ತಬ್ಲೀಘಿಗಳ ಬಣ್ಣ ಬಯಲು ಮಾಡಿದಕ್ಕೆ ನನ್ನ ಟ್ವಿಟ್ಟರ್ ಖಾತೆ ಬ್ಲಾಕ್ ಆಯ್ತು..!
ತಬ್ಲೀಘಿಗಳ ಬಣ್ಣ ಬಯಲು ಮಾಡಿದಕ್ಕೆ ನನ್ನ ಟ್ವಿಟ್ಟರ್ ಖಾತೆ ಬ್ಲಾಕ್ ಆಯ್ತು..!
ಸೌದಿ ಶೇಖ್ ಗಳ ತಾಳಕ್ಕೆ ಜಾಕ್ ಡೋರ್ಸೆ ಕುಣಿಯುವುದು ಖಚಿತವಾಯ್ತು..!
ಮಾರಕ ಕೊರೋನಾದ ಈ ಭೀತಿಯ ವಾತಾವರಣದಲ್ಲೂ ಭಾರತದಲ್ಲಿ ತಬ್ಲೀಘಿ ಜಮಾತಿನ ತಲೆಕೆಟ್ಟ ಮಂದಿ ಸೋಂಕನ್ನು ಹರಡಲು ಮಾಡಿದ ವ್ಯವಸ್ಥಿತ ಸಂಚಿನ ಬಗ್ಗೆ ಪುರಾವೆಗಳ ಸಮೇತ ಸರಣಿ ಲೇಖನಗಳನ್ನು ಬರೆದು ನನ್ನ ಅಧಿಕೃತ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಅದನ್ನೇ ಸಾಮಾಜಿಕ ಜಾಲತಾಣಗಳ ನನ್ನ ವೈಯುಕ್ತಿಕ ಖಾತೆಯಿಂದ ಹಂಚಿಕೊಂಡಿದ್ದೆ. ಇದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ಲೇಖನಗಳನ್ನು ಲಕ್ಷಾಂತರ ಜನ ಓದಿದ್ದಾರೆ, ತಮ್ಮ ತಮ್ಮ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ಕೂಡಾ,,! ಇದೇ ಸರಣಿ ಲೇಖನಗಳ ಕೊಂಡಿಯನ್ನು ನಾನು ನನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲೂ ಹಂಚಿಕೊಂಡಿದ್ದೆ...
ಆದರೆ...
ಕೇವಲ ಅಷ್ಟಕ್ಕೇ ನನ್ನ ಟ್ವಿಟ್ಟರ್ ಖಾತೆಯನ್ನು ಟ್ವಿಟ್ಟರ್ ಕಂಪೆನಿಯವರೇ ಸ್ಥಗಿತಗೊಳಿಸಿದ್ದಾರೆ... ತಬ್ಲೀಘಿಗಳು ಕೊರೋನಾ ಹೆಸರಲ್ಲೇ ಜಿಹಾದ್ ನ ಷಡ್ಯಂತ್ರ ರೂಪಿಸಿದ್ದನ್ನು ಪುರಾವೆ ಸಹಿತ ಜನರ ಮುಂದಿಟ್ಟದ್ದನ್ನೇ ಕಾರಣವಾಗಿಟ್ಟುಕೊಂಡು, ನನ್ನ ಬರಹವು ಟ್ವಿಟ್ಟರ್ ನ ಕಾನೂನುಗಳನ್ನು ಉಲ್ಲಂಘಿಸಿದೆ ಎಂಬ ಕಾರಣ ಮುಂದಿಟ್ಟು ನನ್ನ ಅಧಿಕೃತ ಖಾತೆಯನ್ನು ಸ್ಥಗಿತಗೊಳಿಸಲಾಯಿತು..! ಲಕ್ಷಾಂತರ ಫಾಲೋವರ್ಸ್ ಇರುವ, ಈ ದೇಶದ ಸಂಸದನಾಗಿ ಸಾಂವಿಧಾನಿಕವಾಗಿ ಆಯ್ಕೆಯಾಗಿರುವ ನನ್ನ ಅಧಿಕೃತ ಖಾತೆಯನ್ನೇ ಹೀಗೆ ಯಾವುದೇ ಸ್ಪಷ್ಟ ಕಾರಣಗಳಿಲ್ಲದೆ ಸ್ಥಗಿತಗೊಳಿಸಿ ಟ್ವಿಟ್ಟರ್ ತನ್ನ ಅಸಲೀಯತ್ತನ್ನು ಮತ್ತೊಮ್ಮೆ ಬಯಲು ಮಾಡಿತು.
ಟ್ವಿಟ್ಟರ್ ಶುರುವಾತಿನಿಂದಲೂ ಹಾಗೆಯೇ. ಅದರ ಸಂಸ್ಥಾಪಕ ಮತ್ತು ಈಗಿನ ಸಿ ಇ ಓ ಜಾಕ್ ಡೋರ್ಸೆ ಓರ್ವ ಎಡಬಿಡಂಗಿ ಮನಃಸ್ಥಿತಿಯ ಎಡಪಂಥದ ತುಂಡು. ಹೀಗೆ ಕೆಂಪು ಅಂಗಿ ಧರಿಸಿ ಸೆಕ್ಯುಲರಿಸಮ್ಮಿನ ಅಫೀಮು ತಿಂದ ಮೇಲೆ ಕೇಳಬೇಕೇ... ಇಂಥವರೆಲ್ಲಾ ಸಹಜವಾಗಿಯೇ ಇಸ್ಲಾಮಿನ ಜಿಹಾದೀ ಬೆಕ್ಕನ್ನು ಮಡಿಲಲ್ಲಿ ಮಲಗಿಸಿ ತಲೆಸವರ ತೊಡಗುತ್ತಾರೆ... ಜಾಕ್ ಡೋರ್ಸೆಯದ್ದೂ ಕೂಡಾ ಇದೇ ಅವಸ್ಥೆ... ಆತ ತನ್ನ ಸಂಸ್ಥೆ ತೀರಾ ಎಡಪಂಥೀಯ ನಿಲುವು ಹೊಂದಿರುವಂಥದೆಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾನೆ.. ಅದೇ ಧೋರಣೆಯನ್ನು ಸಂಸ್ಥೆಯ ಟ್ವಿಟ್ಟರ್ ಜಾಲತಾಣದಲ್ಲೂ ಜಾರಿಗೆ ತಂದಿದ್ದಾನೆ. ಬಲಪಂಥೀಯ ನಿಲುವುಗಳುಳ್ಳ ಯಾರಿಗೇ ಆದರೂ ಟ್ವಿಟ್ಟರ್ ನಲ್ಲಿ ಉಸಿರುಗಟ್ಟಿಸುವ ವಾತಾವರ ಇರುವಂತೆ ಮಾಡಲಾಗುತ್ತದೆ. ಇದನ್ನೆಲ್ಲಾ ಟ್ವಿಟ್ಟರ್ ಉದ್ದೇಶಪೂರ್ವಕವಾಗಿಯೇ ಮಾಡುತ್ತಿದೆ, ಎಡಪಂಥೀಯರು ಮತ್ತು ಮೂಲಭೂತವಾದಿ ಮುಸ್ಲಿಮರು ನಮ್ಮ ದೇಶದ ಬಗ್ಗೆ, ಧರ್ಮದ ಬಗ್ಗೆ, ನಮ್ಮ ದೇಶದ ಸೈನಿಕರ ಬಗ್ಗೆ, ಆಚಾರ ವಿಚಾರ ಸಂಪ್ರದಾಯಗಳ ಬಗ್ಗೆ ಲೇವಡಿ ಮಾಡುವ, ನಮ್ಮ ದೇವದೇವತೆಗಳನ್ನು ಅಸಹ್ಯಕರವಾಗಿ ನಿಂದಿಸುವ ಪೋಸ್ಟ್ ಗಳು ಟ್ವಿಟ್ಟರ್ ನ ಯಾವುದೇ ಕಾನೂನುಗಳ ಹಂಗಿಲ್ಲದೆ ಯಾವುದೇ ಶಿಕ್ಷೆಯ ಭಯವೂ ಇಲ್ಲದೆ ಹಂಚಿಕೆ, ಮರು ಹಂಚಿಕೆ ಆಗುತ್ತಿರುತ್ತದೆ.
ಅಮೆರಿಕಾದಲ್ಲಿ ಟ್ವಿಟ್ಟರ್ ಅಲ್ಲಿನ ಎಡಪಂಥೀಯ ನಿಲುವುಗಳ ಡೆಮಾಕ್ರಾಟ್ ಪಕ್ಷದಪರ ಕಾರ್ಯ ನಿರ್ವಹಿಸುತ್ತಿದ್ದದ್ದು, ಆ ಪಕ್ಷದ ನಾಯಕರ, ಕಾರ್ಯಕರ್ತರ ಯಾವುದೇ ಪೋಸ್ಟ್ ಗಳಿಗೂ, ಕಾಮೆಂಟ್ ಗಳಿಗೂ ಯಾವುದೇ ಲಂಗು ಲಗಾಮಿಲ್ಲದೆ ಅವಕಾಶ ನೀಡುವ ಟ್ವಿಟ್ಟರ್, ಅದೇ ರಿಪಬ್ಲಿಕನ್ ಪಕ್ಷದ ಕಾರ್ಯಕರ್ತರ, ನಾಯಕರ ಖಾತೆಗಳನ್ನು ಅಮಾನತು ಮಾಡುವುದು, ಅವರ ಪೋಸ್ಟ್ ಗಳನ್ನೂ, ಅವರು ನೀಡಿದ ಪ್ರತಿಕ್ರಿಯೆಗಳನ್ನೂ ಯಾರಿಗೂ ಕಾಣಿಸದಂತೆ ಮಾಡುವುದು (ಶಾಡೋ ಬ್ಯಾನಿಂಗ್) ಇತ್ಯಾದಿಗಳನ್ನು ಮಾಡುತ್ತದೆ. ಹೀಗೆ ಹಲವು ತಂತ್ರಗಳಿಂದ ರಿಪಬ್ಲಿಕ್ ಪಕ್ಷದ ಧ್ವನಿಯನ್ನು ಉಡುಗಿಸುವುದು, ಮತ್ತು ತನ್ನ ಮೆಚ್ಚಿನ ಎಡಪಂಥೀಯ ಡೆಮಾಕ್ರಾಟ್ ಪಕ್ಷದ ನಾಯಕರ ಪೋಸ್ಟ್ ಗಳಿಗೆ ಹೆಚ್ಚಿನ ಪ್ರಾಧಾನ್ಯತೆ ಕೊಡುವುದು ಇತ್ಯಾದಿಗಳನ್ನು ಟ್ವಿಟ್ಟರ್ ಮಾಡಿದೆ ಅನ್ನುವ ಆರೋಪಕ್ಕೆ ಜಾಕ್ ಡೋರ್ಸೆ ಅಮೆರಿಕಾದ ಸಂಸತ್ತಿನಲ್ಲಿ ವಿಚಾರಣೆ ಎದುರಿಸುವಂತಾಯಿತು. ಅಲ್ಲಿ ತನ್ನ ಸಂಸ್ಥೆಯಿಂದ ತಾರತಮ್ಯ ಆಗಿದೆ ಎನ್ನುವುದನ್ನು ಒಪ್ಪಿಕೊಂಡ ಜಾಕ್ ಡೋರ್ಸೆ .." ಸುಮಾರು ಆರು ಲಕ್ಷ ಖಾತೆಗಳನ್ನು ನಿಷ್ಕ್ರಿಯಗೊಳಿಸಿದಾಗ ಅದರಲ್ಲಿ ರಿಪಬ್ಲಿಕನ್ನರ ಮತ್ತು ಡೆಮಾಕ್ರಾಟರ ಮಧ್ಯೆ ತಾರತಮ್ಯ ಆಗಿದೆ ಎಂಬುದನ್ನು " we agree that the result was not impartial" ಅಂತ ತಡಬಡಾಯಿಸುತ್ತಾ ಹೇಳಿದ್ದ!
ಭಾರತದಲ್ಲೂ ಟ್ವಿಟ್ಟರ್ ಬಲಪಂಥೀಯ ರಾಜಕೀಯ ನಾಯಕರು ಮತ್ತು ಹಿಂಬಾಲಕರನ್ನು ತುಚ್ಛವಾಗಿ ನಡೆಸಿಕೊಳ್ಳುತ್ತಿದೆ ಎಂಬುದಕ್ಕೆ ಅಸಂಖ್ಯ ಸಾಕ್ಷಿಗಳಿದ್ದವು. ಅದರಲ್ಲೂ ಭಾರತದ ಟ್ವಿಟ್ಟರ್ ಮುಖ್ಯಸ್ಥನಾಗಿ ಕಾಶ್ಮೀರದ ರಾಹೀಲ್ ಖುರ್ಷಿದ್ ಎಂಬ ಪತ್ರಕರ್ತನನ್ನು ನೇಮಿಸಿದಾಗ ಇದು ಖಚಿತವಾಗಿತ್ತು. ಈ ರಾಹಿಲ್ ಖುರ್ಷಿದ್ ಎಡಪಂಥೀಯರೊಂದಿಗೆ ಮತ್ತು ಕಾಶ್ಮೀರ ಪ್ರತ್ಯೇಕತಾ ವಾದಿಗಳ ಜೊತೆಗೆ ಆತ್ಮೀಯ ಸಂಪರ್ಕ ಹೊಂದಿದ್ದ... ಹಿಂದೂ ದ್ವೇಷಿಯಾಗಿದ್ದ ಆತ ಹಿಂದೂ ಹಬ್ಬ ಆಚರಣೆಗಳ ಬಗ್ಗೆ, ಹಿಂದೂ ದೇವತೆಗಳ ಬಗ್ಗೆ ತೀರಾ ಅಸಹ್ಯಕರ ಟ್ವೀಟ್ ಮಾಡುತ್ತಿದ್ದ...! ಒಮ್ಮೆಯಂತೂ ನವರಾತ್ರಿ ಉಪವಾಸವನ್ನು ಡ್ಯುರೆಕ್ಸ್ ಕಾಂಡೋಮಿನ ಜೊತೆಗೆ ಹೋಲಿಸಿ ನವರಾತ್ರಿ ಸಂದರ್ಭದಲ್ಲಿ ಲೈಂಗಿಕ ಚಟುವಟಿಕೆ ಇರುವುದಿಲ್ಲ ಅನ್ನೂ ರೀತಿಯಲ್ಲಿ ಹೀಯಾಳಿಸಿ ಕಮೆಂಟ್ ಹಾಕಿದ್ದ. ಇದಕ್ಕೆ ಭಾರೀ ವಿರೋಧ ಬಂದಿದ್ದರಿಂದ ಅಳಿಸಿ ಹಾಕಿದ. ಆತ ೨೦೧೪ ರಿಂದ ೨೦೧೯ ರ ವರೆಗೂ ಭಾರತದ ಟ್ವಿಟ್ಟರ್ ಮುಖ್ಯಸ್ಥನಾಗಿಯೇ ಮುಂದುವರೆದ. ಆತ ಅಧಿಕಾರದಲ್ಲಿದ್ದ ಆಷ್ಟೂ ಸಮಯ ಬಿಜೆಪಿ ಯನ್ನು ಮತ್ತು ಮೋದಿಯವರನ್ನು ಬಹಿರಂಗವಾಗಿಯೇ ಟೀಕಿಸುತ್ತಿದ್ದ. ಖ್ಯಾತ ಬಾಲಿವುಡ್ ಗಾಯಕ ಅಭಿಜಿತ್ ಭಟ್ಟಾಚಾರ್ಯ, ಖ್ಯಾತ ನಟ ಮತ್ತು ಬಿಜೆಪಿ ಸಂಸದ ಪರೇಶ್ ರಾವಲ್, ಸೋನಂ ಮಹಾಜನ್ ಮುಂತಾದವರ ಖಾತೆಗಳನ್ನು ರದ್ದುಗೊಳಿಸಿದ್ದ ಈ ಖುರ್ಷಿದ್. ದೆಹಲಿಯ ರಾಮಜಾಸ್ ಕಾಲೇಜಿನಲ್ಲಿ ದೇಶದ್ರೋಹಿ ಕೂಗುಗಳೆದ್ದಾಗ, ಅಜಾದೀ ಘೋಷಣೆಗಳು ಮೊಳಗಿದಾಗ ಏಕಾಏಕಿ ಟ್ವಿಟ್ಟರಿನಿಂದ ಎಬಿವಿಪಿಯ ನೂರಾರು ಖಾತೆಗಳು, ಅದರಲ್ಲೂ ಸಾವಿರಾರು ಹಿಂಬಾಲಕರಿದ್ದ ಪ್ರಮುಖ ವಿದ್ಯಾರ್ಥಿ ನಾಯಕರ ಖಾತೆಗಳು ರಾತ್ರೋರಾತ್ರಿ ಅಮಾನತಾದವು. ಆದರೆ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳ ಯಾವುದೇ ವಿದ್ಯಾರ್ಥಿಗಳದ್ದೂ ಕೂಡಾ ಹೀಗೆ ಅಮಾನತ್ತಾಗಲಿಲ್ಲ. ಈ ಪ್ರಕರಣದಲ್ಲಿ ಖುರ್ಷಿದ್ ಪಾತ್ರದ ಬಗ್ಗೆ ತುಂಬಾ ಟೀಕೆಗಳು ಬಂದವು. ಆಗ ಅನಿವಾರ್ಯವಾಗಿ ಆ ಖಾತೆಗಳನ್ನು ಮತ್ತೆ ಊರ್ಜಿತಗೊಳಿಸಲಾಯಿತಾದರೂ ಅಷ್ಟೂ ಖಾತೆಗಳ ಹಿಂಬಾಲಕರ ಪಟ್ಟಿಯನ್ನೇ ಸ್ಥಗಿತಗೊಳಿಸಲಾಯಿತು! ರಾಹಿಲ್ ಖು ರ್ಷಿದ್ ಇದಾಗ ಟ್ವಿಟ್ಟರ್ ನಲ್ಲಿ ನೀವು ಸರ್ಚ್ ಮಾಡಲು ಜಮ್ಮು ಅಥವಾ ಜಮ್ಮು ಕಾಶ್ಮೀರ ಅಂತ ಟೈಪ್ ಮಾಡಿದರೆ " Jammu and Kashmir - People Republic of Pakistan" ಅಂತ ಫಲಿತಾಂಶ ಬರುತ್ತಿತ್ತು. ಇದರಲ್ಲಿ ರಾಹಿಲ್ ಖುರ್ಷಿದ್ ಕೈವಾಡ ಖಂಡಿತಾ ಇದೆ ಅಂತ ದೊಡ್ಡ ಗೌಜಿ ಗದ್ದಲ ಆಯಿತು. ಹೀಗೆ ರಾಹಿಲ್ ಖುರ್ಷಿದ್ ನನ್ನು ಭಾರತದ ಟ್ವಿಟ್ಟರ್ ಮುಖ್ಯಸ್ಥನ ಹುದ್ದೆಯಿಂದ ಬದಲಾಯಿಸಲು ಬಹಳಷ್ಟು ಒತ್ತಡ ಬಂದುದರಿಂದ ಕೊನೆಗೂ ಕಳೆದ ವರ್ಷ ಆತ ಟ್ವಿಟ್ಟರ್ ನಿಂದ ಹೊರಬಿದ್ದ.
ಅಮೆರಿಕಾದ ರೀತಿಯಲ್ಲಿ ಭಾರತದಲ್ಲಿ ಕೂಡ ಚುನಾವಣೆಗಳಲ್ಲಿ ಟ್ವಿಟ್ಟರ್ ಮುಂತಾದ ಸೋಷಿಯಲ್ ಮೀಡಿಯಾ ಬಹಳಷ್ಟು ಪ್ರಭಾವ ಬೀರುತ್ತದೆ. ಅದಕ್ಕಾಗಿಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಸೋಷಿಯಲ್ ಮೀಡಿಯಾಗಳಿಗೆ ಫೈನಾನ್ಸಿಂಗ್ ಮಾಡುವುದರ ಹಿಂದೆಯೂ ರಾಜಕೀಯ ಲೆಕ್ಕಾಚಾರಗಳು ಕೆಲಸ ಮಾಡುತ್ತವೆ. ಟ್ವಿಟ್ಟರ್ ಗೆ ದೊಡ್ಡ ಮಟ್ಟದ ಹಣ ಹರಿದು ಬಂದದ್ದು ಸೌದಿಯಿಂದ. ಸೌದಿಯ ರಾಜಕುಮಾರ ಅಲ್ ವಾಲೀದ್ ಬಿನ್ ತಲಾಲ್ ಬಿನ್ ಅಬ್ದುಲ್ಲಜೀಜ್ ಟ್ವಿಟ್ಟರ್ ನಲ್ಲಿ ೩೪. ಮಿಲಿಯನ್ ಷೇರುಗಳನ್ನು ಹೊಂದಿದ್ದಾನೆ ಅಂದರೆ ಕಂಪೆನಿಯ ಒಟ್ಟು ಶೇಕಡಾ ೫.೯ ರಷ್ಟು ಷೇರುಗಳನ್ನು ಪಡೆದು ಟ್ವಿಟ್ಟರ್ ಸಂಸ್ಥಾಪಕ ಜಾಕ್ ಡೋರ್ಸೆ ಗಿಂತಲೂ ಹೆಚ್ಚಿನ ಷೇರು ಹೊಂದಿದ್ದ. ಹಾಗಾಗಿ ಟ್ವಿಟ್ಟರ್ ಸೌದಿ ರಾಜಕುಮಾರನ ಕಾಲಬುಡದಲ್ಲಿ ಬಾಲ ಅಲ್ಲಾಡಿಸುತ್ತಿದೆ...! ತನ್ನನ್ನು ಆಡಿಸುವವರ ತಾಳಕ್ಕೆ ಕುಣಿಯುತ್ತಿದೆ. ಎಡಪಂಥೀಯ ಲಿಬರಲ್ ಎಂಬ ಹಣೆಪಟ್ಟಿ ಕಟ್ಟಿಕೊಂಡೇ ತಿರುಗಾಡುವ ಜಾಕ್ ಡೋರ್ಸೆ ಕೂಡಾ ಸ್ವಾಭಾವಿಕವಾಗಿ ವಹಾಬೀ ಇಸ್ಲಾಮಿನ ಸಖ್ಯ ಬೆಳೆಸಿಕೊಂಡು ಸೌಖ್ಯವಾಗಿದ್ದಾನೆ... ಆದುದರಿಂದ ಸೌದಿಯ ಶೇಖ್ ಹೇಗೆ ಹೇಗೆಲ್ಲಾ ಶೇಕ್ ಮಾಡುತ್ತಾನೋ ಹಾಗೆ ಹಾಗೆಲ್ಲಾ ಟ್ವಿಟ್ಟರ್ ಕೂಡಾ ಶೇಕ್ ಆಗುತ್ತದೆ ಅಷ್ಟೇ...
ಈವಾಗ ನಾನು ತಬ್ಲೀಘಿ ಜಮಾತ್ ಬಗ್ಗೆ ಬರೆದು ಕೊರೋನಾ ಜಿಹಾದ್ ನಿಜ ಎಂಬ ಬಗ್ಗೆ ಸಾಕ್ಷಿಗಳನ್ನು ಒದಗಿಸುತ್ತಾ ಹೋದಂತೆಲ್ಲಾ ಎಲ್ಲೆಲ್ಲೋ ಉರಿ ಹತ್ತಿಕೊಳ್ಳುತ್ತದೆ ಅಂತ ನನಗೂ ಚೆನ್ನಾಗಿಯೇ ಗೊತ್ತಿತ್ತು... ಆದರೆ ಇಷ್ಟು ಬೇಗ ಈ ಕಿಡಿ ದೇಶದ ಗಡಿ ದಾಟಿ ಹೋಗುತ್ತದೆ ಅಂತ ಗೊತ್ತಿರಲಿಲ್ಲ! ಇತ್ತೀಚಿಗೆ ಅರಬ್ ನಾಡಿನಲ್ಲಿರುವ ನಮ್ಮ ದೇಶದ ಮುಸ್ಲಿಮರೇ ಟ್ವಿಟ್ಟರ್ ಮೂಲಕ ನಮ್ಮ ದೇಶದವರ ವಿರುದ್ಧವೇ ದೂರು ಕೊಡುವ ಹೊಸ ಚಾಳಿಯೊಂದು ಕೂಡಾ ಹುಟ್ಟಿಕೊಂಡಿದೆ... ಗಲ್ಫ್ ರಾಷ್ಟ್ರಗಳಲ್ಲಿ ಕೆಲಸದಲ್ಲಿರುವ ಭಾರತ ಮೂಲದ ಹಿಂದೂಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಭಾರತ ದೇಶದ ಆಗುಹೋಗುಗಳ ಬಗ್ಗೆ ಪೋಸ್ಟ್ ಹಾಕಿದರೆ ಅದನ್ನೇ ಇಸ್ಲಾಮಿನ ವಿರುದ್ಧ ಅವಹೇಳನ ಮಾಡಿದರು ಅಂತ ಭಾರತೀಯ ಮುಸ್ಲಿಮರೇ ಟ್ವಿಟ್ಟರ್ ಮೂಲಕ ಗಲ್ಫ್ ರಾಷ್ಟ್ರಗಳ ಮಂತ್ರಿಗಳಿಗೆ ದೂರು ನೀಡಿ ಅವರನ್ನು ಜೈಲಿಗೆ ಕಳಿಸುವ ಕೆಲಸ ಮಾಡಿದ್ದಾರೆ. ಹಿಂದೆಲ್ಲ ಇಂಥ ಚಿಕ್ಕಪುಟ್ಟ ಘಟನೆಗಳು ಆಗಾಗ ನಡೆಯುತ್ತಿದ್ದವು ಮತ್ತು ನಿಷ್ಪಾಪಿ ಹಿಂದೂ ಹುಡುಗರು ಗಲ್ಫ್ ಜೈಲುಗಳಲ್ಲಿ ಕೊಳೆಯುತ್ತಿದ್ದರು.
ಈಗ ಅದಕ್ಕೊಂದು ಹೊಸ ತಿರುವು ದೊರೆತಿದೆ. ನಿಮಗೆ ನೆನಪಿರಬಹುದು, ಬಾಲಿವುಡ್ ಖ್ಯಾತ ಗಾಯಕ ಸೋನು ನಿಗಮ್ ಈಗ್ಗೆ ಒಂದೆರಡು ವರ್ಷಗಳ ಹಿಂದೆ ಮಸೀದಿಗಳಿಂದ ನಿತ್ಯವೂ ಬರುವ ಅಜಾನ್ ಕೂಗಿನಿಂದ ತನ್ನ ನಿದ್ರೆಗೆ ತೊಂದರೆಯಾಗುತ್ತಿದೆ ಅಂತ ಟ್ವೀಟ್ ಮಾಡಿದ್ದು ಎಲ್ಲರಿಗೂ ತಿಳಿದಿದೆ. ಬಳಿಕ ಅದೊಂದು ದೊಡ್ಡ ಸುದ್ದಿಯಾಗಿ, ಸಾಕಷ್ಟು ಚರ್ಚೆಗೂ ಕಾರಣವಾಗಿ ನಂತರ ತಣ್ಣಗಾಗಿತ್ತು. ಎಲ್ಲವೂ ಮುಗಿದು ಹೋಗಿತ್ತು ಅಂತ ಅಂದುಕೊಂಡರೆ ಈಗ ಅದು ಮತ್ತೆ ತಲೆ ಎತ್ತಿದೆ. ಸೋನು ನಿಗಮ್ ಯಾವುದೊ ಕಾರ್ಯಕ್ರಮಕ್ಕೆ ದುಬೈಗೆ ತೆರಳಿದವರು ಲಾಕ್ ಡೌನ್ ನಿಂದಾಗಿ ವಿಮಾನ ಸಿಗದೇ ದುಬೈಯಲ್ಲೇ ಸಿಕ್ಕಿಕೊಂಡಿದ್ದಾರೆ. ಇದನ್ನೇ ಉಪಯೋಗಿಸಿಕೊಂಡು ಕೆಲ ಭಾರತೀಯ ಮೂಲದ ಮುಸ್ಲಿಮರು ಸೋನು ನಿಗಮ್ ನ ಹಳೆಯ ಟ್ವೀಟ್ ಗಳನ್ನೂ ಈಗ ಮತ್ತೆ ಹೆಕ್ಕಿ ತೆಗೆದು ಟ್ವಿಟ್ಟರ್ ಮೂಲಕವೇ ದುಬೈ ಮಂತ್ರಿಗಳಿಗೆ ಪೊಲೀಸ್ ಮುಖ್ಯಸ್ಥರಿಗೆ ದೂರು ನೀಡಿ ಸೋನು ನಿಗಮ್ ಹೇಗೂ ದುಬೈ ಯಲ್ಲೇ ಸಿಕ್ಕಿ ಹಾಕಿಕೊಂಡಿದ್ದಾರೆ, ಹಾಗಾಗಿ ಇದೊಳ್ಳೇ ಅವಕಾಶ, ಇದನ್ನುಪಯೋಗಿಸಿಕೊಂಡು ಇಸ್ಲಾಮ್ ಅನ್ನು ಅವಹೇಳನ ಮಾಡಿದ ಸೋನು ನಿಗಮ್ ಗೆ ಶಿಕ್ಷೆ ವಿಧಿಸಬೇಕು ಅಂತ ಕೋರಿಕೊಂಡು ತಮ್ಮ ವಿಕೃತ ಬುದ್ಧಿ ತೋರಿಸಿದ್ದಾರೆ.
ಅದೇ ರೀತಿ ತಬ್ಲೀಘಿಗಳ ಬಣ್ಣ ಬಯಲು ಮಾಡಿದ್ದಕ್ಕೆ ಉರಿದುಕೊಂಡಿರುವ ಕೆಲವೊಂದಷ್ಟು ಜನ ನನ್ನ ಬಗ್ಗೆ ಕೂಡಾ ಟ್ವಿಟ್ಟರ್ ಮೂಲಕ ದುಬೈ ದೊರೆಗೆ ದೂರು ನೀಡಿದ್ದಾರೆ ಎಂಬ ತಮಾಷೆಯ ವಿಷಯ ತಿಳಿದುಬಂದಿದೆ. ಈ ವಿಷಯದ ಬಗ್ಗೆ ಕೆಲ ಸ್ಥಳೀಯ ಪತ್ರಿಕೆಗಳಲ್ಲಿ ಕೂಡಾ ಬರೆದಿದ್ದಾರೆ.. ನಾನು ಅದನ್ನೆಲ್ಲ ಓದಿ ತಮಾಷೆಯಿಂದ ನಕ್ಕು ಸುಮ್ಮನಾಗಿದ್ದೇನೆ.
ಆದರೆ ಟ್ವಿಟ್ಟರ್ ನನ್ನ ಅಧಿಕೃತ ಖಾತೆಯನ್ನು ಬ್ಲಾಕ್ ಮಾಡಿದ ವಿಷಯವನ್ನು ತುಂಬಾ ಗಂಭೀರವಾಗಿಯೇ ತೆಗೆದುಕೊಂಡಿದ್ದೇನೆ. ಯಾಕೆಂದರೆ ಅದಕ್ಕೊಂದು ಹಿನ್ನೆಲೆಯಿದೆ. ಮೊನ್ನೆ ೨೦ ನೇ ತಾರೀಕಿಗೆ ನಾನು ನಮ್ಮ ಸನ್ಮಾನ್ಯ ಪ್ರಧಾನ ಮಂತ್ರಿಗಳಿಗೆ ಮತ್ತು ಸನ್ಮಾನ್ಯ ಗೃಹ ಸಚಿವರಿಗೆ ಟ್ವಿಟ್ಟರ್ ಬಗ್ಗೆ ಅಧಿಕೃತ ಬರಹ ಮೂಲಕ ಒಂದು ದೂರು ನೀಡಿದ್ದೆ. ಪಂಜಾಬ್ ಅನ್ನು ಪ್ರತ್ಯೇಕ ಖಾಲಿಸ್ತಾನ ರಾಷ್ಟ್ರವನ್ನಾಗಿ ಘೋಷಿಸಬೇಕು, ಅದಕ್ಕೆ ಜನಮತ ಸಂಗ್ರಹಿಸಬೇಕು ಅಂತನ್ನೋ ರೀತಿಯ ಒಂದು ಟ್ವೀಟ್ ಅನ್ನು "ಗುರು ಪತ್ವಂತ್ ಸಿಂಗ್ ಪನ್ನೂನ್ " ಅನ್ನುವ ಹೆಸರಿನ ವ್ಯಕ್ತಿ ಮಾಡಿದ್ದ. ಇದು ನಿಜಕ್ಕೂ ದೇಶದ್ರೋಹದ ಕೆಲಸವಾಗಿತ್ತು ಮತ್ತು ಇದು ಪೇಯ್ಡ್ ಪ್ರಾಪಗಾಂಡಾ ಅಂದರೆ ಟ್ವಿಟ್ಟರ್ ಸಂಸ್ಥೆಗೆ ಹಣ ಪಾವತಿಸಿ ಮಾಡಿದ ಒಂದು ರೀತಿಯ ಜಾಹೀರಾತು ಆಗಿತ್ತು. ಹಾಗಾಗಿ ಇದರ ವಿರುದ್ಧ ನಾನು ಅಧಿಕೃತವಾಗಿಯೇ ಪ್ರಧಾನಿಗಳಿಗೆ ಮತ್ತು ಗೃಹ ಸಚಿವರಿಗೆ ದೂರು ನೀಡಿದ್ದು.
ಭಾರತದಿಂದ ಪಂಜಾಬನ್ನು ಪ್ರತ್ಯೇಕಿಸಿ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಡುವ ಇಂಥ ಹಣ ಪಾವತಿಸಿದ ಜಾಹೀರಾತನ್ನು ಭಾರತದಲ್ಲಿದ್ದುಕೊಂಡೇ ಪ್ರಕಟಿಸುವ ಟ್ವಿಟ್ಟರ್ ನದ್ದು ಪರಮ ದೇಶದ್ರೋಹದ ಕೆಲಸವಲ್ಲವೇ? ಗುರು ಪತ್ವಂತ್ ಸಿಂಗ್ ಪನ್ನೂನ್ ನ ಆ ಟ್ವೀಟ್ ಅನ್ನು ಟ್ವಿಟ್ಟರ್ ಪ್ರಕಟಿಸಲೇ ಬಾರದಿತ್ತು.... ಆದರೆ ಇಂಥ ನೇರ ದೇಶದ್ರೋಹದ ಟ್ವೀಟ್ ಅನ್ನು ಪ್ರಕಟಿಸಿದ ಟ್ವಿಟ್ಟರ್ ನಾನು ತಬ್ಲೀಗ್ಯ್ ಜಮಾತ್ ನನ್ನ ದೇಶದಲ್ಲಿ ಕೊರೋನಾ ವೈರಸ್ಸಿನ ಸೋಂಕು ಹರಡಲು ಶ್ರಮಿಸಿದ ಕರಾಳ ಷಡ್ಯಂತ್ರವನ್ನು ಬಯಲಿಗೆಳೆದು ಬರೆದ ಲೇಖನದ ಕೇವಲ ಒಂದು ಲಿಂಕ್ ಅನ್ನು ಟ್ವೀಟ್ ಮಾಡಿದ್ದಕ್ಕೋಸ್ಕರ ನನ್ನ ಅಧಿಕೃತ ಖಾತೆಯನ್ನೇ ಬ್ಲಾಕ್ ಮಾಡಿದೆ! ಟ್ವಿಟ್ಟರ್ ವಿರುದ್ಧ ನಾನೀಗ ಮತ್ತೊಮ್ಮೆ ಪ್ರಧಾನಿಗಳಿಗೆ ಮತ್ತು ಗೃಹ ಸಚಿವರಿಗೆ ದೂರು ನೀಡುತ್ತಿದ್ದೇನೆ. ಈಗಾಗಲೇ ಒಮ್ಮೆ ಟ್ವಿಟ್ಟರ್ ಅನ್ನು ಮತ್ತು ಅದರ ಸಿ ಇ ಓ ಜಾಕ್ ಡೋರ್ಸೆ ಯನ್ನು ಭಾರತದ ಸಂಸತ್ತಿನ ಸಮಿತಿ ವಿಚಾರಣೆಗೆ ಕರೆದಿತ್ತು. ಆಗ ಜಾಕ್ ಡೋರ್ಸೆ ತಪ್ಪಿಸಿಕೊಂಡು ಟ್ವಿಟ್ಟರ್ ನ ಉಪಾಧ್ಯಕ್ಷ ಕಾಲಿನ್ ಕ್ರಾವೆಲ್ ಬಂದು ಅನುರಾಗ್ ಠಾಕೂರ್ ನೇತೃತ್ವದ ಸ್ಥಾಯೀ ಸಮಿತಿಯ ಬಳಿ ವಿವರಣೆ ನೀಡಿದ್ದ.
ಇಷ್ಟೆಲ್ಲಾ ಆದರೂ ಟ್ವಿಟ್ಟರ್ ಮತ್ತೆ ಅದೇ ಹಳೆಯ ಆಟಗಳನ್ನೇ ಆಡುತ್ತಿದೆ. ತನ್ನಲ್ಲಿ ಹೂಡಿಕೆ ಮಾಡಿದ ಅರಬ್ ಶೇಖ್ ಗಳ ಋಣಸಂದಾಯ ಮಾಡಲು ಇಂಥ ಅಪಸವ್ಯಗಳನ್ನೆಸಗುತ್ತಿದೆ. ಇದಕ್ಕೆಲ್ಲಾ ಒಂದು ಕೊನೆ ಹಾಡಬೇಕು. ಹಾಗಾಗಿ ಮತ್ತೊಮ್ಮೆ ಇದನ್ನೆಲ್ಲಾ ವಿವರಿಸಿ ಮಾನ್ಯ ಪ್ರಧಾನಮಂತ್ರಿಗಳಿಗೆ ಮತ್ತು ಗೃಹಸಚಿವರಿಗೆ ಮತ್ತೊಮ್ಮೆ ದೂರು ನೀಡುತ್ತಿದ್ದೇನೆ.
ಅಂದ ಹಾಗೆ ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳದೆ ತಬ್ಲೀಘಿಗಳ ಕುರಿತ ನನ್ನ ಲೇಖನಗಳ ಸರಣಿಯನ್ನು ಮುಂದುವರೆಸುತ್ತೇನೆ....
#ಅನಂತಕುಮಾರಹೆಗಡೆ
#ಅನಂತಕುಮಾರಹೆಗಡೆ