸಂಕಷ್ಟದ ಸಮಯದಲ್ಲಿ, ಜಗತ್ತಿನ ಜನರೆಲ್ಲಾ ಕೊರೋನಾ ಎಂಬ ವೈರಾಣುವಿಗೆ ತುತ್ತಾಗಿ ಸಾಯುತ್ತಿರುವ ಸಮಯದಲ್ಲಿ, ಆ ವೈರಾಣು ಸೋಂಕನ್ನೇ ಆಯುಧವಾಗಿ ಉಪಯೋಗಿಸುತ್ತಿದೆ... ಸಾಂಕ್ರಾಮಿಕ ಖಾಯಿಲೆಯನ್ನು ಹರಡಲು ತನ್ನ  ವೈರಾಣು ಸೋಂಕಿತ ಜಿಹಾದೀ ಮನಃಸ್ಥಿತಿಯ ಕಾರ್ಯಕರ್ತರನ್ನೇ ಮಾನವ ಬಾಂಬ್ ಆಗಿ, ಆತ್ಮಾಹುತಿ ದಾಳಿಕೋರರಾಗಿ ಬಳಸುತ್ತಿದೆ...ಎಂಬ ದಟ್ಟ ಸಂಶಯ...  ಭಾರತದಲ್ಲಿ ಇಂಥದ್ದೊಂದು ಷಡ್ಯಂತ್ರವನ್ನು ತಬ್ಲೀಘಿ ಜಮಾತ್ ಎಂಬ ಸಂಘಟನೆ ಸದ್ದಿಲ್ಲದೆಯೇ ಮಾಡಿದೆಯೇ...? ಅದರ ಪರಿಣಾಮವಾಗಿಯೇ ಸರಕಾರದ ಕಠಿಣ ಕ್ರಮಗಳಿಂದ ಮತ್ತು ದೇಶದ ಪ್ರಜೆಗಳ ಅಭೂತಪೂರ್ವಸಂಘಟಿತ ಪ್ರಯತ್ನ ಮತ್ತು ಸಹಕಾರದಿಂದ ಇನ್ನೇನು ಸಂಪೂರ್ಣವಾಗಿ ಸೋಂಕು ಹತೋಟಿಗೆ ಬಂದು, ಏರುತ್ತಿದ್ದ ಕೊರೋನಾ ಸೋಂಕಿನ ಅಟ್ಟಹಾಸಕ್ಕೆ ಭಾರತ ಸಮರ್ಥವಾಗಿ ಅಂಕುಶ ಹಾಕಿ ಸಮಸ್ಥಿತಿಗೆ ತರುತ್ತಿದೆ ಅನ್ನುವಷ್ಟರಲ್ಲಿ  ತಬ್ಲೀಘಿ ಜಮಾತ್ ತಲೆಕೆಟ್ಟ ಜಿಹಾದೀ ಕಾರ್ಯಕರ್ತರು ಸೋಂಕನ್ನು ಅನಿಯಂತ್ರಿತವಾಗಿ ಹರಡುವಂತೆ ಮಾಡುವಲ್ಲಿ ಸಫಲರಾದರೇ

ಇದನ್ನು ಸಾಬೀತುಪಡಿಸುವ ಅಂಕಿ ಅಂಶಗಳೆಲ್ಲಾ ಕಣ್ಣೆದುರೇ ಇದ್ದು, ದೇಶದ ಮುಖ್ಯ ವಾಹಿನಿಯ ಮಾಧ್ಯಮಗಳೂ ಇದನ್ನೇ ವಿಶ್ಲೇಷಿಸಿ ವರದಿಗಳನ್ನೂ ಮಾಡಿದವು. ಸಾಮಾಜಿಕ ಜಾಲತಾಣಗಳಲ್ಲೂ ಬಗ್ಗೆ ತಾರ್ಕಿಕ ಚರ್ಚೆಗಳಾದವು... ಎಲ್ಲವೂ ನಿಜವೇ ಎನ್ನುವಂತೆ ಹಲವಾರು ಹೊಸ ಸಾಕ್ಷಿಗಳು ಕೂಡಾ ಬೆಳಕಿಗೆ ಬಂದು ವೈರಸ್ ಜಿಹಾದ್ ಎಂಬುದು ಕೇವಲ ಕಪೋಲ ಕಲ್ಪಿತವಲ್ಲ... ಬದಲಿಗೆ ನಿಷ್ಠುರ ಸತ್ಯ ಎಂಬುದು ಮೇಲ್ನೋಟಕ್ಕೇ ಸಾಬೀತಾಗುವಂಥ ಸಂಗತಿ ಎಂಬುದು  ಆದರೆ... ವಾಡಿಕೆಯಂತೆ ಇಸ್ಲಾಮ್ ಜಿಹಾದಿಗಳಿಗೆ ತಳಸ್ಪರ್ಶಿ ಬೆಂಬಲ ನೀಡುವ ಬುದ್ಧಿ ಅಡವಿಟ್ಟ ಲದ್ಧಿಜೀವಿಗಳು, ತಥಾಕಥಿತ ಪ್ರಗತಿಪರ ಪರಾವಲಂಬಿಗಳುಸಿಕ್ಯುಲರ್ ಸೋಗಲಾಡಿಗಳು,  ಕೆಂಪಂಗಿಯ ಕಮಂಗಿಗಳುಎಡಬಿಡಂಗಿ ಪತ್ರಕರ್ತರು ಕೂಡಲೇ ಮೈಕೊಡವಿ ಎದ್ದುನಿಂತರು. ದೇಶದಲ್ಲಿ ಸೋಂಕು ಹರಡಲು ದೊಡ್ಡಮಟ್ಟದಲ್ಲಿ ಕಾರಣವಾದ  ತಬ್ಲೀಘಿಗಳ  ರಕ್ಷಣೆಗೆ ನಿಂತು ಬಿಟ್ಟರುತಬ್ಲೀಘಿಗಳು ಮುಗ್ದ ಧರ್ಮಭೀರುಗಳು, ತಬ್ಲೀಘಿ ಜಮಾತ್ ಎಂಬುದು ಇಸ್ಲಾಮಿನ ಶಾಂತಿ(?)ಯನ್ನು ಪ್ರಪಂಚಕ್ಕೆ ಹಂಚುವ ಪುಣ್ಯಕೋಟಿ,  ಹಿಂದೂ ಮತೀಯವಾದೀ ಭಾರತ ಸರಕಾರ ಮತ್ತದರ ಬಲಪಂಥೀಯ ಉಗ್ರ ಬೆಂಬಲಿಗರು ಕೊರೋನಾ ತಡೆಗಟ್ಟುವಲ್ಲಿ ವಿಫಲವಾದ ಸರಕಾರದ ವೈಫಲ್ಯವನ್ನು ಮುಚ್ಚಿಟ್ಟುಕೊಳ್ಳಲು ಅಮಾಯಕ ಮುಸ್ಲಿಮರ ಮೇಲೆ ಗೂಬೆ ಕೂರಿಸುತ್ತಿದ್ದಾರೆ...

ಭಾರತದ ಅಲ್ಪಸಂಖ್ಯಾಕ ಮುಸ್ಲಿಮರನ್ನು ಕೊರೋನಾ ಹೆಸರಲ್ಲಿ ಬಲಿಕೊಡಲು ಸಂಘ ಪರಿವಾರದ ಷಡ್ಯಂತ್ರವಿದು ಅನ್ನೋ ರೀತಿಯ ಪುಂಖಾನುಪುಂಖ ಸುದ್ದಿಗಳು, ವರದಿಗಳು  ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಎಡಚ ಮಾಧ್ಯಮಗಳಲ್ಲಿ ಬರತೊಡಗಿದವು. ಅದರಲ್ಲೂ ಕೆಲವು ಅಂತಾರಾಷ್ಟ್ರೀಯ ಮಟ್ಟದ ಮಾಧ್ಯಮಗಳಲ್ಲಿ, ವಿದೇಶೀ ಪತ್ರಿಕೆಗಳಲ್ಲಿ ಭಾರತೀಯ ಮೂಲದ ಪತ್ರಕರ್ತರೇ ಭಾರತದ ಮಾನ ಕಳೆಯುವಂಥ ಸುಳ್ಳು ವರದಿ ಬರೆದರುಜಾಗತಿಕ ಮಟ್ಟದಲ್ಲಿ ಭಾರತದ ಸರಕಾರ ಮತ್ತು ಇಲ್ಲಿನ ಬಹುಸಂಖ್ಯಾಕ ಹಿಂದೂಗಳು ಟೀಕೆಗೊಳಗಾದರು.

ಇಂಥಾ ವರದಿಗಳಿಂದ ಭಾರತದ ಮೇಲೆ ಜಾಗತಿಕವಾಗಿ ಒತ್ತಡವೂ ಬಿತ್ತು ಒತ್ತಡಕ್ಕೆ ನಮ್ಮ ದೇಶದ ವ್ಯವಸ್ಥೆಯೂ ಮಣಿದಂತೆ ತೋರಿತು. ಕೊರೋನಾ ಜಿಹಾದ್, ವೈರಸ್ ಜಿಹಾದ್ ಎಂಬುದೆಲ್ಲಾ ಸುಳ್ಳು, ದೇಶದಲ್ಲಿ ವೈರಾಣು ಸೋಂಕು ಹಬ್ಬುವ ಹಿಂದೆ ಯಾವುದೇ ಇಸ್ಲಾಮಿಕ್ ಭಯೋತ್ಪಾದನೆಯ ಷಡ್ಯಂತ್ರ ಇಲ್ಲ. ವೈರಾಣು ಸೋಂಕನ್ನು ಯಾವುದೇ ಧರ್ಮದ ತಲೆಗೆ ಕಟ್ಟುವುದು ಸರಿಯಲ್ಲ. ಕೊರೋನಾ ಮಹಾಮಾರಿಗೆ ಧರ್ಮದ ಲೇಪನ ತಪ್ಪು ಅಂತ ಅಧಿಕೃತವಾದ ಹೇಳಿಕೆಗಳೇ ಹೊರಬಿದ್ದವು! ಭಾರತದಲ್ಲಿ ಕೊರೋನಾ ವೈರಾಣು ಸೋಂಕನ್ನು ವ್ಯಾಪಕವಾಗಿ ಹರಡುವಲ್ಲಿ  ತಬ್ಲೀಘಿ ಜಮಾತಿನ ಸದಸ್ಯರ ಸಂಚು ಇದೆ ಅಂತ ಆಧಾರ ಸಮೇತ ಉಲ್ಲೇಖಿಸಿದವರನ್ನೆಲ್ಲಾ ಕೋಮುವಾದಿಗಳು ಅಂತ ಪಟ್ಟಕಟ್ಟಿ ತೆಪ್ಪಗೆ ಕೂರಿಸುವ ಮಾಮೂಲು ಪ್ರಯತ್ನ ಇಂಥಾ ಕರಾಳ ಪರಿಸ್ಥಿತಿಯಲ್ಲೂ ಕೂಡಾ ನಡೆದುಹೋಯಿತು. ಮೂಲಕ ಒಂದು ಕಠೋರ ಸತ್ಯವನ್ನು ಹೊಸಕಿಹಾಕಲು ಸತ್ಯವಂತರೆಂದೆನಿಸಿಕೊಂಡವರೂ ಉತ್ಸಾಹ ತೋರಿ ತಮ್ಮ ಇಮೇಜು ಉಳಿಸಿಕೊಳ್ಳುವಲ್ಲಿ ಆಸಕ್ತಿ ತೋರಿದರೋ ಎಂಬ ಸಂಶಯ ಬರುವಂತಾಯಿತು

ಆದ್ರೆ ಮೊನ್ನೆಯ ದಿನ ನಡೆದ ಸಂಗತಿಯೊಂದು ಇಡೀ ಪ್ರಕರಣಕ್ಕೊಂದು ಹೊಸದಾದ ತಿರುವು ನೀಡಿತು.  "ಕೊರೋನಾ ಜಿಹಾದ್, ವೈರಸ್ ಜಿಹಾದ್ ಎಂಬುದೆಲ್ಲಾ ಸುಳ್ಳು, ದೇಶದಲ್ಲಿ ವೈರಾಣು ಸೋಂಕು ಹಬ್ಬುವ ಹಿಂದೆ ಯಾವುದೇ ಇಸ್ಲಾಮಿಕ್ ಭಯೋತ್ಪಾದನೆಯ ಷಡ್ಯಂತ್ರ ಇಲ್ಲ. ವೈರಾಣು ಸೋಂಕನ್ನು ಯಾವುದೇ ಧರ್ಮದ ತಲೆಗೆ ಕಟ್ಟುವುದು ಸರಿಯಲ್ಲಕೊರೋನಾ ಮಹಾಮಾರಿಗೆ ಧರ್ಮದ ಲೇಪನ ತಪ್ಪು..."ಅಂತ ಹೇಳಿದವರಿಗೆ ಸರಿಯಾದ ತಪರಾಕಿಯೇ ಬಿತ್ತು ..! ಸತ್ಯವನ್ನು ಮಡಚಿ ಮೂಲೆಗಿಟ್ಟು ಮೆಟ್ಟಿ ಅಡಗಿಸಲು ಪ್ರಯತ್ನಿಸಿದವರೆಲ್ಲರಿಗೂ ಮುಖದ ಮೇಲಿನ ನೀರಿಳಿಸುವಂಥಾ ಹೇಳಿಕೆಯೊಂದು ಸಾಕ್ಷಾತ್ತು.

ವಿಶ್ವಸಂಸ್ಥೆಯ ಮುಖ್ಯಸ್ಥರಿಂದಲೇ ಹೊರಬಿತ್ತು...!  ಡೊಮಿನಿಕನ್ ರಿಪಬ್ಲಿಕ್ ಅಧ್ಯಕ್ಷತೆಯಲ್ಲಿ ಮೊನ್ನೆ ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯನ್ನುದ್ದೇಶಿಸಿ ಮಾತನಾಡಿದ ವಿಶ್ವಸಂಸ್ಥೆಯ  ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್ "ಮುಂಬರುವ ದಿನಗಳಲ್ಲಿ ಜಾಗತಿಕವಾಗಿ ಬಯೋ ಟೆರರಿಸ್ಟ್ (ಜೈವಿಕ ಭಯೋತ್ಪಾದನಾ)ದಾಳಿಗಳು ಅನಾವರಣಗೊಳ್ಳಲಿದ್ದು, ಇದಕ್ಕೆ ಕೊರೋನಾ ಸಾಂಕ್ರಾಮಿಕ ಸೋಂಕೇ ಕಾರಣವಾಗಲಿದೆ.... ವೈರಾಣುವೇ ಭಯೋತ್ಪಾದಕ ಸಂಘಟನೆಗಳ ಕೈಯಲ್ಲಿ ಅಸ್ಟ್ರವಾಗಿ ಪರಿಣಮಿಸಿ ಜಗತ್ತಿನಾದ್ಯಂತ ಸಾಮಾಜಿಕವಾಗಿ ಭಾರೀ ಮಟ್ಟದ ವಿನಾಶ ಸಂಭವಿಸುವ ಸಾಧ್ಯತೆ ಇದೆ..." ಅಂತ ಬಲವಾದ ಎಚ್ಚರಿಕೆಯನ್ನು ನೀಡಿದರು..!  ಭದ್ರತಾ ಮಂಡಳಿಯನ್ನುದ್ದೇಶಿಸಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್ ನೀಡಿದ ಹೇಳಿಕೆಯ ಐದನೆಯ ಮತ್ತು ಆರನೆಯ ಅಂಶವನ್ನು ಯಥಾವತ್ತಾಗಿ ಇಲ್ಲಿ ನೀಡಲಾಗಿದೆ... 

"Fifth, the threat of terrorism remains alive. Terrorist groups may see a window of opportunity to strike while the attentionof most governments is turned towards the pandemic.  The situation in the Sahel, where people face the double scourge of the virus and escalating terrorism, is of particular concern.

Sixth, the weaknesses and lack of preparedness exposed by this pandemic provide a window onto how a bio terrorist attack might unfold – and may increase its risks. Non-state groups could gain access to virulent strains that could posesimilar devastation to societies around the globe."

ನನ್ನಂಥ ಅನೇಕ ಸಮಾನಮನಸ್ಕರು  ತಬ್ಲೀಘಿ ಜಮಾತಿನ ದೆಹಲಿಯ ಮರ್ಕಜ್ ಪ್ರಕರಣದ ಹಿಂದಿನ ಕಾರಣವನ್ನು, ಇದರ ಹಿಂದಿರಬಹುದಾದ ಇಸ್ಲಾಮಿಕ್ ವಿಧ್ವಂಸಕ ಕೃತ್ಯಗಳ ಸಂಚನ್ನುತಬ್ಲೀಘಿ ಜಮಾತಿನ ಅಸಲೀ ಮುಖವನ್ನು ಸಾಕ್ಷ್ಯಾಧಾರ  ಸಮೇತ ಬಯಲಿಗೆಳೆದು ವಿಶ್ಲೇಷಣೆ ನಡೆಸುವ ಪ್ರಯತ್ನ ಮಾಡಿದಾಗ ಅದನ್ನು ಹೀಗಳೆದು, "ಅಂಥದ್ದೆಲ್ಲಾ ಏನೂ ಇಲ್ಲ ....ಇದೆಲ್ಲಾ ಬರೀ ಭ್ರಮೆ" ಅಂತ ತಿಪ್ಪೆ ಸಾರಿಸಲು ಪ್ರಯತ್ನಿಸಿದವರಿಗೆಲ್ಲಾ  ವಿಶ್ವಸಂಸ್ಥೆಯ  ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್ ಹೇಳಿಕೆ ಮುಖಕ್ಕೇ ಹೊಡೆದ ಹಾಗಿದೆ

ನೆಲ ಹಸನು ಮಾಡಿ, ಉತ್ತಿ ಬಿತ್ತಿ ಸಸಿಗಳನ್ನು  ತಯಾರು ಮಾಡುವುದೇ ತಬ್ಲೀಘಿ ಜಮಾತಿನ ಕೆಲಸ. ಇದೊಂಥರಾ ನರ್ಸರಿ ಇದ್ದಹಾಗೆ. ಆಯ್ಕೆ ಮಾಡಿಕೊಂಡೇ ಒಳ್ಳೆಯ ಬೀಜಗಳನ್ನು ಬಿತ್ತಿ ನೀರು ಗೊಬ್ಬರ ನೀಡಿ ಮೊಳಕೆಯೊಡೆಸಿ ಸಸಿಗಳನ್ನು ಜೋಪಾನವಾಗಿ ಬೆಳೆಸುವ ಕೆಲಸ. ಜಗತ್ತಿಡೀ ಇರುವ ಮುಸ್ಲಿಮರ ಮನೆಮನೆಯನ್ನೂ ಸಂಪರ್ಕಿಸಿ ಧಾರ್ಮಿಕ ಶಿಕ್ಷಣ, ಧರ್ಮ ಚರ್ಯೆಯ ಅರಿವು ಮೂಡಿಸುವ ನೆಪದಲ್ಲಿ ಅವರನ್ನು ಮಸೀದಿಗಳಿಗೆ ಬರುವಂತೆ ಮಾಡಿ, ಅವರ ಮೆದುಳು ತೊಳೆದು ಅವರಿಗೆ ಇಸ್ಲಾಮ್ ಮೂಲಭೂತವಾದದ ವಿಷ ಉಣ್ಣಿಸಿ ಸಜ್ಜುಗೊಳಿಸುವುದೇ  ತಬ್ಲೀಘಿ ಜಮಾತಿನ ಕೆಲಸ. ಒಮ್ಮೆ ತಬ್ಲೀಘಿನ ಹಿಡಿತಕ್ಕೆ ಸಿಕ್ಕಿದ ಮೇಲೆ ಯಾರೇ ಆದರೂ ಸಂಪೂರ್ಣವಾಗಿ ಇಸ್ಲಾಮಿಕ್ಮೂಲಭೂತವಾದಕ್ಕೆ ಶರಣಾಗುತ್ತಾರೆ.

ಹೀಗೆ ಒಮ್ಮೆ ಮೂಲಭೂತವಾದದ ಅಮಲುಹಿಡಿದರೆ ಮತ್ತೆ ಆತನ ಭವಿಷ್ಯ ಯಾವುದಾದರೂ ಭಯೋತ್ಪಾದಕ ಸಂಘಟನೆಗಳಲ್ಲೇ ಖಾಯಮ್ಮು. ಹೀಗಾಗಿ  ತಬ್ಲೀಘಿನ ಸದಸ್ಯನಾಗಿ ಧರ್ಮ ಶಿಕ್ಷಣ ಪಡೆದವರನ್ನೇ ಭಯೋತ್ಪಾದಕ ಸಂಘಟನೆಗಳು ಸುಲಭವಾಗಿ ರಿಕ್ರೂಟ್ ಮಾಡಿಕೊಳ್ಳುತ್ತವೆ. ಆದುದರಿಂದ ಎಲ್ಲಾ ಇಸ್ಲಾಮಿಕ್ ಭಯೋತ್ಪಾದಕ ಗುಂಪುಗಳಿಗೂ  ತಬ್ಲೀಘಿ ಜಮಾತ್ ಅಂದರೆ ಅಚ್ಚುಮೆಚ್ಚು. ಯಾಕೆಂದರೆ ಅದೊಂಥರಾ ಬ್ರೀಡಿಂಗ್ ಗ್ರೌಂಡ್ ಇದ್ದ ಹಾಗೆತಬ್ಲೀಘಿ ಜಮಾತಿನ ಇನ್ನೊಂದು ವಿಶೇಷ ಎಂದರೆ ಜಗತ್ತಿನಾದ್ಯಂತ ಅದೆಲ್ಲೂ  ತನ್ನ ಸದಸ್ಯರ ಯಾವುದೇ ದಾಖಲೆಗಳನ್ನೂ ಇಟ್ಟುಕೊಳ್ಳುವುದಿಲ್ಲ . ಹಾಗಾಗಿ ಯಾರಾದರೊಬ್ಬ  ತಬ್ಲೀಘಿ ಜಮಾತಿನಲ್ಲಿ ಇದ್ದ ಎಂಬುದಕ್ಕೆ, ಅಲ್ಲಿ ತರಬೇತಿ ಪಡೆದಿದ್ದ ಎಂಬುದಕ್ಕೆ ಹೆಚ್ಚಿನವೇಳೆ ನೇರ ಸಾಕ್ಷಿಗಳಿರುವುದಿಲ್ಲ.

ಇಲ್ಲಿ ತರಬೇತಿ ಪಡೆದವರು ಬಹುತೇಕ ಬೇರೊಂದು ಉಗ್ರ ಸಂಘಟನೆಗೆ ಇಲ್ಲಿಂದಲೇ ವಲಸೆ ಹೋಗುತ್ತಾರೆ. ಆದರೂ  ತಬ್ಲೀಘಿನಲ್ಲಿ ಅವರ ಬಗ್ಗೆ ದಾಖಲೆಗಳೇನೂ ಇರುವುದಿಲ್ಲ. ಇದನ್ನೇ ತಮ್ಮ ಲಾಭಕ್ಕೆ ಬಳಸಿಕೊಳ್ಳುವ ಹಲವಾರು ಉಗ್ರ ಸಂಘಟನೆಗಳವರು ಬೇರೆ ದೇಶಗಳಿಗೆ ತೆರಳಲು ವೀಸಾಕ್ಕಾಗಿ  ತಬ್ಲೀಘಿ ಜಮಾತಿನಲ್ಲಿನ ತಮ್ಮ ಸಂಪರ್ಕವನ್ನು ಬಳಸಿಕೊಳ್ಳುತ್ತಾರೆ. ಭಾರತದಲ್ಲಿ ಪ್ರಾರಂಭವಾಗಿ ಈಗ ಪ್ರಪಂಚದಾದ್ಯಂತ ಹಬ್ಬಿರುವ ಜಗತ್ತಿನ ಅತೀ ದೊಡ್ಡ ಇಸ್ಲಾಮಿಕ್ ಸಂಘಟನೆಗಳಲ್ಲೊಂದಾಗಿರುವ ತಬ್ಲೀಘಿ ಜಮಾತ್ ವರ್ಷಕ್ಕೊಮ್ಮೆ ಇಜ್ತಿಮಾ ಹೆಸರಿನಲ್ಲಿ ಬೃಹತ್ ವಾರ್ಷಿಕ ಸಮ್ಮೇಳನ ನಡೆಸುತ್ತದೆ.

೧೯೪೯ರಲ್ಲಿ ಮಧ್ಯಪ್ರದೇಶದ ಭೋಪಾಲದಲ್ಲಿ ಪ್ರಪ್ರಥಮ ಇಜ್ತೆಮಾ ನಡೆಯಿತು. ಅದಾದ ಬಳಿಕ ಸತತವಾಗಿ ಭೋಪಾಲದಲ್ಲೇ ತಬ್ಲೀಘಿನ ವಾರ್ಷಿಕ ಸಮ್ಮೇಳನಗಳು ನಡೆಯತೊಡಗಿದವುಅದೇ ವೇಳೆ ಪಾಕಿಸ್ತಾನದ ರಾಯ್ ವಿಂಡ್ ನಲ್ಲಿನ  ತಬ್ಲೀಘಿ ಜಮಾತಿನ ಘಟಕ ಬಲಿಷ್ಠವಾಗಿ ಬೆಳೆಯುತ್ತಾ ಸಾಗಿದಂತೆ ಅಲ್ಲಿಯೂ  ಇಜ್ತೆಮಾ ಗಳು ನಡೆಯತೊಡಗಿದವು. ಸಮಾವೇಶಗಳಿಗೆ ಅದೆಷ್ಟೊಂದು ಜನ ಬರುತ್ತಿದ್ದರೆಂದರೆ ಇಸ್ಲಾಮಿಕ್ ಜಗತ್ತಿನಲ್ಲಿ ಸೌದಿ ಅರೇಬಿಯಾದ ಮೆಕ್ಕಾದಲ್ಲಿ ನಡೆಯುವ ಹಜ್ ಯಾತ್ರೆ ಬಿಟ್ಟರೆ ಅತ್ಯಂತ ಹೆಚ್ಚಿನ ಸಂಖ್ಯೆಯ ಮುಸ್ಲಿಮರು ಸೇರುತ್ತಿದ್ದುದೇ ಇಜ್ತೆಮಾದಲ್ಲಿ ಅಂತ ಅಂದರೆ  ತಬ್ಲೀಘಿ ಜಮಾತ್ ಎಂಬ ಸಂಘಟನೆಯ ಶಕ್ತಿ ಅಂದಾಜು ಮಾಡಬಹುದು.

ಮುಂದುವರೆಯುವುದು...

Related posts