Infinite Thoughts

Thoughts beyond imagination

ತಬ್ಲೀಘಿನದ್ದು ವೈರಸ್ ಜಿಹಾದಾ...? ( ಭಾಗ - ೨ )

.....ಮುಂದುವರೆದ ಭಾಗ

ಸಂಘಟನೆ ಬೆಳೆದಂತೆಲ್ಲಾ ಅದರೊಳಗೆ ಬಿರುಕುಗಳು ಕಾಣಿಸಿಕೊಂಡವು. ಹಿಂದೆಲ್ಲಾ ತಬ್ಲೀಘಿಗೆ ಒಬ್ಬನೇ ಮುಖ್ಯಸ್ಥನಿದ್ದು ಅವನು ಅಮೀರ್ ಅಂತ ಕರೆಸಿಕೊಳ್ಳುತ್ತಿದ್ದ ಮತ್ತು ಅವನು ಭಾರತದಲ್ಲಿ ದೆಹಲಿಯ ನಿಜಾಮುದ್ದೀನ್ ಹೆಡ್ ಕ್ವಾರ್ಟರ್ಸ್ ನಲ್ಲಿ ಇದ್ದ, ಆದರೆ ಪಾಕಿಸ್ತಾನದ  ತಬ್ಲೀಘಿ ಜಮಾತ್ ಬೃಹತ್ತಾಗಿ ಬೆಳೆಯುತ್ತಾ ತನ್ನದೇ ಶಾಖೆಗಳನ್ನು ತೆರೆಯುತ್ತಾ ಒಂದು ಪ್ರತ್ಯೇಕ ಸಂಸ್ಥೆಯಾಗಿ ಬೆಳೆಯಿತು. ಇದು  ತಬ್ಲೀಘಿ ಜಮಾತಿನಲ್ಲಿ ಮೂಡಿದ ಮೊದಲ ಬಿರುಕು. ಇದಾಗಿ ಬಳಿಕ ನೂತನ ಬಾಂಗ್ಲಾ ದೇಶ ಉದಯ ಆದಮೇಲೆ ಅಲ್ಲಿನ ಜಮಾತಿನ ಶಾಖೆ ಬಹಳ ಬೇಗ ಅಭಿವೃದ್ಧಿ ಹೊಂದಿತು.. ಕಾಲಾಂತರದಲ್ಲಿ ಬಂಗಾಳಿ ತಬ್ಲೀಘಿಗಳೂ ತಮ್ಮದೇ ಇಜ್ತೆಮಾವನ್ನು ಶುರುಮಾಡಿದರು. ಢಾಕಾ ನಗರದ ಹೊರವಲಯದಲ್ಲಿನ ಟೊಂಗಿ ಪಟ್ಟಣದ ತುರಗ್ ನದೀದಡದಲ್ಲಿ ಈ ವಾರ್ಷಿಕ ಸಮಾವೇಶವನ್ನು ಬಿಶ್ವ ಇಜ್ತೆಮಾ ಅನ್ನೋ ಹೆಸರಿನಿಂದ ನಡೆಸಲಾಗುತ್ತಿದೆ. ಇದು ಪಾಕಿಸ್ತಾನದ ಇಜ್ತೆಮಾ ಕ್ಕಿಂತಲೂ ಒಂದು ಕೈ ಮೇಲಾಯಿತು. ಇದರೊಂದಿಗೆ ಮೂರನೆಯ ಬಿರುಕು ಉಂಟಾಯಿತು, ಅಲ್ಲೊಬ್ಬ ಪ್ರತ್ಯೇಕ ಅಮೀರ್ ಹುಟ್ಟಿಕೊಂಡ. ಹೀಗೆ ಮೂಲ ಭಾರತದ ಸಂಘಟನೆ ದೆಹಲಿಯ ನಿಜಾಮುದ್ದೀನ್ ಬಳಿ ಮುಖ್ಯ ಕಚೇರಿಯಿಂದ ಮೂಲ ಅಮೀರ್ನಿಂದ ತಬ್ಲೀಘಿನ ಸಂಪೂರ್ಣ ಹಿಡಿತ ತಪ್ಪಿ ಹೋಯಿತು. ಬಾಂಗ್ಲಾದ ತಬ್ಲೀಘಿನಲ್ಲಿ ಈಗ ಮತ್ತೆ ಎರಡು ಗುಂಪುಗಳಾಗಿವೆ. ಮೌಲಾನಾ ಝುಬೈರ್ ಹಸನ್ ನ ಗುಂಪು ಒಂದಾದರೆ ಇನ್ನೊಂದು ಗುಂಪು ಮೌಲಾನಾ ವಸೀಫುಲ್ ಇಸ್ಲಾಮ್ ನದ್ದು.  ಭಾರತದಲ್ಲೂ ತಬ್ಲೀಘಿನ ಇನ್ನೊಂದು ಭಿನ್ನಮತೀಯ ಗುಂಪು ಶೂರಾ-ಎ -ಜಮಾತ್ ದೆಹಲಿಯ ಟರ್ಕ್ ಮನ್ ಗೇಟ್ ನಲ್ಲಿ ಕೇಂದ್ರ ಕಚೇರಿ ಹೊಂದಿದೆ. 

 

ಆದರೆ ಇಷ್ಟೆಲ್ಲಾ ಬಿರುಕುಗಳಿದ್ದು, ಪ್ರತ್ಯೇಕ ಗುಂಪುಗಳಿದ್ದರೂ ಈ ಎಲ್ಲಾ ಸಂಘಟನೆಗಳ ಇಸ್ಲಾಮ್ ಬೋಧನೆ ಮಾತ್ರ ಒಂದೇ... ಅದರಲ್ಲೇನೂ  ಬದಲಾವಣೆಯಿಲ್ಲ. ಎಲ್ಲ ಗುಂಪುಗಳೂ ಕಟ್ಟರ್ ಇಸ್ಲಾಮಿಕ್ ಮೂಲಭೂತವಾದದ ವಿಷವನ್ನೇ ತನ್ನ ಸದಸ್ಯರಿಗೆ ಬಡಿಸುತ್ತದೆ. ಮೊನ್ನೆ ಮೊನ್ನೆ ಕೊರೋನಾ ಸೋಂಕು ಹಬ್ಬುವ ಭೀತಿ ಇದ್ದಾಗಲೇ ಭಾರತದ ತಬ್ಲೀಘಿನ ಮುಖ್ಯಸ್ಥ ಮೌಲಾನಾ ಸಾದ್ ಖಂಡಾಲವೀ ದೆಹಲಿಯ ನಿಜಾಮುದ್ದೀನ್ ನ ತಬ್ಲೀಘಿ ಹೆಡ್ ಕ್ವಾರ್ಟರ್ಸ್ ನಲ್ಲಿ ಸಾವಿರಾರು ಜನರನ್ನು ಸೇರಿಸಿ ಸಾಂಕ್ರಾಮಿಕ ರೋಗ ಹರಡಲು ಕಾರಣವಾದ ಘಟನೆ ರಹಸ್ಯವಾಗಿ ನಡೆಯಿತೋ ಅದೇ ರೀತಿಯ ಸಮ್ಮೇಳನಗಳನ್ನು  ತಬ್ಲೀಘಿ ಜಮಾತ್  ಜಗತ್ತಿನ ಹಲವೆಡೆ ನಡೆಸಿದೆ, ಮತ್ತು ಉದ್ದೇಶಪೂರ್ವಕವಾಗಿಯೇ ಕೊರೋನಾ ಬಗ್ಗೆಯೇ ತಪ್ಪು ಮಾಹಿತಿಗಳನ್ನು ನೀಡಿ  ದಾರಿ ತಪ್ಪಿಸುವ ಭಾಷಣಗಳನ್ನು ಮಾಡಲಾಗಿದೆ. ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಮಸೀದಿಗಳಲ್ಲಿ ಸಾಮೂಹಿಕವಾಗಿಯೇ ಪ್ರಾರ್ಥನೆ ಮಾಡುವಂತೆ ಪ್ರೇರೇಪಿಸಲಾಗಿದೆ.  ಅಲ್ಲಾಹುವೇ ಮುಸ್ಲಿಮರನ್ನು ಪರೀಕ್ಷೆ ಮಾಡಲು, ಮುಸ್ಲಿಮೇತರರನ್ನು ಶಿಕ್ಷಿಸಲು  ಕೊರೋನಾ ಎಂಬ ಭೀಕರ ಖಾಯಿಲೆಯನ್ನು ಕಳಿಸಿದ್ದಾನೆ ಅಂತ ತಮ್ಮ ಬೆಂಬಲಿಗರ ಮೆದುಳು ತೊಳೆಯುವ ಕೆಲಸ ಮಾಡಲಾಗಿದೆ. ಅಂದಹಾಗೆ ಲಾಕ್ ಡೌನ್ ಆದೇಶ ಉಲ್ಲಂಘಿಸಿ ಈ ರೀತಿಯ ಅಕ್ರಮ ಸಭೆ ನಡೆಸದಂತೆ ದೆಹಲಿಯ ನಿಜಾಮುದ್ದೀನ್ ನ ತಬ್ಲೀಘಿ ಜಮಾತಿನ ಮುಖ್ಯಸ್ಥ ಮೌಲಾನಾ ಸಾದ್ ನ ಮನವೊಲಿಸಲು ಮೊದಲೇ ಪ್ರಯತ್ನಿಸಲಾಗಿತ್ತು.  ತಬ್ಲೀಘಿನ ಇನ್ನೊಂದು ಗುಂಪು ಶೂರಾ-ಎ -ಜಮಾತ್ ನ ಹಿರಿಯ ಮುಖಂಡರೆಲ್ಲಾ ಸೇರಿ ತಮ್ಮ ಸಂಘಟನೆಯ ಸಭೆಗಳನ್ನು ಕೊರೋನಾ ಭೀತಿ ದೂರಾಗುವವರೆಗೆ ನಡೆಸದಿರಲು ತೀರ್ಮಾನಿಸಿ  ಮೌಲಾನಾ ಸಾದ್ ನನ್ನೂ ಕೇಳಿಕೊಂಡರು.. ಆದರೆ ಮೌಲಾನಾ ಸಾದ್ ಹಠಕ್ಕೆ ಬಿದ್ದ, ಅದೇನೇ ಬಂದರೂ ತಾನು ಸಭೆ ನಡೆಸಿಯೇ ಸಿದ್ಧ ಅಂತ ಅಂದುಬಿಟ್ಟ. ಯಾಕೆಂದರೆ ಮೌಲಾನಾ ಕೊರೋನಾ ಎಂಬ ಅಸ್ತ್ರ ಹಿಡಿದುಕೊಂಡೇ ತನ್ನ ರಹಸ್ಯ ಅಜೇಂಡಾ ಜಾರಿ ಮಾಡಲು ಹೊರಟಿದ್ದ..! 

ಹೌದು ...ಕೊರೋನಾ ಸೋಂಕು ವೇಗವಾಗಿ ಜಗತ್ತಿನಾದ್ಯಂತ ಹಬ್ಬುತ್ತಿರುವ ಹೊತ್ತಿನಲ್ಲೇ ತಬ್ಲೀಘಿ ಜಮಾತ್ ದೇಶ ವಿದೇಶಗಳ ಪ್ರತಿನಿಧಿಗಳನ್ನು ಕರೆಸಿಕೊಂಡು ಧಾರ್ಮಿಕ ಸಭೆಗಳನ್ನು ರಹಸ್ಯವಾಗಿಯೇ ಸರಕಾರದ ಗಮನಕ್ಕೆ ತಾರದೆಯೇ ನಡೆಸಲು ತೀರ್ಮಾನಿಸಿತ್ತು... ಅಂದ ಹಾಗೆ ಇಂಥಾ ಸಭೆಗಳು ಭಾರತದಲ್ಲಿ ಮಾತ್ರ ನಡೆದದ್ದಲ್ಲ...  ತಬ್ಲೀಘಿ ಜಮಾತ್ ಮಲೇಷಿಯಾದ ರಾಜಧಾನಿ ಕೌಲಾಲಂಪುರ್ ನ ಹೊರವಲಯದಲ್ಲಿರುವ ಸಿರಿ ಪೆಟಾಲಿಂಗ್ ಮಸೀದಿಯಲ್ಲಿ ಫೆಬ್ರವರಿ ಇಪ್ಪತ್ತೇಳರಿಂದ  ಮಾರ್ಚ್ ಒಂದನೆಯ ತಾರೀಕಿನ ವರೆಗೆ ನಡೆದ  ತಬ್ಲೀಘಿ ಜಮಾತ್ ಸಮಾವೇಶದಲ್ಲಿ ಹದಿನಾರು ಸಾವಿರ ಜನ ಭಾಗವಹಿಸಿದ್ದರು. ಅಲ್ಲಿಯವರೆಗೆ ಮಲೇಷ್ಯಾ ದಲ್ಲಿ ಕೊರೋನಾ ಸೋಂಕು ಹತೋಟಿಯಲ್ಲೇ ಇತ್ತು. ಆದರೆ ಈ ಒಂದು  ತಬ್ಲೀಘಿ ಸಮಾವೇಶದ ಕಾರಣದಿಂದ ಅಲ್ಲಿ ಸೋಂಕು ಹಬ್ಬಿತು. ಅಲ್ಲಿನ ಪ್ರತೀ ಮೂರು ಕೋರೋನಾ  ಪಾಸಿಟಿವ್ ಕೇಸುಗಳಲ್ಲಿ ಇಬ್ಬರು ತಬ್ಲೀಘಿಗಳು! ಸಮಾವೇಶದಲ್ಲಿ ಭಾಗವಹಿಸಿದ್ದವರಿಂದ ಸೋಂಕು ಹರಡುತ್ತಿರುವುದು ಖಾತ್ರಿಯಾದುದರಿಂದ ಅಲ್ಲಿನ ಸರಕಾರ ಆ ಸಮಾವೇಶದಲ್ಲಿ ಭಾಗವಹಿಸಿದ್ದ ಎಲ್ಲ ೧೬ ಸಾವಿರ ಜನರನ್ನೂ ವೈರಸ್ ತಪಾಸಣೆಗೆ ಆಹ್ವಾನಿಸಿದರೆ... ಅರ್ಧದಷ್ಟು ಜನ ಮಾತ್ರ ಬಂದರು. ಸುಮಾರು ಎಂಟು ಸಾವಿರದಷ್ಟು ಜನ ಯಾವುದೇ ಪರೀಕ್ಷೆ ಮಾಡಿಸಿಕೊಳ್ಳಲಿಲ್ಲ! ಮಲೇಷ್ಯಾದ ಈ ಸಮಾವೇಶ ಪಕ್ಕದ ಬ್ರುನೈ, ಥಾಯ್ ಲ್ಯಾಂಡ್, ಇಂಡೋನೇಷ್ಯಾ, ಕಾಂಬೋಡಿಯಾ, ವಿಯೆತ್ನಾಮ್ ಗಳಿಗೂ ಸೋಂಕನ್ನು ಹರಡಿತು. ಈ ಸಭೆಗೆ ಭಾರತ, ನೈಜೀರಿಯಾ, ಚೈನಾ, ದಕ್ಷಿಣ ಕೊರಿಯಾಗಳಿಂದಲೂ ಜನ ಭಾಗವಹಿಸಿದ್ದರು. ಹೀಗೆ ಮಲೇಷ್ಯಾದ  ತಬ್ಲೀಘಿ ಸಮಾವೇಶದಿಂದ ಅನೇಕ ದೇಶಗಳಿಗೆ ವೈರಸ್ ಹರಡಿತು. 

ಇಂಡೊನೇಷ್ಯಾದಲ್ಲೂ ಮಾರ್ಚ್ ೧೭ ತಾರೀಕಿಗೆ  ತಬ್ಲೀಘಿಗಳು ಎಲ್ಲ ಸೂಚನೆಗಳನ್ನೂ ಧಿಕ್ಕರಿಸಿ ಸಮಾವೇಶ ಮಾಡಿದರು...ದಕ್ಷಿಣ ಸುಲಾವೆಸಿ ಪ್ರಾಂತ್ಯದ ಮಕಾಸ್ಸರ್ ನಗರದ ಹತ್ತಿರವಿರುವ ಗೊವಾ ಪಟ್ಟಣದಲ್ಲಿ ತಬ್ಲೀಘಿಗಳ ಸಮಾವೇಶಕ್ಕೆ ಸುಮಾರು ಎಂಟೂವರೆ ಸಾವಿರ ಜನ ಬಂದಿದ್ದರು. ಸರಕಾರದ ಯಾವುದೇ ಮನವೊಲಿಕೆಗೂ ಜಗ್ಗದೆ ಕೊರೋನಾಗೆಲ್ಲ ನಾವು ಬಗ್ಗಲ್ಲ ಅಂತ ಧಾರ್ಷ್ಟ್ಯ ತೋರಿ  ತಬ್ಲೀಘಿಗಳು ಸಮಾವೇಶ ನಡೆಸಿದರು. ಅದಾದ ಬಳಿಕ ಇಂಡೋನೇಷ್ಯಾದ ಕೋರೋನಾ ಸೋಂಕು ವ್ಯಾಪಕವಾಯಿತು. 

ಅತ್ತ ಪಾಕಿಸ್ತಾನದ  ತಬ್ಲೀಘಿಗಳು ಕೂಡಾ ಬೃಹತ್ ಸಮಾವೇಶ ಏರ್ಪಡಿಸಿದರು. ಪಾಕಿಸ್ತಾನದಲ್ಲಿನ ಸಮಾವೇಶ ನಡೆದ ತಾರೀಕು ಕೂಡಾ ಇತರೆಡೆಗಳಲ್ಲಿ ನಡೆದ ಸಮಾವೇಶದಂತೆಯೇ ಮಾರ್ಚ್ ತಿಂಗಳ ಹತ್ತನೆಯ ತಾರೀಕು. ಅಂದರೆ ಭಾರತ ಸೇರಿದಂತೆ ಇತರೆಲ್ಲಾ ಕಡೆಯೂ ಮಾರ್ಚ್ ತಿಂಗಳ ಆಸುಪಾಸಿನಲ್ಲೇ ಅಂದರೆ ಕೊರೋನಾ ಮಹಾಮಾರಿಯ ಸೋಂಕು ತೀವ್ರಗತಿಯನ್ನು ಪಡೆಯುತ್ತಿರುವ ಹೊತ್ತಿಗೆಯೇ  ತಬ್ಲೀಘಿಗಳ ಸಮಾವೇಶಗಳು ಏರ್ಪಟ್ಟಿದ್ದವು. ಹೆಚ್ಚಿನೆಲ್ಲ ಸಮಾವೇಶಗಳಲ್ಲಿ ಭಾಗವಹಿಸಿದವರಿಗೂ ಅಲ್ಲಿಂದಲೇ ವೈರಸ್ಸಿನ ಸೋಂಕು ತಾಗಿತ್ತು.. ಸಮಾವೇಶ ಮುಗಿಸಿ ತಮ್ಮ ದೇಶಗಳಿಗೆ ಊರುಗಳಿಗೆ, ಊರುಗಳಿಗೆ ತೆರಳಿದವರು ಅಲ್ಲೆಲ್ಲ ಕ್ಲಸ್ಟರ್ ಗಳನ್ನೂ ಸೃಷ್ಟಿಸಿ ವೈರಾಣು ಸೋಂಕು ವ್ಯಾಪಕವಾಗಿ ಹರಡಲು ಕಾರಣರಾದರು. ಇದನ್ನೆಲ್ಲಾ ಗಮನಿಸುವಾಗ ಇದೆಲ್ಲವೂ ಪೂರ್ವಯೋಜಿತ ಕೃತ್ಯಗಳೇ ಅಂತ ಸಂಶಯ ಸಹಜವಾಗಿಯೇ ಬರುತ್ತದೆ. ಭಾರತದಂತೆಯೇ ಈ ಎಲ್ಲಾ ದೇಶಗಳ ಸರಕಾರಗಳೂ  ತಬ್ಲೀಘಿ ಸಮಾವೇಶದಲ್ಲಿ ಭಾಗವಹಿಸಿದ ಎಲ್ಲ ಸದಸ್ಯರನ್ನೂ ಟ್ರ್ಯಾಕ್ ಮಾಡಲು ಉಪಕ್ರಮಿಸಿದವು. ಆದರೆ ಭಾರತದಂತೆಯೇ ಇತರೆಲ್ಲ ದೇಶಗಳಲ್ಲೂ  ತಬ್ಲೀಘಿಗಳ ವರ್ತನೆ ಸರಿಸುಮಾರು ಒಂದೇ ರೀತಿಯಾಗಿತ್ತು. ಅವರೆಲ್ಲರೂ ವೈದ್ಯಕೀಯ ತಪಾಸಣೆಗೊಳಗಾಗಲು ನಿರಾಕರಿಸುತ್ತಾ, ಎಲ್ಲೆಲ್ಲೋ ಅವಿತುಕುಳಿತು ತಲೆತಪ್ಪಿಸಿಕೊಂಡು ಅಲ್ಲಿನ ಸರಕಾರಗಳಿಗೆ ತಲೆನೋವಾದರು. 

ತಬ್ಲೀಘಿಗಳು ತಮ್ಮ ಸಮಾವೇಶಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿದ ಸಮಯ ಸಂದರ್ಭ, ಆ ಸಮಾವೇಶಗಳಲ್ಲಿ ಅವರ ಮೌಲಾನಾಗಳು ನೀಡಿದ ಪ್ರವಚನದ ಹೂರಣ, "ಕೊರೋನಾಗೆ ಹೆದರಬೇಕಿಲ್ಲ .. ಅಲ್ಲಾಹುವಿಗೆ ಹೆದರಿದರೆ ಸಾಕು" ಅನ್ನೋ ರೀತಿಯ ಹೇಳಿಕೆಗಳು... "ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿಲ್ಲ ...ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿಲ್ಲಿಸಬೇಕಿಲ್ಲ" ಅನ್ನೋ ರೀತಿಯ ಆಜ್ಞೆಗಳು ... ಹೀಗೆ ಎಲ್ಲವೂ ಒಂದು ರೀತಿಯ ಸಮಾನ ಪ್ಯಾಟರ್ನ್ ಹೊಂದಿದ್ದು ಇಸ್ಲಾಮ್ ಅನ್ನು ಈ ಮಾರಕ ವೈರಾಣು ಸೋಂಕಿನ ಮಧ್ಯೆ ವ್ಯವಸ್ಥಿತವಾಗಿ ಎಳೆದು ತರಲಾಗಿದೆ ಎಂಬುದನ್ನು ಎತ್ತಿ ತೋರಿಸುತ್ತದೆ. ಇದಕ್ಕೆ ಜ್ವಲಂತ ಸಾಕ್ಷಿಯಾಗಿ ದೆಹಲಿ ತಬ್ಲೀಘಿ ಜಮಾತ್ ಮರ್ಕಜ್ ಸಭೆಗಳಲ್ಲಿ ಮೌಲಾನಾ ಸಾದ್ ಮಾಡಿದ ಪ್ರವಚನಗಳಿವೆ. 

ಅಂದರೆ ಇದೆಲ್ಲವನ್ನೂ ಉದ್ದೇಶಪೂರ್ವಕವಾಗಿಯೇ ಮಾಡಲಾಗಿದೆ ಮತ್ತು ಇದೆಲ್ಲದರ ಹಿಂದೆ ಒಂದು ಭಾರೀ ಸಂಚು ಇದೆ.. ಕ್ರಿಮಿನಲ್ ಕಾನ್ಸ್ಪಿರೆಸಿ ಇದೆ ಎಂಬುದು ಸ್ಪಷ್ಟ. ಇದಕ್ಕೆ ಮಜಭೂತಾದ ಸಾಕ್ಷಿಗಳನ್ನೂ ನಮಗೆ  ಒದಗಿಸಿಕೊಡುವುದು ಖುದ್ದು  ತಬ್ಲೀಘಿನ ಮುಖ್ಯಸ್ಥ ಮೌಲಾನಾ ಸಾದ್ ಮಾಡಿರುವ ಪ್ರವಚನಗಳೇ... ಮೌಲಾನಾ ಮಾಡಿದ ಭಾಷಣಗಳು ನಿನ್ನೆ ಮೊನ್ನೆಯವರೆಗೂ http://delhimarkaz.com/ ಎಂಬ ಅವರ ವೆಬ್ಸೈಟ್ ನಲ್ಲೆ ಲಭ್ಯ ಇದ್ದವು. ಮೌಲಾನಾನ ಅಂತ ಭಾಷಣಗಳ ಕೆಲವು ಮುಖ್ಯಅಂಶಗಳು ಇಲ್ಲಿವೆ.... 

ಕೊರೋನಾ ಸಾಂಕ್ರಾಮಿಕ ಹರಡುವ ಭೀತಿಯಿಂದ ಎಲ್ಲಾ ಸಾರ್ವಜನಿಕ ಸ್ಥಳಗಳನ್ನು ಬಂದ್ ಮಾಡಲು ರಾಜ್ಯ ಸರಕಾರಗಳು ಆದೇಶ ಹೊರಡಿಸಿತ್ತು.. ಹಾಗಾಗಿ ಮಾಲ್ ಗಳು ಸಿನಿಮಾ ಥಿಯೇಟರ್ ಗಳು ದೇವಾಲಯಗಳು ಚರ್ಚ್ ಗಳು ಮಸೀದಿಗಳು ಹೀಗೆ ತುಂಬಾ ಜನ ಸೇರಬಹುದಾದ ಪ್ರದೇಶಗಳನ್ನು ಗುರುತಿಸಿ ಬಂದ್ ಮಾಡಲಾಯಿತು. ಸರಕಾರದ ಕರೆಗೆ ಎಲ್ಲರೂ ಸ್ಪಂದಿಸಿದರು. ಆದರೆ  ತಬ್ಲೀಘಿನ ಮುಖ್ಯಸ್ಥ ಮೌಲಾನಾ ಸಾದ್ ಮಾತ್ರ "ಇದೆಲ್ಲ ಒಂದು  ಸಂಚು... ಮುಸ್ಲಿಮರು ಸಾಮೂಹಿಕ ನಮಾಜ್ ಮಾಡದಂತೆ ತಡೆಯಲು, ಮಸೀದಿಗಳಿಗೆ ಬರದಂತೆ ಮಾಡಲು ಹೂಡಿದ ಬೆದರಿಕೆ ತಂತ್ರ... ಮಸೀದಿಗಳಿಗೆ ಬಂದರೆ ರೋಗ ಹರಡುತ್ತದೆ ಎಂಬುದೇ ತಪ್ಪು... ಮಸೀದಿಗೆ ಬಂದು ಪ್ರಾರ್ಥನೆ ಮಾಡಿದರೆ ಕೊರೋನಾ ಬಂದು  ಸಾಯುತ್ತಾರೆ ಅಂತಾದರೆ ಸಾಯಲು ಮಸೀದಿಗಿಂತ ಒಳ್ಳೆಯ ಜಾಗ ಬೇರೆ ಇದೆಯೇ ?" ಅಂತೆಲ್ಲ ಹೇಳುತ್ತಾ  "ಭೀಮಾರೀ ತೋ  ಏಕ್  ಬಹಾನಾ  ಹೈ" (ಖಾಯಿಲೆ ಅನ್ನೋದು ಕೇವಲ ನೆಪವಷ್ಟೇ ) ಅನ್ನೋ ರೀತಿಯ ಪ್ರವಚನ ಕೊಟ್ಟು ಅಲ್ಲಿ ಸೇರಿರುವ ಧರ್ಮಾಂಧರ ಮನಸ್ಸನ್ನು ಕೆಡಿಸಿ ಸರಕಾರದ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ದನ್ನು ಧಿಕ್ಕರಿಸುವ ಕರೆ ಕೊಡುತ್ತಾನೆ... 

ಯ ಖಯಾಲ್ ಬಾತಿಲ್ ಖಯಾಲ್ ಯೆ. ಕಿ ಮಸ್ಜಿದ್ ಮೆ ಜಮಾ ಹೋನೇಸೆ ಬಿಮಾರೀ ಪೈದಾ ಹೋಗೀ.. ಯೆ ಖಯಾಲ್ ಬಿಲ್ಕುಲ್ ಬಾತಿಲ್ ಖಯಾಲ್…ಮೆ ಕೆಹ್ತಾ ಹೂಂ..ಅಗರ್ ತುಮ್ಹೆ ತುಮಾರೆ ತಜುರ್ಬೇ ಮೇ … ಯೆ ನಝರ್ ಬೀ ಆಜಾಯೇ.. ಕಿ ಮಸ್ಜಿದ್ ಮೆ ಆನೇ ಸೆ ಆದ್ಮಿ ಮರ್ಜಾಯೇಗಾ… ತೊ ಇಸ್ಸೆ ಬೆಹ್ತರ್ ಮರ್ನೇಕಿ ಜಗಹ್ ಕೋಯಿ ಹೋ ನಹೀ ಸಕ್ತೀ…

…ಇನ್ಹೇ ನಮಾಝ್ ಮೇ ಖತ್ರಾಕ್ ನಝರ್ ಆರಹೇ ಯೆ..ಯೇ ನಮಾಝ್ ಛೋಢ್ಕರ್ ಭಾಗೇಂಗೆ… ಇಸ್ಲಿಯೇ..ತಾಕಿ ಆಝಾಬ್ ಫಟ್ಜಾವೇ…ಅಲ್ಲಾಹ್ ಆಝಾಬ್ ಲಾಯೇ ನಮಾಝ್ ಛೋಢ್ನೇಸೇ ವಜೇಸೆ… ಯೇ ಆಝಾಬ್ ಹಠಾಯೇಂಗೆ ಮಸ್ಜಿದೋಂಕೋ ಛೋಢ್ನೇಕೆ ವಜೇಸೆ……. ಕೈಸೀ ಉಲ್ಟೀ ಸೋಚ್ ಯೆ…

ಈಗ ಹೇಳಿ....ಇದು ನೇರವಾಗಿಯೇ ಸರಕಾರದ ವಿರುದ್ಧ ಜನರನ್ನು ಎತ್ತಿಕಟ್ಟುವ, ಕೊರೋನಾ ಹರಡದಂತೆ ತಡೆಯುವ ಸರಕಾರದ ಪ್ರಯತ್ನವನ್ನು ವಿಫಲಗೊಳಿಸುವ, ಸಾರ್ವಜನಿಕವಾಗಿ ಗುಂಪು ಸೇರಬಾರದು, ಸಾಮೂಹಿಕ ಪ್ರಾರ್ಥನೆ ಮಾಡಬಾರದು ಅಂತ  ನಿಷೇಧ ಹೇರಿರುವ ಆಜ್ಞೆಯನ್ನು ಮುಸ್ಲಿಮರು ಧಿಕ್ಕರಿಸುವಂತೆ ಪ್ರೇರೇಪಿಸುವ, ಮುಸ್ಲಿಮರು ಸಾಂಕ್ರಾಮಿಕ ಖಾಯಿಲೆ ಬಂದು ಸತ್ತರೂ ಪರವಾಗಿಲ್ಲ ... ಸಾಯಲು ಮಸೀದಿಗಿಂತ ಪ್ರಶಸ್ತ ಸ್ಥಳವಿದೆಯೇ ಅಂತ ಪ್ರಶ್ನಿಸಿ ಮುಸ್ಲಿಮರನ್ನು ಆತ್ಮಾಹುತಿ ಎಸಗುವಂತೆ ಪ್ರೇರೇಪಿಸುವ ಮಾತುಗಳಲ್ಲವೇ... ? ಕೊರೋನಾದಂಥ ಅಪಾಯಕಾರಿ ಮಾರಕ ವೈರಾಣು ಸೋಂಕನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು, ಇಸ್ಲಾಮಿನ ನಂಬಿಕೆಗಳನ್ನೇ ದಾಳವಾಗಿ ಬಳಸಿಕೊಂಡು ಮುಸ್ಲಿಮರನ್ನು ವೈರಾಣು ಸೋಂಕಿಗೆ ಪಕ್ಕಾಗುವಂತೆ ಮಾಡುವ... ಆ ಮೂಲಕ ಸಮಾಜದ ಇತರರಿಗೂ ಸೋಂಕು ಹರಡಲಿ ಅಂತ ಸಂಚು ಮಾಡುವ ಯತ್ನ ಅಲ್ಲವೇ? ಇದೆಲ್ಲವನ್ನೂ ಉದ್ದೇಶಪೂರ್ವಕವಾಗಿಯೇ ಮಾಡಲಾಗುತ್ತಿದೆಯಲ್ಲವೇ...? 

ಇದೆಲ್ಲವನ್ನು ತಿಳಿದ ನಂತರವೂ  ವಿಶ್ವಸಂಸ್ಥೆ ಮುಖ್ಯಸ್ಥರು ಕೊರೋನಾ ಬಯೋ ಟೆರರಿಸಂ ಬಗ್ಗೆ ನೀಡಿದ ವಾರ್ನಿಂಗ್ ಸತ್ಯ ಮತ್ತು ಇಂಥದ್ದೊಂದು ಪ್ರಯತ್ನ ಈಗಾಗಲೇ ಭಾರತದಲ್ಲಿ ಯಶಸ್ವಿಯಾಗಿಯೇ ನಡೆದುಹೋಗಿದೆ ಅಂತ ಅನ್ನಿಸೋದಿಲ್ಲವೇ..? ನಿಮ್ಮ ನಿಮ್ಮ ಆತ್ಮಸಾಕ್ಷಿಗೆ ಈ ಎಲ್ಲಾ ಪ್ರಶ್ನೆಗಳನ್ನು ನೀವೇಕೆ ಒಮ್ಮೆ ಕೇಳಿಕೊಳ್ಳಬಾರದು..? 

 

 ಮುಂದಿನ ಲೇಖನದಲ್ಲಿ ಇನ್ನಷ್ಟು ಭಯಾನಕ ಸಾಕ್ಷಿಗಳನ್ನು ನೀಡುತ್ತೇನೆ ... ದಯವಿಟ್ಟು ನಿರೀಕ್ಷಿಸಿ...

 

 

 

 

 

 

Related posts