Infinite Thoughts

Thoughts beyond imagination

ಕಾರ್ಗಿಲ್ ವಿಜಯ್ ದಿವಸ್ !

ಹಿಮಪರ್ವತಗಳ ನೆತ್ತಿ ಹತ್ತಿ ನಿಂತ ನಮ್ಮ ಸೇನೆ ವಿಜಯ ಪತಾಕೆ ಹಾರಿಸಿದ ದಿನ....! 

ಕಾರ್ಗಿಲ್ ವಿಜಯ್ ದಿವಸ್ 

ತನ್ನ ವಿರೋಧಿಗಳಿಗೆ ಹೆದರಿ ಪ್ರವಾದಿ ಮೊಹಮ್ಮದ್ ತನ್ನ ಬೆಂಬಲಿಗರೊಂದಿಗೆ ಮಕ್ಕಾದಿಂದ ಮದೀನಾಗೆ ಪಲಾಯನ ಮಾಡಿದ್ದು ಕ್ರಿ.ಶ . ೬೨೩ ನೇ ಇಸವಿಯಲ್ಲಿ. ಆ ಬಳಿಕ ಮದೀನಾದಲ್ಲಿ ತನ್ನ ಗುಂಪಿನ ಬಲವನ್ನು ಹೆಚ್ಚಿಸಿಕೊಂಡು ಮೆಕ್ಕಾದ ತನ್ನ ವಿರೋಧಿಗಳ ಮೇಲೆ ದಾಳಿ ಮಾಡಲು ತಯಾರಿ ಮಾಡಿಕೊಳ್ಳುತ್ತಾರೆ . ಮರುವರ್ಷ ಅಂದರೆ ಕ್ರಿ. ಶ. ೬೨೪ರ ಮಾರ್ಚ್ ತಿಂಗಳಲ್ಲಿ ಆ ಬಾರಿಯ ರಂಜಾನ್ ಹಬ್ಬದ ೧೭ ನೆಯ ದಿನ ಮಕ್ಕಾದ ವ್ಯಾಪಾರಿಗಳ ಗುಂಪು ಮೇಲೆ ದಾಳಿ ಮಾಡಲು ಸಂಚು ರೂಪಿಸಿ ಆ ಗುಂಪು ಸಾಗಿ ಹೋಗುವ ದಾರಿಯಲ್ಲಿ ತನ್ನ ಬೆಂಬಲಿಗರೊಂದಿಗೆ ಹೊಂಚು ಹಾಕಿದ್ದ. ಅದು ಬದ್ರ್ ಪಟ್ಟಣದ ಸಮೀಪವೇ ಇದ್ದ ಬದ್ರ್ ಕಣಿವೆಯ ಪ್ರದೇಶದಲ್ಲಾಗಿತ್ತು. ಆ ಕಣಿವೆಯ ಎರಡೂ ಕಡೆ ಎತ್ತರದ ಮರಳು ಬೆಟ್ಟಗಳಿದ್ದವು. ಅಲ್ ಉದ್ವಾತುದ್ ದುನ್ಯಾ ಮತ್ತು ಅಲ್ ಉದ್ವಾತುಲ್  ಖುಸ್ವಾ ಎಂಬ ಈ ಎರಡು ಮರಳು ಬೆಟ್ಟಗಳ ಮೇಲೆ ಹತ್ತಿದ ಪ್ರವಾದಿ ಮೊಹಮ್ಮದ್ ಮತ್ತಾತನ ಬೆಂಬಲಿಗರ ಗುಂಪು ಕಣಿವೆಯ ಮೂಲಕ ಹಾದು ಹೋಗುವ ಮೆಕ್ಕಾದ ಖುರೇಷ್ ಬುಡಕಟ್ಟಿನ ವ್ಯಾಪಾರಿಗಳ ಗುಂಪಿನ ಮೇಲೆ ದಾಳಿ ಮಾಡಲು ಹೊಂಚು ಹಾಕಿ ಕುಳಿತಿತ್ತು.... ಪ್ರವಾದಿ ಮೊಹಮ್ಮದರ ಗುಂಪು ಚಿಕ್ಕದು... ಸುಮಾರು ಮುನ್ನೂರ ಹದಿನೇಳು ಜನರಷ್ಟೇ ಇದ್ದ ಚಿಕ್ಕ ಗುಂಪು... ಈ ಪೈಕಿ ಮೊಹಮ್ಮದರ ಜೊತೆಗೆ ಮೆಕ್ಕಾದಿಂದ ಓಡಿ ಬಂದಿದ್ದ ಮುಹಾಜಿರ್ ಗಳ ಸಂಖ್ಯೆ ಸುಮಾರು ಎಂಭತ್ತೈದು... ಇವರ ಜೊತೆಗೆ ಮದೀನಾದಿಂದ ಇವರಿಗೆ ಬೆಂಬಲವಾಗಿ ಬಂದಂಥ  ಅನ್ಸಾರ್ ಗಳು ಬಾನು ಔಸ್ ಮತ್ತು ಬಾನು ಕಜ್ರಾಜ್ ಬುಡಕಟ್ಟಿನ ಮಂದಿಯೆಲ್ಲಾ ಸೇರಿ ಮೊಹಮ್ಮದರ ಗುಂಪಿನ ಬಲ ಸುಮಾರು ಮುನ್ನೂರಾ ಹದಿನೇಳು. ಈ ಗುಂಪಿನ ಬಳಿಯಿದ್ದದ್ದು ಎರಡು ಕುದುರೆ ಮತ್ತು ಎಪ್ಪತ್ತು ಒಂಟೆಗಳು ಮಾತ್ರ ... ಆದರೆ ಮೆಕ್ಕಾದ ಖುರೇಷ್ ಬುಡಕಟ್ಟಿನ ವ್ಯಾಪಾರಿಗಳ ಗುಂಪಿನ ಸಂಖ್ಯೆ ದೊಡ್ಡದೇ ಇತ್ತು... ಅವರದ್ದು ಅಂದಾಜು ಸಾವಿರ ಜನರ ಗುಂಪು... ಅವರ ಬಳಿ ನೂರು ಕುದುರೆಗಳೂ ನೂರಾಎಪ್ಪತ್ತು ಒಂಟೆಗಳೂ ಇದ್ದವು... 

ಬದ್ರ್ ಬೆಟ್ಟಗಳ ಮೇಲೆ ಹತ್ತಿ ಹೊಂಚು ಹಾಕಿ ಕುಳಿತ ಪ್ರವಾದಿ ಮೊಹಮ್ಮದರ ಈ ಸಣ್ಣ ಗುಂಪು ಕಣಿವೆಯ ಮೂಲಕ ಸಾಗುತ್ತಿದ್ದ ಮೆಕ್ಕಾದ ವ್ಯಾಪಾರಿಗಳ ಗುಂಪಿನ ಮೇಲೆ ದಾಳಿ ಮಾಡಿತು... ಇದು ಇಸ್ಲಾಮಿನ ಪ್ರಪ್ರಥಮ ಯುದ್ಧ...! ಪ್ರವಾದಿ ಮೊಹಮ್ಮದ್ ಮಾಡಿದ ಮೊದಲ ದಾಳಿ...! ಕೇವಲ ಮುನ್ನೂರು ಚಿಲ್ಲರೆ ಜನರಿದ್ದ ಈ ಚಿಕ್ಕ ಗುಂಪು ಮೆಕ್ಕಾದ ವ್ಯಾಪಾರಿಗಳ ದೊಡ್ಡ ಗುಂಪಿನ ಮೇಲೆ ಹಠಾತ್ ದಾಳಿ ನಡೆಸಿ ಆ ಯುದ್ಧವನ್ನು ಗೆದ್ದುಕೊಂಡಿತು... ಹೀಗೆ ಇಸ್ಲಾಮಿನ ಮೊತ್ತ ಮೊದಲ ಯುದ್ಧ... ಪ್ರವಾದಿ ಮೊಹಮ್ಮದ್ ಪೈಗಂಬರರ ಮೊತ್ತ ಮೊದಲ ಯುದ್ಧದಲ್ಲಿ ಮೊಹಮ್ಮದ್ ಗೆದ್ದರು... ಈ ಯುದ್ಧವನ್ನು ಬದ್ರ್ ಯುದ್ಧವೆಂದು ಕರೆಯಲಾಯಿತು... ಈ ಯುದ್ಧ ಅದೆಷ್ಟು ಪ್ರಮುಖವಾಗಿತ್ತೆಂದರೆ ಪವಿತ್ರ ಖುರಾನಿನಲ್ಲೇ ಈ ಯುದ್ಧವನ್ನು ಉಲ್ಲೇಖಿಸಲಾಗಿದೆ... ಈ ಯುದ್ಧವನ್ನು ಇಸ್ಲಾಮಿನಲ್ಲಿ "ಯೋಮ್ ಅಲ್ ಫುರ್ಖಾನ್" ಅಂತಲೇ ಕರೆಯಲಾಗುತ್ತದೆ... ಅಂದರೆ ಇದರ ಅರ್ಥ "ನಿರ್ಣಾಯಕ ಯುದ್ಧ" ... ಹೌದು .. ಕೇವಲ ಮುನ್ನೂರಾ ಹದಿನೇಳು ಜನರಿದ್ದ ಈ ಒಂದು ಚಿಕ್ಕ ಗುಂಪು ಬದ್ರ್ ಬೆಟ್ಟಗಳ ಮೇಲೆ ಅಡಗಿ ಕುಳಿತು ಮಾಡಿದ ದಾಳಿಯಿಂದಾಗಿ ಜಗತ್ತಿನ ಇತಿಹಾಸವೇ ಬದಲಾಯಿತು... "ಇಸ್ಲಾಮ್' ಎಂಬ ಹೊಸ ಧರ್ಮದ ಹುಟ್ಟಿಗೆ ಈ ಬದ್ರ್ ಯುದ್ಧವೇ ಹೇತುವಾಯಿತು... 

ಹಾಗಾಗಿಯೇ  ಇವತ್ತಿಗೂ ಇಸ್ಲಾಮಿನ ಮತಪಂಡಿತರು, ಪ್ರವಚನಕಾರರು ಈ 'ಬದ್ರ್ ಯುದ್ಧ' ದ ಬಗ್ಗೆ, ಪ್ರವಾದಿ ಮೊಹಮ್ಮದರ ಗುಂಪಿನ ಗೆಲುವಿನ ಬಗ್ಗೆಗಿನ ಕತೆಗಳನ್ನು, ಅತ್ಯಂತ ರಸವತ್ತಾಗಿ ವರ್ಣಿಸುತ್ತಾ ಪ್ರವಚನ ನೀಡುತ್ತಾರೆ... 

ಭಾರತ ವಿಭಜನೆಯಾಗಿ ಪಾಕಿಸ್ತಾನ ಹುಟ್ಟಿದಾವತ್ತಿನಿಂದಲೂ ಕಾಶ್ಮೀರ ಎಂಬುದು ಸಮಸ್ಯೆಯ ಕೂಪವಾಗಿಯೇ ಉಳಿಯಿತು... ಸ್ವತಹಾ ತಥಾ ಕಥಿತ ಕಾಶ್ಮೀರೀ ಪಂಡಿತ ನೆಹರೂ ಪ್ರಧಾನಿಯಾದರೂ ಕಾಶ್ಮೀರಕ್ಕೆ ಮತ್ತು ಕಾಶ್ಮೀರೀ ಜನರಿಗೆ ಆದದ್ದು ದ್ರೋಹವೆ.. ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಪಾಕಿಸ್ತಾನ ಅದೇನೇ ತಿಪ್ಪರಲಾಗ ಹಾಕಿದರೂ ಭಾರತೀಯ ಸೇನೆಯ ವೀರಯೋಧರು ಕಾಶ್ಮೀರವನ್ನು ಉಳಿಸಿಕೊಳ್ಳಲು ಸಫಲರಾದರು... ಅದೆಷ್ಟೇ ಪೆಟ್ಟು ತಿಂದರೂ, ಅದೆಷ್ಟು ಬಾರಿ ಸೋತರೂ ಪಾಕಿಸ್ತಾನಕ್ಕೆ ಬುದ್ಧಿ ಬರಲಿಲ್ಲ... ಹೇಗಾದರೂ ಮಾಡಿ ಕಾಶ್ಮೀರವನ್ನು ವಶಪಡಿಸಿಕೊಂಡು ಲಡಾಖ್ ಅನ್ನು ಕಾಶ್ಮೀರದಿಂದ ಪ್ರತ್ಯೇಕಿಸಲು... ಚೈನಾದ ಜೊತೆಗೆ ತನ್ನ ಗಡಿ ಪ್ರದೇಶವನ್ನು ವಿಸ್ತರಿಸಿಕೊಳ್ಳಲು ಪಾಕಿಸ್ತಾನ ಮಾತ್ರ ಸತತ ಪ್ರಯತ್ನ ಮಾಡುತ್ತಲೇ ಇತ್ತು.. ಹಾಗಾಗಿ ನೆರೆಕರೆಯ ಈ ಕಿರಿಕಿರಿ ಸ್ವಾತಂತ್ರ್ಯ ಬಂದು ಅದೆಷ್ಟು ದಶಕಗಳೇ ಸಂದರೂ ನಿಲ್ಲಲಿಲ್ಲ... 

ವಾಜಪೇಯಿ ಪ್ರಧಾನಿಯಾದ ಬಳಿಕ ಪಾಕಿಸ್ತಾನದ ಜೊತೆಗೆ ಸ್ನೇಹ ಸಂಬಂಧವನ್ನು ಸ್ಥಾಪಿಸಲು ಬಹಳ ಪ್ರಯತ್ನ ಪಟ್ಟರು... ಆದರೆ ಪಾಕಿಸ್ತಾನ ಮಾತ್ರ ತನ್ನ ಹುಟ್ಟುಗುಣದಂತೆ ಬಗೆದದ್ದು ವಿಶ್ವಾಸ ದ್ರೋಹ... ಇಸ್ಲಾಮಿಕ ಮತಾಂಧ ಮುಲ್ಲಾಗಳ ಕಪಿಮುಷ್ಟಿಯಲ್ಲಿರುವ ಅಲ್ಲಿನ ಸರಕಾರ ಮತ್ತು ಸೇನೆಗೆ ಯಾವಾಗಲೂ "ಗಜ್ವಾ ಎ  ಹಿಂದ್" ಎಂಬ ಪವಿತ್ರ ಯುದ್ಧದ್ದೇ ಹುಚ್ಚು... ಹೇಗಾದರೂ ಮಾಡಿ ಹಿಂದೂಸ್ತಾನದ ಮೇಲೆ ಯುದ್ಧ ಸಾರಿ ಗೆದ್ದು ಅದನ್ನು ಮುಸ್ಲಿಮ ರಾಷ್ಟ್ರವನ್ನಾಗಿ ಪರಿವರ್ತಿಸಬೇಕೆಂಬ ಹುಚ್ಚು ಕನಸು... ಹಾಗಾಗಿ ಮೊಟ್ಟಮೊದಲು ಕಾಶ್ಮೀರವನ್ನು ಕೈವಶ ಮಾಡಿಕೊಳ್ಳಲು ಅದು ಜಿಹಾದಿ ಹಾದಿಯ ಮೂಲಕ ಪ್ರಯತ್ನಿಸುತ್ತಲೇ ಇದೆ... 

ಇದರ ಭಾಗವಾಗಿಯೇ ಪಾಕಿಸ್ತಾನದ ಐಎಸ್ಐ ಮತ್ತು ಪಾಕಿಸ್ತಾನದ ಸೇನೆ ಜಂಟಿಯಾಗಿ ರೂಪಿಸಿದ ಸಂಚೇ .... "ಆಪರೇಷನ್ ಬದ್ರ್.." ಹೌದು ಆರನೆಯ ಶತಮಾನದಲ್ಲಿ ಪ್ರವಾದಿ ಮೊಹಮ್ಮದ್ ನಡೆಸಿದ್ದ ಇಸ್ಲಾಮಿನ ಮೊದಲ ಯುದ್ಧದ ಹೆಸರಿನಲ್ಲೇ ಪಾಕಿಸ್ತಾನದ ಸೈನ್ಯ ಈ ರೀತಿಯ ದುಸ್ಸಾಹಸಕ್ಕೆ ಕೈಹಾಕಿತು... ಕಾರ್ಗಿಲ್ ಶ್ರೇಣಿಯ ಹಿಮಪರ್ವತಗಳ ಮೇಲಿನ ಕಾವಲು ಕೇಂದ್ರಗಳನ್ನು ಅಲ್ಲಿನ ಭಯಂಕರ ಚಳಿಗಾಲದ ಸಮಯದಲ್ಲಿ ಭಾರತ ಮತ್ತು ಪಾಕಿಸ್ತಾನದ ಎರಡೂ ಸೈನ್ಯದ ಯೋಧರೂ ತೆರವು  ಮಾಡುವುದು ವಾಡಿಕೆ..  ಆ ಬಳಿಕ ಚಳಿಗಾಲ ಕೊನೆಗೊಂಡಾದ ಮೇಲೆ ಮತ್ತೆ ಪರ್ವತಗಳ ತುತ್ತ ತುದಿಯಲ್ಲಿನ ಈ  ದುರ್ಗಮ ಪ್ರದೇಶಗಳಲ್ಲಿನ ಕಾವಲು ಬಂಕರುಗಳಿಗೆ ತೆರಳಿ ಗಡಿ ಕಾಯುವುದನ್ನು ಎರಡೂ ಸೇನೆಯವರು ಪಾಲಿಸಿಕೊಂಡು ಬಂದಿದ್ದರು... ಆದರೆ "ಆಪರೇಷನ್ ಬದ್ರ್" ಎಂಬ ಪಾಕಿ ಸೇನೆಯ ಕುಟಿಲ ರಣನೀತಿಯ ಅನ್ವಯ ಚಳಿಗಾಲದ ಸಮಯದಲ್ಲಿ ಭಾರತೀಯ ಸೈನಿಕರು ತೆರವು ಗೊಳಿಸಿದ ಬಂಕರುಗಳನ್ನು ಕಳ್ಳತನದಿಂದ ವಶಪಡಿಸಿಕೊಳ್ಳುವುದು... ಮತ್ತು ಆ ಮೂಲಕ ಕಾಶ್ಮೀರವನ್ನು ಮತ್ತು ಲಡಾಖ ಪ್ರಾಂತ್ಯವನ್ನು ಪ್ರತ್ಯೇಕಗೊಳಿಸುವುದು ಅವರ ತಂತ್ರವಾಗಿತ್ತು... ಪ್ರವಾದಿ ಮೊಹಮ್ಮದ ತನ್ನ ಅತ್ಯಂತ ಸಣ್ಣ ಗುಂಪಿನೊಡನೆ ಬದ್ರ್ ಪ್ರದೇಶದ ಮರಳಿನ ಬೆಟ್ಟಗಳಲ್ಲಿ ಅಡಗಿ ಕುಳಿತು ಕೆಳಗಿನ ಕಣಿವೆಯಲ್ಲಿದ್ದ ಮೆಕ್ಕಾದ ವ್ಯಾಪಾರಿಗಳ ಮೇಲೆ ದಾಳಿ ನಡೆಸಿ ಗೆದ್ದದ್ದನ್ನೇ ಸ್ಪೂರ್ತಿಯಾಗಿರಿಸಿಕೊಂಡು ಪಾಕಿ ಮುಲ್ಲಾಗಳ ಬಿಗಿಹಿಡಿತದಲ್ಲಿರುವ ಐಎಸ್ಐ ಮತ್ತು ಅಲ್ಲಿನ ಮತಾಂಧ ಸೈನ್ಯ "ಆಪರೇಷನ್ ಬದ್ರ್" ಅನ್ನು ಕೂಡಾ ರೂಪಿಸಿತು... 

ಆದರೆ ಆರನೆಯ ಶತಮಾನದಲ್ಲಿ ಪ್ರವಾದಿ ಮೊಹಮ್ಮದರಿಗೆ ಬದ್ರ್ ಯುದ್ಧದಲ್ಲಿ ದೊರಕಿದಂಥಾ ಗೆಲುವು ಈ ಪಾಪಿ ಪಾಕಿಸ್ತಾನೀ ಸೈನಿಕರಿಗೆ ಸಿಗಲೇ ಇಲ್ಲ... ಭಾರತೀಯ ಸೈನ್ಯದ ಪರಾಕ್ರಮದ ಎದುರು, ಅದು ರೂಪಿಸಿದ "ಆಪರೇಷನ್ ವಿಜಯ್" ಎಂಬ ಅತ್ಯಂತ ಕರಾರುವಾಕ್ಕಾದ ಯುದ್ಧ ವ್ಯೂಹದೆದುರು "ಆಪರೇಷನ್ ಬದ್ರ್" ಎಂಬ ಮತಾಂಧರ ಕುಟಿಲ ತಂತ್ರ ಸಂಪೂರ್ಣ ವಿಫಲವಾಯಿತು...  ಭಾರತೀಯ ಭೂಸೇನೆಗೆ ಹೆಗೆಲೆಣೆಯಾಗಿ ಕದನ ತಂತ್ರ ರೂಪಿಸಿದ ಭಾರತೀಯ ವಾಯುಸೇನೆ "ಆಪರೇಷನ್ ಸಫೇದ್ ಸಾಗರ್" ಅನ್ನೂ, ಭಾರತೀಯ ನೌಕಾ ಸೇನೆ "ಆಪರೇಷನ್ ತಲ್ವಾರ್" ಅನ್ನೂ ಜಾರಿಗೊಳಿಸಿ ಪಾಪಿ ಪಾಕಿಸ್ತಾನಕ್ಕೆ ನೀರುಣಿಸಿತು... ಭಾರತೀಯ ವೀರ ಯೋಧರು ಕೆಚ್ಚೆದೆಯಿಂದ ಯುದ್ಧ ಮಾಡಿ ಗಡಿ ನುಗ್ಗಿ ಬಂದಿದ್ದ ಪಾಕಿಗಳನ್ನು ನಿರ್ದಯವಾಗಿ ಸಂಹರಿಸಿದರು... "ಆಪರೇಷನ್ ವಿಜಯ್" ಹೆಸರಿಗೆ ತಕ್ಕಂತೆ ಭಾರತೀಯ ಸೇನೆಗೆ ಅಮೋಘ ವಿಜಯವನ್ನು ತಂದುಕೊಟ್ಟಿತು... ಇಸ್ಲಾಮಿಕ್ ಜಿಹಾದಿನಿಂದ ಪ್ರೇರಿತಗೊಂಡಿದ್ದ ಪಾಕಿ ಸೇನೆಯ "ಆಪರೇಷನ್ ಬದ್ರ್" ದಯನೀಯವಾಗಿ ವಿಫಲವಾಯಿತು... 

ಇವತ್ತಿನ ದಿನ... ಅಂದರೆ ಸರಿಯಾಗಿ ಇಪ್ಪತ್ತೊಂದು ವರ್ಷಗಳ ಹಿಂದೆ ೧೯೯೯ರ ಜುಲೈ ೨೬ನೆಯ ತಾರೀಕು,  ಭಾರತೀಯ ಭಾರತೀಯ ಸೇನೆ ಅಧಿಕೃತವಾಗಿ ಕಾರ್ಗಿಲ್ ಯುದ್ಧದಲ್ಲಿ ತನ್ನ ಅಮೋಘ ವಿಜಯವನ್ನು ಘೋಷಿಸಿತು... ಪಾಪಿ ಪಾಕಿಸ್ತಾನದ "ಆಪರೇಷನ್ ಬದ್ರ್" ಛಿಧ್ರ ಛಿಧ್ರವಾಯಿತು... 

ಅಂದಿನ ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿ ಪಾಕಿಸ್ತಾನದ ಜಿಹಾದಿ ಸೇನೆಯನ್ನು ಸೋಲಿಸಿದ ನಮ್ಮ ಸೇನೆಯ ಐನೂರಾ ಇಪ್ಪತ್ತೇಳು ವೀರಯೋಧರಿಗೆ ಇವತ್ತು ಗೌರವ ಸಲ್ಲಿಸ ಬೇಕಾದದ್ದು ನಮ್ಮೆಲ್ಲರ ಕರ್ತವ್ಯ... 

ಜೈಹಿಂದ್... 

#ಅನಂತಕುಮಾರಹೆಗಡೆ

Related posts