ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು!
ನಮಸ್ತೇಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ
ಶಂಖಚಕ್ರಗಧಾಹಸ್ತೇ ಮಹಾಲಕ್ಷ್ಮೀ ನಮೋಸ್ತುತೇ
ಆಕೆ ಮಹಾಮಾತೆ... ಅತುಲ ವರದಾಯಿನಿ... ಸೌಖ್ಯ ಪ್ರದಾಯಿನಿ... ಶ್ರಾವಣ ಮಾಸದ ಪೂರ್ಣಿಮೆಯ ಪೂರ್ವದ ಶುಕ್ರವಾರ ಆಕೆಯನ್ನು ಬೇಡಿದ ವರ ನೀಡುವ ಮಹಾಲಕ್ಷ್ಮಿಯ ರೂಪದಲ್ಲಿ ಆರಾಧಿಸುವುದು ಹಿಂದೂ ಧರ್ಮದ ರೂಢಿಗತ ಆಚಾರ. 'ಲಕ್ಷ್ಮಿ' ಅಂದರೆ ನಮ್ಮೆಲ್ಲರ ಲಕ್ಷ್ಯಗಳನ್ನು, ಗುರಿಗಳನ್ನು ಈಡೇರಿಸುವವಳು. ಅವಳ ಆರಾಧನೆಯಿಂದ ನಮ್ಮ ಗುರಿಗಳು, ಆಕಾಂಕ್ಷೆಗಳು ಈಡೇರುತ್ತವೆ ಎಂಬ ನಂಬಿಕೆಯಿಂದಲೇ ನಾವು 'ವರಮಹಾಲಕ್ಷ್ಮೀ ಹಬ್ಬ' ವನ್ನು ಆಚರಿಸುತ್ತೇವೆ...
ಭಯದ ಅಂಧಕಾರ ಸರಿದು ಹೊಸ ಭರವಸೆಯ ಬೆಳಕು ಮೂಡುವಂತಾಗಲಿ... ಈ ಬಾರಿ ವರಮಾಹಾಲಕ್ಷ್ಮಿ ಸಮಸ್ತ ಲೋಕಕ್ಕೂ ಅರೋಗ್ಯ ಭಾಗ್ಯವನ್ನು ಕರುಣಿಸಲಿ... ಸಂಕಷ್ಟಗಳನ್ನು ನಿವಾರಿಸಲಿ... ಅಂತ ಹಾರೈಸುತ್ತಾ ನಾಡಿನ ಸಮಸ್ತ ಜನತೆಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳನ್ನು ಸಲ್ಲಿಸುತ್ತೇನೆ...
#ಅನಂತಕುಮಾರಹೆಗಡೆ
#ವರಮಹಾಲಕ್ಷ್ಮಿಹಬ್ಬ