ಇಂದು ಡಾ. ಶ್ಯಾಮಪ್ರಸಾದ್ ಮುಖರ್ಜಿಯವರ ೧೧೯ನೇ ಜನುಮ ಜಯಂತಿ
ಸಬ್ ಕಾ ಸಾಥ್ ಮಂತ್ರದ ಹರಿಕಾರ...
ಮೌಲ್ಯಯುತ ರಾಜಕಾರಣದ ಕನಸುಗಾರ ...
ಇಂದು ಡಾ. ಶ್ಯಾಮಪ್ರಸಾದ್ ಮುಖರ್ಜಿಯವರ ೧೧೯ನೇ ಜನುಮ ಜಯಂತಿ
ಭಾರತ ಕಂಡ ಅತ್ಯಂತ ಅಪರೂಪದ ರಾಜಕಾರಣಿ ... ಅತ್ಯಂತ ನೇರ ನಿಷ್ಠುರ ಸ್ವಭಾವ... ಯಾವುದಕ್ಕೂ ಯಾರೊಂದಿಗೂ ರಾಜಿಯೇ ಇಲ್ಲದ ಸೈದ್ಧಾಂತಿಕ ತತ್ವಾದರ್ಶ... ತಾನು ಹುಟ್ಟಿದ ದೇಶಕ್ಕೋಸ್ಕರ, ತಾನು ನಂಬಿದ ಧರ್ಮಕ್ಕೋಸ್ಕರ... ಜೀವವನ್ನೇ ಪಣಕ್ಕಿಟ್ಟು ಹೋರಾಡುವ ಕಿಚ್ಚು ಹೊಂದಿದ್ದ ಕೆಚ್ಚೆದೆಯ ನಾಯಕ, ಭಾರತೀಯ ಜನಸಂಘದ ಸಂಸ್ಥಾಪಕ ಡಾ. ಶ್ಯಾಮ ಪ್ರಸಾದ ಮುಖರ್ಜಿಯವರ ೧೧೯ನೆಯ ಜನುಮ ದಿನ ಇಂದು...ಬಹುಶಃ ಇವತ್ತೇನಾದರೂ ಮುಖರ್ಜಿಯವರು ಬದುಕಿದ್ದರೆ... ತಾನು ಕಂಡ ಕನಸುಗಳು ಸಾಕಾರವಾಗುತ್ತಿರುವುದನ್ನು ಕಂಡು ಸಂತೋಷ ಪಟ್ಟಿರುತ್ತಿದ್ದರು...
"ಸಬ್ ಕಾ ಸಾಥ್ ... ಸಬ್ ಕಾ ವಿಕಾಸ್.." ಎಂಬ ಮೂಲ ಪರಿಕಲ್ಪನೆಗೆ ಪ್ರೇರೇಕ ಶಕ್ತಿಯೇ ಡಾ. ಶ್ಯಾಮ ಪ್ರಸಾದರು...ಹೌದು.. ಶ್ಯಾಮಾಪ್ರಸಾದರು ನೈಜ ಜಾತ್ಯಾತೀತವಾದಿಯಾಗಿದ್ದರು... ಎಲ್ಲರಿಗೂ ಸಮಬಾಳು ಕಲ್ಪಿಸುವ ಮಹೋನ್ನತ ಕನಸು ಕಂಡಿದ್ದರು... ಆದರೆ ನೆಹರೂ ಮತ್ತವರ ಕಾಂಗ್ರೆಸ್ ಪಕ್ಷ ಡಾ. ಮುಖರ್ಜಿಯವರ ಬಗ್ಗೆ ನಡೆಸಿದ್ದು ಅಪಪ್ರಚಾರವನ್ನೇ... ಕಾಶ್ಮೀರಕ್ಕೆ ನೆಹರೂ ನೀಡಿದ ವಿಶೇಷ ಸ್ಥಾನಮಾನ, ದೇಶದ ಸಮಗ್ರತೆಗೆ, ಅಖಂಡತೆಗೆ ಜವಾಹರ ಲಾಲ್ ನೆಹರೂ ಬಗೆದ ದ್ರೋಹದ ವಿರುದ್ಧ ಎದೆ ಸೆಟೆಸಿ ಹೋರಾಡಿ ಕಾಶ್ಮೀರಕ್ಕಾಗಿ ತಮ್ಮ ಜೀವವನ್ನೇ ಸಮರ್ಪಿಸಿದ ಶ್ಯಾಮ ಪ್ರಸಾದ ಮುಖರ್ಜಿಯವರ ಬಗ್ಗೆ ಮತ್ತು ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹಕಾರದಿಂದ ಸ್ಥಾಪಿಸಿದ "ಭಾರತೀಯ ಜನಸಂಘ" ಬಗ್ಗೆ ನೆಹರೂ ಮತ್ತವರ ಕಾಂಗ್ರೆಸ್ಸು ಬಹಳ ವ್ಯವಸ್ಥಿತ ರೀತಿಯಲ್ಲಿ ಅಪಪ್ರಚಾರ ಮಾಡಿದ ಕಾರಣ ಭಾರತೀಯ ರಾಜಕಾರಣದ ಇತಿಹಾಸದಲ್ಲಿ ಡಾ. ಶ್ಯಾಮಾಪ್ರಸಾದ ಮುಖರ್ಜಿಯವರಂಥ ಅತ್ಯಂತ ಜಾತ್ಯಾತೀತ ಮನೋಭಾವದ ನಿಜವಾದ 'ಸೆಕ್ಯುಲರ್ ನಾಯಕ' ಮರೆಗೆ ಸರಿಯುವಂತಾಯಿತಷ್ಟೇ ಅಲ್ಲ... ಬದಲಿಗೆ ಆತನನ್ನು ಮಹಾನ್ ಕೋಮುವಾದಿ... ಮುಸ್ಲಿಮರ ವಿರೋಧೀ ಎಂಬಂತೆ ಬಿಂಬಿಸಲಾಯಿತು... ಇದು ನೆಹರೂ ಮತ್ತಾತನ ಕಾಂಗ್ರೆಸ್ಸಿನ ಕುಟಿಲ ರಾಜಕಾರಣದ ಫಲ... ಜಾತ್ಯಾತೀತತೆಯ ಹೆಸರಲ್ಲಿ ನೆಹರೂ ಮಾಡುತ್ತಿದ್ದದ್ದು ತುಷ್ಟೀಕರಣದ ನೀತಿ... ಹಾಗಾಗಿಯೇ ಕಾಶ್ಮೀರದಲ್ಲಿ ಪ್ರತ್ಯೇಕ ಸಂವಿಧಾನಕ್ಕೆ, ಪ್ರತ್ಯೇಕ ಪ್ರಧಾನಿ ಹುದ್ದೆಗೆ ನೆಹರೂ ಅವಕಾಶ ನೀಡಿದ್ದು. ಆದರೆ ಅದನ್ನು ವಿರೋಧಿಸಿದ ಡಾ. ಶ್ಯಾಮ ಪ್ರಸಾದರನ್ನು ಹಿಂದೂ ರಾಷ್ಟ್ರೀಯವಾದಿ ಎಂಬ ಹಣೆಪಟ್ಟಿ ಹಚ್ಚಿ ಅವರ ನಿಗೂಢ ಸಾವಿಗೂ ಕಾರಣವಾದದ್ದು ನೆಹರೂ ಸರಕಾರವೇ... ಅವರು ನಿಧನರಾದ ಬಳಿಕವೂ ಅವರ ವಿರುದ್ಧದ ಅಪಪ್ರಚಾರ ನಿಲ್ಲಲಿಲ್ಲ... ಈಗಲೂ ಅವರ ಕುರಿತಾದ ನೈಜ ವಿಷಯಗಳು, ಅವರ ನೈಜ ಜಾತ್ಯಾತೀತ ಮನೋಭಾವ ಬಹುತೇಕರಿಗೆ ತಿಳಿದಿಲ್ಲ...
ಡಾ. ಶ್ಯಾಮಾಪ್ರಸಾದ ಮುಖರ್ಜಿಯವರನ್ನು ನಮ್ಮ ನಾಡಿನ ಎಡಬಿಡಂಗಿ ಬುದ್ಧಿಜೀವಿಗಳು ಈಗಲೂ ಹೀಗಳೆಯುತ್ತಾರೆ... ಅವರು ಹಿಂದೂ ಮಹಾಸಭಾದ ಅಧ್ಯಕ್ಷರಾಗಿದ್ದರು ಎಂಬುದನ್ನೇ ಮುಂದಿಟ್ಟುಕೊಂಡು ಹಿಂದೂ ಮೂಲಭೂತವಾದಿ ಎಂದು ಬಿಂಬಿಸುತ್ತಾರೆ... ಆದರೆ ಡಾ. ಶ್ಯಾಮ ಪ್ರಸಾದ ಮುಖರ್ಜಿಯವರು ಭಾರತೀಯರೆಲ್ಲರೂ ಹಿಂದೂಗಳೇ... ಹಿಂದೂ ಅಂದರೆ ಅದು ಕೇವಲ ಮತ ಅಲ್ಲ... ಅದೊಂದು ಜೀವನಪದ್ಧತಿ... ಹಾಗಾಗಿ ಭರತಖಂಡದಲ್ಲಿ ಹುಟ್ಟಿ ಈ ಮಹೋನ್ನತ ದೇಶದ ಪ್ರಜೆಗಳಾಗಿರುವವರೆಲ್ಲರೂ 'ಹಿಂದೂ' ಗಳೇ ಅಂತ ಸಾರಿದ್ದರು... ಅದಕ್ಕಾಗಿ ಯಾರು ಬೇಕಾದರೂ ಹಿಂದೂ ಮಹಾಸಭಾದ ಸದಸ್ಯರಾಗಬಹುದು... ಅವರು ಮುಸ್ಲಿಮರಾಗಿದ್ದರೂ ಸರಿ... ಕ್ರಿಶ್ಚಿಯನ್ನರಾಗಿದ್ದರೂ ಸರಿ... ಬೌದ್ಧ, ಜೈನ ಪಾರ್ಸಿಗಳು ಹೀಗೆ ಯಾರೇ ಆಗಿದ್ದರೂ ಸರಿ... ಅವರೆಲ್ಲರಿಗೂ ಹಿಂದೂ ಮಹಾಸಭಾದ ಸದಸ್ಯರಾಗುವ ಅರ್ಹತೆ ಇದೆ ಅಂತಲೇ ಡಾ. ಶ್ಯಾಮ ಪ್ರಸಾದರು ಪ್ರತಿಪಾದಿಸಿದ್ದರು...! ಆದರೆ ಈ ಸತ್ಯವನ್ನೆಲ್ಲ ಯಾವೊಬ್ಬ ಎಡಚ ಬುದ್ಧಿಜೀವಿಯೂ ಹೇಳುವುದಿಲ್ಲ...! ಅಷ್ಟೇ ಯಾಕೆ ಇತರ ಮತ ಧರ್ಮದವರು ಹಿಂದೂ ಮಹಾಸಭಾದ ಸದಸ್ಯರಾಗುವುದನ್ನು ಸಭಾದ ಒಳಗೆಯೇ ಹಲವಾರು ವಿರೋಧಿಸಿದ್ದರಿಂದ ಅಸಮಾಧಾನಗೊಂಡ ಡಾ. ಶ್ಯಾಮ ಪ್ರಸಾದ ಮುಖರ್ಜಿಯವರು ಕೂಡಲೇ ಹಿಂದೂ ಮಹಾಸಭಾದ ಅಧ್ಯಕ್ಷ ಸ್ಥಾನಕ್ಕೆಯೇ ರಾಜೀನಾಮೆ ನೀಡಿ ಹೊರಬಂದುಬಿಟ್ಟರು...! ಅದು ಅವರ ನೇರವಂತಿಕೆಗೆ... ನಿಷ್ಠುರವಾದಕ್ಕೆ ಸಾಕ್ಷಿ...!
ಅಷ್ಟೇ ಅಲ್ಲ.... ಅವರು ಬೌಧ ಧರ್ಮದ ಏಳಿಗೆಗಾಗಿಯೂ ಶ್ರಮಿಸಿದ್ದರು..! ಪ್ರಖ್ಯಾತ ಬೌದ್ಧ ಸಂಘಟನೆ ಮಹಾಬೋಧೀ ಸೊಸೈಟಿಯ ಅಧ್ಯಕ್ಷರಾಗಿದ್ದರು... ಬ್ರಿಟಿಷರು ಭಗವಾನ್ ಬುದ್ಧ ಮತ್ತಾತನ ಅತ್ಯಂತ ಶ್ರೇಷ್ಠ ಶಿಷ್ಯರಾದ ಸಾರಿಗುಪ್ತ ಮತ್ತು ಮೌದ್ಗಲಾಯನರ ಪವಿತ್ರ ಅಸ್ಥಿಗಳು ಸಾಂಚಿಯ ಸ್ಥೂಪದಲ್ಲಿತ್ತು... ಅದನ್ನು ಬ್ರಿಟಿಷರು ೧೮೫೧ರಲ್ಲಿಯೇ ಬ್ರಿಟನ್ನಿಗೆ ತೆಗೆದುಕೊಂಡು ಹೋಗಿ ಅದನ್ನು ಅಲ್ಲಿನ ಮ್ಯೂಸಿಯಮ್ಮಿನಲ್ಲಿಟ್ಟಿದ್ದರು... ಈ ಪವಿತ್ರ ಅಸ್ಥಿಗಳನ್ನು ಮರಳಿ ಭಾರತಕ್ಕೆ ತರಬೇಕೆಂಬ ಹೋರಾಟ ಮಹಾಬೋಧೀ ಸಂಘಟನೆಯ ವತಿಯಿಂದ ನಡೆಯಿತು... ೧೯೪೨ರಲ್ಲಿ ಮಹಾಬೋಧೀ ಸಂಘಟನೆಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಡಾ. ಶ್ಯಾಮಾಪ್ರಸಾದ ಮುಖರ್ಜಿಯವರು ಈ ಕುರಿತು ಸತತವಾಗಿ ಬ್ರಿಟಿಷ್ ಸರಕಾರಕ್ಕೆ ಮತ್ತು ಸ್ವಾತಂತ್ರ್ಯಾನಂತರ ಭಾರತ ಸರಕಾರಕ್ಕೆ ಒತ್ತಡ ಹೇರಿದರು... ಕೊನೆಗೂ ೧೯೪೯ ಲ್ಲಿ ಅಂದರೆ ಭಾರತದಿಂದ ಬುದ್ಧನ ಅಸ್ಥಿಗಳು ಕಣ್ಮರೆಯಾಗಿ ಬ್ರಿಟಿಷರ ಪಾಲಾಗಿ ಸುಮಾರು ನೂರು ವರ್ಷಗಳ ಬಳಿಕ ಡಾ. ಶ್ಯಾಮಾಪ್ರಸಾದ ಮುಖರ್ಜಿಯವರ ಸತತ ಪ್ರಯತ್ನದ ಫಲವಾಗಿ ಭಾರತಕ್ಕೆ ಮರಳಿ ಬಂತು... ೧೯೪೯ರ ಜನವರಿ ೧೪ ನೆಯ ತಾರೀಕಿಗೆ ಕಲ್ಕತ್ತಾ ಮೈದಾನದಲ್ಲಿ ನಡೆದ ಭಾರೀ ಸಮಾರಂಭದಲ್ಲಿ ಅಂದಿನ ಪ್ರಧಾನಿ ನೆಹರೂ ಮಹಾಬೋಧೀ ಸೊಸೈಟಿಯ ಅಧ್ಯಕ್ಷರಾಗಿದ್ದ ಡಾ. ಶ್ಯಾಮ ಪ್ರಸಾದ ಮುಖರ್ಜಿಯವರಿಗೆ ಭಗವಾನ್ ಬುದ್ಧ ಮತ್ತಾತನ ಶಿಷ್ಯರ ಪವಿತ್ರ ಆಸ್ತಿಗಳನ್ನು ವಿದ್ಯುಕ್ತವಾಗಿ ಹಸ್ತಾಂತರಿಸಿದರು... ಬಳಿಕ ಈ ಪವಿತ್ರ ಆಸ್ತಿಗಳನ್ನು ಭಾರತದಾದ್ಯಂತ ವಿಶೇಷ ರೈಲಿನ ಮೂಲಕ ತೆಗೆದುಕೊಂಡು ಹೋಗಿ ಜನರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು... ಮತ್ತು ಕೊನೆಗೆ ಅದನ್ನು ಸಾಂಚಿಯಲ್ಲಿ ಅದಕ್ಕೆಂದೇ ವಿಶೇಷವಾಗಿ ನಿರ್ಮಿಸಲಾದ ಸ್ಥೂಪವೊಂದರಲ್ಲಿ ಇಡಲಾಯಿತು...
ಇವತ್ತು ಬೌದ್ಧ ಧರ್ಮದ ಹೆಸರಿನಲ್ಲಿ ಹಿಂದೂ ಧರ್ಮವನ್ನು ಹೀಯಾಳಿಸುವುದು, ವೈದಿಕ ಧರ್ಮವನ್ನು ತುಚ್ಛೀಕರಿಸುವುದು... ಬ್ರಾಹ್ಮಣರನ್ನು ನಿಂದಿಸುವುದು ಸತತವಾಗಿ ನಡೆದಿದೆ... ಇದೆಲ್ಲದರ ಹಿಂದೆ ಮತ್ತದೇ ಎಡಚ ಬುದ್ಧಿಜೀವಿಗಳಿದ್ದಾರೆ... ಪ್ರಗತಿಪರ ಪೋಷಾಕಿನ ಎಡಬಿಡಂಗಿಗಳಿದ್ದಾರೆ... ಇಂಥಾ ಸೋಗಲಾಡಿ ಸಿದ್ಧಾಂತಿಗಳು ಇವತ್ತಿನ ಮೋದೀಜಿಯವರ ಸರಕಾರವನ್ನೂ, ಅವರ "ಸಬ್ ಕಾ ಸಾಥ್ ... ಸಬ್ ಕಾ ವಿಕಾಸ್.." ನೀತಿಯನ್ನೂ ಶತಾಯ ಗತಾಯ ವಿರೋಧಿಸುತ್ತಾರೆ...ಕಾಂಗ್ರೆಸ್ ಪಕ್ಕ ನಿಂತು "ಜಾತ್ಯಾತೀತತೆಯ" ಬಗ್ಗೆ ಭಾಷಣ ಮಾಡುತ್ತಾರೆ... ಆದರೆ ಇವರ್ಯಾರೂ ಕೂಡಾ ಅಪ್ಪಿತಪ್ಪೀ ಕೂಡಾ ಡಾ.ಶ್ಯಾಮ ಪ್ರಸಾದರ ಬಗ್ಗೆ, ಅವರು ಪ್ರತಿಪಾದಿಸಿದ ಜಾತ್ಯಾತೀತೆಯ ಬಗ್ಗೆ, ಅವರು ಬೌದ್ಧ ಧರ್ಮದ ಏಳಿಗೆಗೆ, ಭಗವಾನ್ ಬುದ್ಧನ ಪವಿತ್ರ ಆಸ್ತಿಗಳನ್ನು ಭಾರತಕ್ಕೆ ಮರಳಿ ತರಲು ಶ್ರಮಿಸಿದ ಬಗ್ಗೆ ಒಂದೇ ಒಂದು ಮಾತನ್ನೂ ಆಡುವುದಿಲ್ಲ ...!
ಆದರೆ ಯಾರೇನೇ ಕುತಂತ್ರ ಮಾಡಿದರೂ ಇತಿಹಾಸ ಡಾ. ಶ್ಯಾಮ ಪ್ರಸಾದರ ಕೊಡುಗೆಗಳನ್ನು ಮರೆಯುವುದಿಲ್ಲ... ಅವರ ಕನಸುಗಳನ್ನು ನನಸಾಗಿಸಲು, ಅವರ ಧ್ಯೇಯೋದ್ಧೇಶಗಳನ್ನು ಈಡೇರಿಸಿ ಸಾಕಾರಗೊಳಿಸಲು ಭಾಜಪ ಎಂಬ ಮಹಾವೃಕ್ಷ ಪಾತಾಳಕ್ಕೆ ಬೇರೂರಿ ಅಗಾಧವಾಗಿ ಟಿಸಿಲೊಡೆದು ಬೆಳೆದು ನಿಂತಿದೆ... ಮೋದೀಜಿಯವರಂಥ ಪ್ರಗಲ್ಭರು ಮುಂಚೂಣಿಯಲ್ಲಿ ನಿಂತು ಮುನ್ನಡೆಸುತ್ತಿದ್ದಾರೆ...ಅಮಿತ್ ಶಾ, ರಾಜನಾಥರಂಥ ಹಲವಾರುಸಮರ್ಥ ಸೇನಾನಿಗಳು ಹೆಗಲಿಗೆ ಹೆಗಲುಕೊಟ್ಟು ಶ್ರಮಿಸುತ್ತಿದ್ದಾರೆ.... ಜೊತೆಗೆ ನಮ್ಮ ನಿಮ್ಮಂಥ ಸಾಮಾನ್ಯ- ಅಸಾಮಾನ್ಯ ಪರಮನಿಷ್ಠ- ಧ್ಯೇಯನಿಷ್ಠ ಕಾರ್ಯಕರ್ತರ ದೊಡ್ಡ ಪಡೆಯೇ ಬೆನ್ನಿಗಿದೆ... ಹಾಗಾಗಿ ಇಷ್ಟು ವರ್ಷಗಳ ಬಳಿಕವೂ ಡಾ. ಶ್ಯಾಮಾಪ್ರಸಾದ ಮುಖರ್ಜಿಯವರ ಆದರ್ಶಗಳು ನಮಗೆ ದಾರಿದೀಪದಂತಿವೆ.
ಭಾರತಮಾತಾಕೀ ಜೈ
#ಅನಂತಕುಮಾರಹೆಗಡೆ