Infinite Thoughts

Thoughts beyond imagination

ಕೊರೋನಾ ಜಿಹಾದ್..! (ಭಾಗ - ೪)

ಕೊರೋನಾ  ಜಿಹಾದ್..!  (ಭಾಗ ..೪)   

ಕೊರೋನಾ ಇನ್ ಫೆಕ್ಷನ್ ಹರಡುವಲ್ಲಿ ಫಾರಿನ್ ಕನೆಕ್ಷನ್ ....!
 
ಮಂಡ್ಯಾದಲ್ಲಿ ಒಂದೇ ದಿನ ಎಪ್ಪತ್ತೊಂದು ಹೊಸಾ ಕೊರೋನಾ ಕೇಸು ಪತ್ತೆ..!  ಹಾಸನದಲ್ಲಿ ಒಂದೇ ದಿನ ಇಪ್ಪತ್ತೊಂದು ಹೊಸಾ ಕೊರೋನಾ ಕೇಸು ಪತ್ತೆ...! 
 
ಹೀಗೆ ಮಾಧ್ಯಮಗಳಲ್ಲಿ ವರದಿಗಳು ಬರ್ತಾ ಇದ್ರೆ ಜನ ಗಾಬರಿಯಾಗದೇ ಇರುತ್ತಾರೆಯೇ.. ಮಂಡ್ಯ ಜಿಲ್ಲೆಯ ಅದ್ಯಾವುದೋ ಮೂಲೆಯ ಹಳ್ಳಿಯೊಂದರ ಯುವಕನಿಗೋ ... ಹಾಸನದ ಯಾವುದೊ ಯುವತಿಗೂ ಚೈನಾದ ಈ ವೈರಸ್ಸಿನ ಸೋಂಕು  ಹೇಗೆ ತಗುಲಿತು...? 
 
ಈ ಘಟನೆಯನ್ನು ಸುದ್ದಿ ಮಾಡಿದ ಮಾಧ್ಯಮಗಳೇ ಈ ಪ್ರಶ್ನೆಗೂ ಉತ್ತರ ನೀಡುತ್ತವೆ... ಈ ಹೊಸಾ ಕೊರೋನಾ ಕೇಸುಗಳೆಲ್ಲಾ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬಂದ ಜನಗಳಲ್ಲಿಯೇ ಪತ್ತೆಯಾಗಿವೆ ಅಂಡ್ ಮಾಧ್ಯಮಗಳು ಕಾರಣವನ್ನೂ ಕೊಡುತ್ತವೆ. ವೈರಸ್ಸು ಭಾರತದಾದ್ಯಂತ ಹರಡಿದ್ದು ಹೀಗೆಯೇ.. ಇದಕ್ಕೆಲ್ಲ ಏನು ಕಾರಣ... ಅದೆಷ್ಟು ಜನರನ್ನು ಕ್ವಾರಂಟೈನ್ ಮಾಡಿ ವೈರಸ್ ಹರಡದಂತೆ ಜಾಗರೂಕತೆ ವಹಿಸಲಾಗಿದ್ದರೂ ಇದೆಲ್ಲ ಹೇಗಾಯಿತು... ಅದ್ಯಾಕೆ ಮಹಾರಾಷ್ಟ್ರ, ಗುಜರಾತ್, ದೆಹಲಿ, ತಮಿಳುನಾಡು ಇಲ್ಲೆಲ್ಲಾ ಸೋಂಕು ಭಾರೀ ಮಟ್ಟದಲ್ಲಿ ಹರಡಲು ಕಾರಣವೇನು..? ಅಂತೆಲ್ಲ ನಿಮ್ಮ ಮನಸ್ಸಿನಲ್ಲಿ ಪ್ರಶ್ನೆಗಳು ಹುಟ್ಟಿಕೊಳ್ಳೋದು ಸಹಜವೇ... ಇದೆಲ್ಲ ಪ್ರಶೆಗಳಿಗೆ ಉತ್ತರ ಕಂಡುಕೊಳ್ಳಹೊರಟರೆ ನಿಮಗೆ ಅಚ್ಚರಿಯಾಗುವಂಥ ಸತ್ಯಗಳ ಅನಾವರಣವಾಗುತ್ತವೆ... 
 
ಭಾರತದಲ್ಲಿ ಕೊರೋನಾ ಇನ್ನೇನು ಕಾಲಿಡುತ್ತಿದೆ ಅನ್ನುವಾಗಲೇ, ಲಾಕ್ ಡೌನ್ ಇನ್ನೇನು ಶುರುವಾಗುತ್ತದೆ ಅನ್ನುವ ಹೊತ್ತಿನಲ್ಲೇ ಇಲ್ಲಿನ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಖ್ಯೆಯಲ್ಲಿ ಮುಸ್ಲಿಮರ ವಿಡಿಯೋಗಳು ಹರಿದಾಡತೊಡಗಿದ್ದವು. ಹೆಚ್ಚಿನೆಲ್ಲಾ ವಿಡಿಯೋಗಳು ಉರ್ದು ಅಥವಾ ಹಿಂದೀ ಭಾಷೆಯಲ್ಲಿದ್ದವು. ಇವುಗಳಲ್ಲಿ ಶೇಕಡಾ ತೊಂಬತ್ತೊಂಭತ್ತಕ್ಕೂ ಹೆಚ್ಚು ವಿಡಿಯೋಗಳು ಕೊರೋನಾ ವೈರಸ್ಸನ್ನು ಇಸ್ಲಾಮ್ ಧರ್ಮಕ್ಕೆ ಮತ್ತು ಅಲ್ಲಾಹುವಿಗೆ ನಂಟು ಬೆಸೆದು "ಕೊರೋನಾದಿಂದ ಮುಸ್ಲಿಮರಿಗೆ ಅಪಾಯವಿಲ್ಲ... ಕೊರೋನಾದ ಕಾರಣ ಇಟ್ಟುಕೊಂಡು ಮುಸ್ಲಿಮರನ್ನು ಮಸೀದಿಗೆ ಹೋಗದಂತೆ ಮಾಡಲು, ಸಾಮೂಹಿಕ ನಮಾಜು ಮಾಡದಂತೆ ತಡೆಯಲು ಸಂಚು ಮಾಡಲಾಗುತ್ತಿದೆ... ಅಲ್ಲಾಹುವೇ ಕಾಫಿರರನ್ನು ಶಿಕ್ಷಿಸಲು ಕೊರೋನಾ ಕಳಿಸಿದ... ಅಂತೆಲ್ಲ ಅರ್ಥ ಬರುವ ವಿಡಿಯೋ ತುಣುಕುಗಳನ್ನು ಭಾರತದಾದ್ಯಂತ ಹರಿಯ ಬಿಡಲಾಯಿತು... ಇಂಥಹಾ ಒಂದೆರಡು ತುಣುಕುಗಳಲ್ಲ ... ಬರೋಬ್ಬರಿ ಮೂವತ್ತು  ಸಾವಿರ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಬ್ಬಿಸಲಾಯಿತು... ಈ ವಿಡಿಯೋಗಳನ್ನೇ ಸತ್ಯವೆಂದು  ಹೆಚ್ಚಿನೆಲ್ಲ ಮುಸ್ಲಿಮರೂ ನಂಬಿದರು...!  ಸಮಸ್ಯೆ ಇಲ್ಲಿಂದಲೇ ಪ್ರಾರಂಭ ಆದದ್ದು.... 
 
ಇಷ್ಟೊಂದು ಅಗಾಧ ಸಂಖ್ಯೆಯ  ವಿಡಿಯೊಗಳ ಮೂಲ ಹುಡುಕುತ್ತ ಹೋದ ದೆಹಲಿಯ ಡಿಜಿಟಲ್ ತನಿಖಾ ಸಂಸ್ಥೆ ವೋಯೇಜರ್ ಇವುಗಳಲ್ಲಿನ ಹೆಚ್ಚಿನೆಲ್ಲ ವಿಡಿಯೋಗಳನ್ನು  ಚೈನಾದ ಟಿಕ್ ಟಾಕ್ ಆಪ್ ಮೂಲಕ ಹಬ್ಬಿಸಲಾಗಿತ್ತು.... ಮತ್ತು ಈ ತುಣುಕುಗಳು ಒಮ್ಮೆ ವೈರಲ್ ಆದಮೇಲೆ ಇವುಗಳನ್ನು ಪೋಸ್ಟ್ ಮಾಡಿದ ಮೂಲ ಅಕೌಂಟ್ ಗಳನ್ನೂ ಡಿಲೀಟ್ ಮಾಡಲಾಗಿತ್ತು ಅಂತ ಪತ್ತೆ ಹಚ್ಚಿತು. ಹಲವು ವಿಡಿಯೋಗಳ ಮೂಲ ಪಾಕಿಸ್ತಾನ ಆಗಿತ್ತು. ಹಲವಾರು ವಿಡಿಯೋಗಳು ವಿದೇಶೀ ವಿಡಿಯೊಗಳಾಗಿದ್ದು ಇವುಗಳಿಗೆ ಉರ್ದು ಅಥವಾ ಹಿಂದೀ ಭಾಷೆಯ ಹಿನ್ನೆಲೆ ಧ್ವನಿ ನೀಡಲಾಗಿತ್ತು. ಇಂಥಾ ವಿಡಿಯೋಗಳಿಂದ ಪ್ರಚೋದಿತರಾದ ಇಲ್ಲಿನ ಮುಸ್ಲಿಂ ಹುಡುಗರೂ ತಾವೂ ಒಂದಷ್ಟು ವಿಡಿಯೋಗಳನ್ನು ಮಾಡಿ ಹಬ್ಬಿಸಿದರು. ಇದೊಂಥರಾ ಚೈನ್ ರಿಯಾಕ್ಷನ್ ರೀತಿ ಆಯಿತು. ಇದೆಲ್ಲದರ ಹಿಂದಿತ್ತು ಫಾರಿನ್ ಕನೆಕ್ಷನ್.... 
 
ಈ ವರ್ಷದ ಮಾರ್ಚ್ ತಿಂಗಳಿಂದ  ತಬ್ಲೀಘಿ ಜಮಾತಿಗೆ ಸುಮಾರು ೨೧೦೦ ವಿದೇಶೀ ಸದಸ್ಯರು ಭೇಟಿ ನೀಡಿದ್ದರು ಎಂಬ ಸುದ್ದಿಯನ್ನು ಸರಕಾರ ಹೊರಹಾಕುತ್ತಿದ್ದಂತೆ . . ದೆಹಲಿಯ ತಬ್ಲೀಘಿ ಮರ್ಕಜ್ ಸಮ್ಮೇಳನಕ್ಕೆ ಹೀಗೆ ವಿದೇಶೀ ಮುಸ್ಲಿಮರು ಬರೋದು ತಪ್ಪಲ್ಲ ಅಂತ ತಿಪ್ಪೆ ಸಾರಿಸೋ ಪ್ರಯತ್ನವನ್ನು ಕೆಲ ಮಾಧ್ಯಮಗಳು ಮತ್ತು ಪತ್ರಕರ್ತರು ಎಡಕ್ಕೆ ವಾಲಿಕೊಂಡೆ ಸಮರ್ಥಿಸಿದ್ದರು. ಆದರೆ ಸಮ್ಮೇಳನಕ್ಕೆಂದು ದೆಹಲಿಗೆ ಬಂದಿದ್ದ ಈ ವಿದೇಶೀ ತಬ್ಲೀಘಿಗಳು ಸಮ್ಮೇಳನದಲ್ಲಿನ ಭಾಷಣ ಕೇಳಿ ವಾಪಾಸು ತಮ್ಮ ದೇಶಕ್ಕೆ ಹೋಗದೇ ...ಪೂರ್ತಿ ಭಾರತದುದ್ದಕ್ಕೂ ಮೂಲೆ ಮೂಲೆಗಳ ಮಸೀದಿಗಳಿಗೆ ತೆರಳಿ ಅಡಗಿ ಕುಳಿತದ್ಯಾಕೆ? ಇದರ ಹಿಂದಿನ ಮಸಲತ್ತೇನು?  ಇದೆಲ್ಲದರ ಹಿಂದೆಯೂ ಇದ್ದದ್ದು ಅದೇ  ಫಾರಿನ್ ಕನೆಕ್ಷನ್.... 
 
ತಬ್ಲೀಘಿಗಳಿಂದ ಕೊರೋನಾ ಸೋಂಕು ಹಿಡಿತಕ್ಕೆ ಸಿಗದಂತೆ ಹಬ್ಬುತ್ತಿದೆ ಎಂಬ ಸಂಗತಿ ಅರಿವಾದೊಡನೆಯೇ ಕೇಂದ್ರ ಮತ್ತು ರಾಜ್ಯ ಸರಕಾರಗಳು ತಬ್ಲೀಘಿ ಗಳ ಜಾಡು ಪತ್ತೆ ಮಾಡಲು ಶ್ರಮಿಸಿತು. ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಿಬ್ಬಂದಿ  ಸುಮಾರು ಒಂಭತ್ತು ಸಾವಿರ ಮಂದಿಯನ್ನು ಪತ್ತೆ ಹಚ್ಚಿದರು... ಈ ಪೈಕಿ ಸುಮಾರು ಇನ್ನೂರೈವತ್ತು ಮಂದಿ ವಿದೇಶೀ ತಬ್ಲೀಘಿಗಳು ರಾಜಧಾನಿ ದೆಹಲಿಯಲ್ಲಿಯೇ ಇದ್ದರು. ಇವರ ಪೈಕಿ ಇಬ್ಬರು ಅಮೆರಿಕಾದವರು, ಪ್ರಾನ್ಸ್, ಬೆಲ್ಜಿಯಂ, ಇಟೆಲಿ ಮತ್ತು  ಟ್ಯುನೀಷಿಯಾ ದಿಂದ ತಲಾ ಒಬ್ಬರು, ೧೭೨ ಜನ ಇಂಡೋನೇಶಿಯಾದವರು, ೩೬ ಜನ ಕಿರ್ಗಿಜ್ ಸ್ಥಾನದವರು,  ೨೧ ಬಾಂಗ್ಲಾದೇಶೀಯರು, ೧೨ ಮಲೇಶಿಯನ್ನರು, ಏಳು ಜನ ಅಲ್ಜೀರಿಯಾದವರು ಮತ್ತು ಇಬ್ಬರು ಅಫ್ಘಾನದ ವರು. 
 
ದೆಹಲಿಯ ವಿಚಾರ ಬಿಡೋಣ... ದೆಹಲಿಯಲ್ಲೇ ಮರ್ಕಜ್ ಸಮ್ಮೇಳನ ಇದ್ದುದರಿಂದ ದೆಹಲಿಯಲ್ಲಿ ಅಷ್ಟು ಮಂದಿ ವಿದೇಶೀ ತಬ್ಲೀಘಿಗಳು ಇರುವುದು  ಸಹಜ ಅಂತ ತಬ್ಲೀಘಿ ಸಮರ್ಥಕರ ವಾದವನ್ನು ಒಂದಿಷ್ಟು ಒಪ್ಪಿದರೂ, ಅದೇ ೨೪೭ ಮಂದಿ ವಿದೇಶೀ ತಬ್ಲೀಘಿಗಳು ಉತ್ತರ ಪ್ರದೇಶಕ್ಕೆ ತೆರಳಿ ಅಲ್ಲಿ ಪೂರ್ತಿ ರಾಜ್ಯಕ್ಕೆ ಚದುರಿ ಹೋದದ್ದು ಯಾಕೆ? ಸರಕಾರ ಎಷ್ಟೇ ಘೋಷಣೆ ಮಾಡಿ ಎಲ್ಲರೂ ಪರೀಕ್ಷೆಗೆ ಒಳಪಡಬೇಕು ಅಂತ ವಿನಂತಿಸಿಕೊಂಡರೂ ಮಸೀದಿಗಳಲ್ಲಿ ಅಡಗಿ ಕುಳಿತದ್ದು ಯಾಕೆ..? ಮಹಾರಾಷ್ಟ್ರದಲ್ಲಿ  ೧೫೪ ಜನ, ತಮಿಳು ನಾಡಿನಲ್ಲಿ ೧೩೩ ಜನ, ತೆಲಂಗಾಣದಲ್ಲಿ ೯೬ ಜನ, ಹರ್ಯಾಣದಲ್ಲಿ ೮೬ ಜನ, ಪಶ್ಚಿಮ ಬಂಗಾಳದಲ್ಲಿ ೭೦ ಜನ, ಮಧ್ಯ ಪ್ರದೇಶದಲ್ಲಿ ೫೯ ಜನ, ಝಾರ್ಖಂಡ್ ನಲ್ಲಿ ೩೮ ಜನ, ಆಂಧ್ರದಲ್ಲಿ ೨೪ ಜನ, ಉತ್ತರಾಖಂಡ್ ನಲ್ಲಿ ೧೨, ಒಡಿಶಾದಲ್ಲಿ ೭, ರಾಜಸ್ಥಾನದಲ್ಲಿ ೫ ಜನ ವಿದೇಶೀ ತಬ್ಲೀಘಿಗಳು ಸಿಕ್ಕಿ ಬಿದ್ದರು. ಈ ವಿದೇಶೀ ಮಂದಿ ಅದೆಲ್ಲಿಂದಲೋ ಬಂದು ಭಾರತದಲ್ಲಿನ ರಾಜ್ಯಗಳಿಗೆಲ್ಲ ನುಸುಳಿ ಮಸೀದಿಗಳಲ್ಲಿ ಅಡಗಿ ಕುಳಿತಿದ್ದು  ಯಾಕೆ?  ಇದೆಲ್ಲದರ ಹಿಂದೆಯೂ  ಫಾರಿನ್ ಕನೆಕ್ಷನ್....  ಇತ್ತು... 

 ಅದು ಬಿಡಿ ನಮ್ಮ ಕರ್ನಾಟಕದಲ್ಲೇ ೨೪ ಮಂದಿ ವಿದೇಶೀ ತಬ್ಲೀಘಿಗಳು ಬಂದು ಅವಿತು ಕುಳಿತದ್ದು ಯಾಕೆ? ಇವರೆಲ್ಲ ಲಾಕ್ ಡೌನ್ ಜಾರಿಗೆ ಬರುವುದಕ್ಕೂ ಮುಂಚೆಯೇ ಎಲ್ಲ ರಾಜ್ಯಗಳಿಗೆ ಹೋಗಿ ಸೇರಿಕೊಂಡದ್ದು ಹೇಗೆ? ಯಾಕೆ? ಗೋರಿಪಾಳ್ಯದ ಮಸೀದಿಯಲ್ಲಿ ಹತ್ತು ಜನ ಇಂಡೋನೇಷ್ಯಾದವರು ಒಂಭತ್ತು ಜನ ಕಿರ್ಗಿಜ್ ಸ್ಥಾನದವರು ಅವಿತು ಕುಳಿತದ್ದು ಯಾಕೆ? ಇವರಿಗೆಲ್ಲಾ ಆಶ್ರಯ ಕೊಟ್ಟವರು ಯಾರು? ವೀಸಾ ನಿಯಮಗಳನ್ನು ಗಾಳಿಗೆ ತೂರಿ ಹೀಗೆ ರಹಸ್ಯವಾಗಿ ಪ್ರಯಾಣ ಮಾಡಿ ದೇಶದ ಮೂಲೆ ಮೂಲೆಗಳನ್ನು ಸೇರಿಕೊಂಡದ್ದು ಯಾವ ಉದ್ದೇಶದಿಂದ?  
 
ಇದೆಲ್ಲಕ್ಕಿಂತಲೂ ಭಯಾನಕ ಸಂಗತಿಯೆಂದರೆ, ದೆಹಲಿಯ ಮರ್ಕಜ್ ಗಿಂತ ಹತ್ತು ಹಲವು ಪಟ್ಟು ದೊಡ್ಡದಾದ ಸುಮಾರು ಐವತ್ತು ಸಾವಿರ ಮಂದಿ ಸೇರುವಂಥ ಬೃಹತ್ ಸಮಾರಂಭ ನಡೆಸಲು ಎಲ್ಲ ಸಿದ್ಧತೆಗಳೂ ಮುಗಿದಿದ್ದವು, ಮುಂಬೈ ಪಕ್ಕದ ಪಾಲಘಾರ್ ಜಿಲ್ಲೆಯಲ್ಲಿ ಉತ್ತರ ಪ್ರದೇಶ ಮೂಲದ ಡಾನ್ ಭಾಯಿ ಠಾಕೂರ್ ಮತ್ತವನ ತಮ್ಮ ಹಿತೇಂದ್ರ ಠಾಕೂರ್ ನ ಬಹುಜನ ವಿಕಾಸ್ ಅಘಾಡಿ ಪಕ್ಷ ಪ್ರಬಲವಾಗಿದೆ...ಇಲ್ಲಿ  ಇನ್ನೊಂದು ಪ್ರಬಲ ಶಕ್ತಿಯೆಂದರೆ ಎಡಪಂಥೀಯ ಕಮ್ಯುನಿಸ್ಟರದು ...(ಮೊನ್ನೆ ಮೊನ್ನೆ ಝುನಾ ಅಖಾಡದ ಇಬ್ಬರು ಹಿಂದೂ ಸಾಧುಗಳನ್ನು ಹೊಡೆದು ಸಾಯಿಸಿದ್ದು ಇದೇ ಜಿಲ್ಲೆಯಲ್ಲಿ... ಇದೇ  ಕಮ್ಯುನಿಸ್ಟ್ ಕಾರ್ಯಕರ್ತರೇ ... )  ಹೀಗೆ ಈ ಎರಡೂ ಶಕ್ತಿಗಳ ಸಾಹಚರ್ಯದಲ್ಲಿಯೇ ವಸಾಯ್ ನಲ್ಲಿ ಮಾರ್ಚ್ ೧೪- ೧೫ ಕ್ಕೆ ತಬ್ಲೀಘಿ ಜಮಾಅತಿನ ಬೃಹತ್ ಸಮ್ಮೇಳನ ಆಯೋಜಿಸಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಕೊರೋನಾ ವೈರಸ್ ಭೀತಿಯಿಂದ ಈ ಸಮ್ಮೇಳನಕ್ಕೆ ಮಹಾರಾಷ್ಟ್ರ ಸರಕಾರ ಅನುಮತಿ ನಿರಾಕರಿಸಿತು... ಹಾಗಾಗಿ ಒಂದು ಬಹುದೊಡ್ಡ ವಿಪತ್ತು ತಪ್ಪಿ ಹೋಯಿತು ..! 
 
ಆದರೂ ಬಹುಶಃ ಕೊರೋನಾ ಜಿಹಾದಿಗಳ ಕಣ್ಣು ಮಹಾರಾಷ್ಟ್ರದ ಮೇಲೆ, ಅದರಲ್ಲೂ ಭಾರತದ ವಾಣಿಜ್ಯ ರಾಜಧಾನಿ ಮುಂಬೈ ಮೇಲೆ ಇತ್ತಾ..? ಹಾಗಾಗಿಯೇ ಮುಂಬೈಯ ಸ್ಲಮ್ ಗಳನ್ನೇ  ಟಾರ್ಗೆಟ್ ಮಾಡಲಾಯಿತಾ..? ಆ ಮೂಲಕವೇ ಕೊರೋನಾ ಸೋಂಕನ್ನು ಹರಡುವ ಷಡ್ಯಂತ್ರ ಮಾಡಲಾಯಿತೇ? ಮುಂಬೈಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಿದಂತೆಲ್ಲ ಲಾಕ್ ಡೌನ್ ಅವಧಿಯೂ ಹೆಚ್ಚಳವಾಗಿ ಆ ಮೂಲಕ ದೇಶಕ್ಕೆ ಭಾರೀ ಆರ್ಥಿಕ ಹೊಡೆತ ಕೊಡುವ ಹುನ್ನಾರವಾಗಿತ್ತೇ...? ಅದರಲ್ಲಿ ಜಿಹಾದಿಗಳು ಭಾಗಶಃ ಯಶಸ್ವಿಯೂ ಆದರೇ ....?                                                              
 
ಧಾರಾವಿಯ ಭಾರೀ ದೊಡ್ಡ ಸ್ಲಮ್ ಅನ್ನು ತಬ್ಲೀಘಿಗಳು ಟಾರ್ಗೆಟ್ ಮಾಡಿದರಾ ..? ದೆಹಲಿ ತಬ್ಲೀಘಿ ಮರ್ಕಜ್ ನಿಂದ ಹಿಂತಿರುಗುತ್ತಿದ್ದ ಐವರು ಮಹಿಳೆಯರು ಧಾರಾವಿ ಸ್ಲಮ್ಮಿನಲ್ಲಿ ತಂಗಿದ್ದರು. ಗಾರ್ಮೆಂಟ್ ಉದ್ದಿಮೆ ನಡೆಸುವವನ ಮನೆಯಲ್ಲಿ ಆಶ್ರಯ ಪಡೆದಿದ್ದರು. ಈ ಮಹಿಳೆಯರ ಜೊತೆಗೆ ಬಂದಿದ್ದ ಪುರುಷರ ತಂಡ ಧಾರಾವಿ ಶಾಹು ನಗರ್ ನಲ್ಲಿನ ಮಸೀದಿಯೊಂದರಲ್ಲಿ ಆಶ್ರಯ ಪಡೆದಿದ್ದರು. ಎರಡು  ದಿನ ಇಲ್ಲಿ ತಂಗಿದ್ದ ಈ ತಂಡ ಬಳಿಕ ಕೇರಳಕ್ಕೆ ಪ್ರಯಾಣ ಬೆಳೆಸಿತು. ಆದರೆ ಅಷ್ಟರಲ್ಲೇ ಮುಂಬೈಯಲ್ಲಿ ಸಾಕಷ್ಟು ಜನರಿಗೆ ಸೋಂಕನ್ನು ಅಂಟಿಸಿಯಾಗಿತ್ತು. ಮಾರ್ಚ್ ೨೨ ಕ್ಕೆ ಧಾರಾವಿಗೆ ಬಂದಿದ್ದ ಈ ತಂಡ ಎರಡೇ ದಿನ ಇಲ್ಲಿ ತಂಗಿ ಮಾರ್ಚ್ ೨೪ ಕ್ಕೆ ಕೇರಳದ ಕೋಯಿಕ್ಕೋಡ್ ಗೆ ತೆರಳಿದರು... ಇದಾಗಿ ಆರುದಿನಗಳ ಬಳಿಕ ಈ ತಂಡಕ್ಕೆ ಆಶ್ರಯ ನೀಡಿದ್ದ ಆ ಗಾರ್ಮೆಂಟ್ ಉದ್ಯಮಿ ಸಯಾನ್ ನ ಜ್ವರ ಕೇಂದ್ರದಲ್ಲಿ ಕೊರೋನಾದಿಂದಾಗಿ ಸತ್ತ... ಆತ ಸತ್ತ ನಂತರವೇ ಈ ಕುರಿತು ತನಿಖೆ ನಡೆದು ಈ ತಬ್ಲೀಗ್ಯ್ ತಂಡದ ವಿಷಯ ಹೊರಬಿದ್ದದ್ದು... ಮಾರ್ಚ್ ೨೪ ನೇ ತಾರೀಕಿನಿಂದ ಏಪ್ರಿಲ್ ಒಂದನೇ ತಾರೀಕಿನವರೆಗೆ ಈ ಗಾರ್ಮೆಂಟ್ ಉದ್ಯಮಿ ಅದೆಷ್ಟು ಜನರೊಂದಿಗೆ ಸಂಪರ್ಕಕ್ಕೆ ಬಂದಿದ್ದ ಅನ್ನುವುದನ್ನು ಆತನ ಮನೆಯವರು ಬಿಟ್ಟು ಕೊಡಲೇ ಇಲ್ಲ...! 
 
ಹೀಗೆ ಧಾರಾವಿಗೆ ಕೊರೋನಾ ಎಂಟ್ರಿ ಕೊಟ್ಟಿತು... ಧಾರಾವಿಗೆ ಕೊರೋನಾ ಅಂಟಿಸಿ ಹೋದ ತಬ್ಲೀಘಿ ತಂಡ ದೆಹಲಿಯಿಂದ ಬರುವ ದಾರಿಯಲ್ಲಿ ಅದೆಷ್ಟು ಕಡೆ ಸೋಂಕು ಹರಡಿತೋ..? ಮುಂಬೈಯಲ್ಲಿ ಅದೆಷ್ಟು ಕಡೆ ಸೋಂಕು ತಗುಲಿಸಿದರೋ..? ಬಳಿಕ ಕೇರಳಕ್ಕೆ ಹೋಗುವಾಗ  ದಾರಿಯಲ್ಲಿ ಮತ್ತು ಹೋದ ಬಳಿಕ ಕೇರಳದಲ್ಲಿ ಅದೆಷ್ಟು ಜನರಿಗೆ ಈ ತಂಡ ಕೊರೋನಾ ಹರಡಿತೋ,,? 
 
ಇದರಲ್ಲೆಲ್ಲಾ ಒಂದು ಪ್ಯಾಟರ್ನ್ ಇರೋ ರೀತಿ ಕಾಣಿಸ್ತಿದೆ... ದೆಹಲಿಯಿಂದ ಕೇರಳಕ್ಕೆ ಹೋಗೋ ಮಂದಿ ಇಲ್ಲಿ ಮುಂಬೈಯ ಧಾರಾವಿಯಲ್ಲಿ ಎರಡು ದಿನ ಉಳಿದು ಅದ್ಯಾಕೆ ಇಲ್ಲಿ ಸೋಂಕು ಹರಡಿ ಹೋದರು..? ಮುಂಬೈಯಲ್ಲಿ ಅವರಿಗೆ ಟಾರ್ಗೆಟ್ ಫಿಕ್ಸ್ ಆಗಿತ್ತಾ? ಇನ್ನೊಂದು ಪ್ರಕರಣ ನೋಡಿದರೆ ಈ ಅನುಮಾನ ಇನ್ನಷ್ಟು ಘಟ್ಟಿಯಾಗುತ್ತದೆ... 
 
ಬಾಂಗ್ಲಾದೇಶದ ಹದಿಮೂರು ಮಂದಿ ಮತ್ತು ಮಲೇಷ್ಯಾದ ಎಂಟು ಮಂದಿ ಮಹಾರಾಷ್ಟ್ರದ ಮುಂಬ್ರಾದ ಒಂದು ಮಸೀದಿ ಮತ್ತು ಶಾಲೆಯಲ್ಲಿ ಅವಿತುಕೊಂಡಿದ್ದರು... ಈ ವಿದೇಶೀ ತಬ್ಲೀಘಿ ಗಳ  ತಂಡ ಮಹಾರಾಷ್ಟ್ರಕ್ಕೆ ಬರುವ ಮೊದಲು ತಮಿಳುನಾಡಿನಲ್ಲಿ ತಂಗಿತ್ತು... ಕೇಂದ್ರ ಮತ್ತು ರಾಜ್ಯ ಸರಕಾರಗಳು ತಬ್ಲೀಘಿಗಳು ಎಲ್ಲೇ ಇದ್ದರೂ ಬಂದು ಕೊರೋನಾ ಪರೀಕ್ಷೆಗೆ ಒಳಗಾಗಬೇಕೆಂಬ ಪ್ರಕಟಣೆ ಹೊರಡಿಸಿದ್ದರೂ ಈ ತಂಡ ಮಾತ್ರ ಅಡಗುದಾಣಗಳನ್ನು ಬದಲಿಸುತ್ತಲೇ ಇತ್ತು... ಹೀಗೆ ತಮಿಳುನಾಡಿನಿಂದ ಮಹಾರಾಷ್ಟ್ರಕ್ಕೆ ಬಂದು ಅವಿತುಕುಳಿತಿದ್ದ ಈ ವಿದೇಶೀ ತಂಡವನ್ನು ಸೆರೆಹಿಡಿದು ಕ್ವಾರಂಟೈನ್ ಗೆ ಒಪ್ಪಿಸಲಾಯಿತು. ಎಲ್ಲರೂ ಕೊರೋನಾ ಸೋಂಕು ಹೊಂದಿದ್ದರು.. ಅವರನ್ನು ಬಂಧಿಸಿದ್ದ ಪೊಲೀಸ್ ಇನ್ಸ್ಪೆಕ್ಟರ್ ಗೂ ಕೊರೊನಾ ಸೋಂಕು ತಗುಲಿತು...! 
 
ಈ ಪ್ರಕರಣ  ಗಮನಿಸಿದರೆ ಭಾರತದಲ್ಲಿ ಕೊರೋನಾ ಸೋಂಕನ್ನು ವ್ಯವಸ್ಥಿತವಾಗಿ ಹರಡಲಿಕ್ಕೆಂದೇ ಈ ವಿದೇಶೀ ಜಿಹಾದಿ ಗಳನ್ನ ಬಳಸಿಕೊಳ್ಳಲಾಯಿತಾ..? ಇದೇ  ಕೊರೋನಾ ಜಿಹಾದಾ ..? ಅನ್ನುವ ಸಂಶಯ ಮೂಡದೇ ಇರುವುದಿಲ್ಲ... 
 
ಆದರೆ ತಬ್ಲೀಘಿಗಳ ಸಹಾಯಕ್ಕೆಂದೇ ಥಟ್ಟನೇ ಬರುವ ನಮ್ಮ ಎಡಬಿಡಂಗಿ ಎಡಚರು, ಡೋಂಗಿ ಜಾತ್ಯಾತೀತರು " ತಬ್ಲೀಘಿಗಳು ಮುಗ್ದರು.... ಮೋದಿ ಲಾಕ್ ಡೌನ್ ಅನ್ನು ಏಕಾಏಕಿ ಘೋಷಣೆ ಮಾಡಿದ್ದರಿಂದ ಈ ವಿದೇಶೀ ತಬ್ಲೀಘಿಗಳು ತಮ್ಮ ದೇಶಕ್ಕೆ ಪ್ರಯಾಣಿಸಲಾಗದೆ ಗಾಬರಿಯಾಗಿ ಅತ್ತಿಂದಿತ್ತ ಓಡಾಡಿ ಅವಿತು ಕುಳಿತಿದ್ದರು..." ಅಂತ  ತೇಪೆ ಹಚ್ಚುವ ಕೆಲಸ ಖಂಡಿತಾ ಮಾಡುತ್ತಾರೆ... 
 
ಆದರೆ ಈ ವಿದೇಶೀ ತಬ್ಲೀಘಿಗಳು ದೇಶದ ಮೂಲೆ ಮೂಲೆ ತಲುಪಿದ್ದು ಗಾಬರಿಯಿಂದಲ್ಲ. ಬದಲಿಗೆ ಅದೊಂದು ವ್ಯವಸ್ಥಿತ ಸಂಚು... ಆ ವಿದೇಶೀ ತಂಡಗಳ ಜೊತೆಗೆ ಕೆಲ ಲೋಕಲ್ ತಬ್ಲೀಘಿಗಳೂ ಸಹಾಯಕ್ಕಿದ್ದರು... ಅಷ್ಟೇ ಅಲ್ಲ . ಎಲ್ಲ ವೀಸಾ ನಿಯಮಗಳನ್ನೂ ಗಾಳಿಗೆ ತೂರಿ ಎಲ್ಲೆಂದರಲ್ಲಿ ಸಂಚರಿಸುತ್ತಾ ಸೋಂಕು ಪಸರಿಸುತ್ತಾ... ಸಂಚರಿಸುತ್ತಿದ್ದ ಈ  ತಬ್ಲೀಘಿಗಳು ಬಳಸುತ್ತಿದ್ದ ಮೊಬೈಲ್ ಸಿಮ್ ಕಾರ್ಡ್ ಎಲ್ಲಿಯವು..? ಭಾರತ ದೇಶದ್ದಾ..? ಭಾರತದ ಸಿಮ್ ಕಾರ್ಡ್ ಇವರು ಹೇಗೆ ಪಡೆದುಕೊಂಡರು..? ಅದಕ್ಕಾಗಿ ಇವರು ಸಲ್ಲಿಸಿದ್ದ ದಾಖಲೆಗಳು ಯಾವುವು..? 
 
ಇದನ್ನು ಪರಿಶೀಲಿಸಿದಾಗ ಆಘಾತಕಾರೀ ವಿಷಯಗಳು ಹೊರಬಿದ್ದವು,  ಹಿಂದಿಯ ಜಾಗರಣ್  ಪತ್ರಿಕೆ ಈ ಕುರಿತ ತನಿಖಾ ವರದಿಯನ್ನು ಪ್ರಕಟಿಸಿದೆ . ಮೂರು ಮಂದಿ ತಬ್ಲೀಘಿಗಳು ಬಳಸಿದ್ದ ಸಿಮ್ ಕಾರ್ಡ್ ನ ದಾಖಲೆಗಳನ್ನು ಪರಿಶೀಲಿಸಿದಾಗ  ಅವು ಜಾರ್ಖಂಡ್ ನ  ಗುಡ್ಡ ಗಾಡುಗಳ ಜನರ ಹೆಸರಲ್ಲಿದ್ದ ಸಂಗತಿ  ತಿಳಿಯಿತು. ಅವುಗಳ ಪೈಕಿ ಇಬ್ಬರು ಯಾವತ್ತೂ ದೆಹಲಿಯನ್ನು ನೋಡಿಯೇ ಇರಲಿಲ್ಲ... ! ಹಾಗಾದರೆ ಸಿಮ್ ಕಾರ್ಡ್ ಖರೀದಿಸಲು ಈ ದಾಖಲೆಗಳು ತಬ್ಲೀಘಿಗಳಿಗೆ ಹೇಗೆ ಸಿಕ್ಕಿತು,,? ಇದರ ಹಿಂದೆ ಯಾರಿದ್ದಾರೆ..? ತಬ್ಲೀಘಿಗಳ ಹಿಂದೆ ನಕ್ಸಲರ ನೆರಳು ಇದೆಯೇ..? 
 
ತಬ್ಲೀಘಿ ಜಮಾತ್ ಕೊರೋನಾ ಸೋಂಕಿನ ಕೇಂದ್ರ ಆದದ್ದನ್ನು ಮಾತ್ರ ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಜಮಾಅತಿನ ಸಭೆಯಲ್ಲಿ ಪಾಲ್ಗೊಂಡವರ ಪೈಕಿ ಹೆಚ್ಚಿನವರು ಸೋಂಕನ್ನು ಅಂಟಿಸಿಕೊಂಡೇ ಹೊರಬಿದ್ದಿದ್ದಾರೆ... ವಿದೇಶಗಳಿಂದ ಬಂದಿದ್ದ ತಬ್ಲೀಘಿ ಗಳು ಸೋಂಕನ್ನು ಹರಡಲು ನಮ್ಮದೇಶದಲ್ಲಿ ಪ್ರಯತ್ನಿಸಿದ್ದಷ್ಟೇ ಅಲ್ಲದೆ ಇಲ್ಲಿಂದ ಸೋಂಕನ್ನು ತಮ್ಮ ದೇಶಕ್ಕೂ ಕೊಂಡು ಹೋಗಿದ್ದಾರೆ. ದಕ್ಷಿಣ ಆಫ್ರಿಕಾದ ಮೌಲಾನಾ ಯೂಸುಫ್ ಟೂಟಿಯಾ ದೆಹಲಿ ಮರ್ಕಜ್ ನಲ್ಲಿ ಭಾಗವಹಿಸಿ ತನ್ನೂರಿಗೆ ಮರಳಿದವ, ಕೊರೋನಾ ಬಂದು ಕೊನೆಯುಸಿರೆಳೆದ. ಆ ಆದರೆ ಸಾಯುವ ಮೊದಲು ಅದೆಷ್ಟು ಜನರಲ್ಲಿ ಕೊರೊನಾ ಬಿತ್ತಿ ಸತ್ತ ಎಂಬುದು ಮಾತ್ರ ನಿಗೂಢ... 

ಜಾಗತಿಕವಾಗಿ ಕೊರೋನಾ ವೈರಸ್ ಹರಡುವಿಕೆಯಲ್ಲಿ ಇಸ್ಲಾಮಿಕ್ ಜಿಹಾದಿಗಳ ಪಾತ್ರ ಏನು ಎಂಬುದರ ಬಗ್ಗೆ ಯಾರೂ ಯೋಚಿಸಿಲ್ಲ...ಚರ್ಚಿಸಿಲ್ಲ...ಮತ್ತು ಈವರೆಗೆ ಈ ನಿಟ್ಟಿನಲ್ಲಿ ಗಂಭೀರವಾದ ಯಾವುದೇ ತನಿಖೆಗಳೂ ನಡೆದಿಲ್ಲ...   ಈ ಬಗ್ಗೆ ಇನ್ನಷ್ಟೇ ಸತ್ಯ ಹೊರ ಬೀಳಬೇಕಿದೆ... ಆದರೆ ಭಾರತದಲ್ಲಿ ಮಾತ್ರ ಕೊರೋನಾ ಜಿಹಾದ್ ಅನ್ನು ವ್ಯವಸ್ಥಿತವಾಗಿ ನಡೆಸಲು ಪ್ರಯತ್ನ ನಡೆಯಿತಾದರೂ ಅದಕ್ಕೆ ದೊಡ್ಡ ಮಟ್ಟದ ಯಶಸ್ಸು ಸಿಗಲಿಲ್ಲ ಎಂಬುದಂತೂ ಸತ್ಯ...  

Related posts