Infinite Thoughts

Thoughts beyond imagination

ಕೊರೋನಾ ಜಿಹಾದ್..! (ಮುಂದುವರೆದ ಭಾಗ - ೧ )

ಕೊರೋನಾ  ಜಿಹಾದ್..!  (ಮುಂದುವರೆದ ಭಾಗ - ೧   

ಜಿಹಾದ್ ಭಾರತದಲ್ಲಿ- ಸಂಚು ವಿದೇಶದಲ್ಲಿ.... 

ಹಿಂದಿನ ಲೇಖನದಲ್ಲಿ ತಬ್ಲೀಘಿಗಳ ಈ ವೈರಸ್ ಜಿಹಾದ್ ಬಗ್ಗೆ ಇನ್ನಷ್ಟು ಸಾಕ್ಷಿಗಳನ್ನು ನೀಡುತ್ತೇನೆ ಅಂದಿದ್ದೆ... ಹಾಗಾಗಿ ಕೊರೋನಾ ಜಿಹಾದ್ ಬಗ್ಗೆ ಲೇಖನ ಸರಣಿ ಮುಂದುವರಿಸುತ್ತಾ ಈ ಬಗ್ಗೆ ಇನ್ನಷ್ಟು ಮಾಹಿತಿ ನೀಡುತ್ತಿದ್ದೇನೆ. ಕೋರೋನ ಎಂಬ ಮಹಾಮಾರಿ ವೈರಾಣು ಜಗತ್ತನ್ನೆಲ್ಲ ವ್ಯಾಪಿಸುವ ಸೂಚನೆ ದೊರೆತೊಡನೆ ಜಗತ್ತಿನ ಅಸಂಖ್ಯಾತ ಭಯೋತ್ಪಾದಕ ಸಂಘಟನೆಗಳ ಪೈಕಿ ತಟ್ಟನೆ ಎದ್ದು ಕುಳಿತದ್ದು ಇಸ್ಲಾಮಿಕ್ ಉಗ್ರರ ಗುಂಪುಗಳು ಮಾತ್ರ! ಇಸ್ಲಾಮಿಕ್ ಟೆರರಿಸ್ಟುಗಳು ಈ ಅಪಾಯಕಾರೀ ವೈರಾಣುವಿನ ಭಯಾನಕ ಸೋಂಕನ್ನೇ ತಮ್ಮ ಭಯೋತ್ಪಾದನೆಗೆ, ಕಾಫಿರರ ವಿರುದ್ಧದ ತಮ್ಮ ಧಾರ್ಮಿಕ ಜಿಹಾದಿಗೆ ಬಳಸಿಕೊಳ್ಳುವ ಯೋಜನೆಗಳನ್ನು ರೂಪಿಸತೊಡಗಿದರು.

ಇದರ ಸೂಚನೆಗಳು ಜನವರಿ ತಿಂಗಳ ಅಂತ್ಯಕ್ಕೆ ಸಿಗತೊಡಗಿದವು. ಜಾಗತಿಕವಾಗಿ ಹಲವಾರು ಮುಸ್ಲಿಮ್  ಮೂಲಭೂತವಾದೀ ಮಾಧ್ಯಮಗಳು ಕೊರೋನಾ ವೈರಸ್ಸಿಗೂ ಇಸ್ಲಾಮಿಗೂ ಸಂಬಂಧ ಕಲ್ಪಿಸತೊಡಗಿದವು. ಇದು ಬ್ರೈನ್ ವಾಷ್ ನ ಮೊದಲ ಹೆಜ್ಜೆ... "ಕೊರೋನಾ ವೈರಸ್ ಉಹೀಗುರ್ ಮುಸ್ಲಿಮರನ್ನು ಅಮಾನವೀಯವಾಗಿ ನಡೆಸಿಕೊಂಡ ಚೀನೀಯರ ಮೇಲೆ ಅಲ್ಲಾಹು ಕಳುಹಿಸಿದ ಅಸ್ತ್ರ" ಎಂಬ ಪರಿಕಲ್ಪನೆಯನ್ನು ಮೊದಲು ಹರಿಯಬಿಡಲಾಯಿತು.... ನನಗೆ ತಿಳಿದ ಹಾಗೆ ಇದರ ಮೊತ್ತ ಮೊದಲ ಸೂಚನೆ ಬಂದದ್ದು ಸಿರಿಯಾದಿಂದ. ಯುದ್ಧಗ್ರಸ್ತ ಸಿರಿಯಾದ ಜಿಹಾದೀ ಮೌಲ್ವಿ ಅಬ್ದ್ ಅಲ್ ರಜಾಕ್ ಅಲ್ ಮೆಹದೀ ಎಂಬಾತ ಈ ವರ್ಷ ಜನವರಿ ೨೩ ನೇ ತಾರೀಕಿಗೇ  ಒಂದು ಫತ್ವಾ ಹೊರಡಿಸಿದ. "ಅಲ್ಲಾಹುವಿನ ಶತ್ರುಗಳಾದ ಚೈನಾದ ಜನರನ್ನು ನಿರ್ಮೂಲನಗೊಳಿಸುವಂತೆ ಕೊರೋನಾ ವೈರಸ್ಸನ್ನು ಎಲ್ಲಾ ಮುಸ್ಲಿಮರೂ ಪ್ರಾರ್ಥಿಸಬೇಕೆಂದು ಈ ಮುಲ್ಲಾ ಹೊರಡಿಸಿದ ಫತ್ವಾ ಹೇಳುತ್ತದೆ...!  

ಹೀಗೆ ಕೊರೋನಾ ವೈರಸ್ಸಿಗೂ ಅಲ್ಲಾಹುವಿಗೂ ಸಂಬಂಧ ಕಲ್ಪಿಸುವ ಕೆಲಸ ಪ್ರಾರಂಭ ಆಯಿತು. ಆಮೇಲೆ, ಇಸ್ಲಾಮಿನ ಶತ್ರುಗಳನ್ನು ಸಂಹರಿಸಲು, ಏಕದೇವ ವಿಶ್ವಾಸಿಗಳಲ್ಲದ ಕಾಫಿರರನ್ನು ನಿರ್ನಾಮ ಮಾಡಲೆಂದೇ ಈ ವೈರಸ್ಸನ್ನು ಅಲ್ಲಾಹುವೇ ಕಳಿಸಿದ್ದಾನೆಂದು ಬಣ್ಣಿಸಲಾಯಿತು...

ಐಸಿಸ್ ಸ್ಥಾಪಕರಲ್ಲೋರ್ವನಾದ ಅಬು ಮುಸಾಬ್ ಅಲ್ ಝರ್ಖಾವಿ ಯ ಗುರು, ಜೋರ್ಡಾನಿನ ಪ್ರಮುಖ ಮುಲ್ಲಾ ಅಬು ಮುಹಮ್ಮದ್ ಅಲ್ ಮಕ್ಸೀದಿ, ಟೆಲಿಗ್ರಾಮ್ ಎಂಬ ಆಪ್ ಮೂಲಕ ಕೊರೋನಾ ಎಂಬ ಭೀಕರ ಸಾಂಕ್ರಾಮಿಕ ಖಾಯಿಲೆಯಿಂದ ಗುಪ್ತವಾಗಿ ಮುಸ್ಲಿಂ ಸಮಾಜಕ್ಕೆ ಆಗುವ "ಉಪಯೋಗಗಳೇನು"(?) ಎಂಬ ಬಗ್ಗೆ ಸರಣಿ ಮೆಸೇಜ್ ಗಳನ್ನೂ ಪೋಸ್ಟ್ ಮಾಡಿದ!  " ಕೊರೋನಾದಿಂದ ಇಂದು ಜಗತ್ತಿನ ಅಷ್ಟೂ ಜನರು ಕೂಡಾ  ಬುರ್ಖಾ ರೀತಿ ಉಡುಪು ಧರಿಸುವಂತಾಯಿತು.... ಕೊರೋನಾ ಸೋಂಕಿಗೆ ಮುಸ್ಲಿಮೇತರ ಕಾಫಿರರು ಒಳಗಾಗಲಿ, ಮತ್ತು ಅವರೆಲ್ಲ ಕೊರೋನಾ ದಿಂದ ಸಾಯುವಂತೆ ಪ್ರಾರ್ಥಿಸುವುದರಲ್ಲಿ ಯಾವುದೇ ತಪ್ಪಿಲ್ಲ...." ಅಂತ ಪ್ರಚಾರ ಶುರು ಮಾಡಿದ.... ಈ ಮೆಸೇಜುಗಳನ್ನು ಐಸಿಸ್ ಸ್ಲೀಪರ್ ಸೆಲ್ ಗಳ  ಮೂಲಕ ಸಾಧ್ಯವಾದಷ್ಟು ಹರಡಲಾಯಿತು. 
 
ಐಸಿಸ್ ಚ್ಯಾಟ್ ಗ್ರೂಪ್ ಗಳಲ್ಲಿ ಕೊರೋನಾ ಸೋಂಕಿನ ಬಗ್ಗೆ ಭಾರೀ ಚರ್ಚೆಗಳು ನಡೆದವು. ಇಸ್ಲಾಮಿಗೆ ಹರಾಮ್ ಅನ್ನುವಂಥಾ ಸಾಮಾಜಿಕ ಆಚರಣೆಗಳನ್ನು ಮಾಡುತ್ತಿರುವ ಆಧುನಿಕ ರಾಷ್ಟ್ರಗಳಿಗೆಲ್ಲಾ ಕೊರೋನಾ ಸೋಂಕು ಒಂದು ಪಾಠ, ಮಾರಕ ರೋಗದಿಂದಾಗಿ ಅಪಾರ ಸಾವುನೋವು ಉಂಟಾಗಿ, ವ್ಯಾಪಾರೋದ್ದಿಮೆಗಳು ಸ್ಥಗಿತವಾಗಿ, ಈ ದೇಶಗಳು ದುರ್ಬಲವಾಗಿರುವ ಹೊತ್ತಿನಲ್ಲೇ ಇವುಗಳ ಮೇಲೆ ಜಿಹಾದೀ ಭಯೋತ್ಪಾದಕ ದಾಳಿಯನ್ನು ನಡೆಸಬೇಕು, ಕೊರೋನಾ ಸೋಂಕಿನಿಂದ ಉಂಟಾದ ಈ ಸಂದರ್ಭವನ್ನು ಮುಸ್ಲಿಮರು ಉಪಯೋಗಿಸಿಕೊಳ್ಳಬೇಕು ಎಂಬ ರೀತಿಯಲ್ಲಿ ಕರೆಕೊಡಲಾಯಿತು.  
 
ಇಂಥದ್ದೊಂದು ಐಸಿಸ್ ನೆರಳು ಭಾರತದಲ್ಲಾಗುತ್ತಿದ್ದ ಸಿಎಎ ವಿರೋಧೀ ಹೋರಾಟಗಳ ಹಿಂದೆಯೂ ಇತ್ತು. ಭಾರತದಲ್ಲಿ ತನ್ನ ಪ್ರಾಪಗಾಂಡ(ಪ್ರಚಾರ) ಹೆಚ್ಚಿಸಲು ಐಸಿಸ್ ಹಲವಾರು ಹೊಸದಾರಿ ಹುಡುಕುತ್ತಿದ್ದು  ಸಿಎಎ ವಿರೋಧೀ ಹೋರಾಟದ ಸಂದರ್ಭದಲ್ಲೇ ತನ್ನ "ಅಲ್ ನಬಾ" ಎಂಬ ಆನ್ಲೈನ್ ಮ್ಯಾಗಝೀನ್ ನ ೨೨೧ನೇ ಸಂಚಿಕೆಯಲ್ಲಿ ನರೇಂದ್ರ ಮೋದಿಯ ಸಿಎಎ ಕಾಯ್ದೆ ವಿರುದ್ಧ ಮುಸ್ಲಿಮರನ್ನು ಬಡಿದೆಬ್ಬಿಸುವಂಥ ಲೇಖನ ಪ್ರಕಟಿಸಿತು. ಅದಾಗಿ ಫೆಬ್ರವರಿ ೨೪ನೇ ತಾರೀಕಿಗೆ ದೆಹಲಿಯಲ್ಲಿನ ಕೋಮು ಗಲಭೆಗಳ ಮಧ್ಯೆಯೇ ಐಸಿಸ್ ಮೇಲೆ ಅನುಕಂಪವಿರುವ 'ಜುನುದುಲ್ ಖಿಲಾಫಾಹ್ ಅಲ್ ಹಿಂದ್' ಎಂಬ ಸಂಘಟನೆಯ 'ಅಲ್ ಖಿತಾಲ್ ಮೀಡಿಯಾ ಸೆಂಟರ್' ಭಾರತಕ್ಕೆಂದೇ ವಿಶೇಷವಾಗಿ ರೂಪಿಸಲಾದ 'ಸ್ವಾತ್ ಅಲ್ ಹಿಂದ್' ಎಂಬ ಆನ್ಲೈನ್  ಮ್ಯಾಗಝೀನ್ ನ ಮೊದಲ ಸಂಚಿಕೆಯನ್ನು ಪ್ರಕಟಿಸಿತು. ಇಂಡಿಯನ್ ಮುಜಾಹಿದ್ದೀನ್ ನ ಕಮಾಂಡರ್ ಶಫಿ ಅರ್ಮಾರ್, ಭಾರತದಿಂದ ಐಸಿಸ್ ಸೇರಿ ಯುದ್ಧದಲ್ಲಿ ಸತ್ತ ಹುಜಯ್ಫಾ ಅಲ್ ಬಾಕಿಸ್ತಾನಿ ಮುಂತಾದವರನ್ನು ಹೊಗಳುವ ಲೇಖನವನ್ನು ತನ್ನ ಪ್ರಥಮ ಸಂಚಿಕೆಯಲ್ಲೇ ಪ್ರಕಟಿಸಿದ್ದ ಈ ಅರಬ್ಬೀ ಭಾಷೆಯ ಪತ್ರಿಕೆ ಮೊದಲ ಸಂಚಿಕೆಯಲ್ಲಿ ಭಾರತೀಯ ಮುಸ್ಲಿಮರನ್ನು ಉದ್ರೇಕಿಸುವ, ಭಾರತ ಸರಕಾರದ ವಿರುದ್ಧ ತಿರುಗಿ ಬೀಳುವಂತೆ ಪ್ರಚೋದಿಸುವ "ರಾಷ್ಟ್ರಪ್ರೇಮ ಎಂಬ ರೋಗ" ಅನ್ನೋ ಲೇಖನವನ್ನು ಪ್ರಕಟಿಸಿತು. 
 
ಇದಾಗಿ ಮುಂದಿನ ಮಾರ್ಚ್ ತಿಂಗಳ ಸಂಚಿಕೆಯಲ್ಲಿ "ಕೋರೋನ  ವೈರಸ್" ಅನ್ನು ಉಲ್ಲೇಖಿಸಿ  ಮುಸ್ಲಿಮರನ್ನು ಜಿಹಾದ್ ಮಾಡಲು ಪ್ರೇರೇಪಿಸುವ ವಿಶೇಷ ಲೇಖನ ಪ್ರಕಟ ಆಯಿತು.  ಇಲ್ಲಿಂದಲೇ ಭಾರತೀಯ ಮುಸ್ಲಿಮರಲ್ಲಿ ಕೊರೋನಾ ಜಿಹಾದ್ ಅನ್ನು ಜಾರಿಗೆ ತರುವ ಕುರಿತ ದೊಡ್ಡ ಮಟ್ಟದ ಪ್ರಚಾರ ಶುರುವಾಯಿತು... 
 
  'ಸ್ವಾತ್ ಅಲ್ ಹಿಂದ್' ಮ್ಯಾಗಝೀನ್ ನ ಕೊರೋನಾ ವೈರಸ್ಸಿನ ಈ ವಿಶೇಷ ಲೇಖನದಲ್ಲಿ ಭಾರತದ ವಿರುದ್ಧ ಜಿಹಾದ್ ಭಯೋತ್ಪಾದಕ ದಾಳಿ ನಡೆಸುವುದಕ್ಕೆ ಅತ್ಯಂತ ಸೂಕ್ತ ಸಮಯ ಇದು ಅಂತ ಭಾರತೀಯ ಮುಸ್ಲಿಮರನ್ನು ಎತ್ತಿಕಟ್ಟಲು ಪ್ರಯತ್ನಿಸಿತ್ತು... " ಕಾಫಿರರ ದೇಶಗಳಲ್ಲಿ ಅರಾಜಕತೆ ಉಂಟು ಮಾಡಲು ಕೊರೋನಾ ವೈರಸ್ಸಿನ ಸೋಂಕು ರೋಗವನ್ನು ಅಲ್ಲಾಹುವೇ ಉಂಟುಮಾಡಿದ್ದು....ಮತ್ತು ಅವರ ಮಿಲಿಟರಿ ಮತ್ತು ಪೊಲೀಸರನ್ನು ಅವರ ರಸ್ತೆಗಳಲ್ಲಿ, ಬೀದಿ ಬೀದಿಗಳಲ್ಲಿ ನಿಯೋಜಿಸಲಾಗಿದ್ದು ... ಅವರೀಗ ನಮ್ಮ ಸುಲಭದ ಗುರಿಗಳಾಗಿದ್ದಾರೆ" ಅಂತ ಬರೆದು ರಸ್ತೆಗಳಲ್ಲಿ, ಗಲ್ಲಿಗಳಲ್ಲಿ ಒಂಟಿಯಾಗಿ ಅಸಹಾಯಕರಾಗಿ ಸಿಗುವ ಪೊಲೀಸರ ಮೇಲೆ ದಾಳಿ ನಡೆಸಲು, ಹಲ್ಲೆ ಮಾಡಲು ಇದೆ ಸರಿಯಾದ ಸಮಯ ಅಂತ ಬೋಧಿಸುತ್ತಾ ಪೊಲೀಸರ ಮೇಲೆ ದಾಳಿ ನಡೆಸಲು ಮುಸ್ಲಿಮರನ್ನು ಪ್ರಚೋದಿಸಲಾಯಿತು..! 
 
ಅಷ್ಟೇ ಅಲ್ಲ ಪೊಲೀಸರ ಮೇಲೆ ಹೇಗೆ, ಯಾವ ರೀತಿಯಲ್ಲಿ ದಾಳಿ ಮಾಡಬೇಕೆಂಬುದನ್ನೂ ಲೇಖನದಲ್ಲಿ ಹೇಳಲಾಯಿತು... " ದೊರೆತಿರುವ ಈ ಅವಕಾಶವನ್ನು ಅವರ (ಪೊಲೀಸರ) ಮೇಲೆ ದಾಳಿ ಮಾಡಲು ಉಪಯೋಗಿಸಿ... ಕತ್ತಿ ಅಥವಾ ಚೂರಿ... ಅಥವಾ ಕೇವಲ ಹಗ್ಗವಾದರೂ ಆದೀತು... ಅವರ ಉಸಿರು ನಿಲ್ಲಿಸಲು ಅದೇ ಸಾಕು... ಬೀದಿ ಬೀದಿಗಳನ್ನು ರಕ್ತದಿಂದ ತೋಯಿಸಬೇಕು..." ಅಂತ ಲೇಖನ ಮುಸ್ಲಿಮರಿಗೆ ಪೊಲೀಸರನ್ನು ಹತ್ಯೆಗೈಯ್ಯಲು ನೇರವಾಗಿಯೇ ಪ್ರಚೋದಿಸಿತ್ತು... 
 
ಈ ಲೇಖನದ ಅಂಶಗಳನ್ನು ಚ್ಯಾಟ್ ಗ್ರೂಪ್ ಗಳಲ್ಲಿ ದೇಶಾದ್ಯಂತ ಹಬ್ಬಿಸಲಾಯಿತು. 

 

ಇಡೀ ಲೇಖನದಲ್ಲಿ ಭಾರತೀಯ ಮುಸ್ಲಿಮರನ್ನು ಕೆರಳಿಸುವ, ಕೊರೋನಾ ಸೋಂಕಿನ ಸಂಕಟದ ಸಮಯದಲ್ಲಿ ಅವರನ್ನು ಸರಕಾರದ ವಿರುದ್ಧ, ದೇಶದ ವಿರುದ್ಧ, ಹಿಂದೂಗಳ ಅಂದರೆ ಕಾಫಿರರ ವಿರುದ್ಧ ಮುಸ್ಲಿಮರನ್ನು ಎತ್ತಿಕಟ್ಟಲು ನೇರ ಮಾತುಗಳಲ್ಲಿಯೇ ಪ್ರಯತ್ನಿಸಲಾಗಿದೆ... " ಭಾರತದ ಮುಸ್ಲಿಮರು ಏನೇನು ಕಷ್ಟಗಳನ್ನು ಅನುಭವಿಸಿದ್ದಾರೆ ಎಂಬುದು ರಹಸ್ಯವೇನಲ್ಲ... ಅದೆಷ್ಟು ಮುಸ್ಲಿಮರನ್ನು ಬರ್ಬರವಾಗಿ ಕೊಲ್ಲಲಾಗಿದೆ... ಅದೆಷ್ಟು ಮಸೀದಿಗಳನ್ನು ಧ್ವಂಸಮಾಡಲಾಗಿದೆ... ಈಗ ಇದು ಪ್ರತೀಕಾರ ತೀರಿಸಬೇಕಾದ ಸಮಯ.." ಅಂತ ಭೀಕರ ಕೊರೋನಾ ರೋಗದಿಂದ ದೇಶ ಮತ್ತು ಕಂಗೆಟ್ಟಿರುವ ಸಂದರ್ಭವನ್ನೇ ತಮ್ಮ ಜಿಹಾದೀ ವಿಧ್ವಂಸಕ್ಕೆ ಬಳಸಿಕೊಳ್ಳುವ ಇರಾದೆಯನ್ನು ಯಾವುದೇ ಅಳುಕಿಲ್ಲದೆ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. 

ಮುಂದುವರೆಯುವುದು .....


Related posts