Infinite Thoughts

Thoughts beyond imagination

ಬುದ್ಧ ಪೂರ್ಣಿಮಾ

ಇಂದು ಬುದ್ಧನೆಂಬ ಮಹಾಜ್ಞಾನಿ ಹುಟ್ಟಿದ ದಿನ - ಬುದ್ಧ ಪೂರ್ಣಿಮೆಯಾ ಶುಭ ದಿನ... 

ದುಃಖದ ಮೂಲ ಹುಡುಕ ಹೊರಟ ಬುದ್ಧ ಬಳಿಕ ಪರಿಹಾರವಾಗಿ ನಿರ್ವಾಣವನ್ನು ಭೋದಿಸಿ ದುಃಖಕ್ಕೆ ಇದೇ ಉತ್ತರ ಅಂತಂದ.ಇದೇ ಉತ್ತರ ಅಂತಂದ. ಆತನೂ ಬುದ್ಧನಾದ....ಜಗತ್ತಿನ ಜನರನ್ನೆಲ ತನ್ನಂತೆಯೇ ಬುದ್ಧರನ್ನಾಗಿಸುವ ಪಣವನ್ನೂ ತೊಟ್ಟ.
 
ವೇದಗಳಲ್ಲಿನ ಆಚರಣೆಗಳನ್ನು ಗೌತಮ ಬುದ್ಧ ನಿರಾಕರಿಸುತ್ತಲೇ, ಖಂಡಿಸುತ್ತಲೇ ವೇದಾಂತದ ತಿರುಳಿನಿಂದಲೇ ಹುಟ್ಟಿ ಬಂದಿದ್ದ ತತ್ವಜ್ಞಾನವನ್ನು ಬೋಧಿಸಿದ. ಬುದ್ಧ ಬೋಧಿಸಿದ ರೀತಿಯ ನಾಸ್ತಿಕವಾದ ಅಥವಾ ನಿರೀಶ್ವರವಾದ ಬುದ್ಧನಿಗಿಂತ ಮೊದಲೇ ಈ ಭರತಭೂಮಿಯಲ್ಲಿ ಅಸ್ತಿತ್ವದಲ್ಲಿತ್ತು. ವೇದಗಳಲ್ಲೂ ಉಲ್ಲೇಖಿಸಲ್ಪಟ್ಟಿದ್ದ ಶ್ರಮಣ ಪರಂಪರೆಯ ತತ್ವ ದರ್ಶನಗಳಿದ್ದವು, ಅಜೀವಿಕರೆಂಬ ಎಂಬ ತತ್ವಜ್ಞಾನಿಗಳ ಮಹೋನ್ನತ ಸನ್ಯಾಸಿ ಪರಂಪರೆಯಿತ್ತು. ಚಾರ್ವಾಕ ಸಿದ್ಧಾಂತಿಗಳ ನಾಸ್ತಿಕವಾದದ ಪರಂಪರೆಯಿತ್ತು. ಆದರೆ ಬುದ್ಧ ಅವರೆಲ್ಲರಿಂದಲೂ ಜ್ಞಾನ ಪಡೆದು, ಅವರೆಲ್ಲರನ್ನೂ ಮೀರಿಸಿ ತನ್ನ ಬೋಧನೆಗಳನ್ನು ಜಗತ್ತಿನಾದ್ಯಂತ ಹರಡಿದ ..! ಭಾರತದ ತತ್ವಜ್ಞಾನದ ಆಳ ಅಗಲಗಳನ್ನು ಜಗತ್ತಿಗೆ ಪರಿಚಯಿಸಿದ. ಅನೇಕ ದೇಶಗಳು ಇವತ್ತಿಗೂ ಬುದ್ಧ ಹಾಕಿಕೊಟ್ಟ ತಾತ್ವಿಕ ನೆಲೆಗಟ್ಟಿನಲ್ಲೇ ತಮ್ಮ ಧಾರ್ಮಿಕ ಅಸ್ತಿತ್ವವನ್ನು ಕಂಡುಕೊಂಡಿವೆ ಮತ್ತು ತಮ್ಮ ತಮ್ಮ ಪರಂಪರೆಗಳನ್ನು ಉಳಿಸಿಕೊಂಡಿವೆ. 
 
ಬುದ್ಧನನ್ನ ಸನಾತನ ಹಿಂದೂ ಧರ್ಮ ವಿಷ್ಣುವಿನ ದಶಾವತಗಳಲ್ಲಿ ಒಂದು ಅಂತ ಒಪ್ಪಿಕೊಂಡಿದೆ   
 
ಬುದ್ದಂ ಶರಣಂ ಗಚ್ಛಾಮಿ .... ಸಂಘಮ್ ಶರಣಂ ಗಚ್ಛಾಮಿ... ಅನ್ನುವ ಮಾತುಗಳನ್ನು ಸ್ಮರಿಸೋಣ... 

Related posts