Infinite Thoughts

Thoughts beyond imagination

ಮಂದಿರವಲ್ಲೇ ಕಟ್ಟುವೆವು ಎಂಬ ಹಿಂದೂ ಹೃದಯಾಂತರಾಳದ ಘೋಷಣೆ ನನಸಾಯಿತು...

ಮಂದಿರವಲ್ಲೇ ಕಟ್ಟುವೆವು ಎಂಬ ಹಿಂದೂ ಹೃದಯಾಂತರಾಳದ ಘೋಷಣೆ ನನಸಾಯಿತು... 

ಆತನ ಜನ್ಮಭೂಮಿಯಲ್ಲೇ ಶ್ರೀರಾಮಚಂದ್ರನ ಭವ್ಯ ದೇಗುಲದ ನಿರ್ಮಾಣ ಶುರುವಾಯಿತು...  

ಶತಶತಮಾನಗಳಿಂದ ಧರ್ಮಕ್ಕಂಟಿದ ಕೊಳೆ ಕೊನೆಗೂ ಕಳೆದು ಮನಸು ನಿರಾಳವಾಯಿತು... 

ಕೈಯಲ್ಲಿ ಬಿಚ್ಚುಗತ್ತಿ ಹಿಡಿದುಕೊಂಡೇ, ಕಣ್ಣಿಗೆ ಕಂಡದ್ದನ್ನೆಲ್ಲಾ ಕೊಚ್ಚುತ್ತಲೇ ಬಂದ ಶಾಂತಿ ಧರ್ಮದ ದೂತರು ಆರನೆಯ ಶತಮಾನದ ಅರೇಬಿಯಾದಿಂದ ಹೊರಟ ದಾರಿಗುಂಟ ತಮ್ಮ ವಿಧ್ವಂಸಕ್ಕೆಲ್ಲಾ  ಲೆಕ್ಕವಿಲ್ಲದಷ್ಟು ಸಾಕ್ಷಿಗಳನ್ನು ಬಿಟ್ಟಿದ್ದಾರೆ... ತಮ್ಮ ದೇವರನ್ನು ನಂಬದ , ತಮ್ಮ ಮತವನ್ನು ಒಪ್ಪದ, ತಮ್ಮ ನಂಬುಗೆಯನ್ನು ಸ್ವೀಕರಿಸದ, ತಮ್ಮನ್ನು ಧಿಕ್ಕರಿಸಿದ  ಎಲ್ಲರನ್ನೂ 'ಕಾಫಿರ' ಅನ್ನೋ ಹಣೆಪಟ್ಟಿ ಅಂಟಿಸಿ ಸಂಹರಿಸುತ್ತಾ ಬಂದ ಇವರು ಯುದ್ಧ ಗೆದ್ದದ್ದೆಲ್ಲಾ ಧರ್ಮದ ಆಧಾರದ ಮೇಲೆಯೇ... ಹಾಗಾಗಿ ಅವರ ಎಲ್ಲ ದಾಳಿಗಳೂ  ಧರ್ಮ ಸಮ್ಮತ ಜಿಹಾದ್ ಯುದ್ಧಗಳೇ... ಈ ದಾಳಿಕೋರರ ಉದ್ದೇಶ ಕೇವಲ ಯುದ್ಧ ಗೆದ್ದು ರಾಜ್ಯ, ದೇಶ ಗೆಲ್ಲುವುದಾಗಿರಲಿಲ್ಲ, ಭೂಪ್ರದೇಶ ವಶಪಡಿಸಿಕೊಂಡು ಕೇವಲ ಅಧಿಕಾರ ಪಡೆಯುವುದು ಕೂಡಾ ಆಗಿರಲಿಲ್ಲ... ಬದಲಿಗೆ ಯುದ್ಧ ಗೆಲ್ಲುವ ಮೂಲ ಗುರಿಯೇ ಮತ ಸ್ಥಾಪನೆ ಮತ್ತು ವಿಸ್ತರಣೆ...!ಆದ್ದರಿಂದಲೇ ಇತಿಹಾಸದಲ್ಲಿನ ಬೇರೆಲ್ಲ ಯುದ್ಧಗಳಿಗಿಂತ, ದಾಳಿ - ದಂಡಯಾತ್ರೆಗಳಿಗಿಂತ,  ಇಸ್ಲಾಮಿನ ಈ ಆಕ್ರಮಣದೊಳಗೆ ರಾಜಕೀಯಕ್ಕಿಂತ ಧಾರ್ಮಿಕ ಉದ್ದೇಶಗಳೇ ಢಾಳಾಗಿ ರಾಚುತ್ತಿತ್ತು...

ತಾವು ದಾಳಿ ಮಾಡಿ ವಶಪಡಿಸಿಕೊಂಡ ಎಲ್ಲ ಭೂಪ್ರದೇಶಗಳಲ್ಲೂ ಅಸ್ತಿತ್ವದಲ್ಲಿದ್ದ ಬಹುಮುಖ್ಯ ಆರಾಧನಾಲಯಗಳನ್ನೆಲ್ಲ ಧ್ವಂಸಗೊಳಿಸಿ, ಅದೇ ಜಾಗದಲ್ಲಿ ತಮ್ಮ ಶ್ರದ್ಧಾಕೇಂದ್ರಗಳನ್ನು , ಪ್ರಾರ್ಥನಾ ಮಂದಿರಗಳನ್ನು ಸ್ಥಾಪಿಸುವುದು ಅವರ ಯುದ್ಧತಂತ್ರದ ಭಾಗವಾಗಿತ್ತು. ಬಹುದೇವಾರಾಧನೆ, ಮೂರ್ತಿಪೂಜೆಯನ್ನು ಖಂಡತುಂಡವಾಗಿ ವಿರೋಧಿಸುವ ತಮ್ಮ ಧರ್ಮ ಗ್ರಂಥದ ಆಸರೆ ಪಡೆದುಕೊಂಡೇ ದಾಳಿಗಳನ್ನು ಸಂಘಟಿಸಲಾಗುತ್ತಿತ್ತು ಮತ್ತು ಕಾಫಿರ ಆರಾಧನಾಲಯಗಳನ್ನು ನಿರ್ನಾಮ ಗೊಳಿಸಲಾಗುತ್ತಿತ್ತು. ಹಾಗಾಗಿಯೇ ಅರೇಬಿಯಾದ ಅಸಂಖ್ಯಾತ ಪಂಗಡಗಳು ಶತಮಾನಗಳಿಂದಲೂ ಆರಾಧಿಸುತ್ತ ಬಂದಿದ್ದ ದೇವಾನುದೇವತೆಗಳ ವಿಗ್ರಹಗಳನ್ನು ಕತ್ತರಿಸುವ, ದೇವಾಲಯಗಳನ್ನು ಕೆಡವುವ, ಮತ್ತು ಆ ಜಾಗದಲ್ಲಿ ತಮ್ಮ ಮಸೀದಿಗಳನ್ನು ನಿರ್ಮಿಸುವ, ತಮ್ಮ ಮತವನ್ನು ಸ್ಥಾಪಿಸುವ ಕೆಲಸವನ್ನು ಇಸ್ಲಾಮ್ ಪ್ರಾರಂಭಿಕ ಹಂತದಲ್ಲೇ ಮಾಡಿಮುಗಿಸಿತು. ಇಸ್ಲಾಮಿಕ್ ಆಕ್ರಮಣದ ಮೊಟ್ಟಮೊದಲ ಗುರಿಯೇ  ಮೆಕ್ಕಾ ಆಗಿತ್ತು. ಅಲ್ಲಿನ ಪವಿತ್ರ ಕಾಅಬಾ ದ ಒಳಗಿದ್ದ ಸುಮಾರು ಮುನ್ನೂರಾ ಅರವತ್ತಕ್ಕೂ ಹೆಚ್ಚಿನ ದೇವತಾ ವಿಗ್ರಹಗಳು ಇಸ್ಲಾಮಿಕ್ ದಾಳಿಯ ಮೊದಲ ಬಲಿಗಳಾದುವು.  ಅಲ್ಲಿಂದ ಮೊದಲುಗೊಂಡ ವಿಧ್ವಂಸ ಇಂದಿಗೂ ನಿಂತಿಲ್ಲ... ಅರೇಬಿಯಾದಿಂದ ಹೊರಗೆ ಹೊರಟ ಇಸ್ಲಾಮ್ ತಾನು ಕಾಲಿಟ್ಟ ಕಡೆಯೆಲ್ಲಾ ಮಾಡಿದ್ದೂ ವಿಗ್ರಹ ಭಂಜನೆ ಮತ್ತು ದೇವಾಲಯ, ಆರಾಧನಾಲಯಗಳ ಧ್ವಂಸ.  

ಇಸ್ಲಾಮ್ ಭಾರತದ ಭೂಪ್ರದೇಶಕ್ಕೆ ಕಾಲಿಟ್ಟಾಗಲೇ ದೇವಾಲಯಗಳ ವಿಧ್ವಂಸ ಶುರುವಾಯಿತು. ಕ್ರಿ.ಶ. ೭೦೮ ನೇ ಇಸವಿಯಲ್ಲಿ ಸಿಂಧ್ ಪ್ರಾಂತ್ಯವನ್ನು ಆಕ್ರಮಿಸಿದ ಮೊಹಮ್ಮದ ಖಾಸಿಮನಿಂದ ಹಿಂದೂ ಬೌದ್ಧ ಜೈನ ದೇವಾಲಯಗಳ ಮೇಲೆ ಇಸ್ಲಾಮಿನ ಆಕ್ರಮಣ ಶುರುವಾಯಿತು. ದೇವಾಲಯಗಳ ಜೊತೆಗೆಯೇ ಇಸ್ಲಾಮಿನ ವ್ಯವಸ್ಥಿತ ಆಕ್ರಮಣ ಭಾರತದ ಶೈಕ್ಷಣಿಕ ಸಂಸ್ಥೆಗಳ ಮೇಲೆ, ಅಲ್ಲಿನ ಶಿಕ್ಷಕ, ಪ್ರಾಚಾರ್ಯರ ಮೇಲೆ, ವಿದ್ಯಾರ್ಥಿಗಳ ಮೇಲೆ, ಅಗಾಧ ಗ್ರಂಥ ಭಂಡಾರಗಳ ಮೇಲೆ ಕೂಡಾ ಶುರುವಾಯಿತು. ಧರ್ಮ, ಸಂಸ್ಕೃತಿ, ಶಿಕ್ಷಣಗಳ ಮೇಲಿನ ವ್ಯವಸ್ಥಿತ ದಾಳಿ, ಸೋತು ಹೋದ ರಾಜ್ಯಗಳ ಸೈನಿಕರ ಸಂಹಾರ, ಹೆಂಗಸರು ಮಕ್ಕಳನ್ನು ವಶಪಡಿಸಿಕೊಂಡು ಗುಲಾಮರನ್ನಾಗಿ ಮಾಡುವ ಹುನ್ನಾರ, ಜೊತೆಗೆ ಬಲವಂತದ ಸಾಮೂಹಿಕ ಮತಾಂತರ ಇವೆಲ್ಲವೂ ಎಗ್ಗು ಸಿಗ್ಗಿಲದೆ ನಡೆಯಿತು... ಮತ್ತು ಇವೆಲ್ಲವನ್ನೂ ವಿವರವಾಗಿ ಮುಸ್ಲಿಂ ಇತಿಹಾಸಕಾರರೇ ತಮ್ಮ ಪುಸ್ತಕಗಳಲ್ಲಿ ಅತ್ಯಂತ ವರ್ಣರಂಜಿತವಾಗಿ ದಾಖಲಿಸಿದ್ದಾರೆ ಕೂಡ.  ಮೊಹಮ್ಮದ ಖಾಸಿಮ ಸಿಂಧ್ ಪ್ರಾಂತ್ಯದ ಮೇಲೆ ನಡೆಸಿದ ಭೀಕರ ದಾಳಿ ಮತ್ತು ಭಯಾನಕ ವಿಧ್ವಂಸವನ್ನು  ಫತೇಹ್ ನಾಮಾ ಸಿಂಧ್ ಯಾನೆ ಚಾಚ್ ನಾಮಾ, ತಾರೀಖ್ ಅಲ್ ಹಿಂದ್ ವಾ ಸ್ಸಿಂದ್,  ಮುಂತಾದ ಮುಸ್ಲಿಮರ ಪುಸ್ತಕಗಳಲ್ಲೇ ದಾಖಲಿಸಲಾಗಿದೆ... ಹೀಗಾಗಿ ಇಸ್ಲಾಮ್ ಎಂಬ ಶಾಂತಿಯ ಧರ್ಮದ  ಹೂರಣವನ್ನು ಇಸ್ಲಾಮಿಕ್ ಲೇಖಕರೇ ಬಟಾಬಯಲು ಮಾಡಿದ್ದಾರೆ... ಮೊಹಮ್ಮದ್ ಖಾಸಿಮ್ ಹಿಂದೂಸ್ತಾನದ ಮೇಲೆ ಮಾಡಿದ ಬರ್ಬರ ದಾಳಿಯ ಈ ವಿವರಗಳೇ ಇವತ್ತು ಪಾಕಿಸ್ತಾನದ ಮಕ್ಕಳಿಗೆ ಇತಿಹಾಸದ ಪಾಠಗಳಾಗಿವೆ..! 

ಹಿಂದೂ ಧರ್ಮದ ಪ್ರಮುಖ ಕೇಂದ್ರಗಳನ್ನೇ ಗುರಿಯಾಗಿಸಿಕೊಂಡ ಇಸ್ಲಾಮ್ ದಾಳಿಕೋರರು, ಸಿಂಧ್ ಪ್ರಾಂತ್ಯದ ಮಾರ್ತಾಂಡ ಸೂರ್ಯ ಮಂದಿರ, ಕಾಶ್ಮೀರದ ಶಾರದಾ ಪೀಠ ದಿಂದ ಹಿಡಿದು ಮಥುರಾ, ಕಾಶಿ, ಅಯೋಧ್ಯೆ ಹೀಗೆ ಎಲ್ಲ ಪ್ರಮುಖ ಧಾರ್ಮಿಕ ಕೇಂದ್ರಗಳನ್ನೂ ಪುಡಿಗಟ್ಟಿದರು...ಇದೆಲ್ಲವನ್ನೂ ಮುಸ್ಲಿಮ ಇತಿಹಾಸಕಾರರೇ ತಮ್ಮ ಪುಸ್ತಕಗಳಲ್ಲಿ ಸವಿವರವಾಗಿ ದಾಖಲಿಸಿದ್ದಾರೆ.  ಆದರೆ ದುರಾದೃಷ್ಟವೆಂದರೆ  ಈ ಎಲ್ಲಾ ದೌರ್ಜನ್ಯಗಳನ್ನು ವಸ್ತುನಿಷ್ಠವಾಗಿ ದಾಖಲಿಸಿ ಅರಿವು ಮೂಡಿಸಬೇಕಾದ ನಮ್ಮ ಸ್ವತಂತ್ರ ಭಾರತದ ಇತಿಹಾಸಕಾರರು ಕಮ್ಯುನಿಸಮ್ಮಿನ ಅಫೀಮಿನ ಅಮಲಿನಲ್ಲಿ 

 ಇಸ್ಲಾಮಿಕ್ ಆಕ್ರಮಣದ  ಕ್ರೌರ್ಯ ಹಿಂಸೆಯನ್ನೆಲ್ಲ ಬದಿಗಿಟ್ಟು, ಇಸ್ಲಾಮ್ ಶಾಂತಿಯ ಧರ್ಮ, ಇಸ್ಲಾಮಿಕ್ ದಾಳಿಕೋರರು ಭಾರತವನ್ನು ವಶಪಡಿಸಿಕೊಂಡ ಕಾಲವೇ ಭಾರತದ ಅತ್ಯಂತ ಉಛ್ರಾಯ ಕಾಲ ಅಂತ ಬಿಂಬಿಸಲು ಹೆಣಗಿದರು. ಸೂಫೀ ಮುಸ್ಲಿಮರಿಗೆ ಸಂತರ ಪಟ್ಟ ಕಟ್ಟಿ ಕೂರಿಸಿದರು.. ಭಾರತೀಯ ಮೂಲದ ಸಂಗೀತವನ್ನೇ ಸೂಫೀ ಸಂಗೀತ ಅಂತ ಕುಣಿದರು... ಆದರೆ ಭಾರತೀಯರ ಆತ್ಮಶಕ್ತಿಯ ಪ್ರತೀಕದಂತಿರುವ ಶ್ರೀರಾಮನ ಜನ್ಮಭೂಮಿಯ ಪವಿತ್ರ ಮಣ್ಣಿನಲ್ಲಿ ವಿರಾಜಮಾನವಾಗಿದ್ದ ಭವ್ಯ ಶ್ರೀರಾಮ ದೇಗುಲವನ್ನು ಕೆಡವಿ ಹಾಕಿ ಅಲ್ಲಿ ಬಾಬರೀ ಮಸೀದಿ ನಿರ್ಮಿಸಲು ಕಾರಣವಾದದ್ದೇ ಅಯೋಧ್ಯೆಯಲ್ಲಿ ಸೂಫೀ ಫಕೀರರ ಸೋಗಿನಲ್ಲಿದ್ದ  ಇಸ್ಲಾಮಿಕ್ ಮತಾಂಧರು ಎಂಬ ಸತ್ಯವನ್ನು ಮರೆಮಾಚಿದರು.  .   

ಹೌದು... ಇದೇ  ಕಠೋರ ಸತ್ಯ... ಕಾಂಗಿಗಳು ಮತ್ತು ಕಮ್ಯುನಿಸ್ಟರಿಂದ ಸಂತರೆಂದು ಕರೆಸಿಕೊಂಡ ಸೂಫೀ ಮುಲ್ಲಾಗಳಿಂದಲೇ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿದ್ದ ಭವ್ಯ ಶ್ರೀರಾಮ ಮಂದಿರ ನಿರ್ನಾಮವಾದದ್ದು.... ಮತ್ತು ಹಿಂದೂಗಳ ಪಾಲಿನ ಪರಮ  ಕಳಂಕದಂತೆ ಬಾಬರೀ ಮಸೀದಿಯ ನಿರ್ಮಾಣವಾದದ್ದು..! 

ಬಾಬರ್ ಭಾರತದ ಮಣ್ಣಿಗೆ ಕಾಲಿಟ್ಟದ್ದೇ ಸೂಫೀ ಮುಲ್ಲನ ವೇಷದಲ್ಲಿ..! ಈ ಸೂಫೀ ಪ್ರಚಾರಕರಿಗೆ ಇಸ್ಲಾಮಿನಲ್ಲಿ 'ಖಲಂದರ್' ಅಂತನ್ನಲಾಗುತ್ತದೆ. ಭಾರತಕ್ಕೆ ದಂಡೆತ್ತಿ ಬರುವ ಮೊದಲು ಬಾಬರ ಈ 'ಖಲಂದರ್' ವೇಷದಲ್ಲಿಯೇ ಗುಪ್ತವಾಗಿ ಭಾರತಕ್ಕೆ ಬಂದಿದ್ದ..! ಭಾರತದ ಮೇಲೆ ಆಕ್ರಮಣ ಮಾಡುವ ಮೊದಲು ಗೂಢಚಾರನಾಗಿ ಭಾರತಕ್ಕೆ ಬಂದಿದ್ದ ಬಾಬರ್ 'ಖಲಂದರ್' ವೇಷ ತೊಟ್ಟಿದ್ದ..! ಹಾಗೆ ಬಂದವನು ಶಾಹ್ ಜಲಾಲ್ ಮತ್ತು ಸಯ್ಯಿದ್ ಮೂಸಾ ಆಶಿಖಾನ್ ಎಂಬಿಬ್ಬರು ಸೂಫೀ ಗುರುಗಳನ್ನು ಭೇಟಿ ಮಾಡುತ್ತಾನೆ. 'ಖಲಂದರ್' ವೇಷದಲ್ಲಿ ಬಂದಾತ ಬಾಬರ್ ಎಂಬುದನ್ನರಿತ ಈ ಸೂಫೀಗಳು, ಆತನನ್ನು ಭಾರತಕ್ಕೆ ದಂಡೆತ್ತಿ ಬರಲು ಪ್ರೇರೇಪಿಸುತ್ತಾರೆ... ಭಾರತದ ಮೇಲೆ ಆಕ್ರಮಣ ಮಾಡಿ ವಶಪಡಿಸಿಕೊಳ್ಳುವುದಾಗಿ  ಶಾಹ್ ಜಲಾಲ್ ಮತ್ತು ಸಯ್ಯಿದ್ ಮೂಸಾ ಆಶಿಖಾನ್ ಗೆ ವಾಗ್ದಾನ ಮಾಡಿದ ಬಾಬರ್ ದೆಹಲಿ ಗದ್ದುಗೆಯನ್ನು ವಶಪಡಿಸಿಕೊಂಡ ಮೇಲೆ ಶ್ರೀರಾಮ ಜನ್ಮಭೂಮಿಯಲ್ಲಿದ್ದ ಭವ್ಯ ದೇಗುಲವನ್ನು ನಿರ್ನಾಮ ಮಾಡಿ ಅಲ್ಲೊಂದು ಮಸೀದಿ ನಿರ್ಮಿಸುವುದಾಗಿಯೂ ಪ್ರಮಾಣ ಮಾಡುತ್ತಾನೆ... ಈ ಎಲ್ಲಾವೂ ವಿವರಗಳನ್ನು  ಸಯ್ಯಿದ್ ಮೂಸಾ ಆಶಿಖಾನ್ ನ ಶಿಷ್ಯ ಮೌಲ್ವಿ ಅಬ್ದುಲ್ ಕರೀಂ ಎಂಬಾತ ಪರ್ಷಿಯನ್ ಭಾಷೆಯಲ್ಲಿ ಬರೆದ ಗ್ರಂಥ ದಲ್ಲಿ ದಾಖಲಿಸಿದ್ದಾನೆ... ಈತನ ಮೊಮ್ಮಗ ಮೌಲ್ವಿ ಅಬ್ದುಲ್ ಗಫಾರ್ ಇದನ್ನು ಉರ್ದುವಿಗೆ ತರ್ಜುಮೆ ಮಾಡಿ ಪ್ರಕಟಿಸುತ್ತಾನೆ. ೧೯೩೨ ಮರು ಮುದ್ರಣವಾದ ತಾರೀಖ್ ಈ ದಾವೂದಿ ಎಂಬ ಈ  ಪುಸ್ತಕದಲ್ಲಿ ಬಾಬರ್ ರಾಮ ಜನ್ಮ ಭೂಮಿಯಲ್ಲಿದ್ದ ರಾಮಲಲ್ಲಾನ ಭವ್ಯ ಮಂದಿರವನ್ನು ನೆಲಸಮ ಮಾಡಿ ಮಸೀದಿ ನಿರ್ಮಿಸುವ ಮಾತು ಕೊಟ್ಟದ್ದನ್ನು ವಿವರಿಸಲಾಗಿದೆ.   ಶಾಹ್ ಜಲಾಲ್ ಮತ್ತು ಸಯ್ಯಿದ್ ಮೂಸಾ ಆಶಿಖಾನ್ ಬಾಬರ್ ಬಳಿ ಜನ್ಮಭೂಮಿಯಲ್ಲಿದ್ದ ಸೀತಾ ರಸೋಯಿಯ ಸ್ಥಳದಲ್ಲೇ ಮಸೀದಿ ನಿರ್ಮಿಸಿದರೆ ತಾವು ಬಾಬರನನ್ನು ಆಶೀರ್ವದಿಸುವುದಾಗಿ ಹೇಳುತ್ತಾರೆ, ಮತ್ತು ಅದಕ್ಕೊಪ್ಪಿದ ಬಾಬರ್ ಅದೇ ಪ್ರಕಾರ ಬಾಬರೀ ಮಸೀದಿ ನಿರ್ಮಾಣ ಮಾಡಿದ ಅಂತ   ತಾರೀಖ್ ಇ  ದಾವೂದಿ ಪುಸ್ತಕ ನಮೂದಿಸುತ್ತದೆ...   ಅಷ್ಟೇ ಅಲ್ಲ , ಈ ಪುಸ್ತಕದಲ್ಲಿದ್ದ ಮಾಹಿತಿಗೆ ಪೂರಕವಾಗಿಯೇ ಬಾಬರಿ ಮಸೀದಿಯಲ್ಲಿದ್ದ ಶಾಸನವೊಂದರಲ್ಲಿ ಬಾಬರನನ್ನು "ಬಾಬರ್ ಖಲಂದರ್' ಅಂತಲೇ ನಮೂದಿಸಲಾಗಿದೆ. ಅದಲ್ಲದೆ ಧ್ವಂಸಗೊಂಡ  ಬಾಬರೀ ಮಸೀದಿ ಪಕ್ಕದಲ್ಲೇ ಇದ್ದ  ಸಯ್ಯಿದ್ ಮೂಸಾ ಆಶಿಖಾನ್ ನ ಗೋರಿಯಲ್ಲಿದ್ದ ಎರಡು ಕಪ್ಪು ಬಣ್ಣದ ಅಗ್ನಿಶಿಲೆಯ ಬೋದಿಗೆ ಕಂಭಗಳು ಮತ್ತು ಬಾಬರೀ ಮಸೀದಿಯಲ್ಲಿದ್ದ ಅದೇ ಮಾದರಿಯ ಬೋದಿಗೆ ಕಂಭಗಳು ಮೂಲ ರಾಮಲಲ್ಲಾ ದೇವಾಲಯದ್ದೇ ಎಂಬುದು ಕೂಡಾ ಕುತೂಹಲಕಾರಿ..!    

ಭಾರತೀಯ ಹೆಸರುಗಳನ್ನು  ಉಚ್ಛರಿಸಲು ನಾಲಗೆ ಹೊರಳದ ಪರಕೀಯ ಮುಸ್ಲಿಂ ಆಕ್ರಮಣಕಾರರು ಅಯೋಧ್ಯೆಯನ್ನು ಅವಧ್ ಅಂತ ಕರೆದು ಅಪಭ್ರಂಶಗೊಳಿಸಿದರು. ೧೮೧೩ ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯಿಂದ ನಿಯೋಜಿಸಲ್ಪಟ್ಟ ಫ್ರಾಂಸಿಸ್ ಬುಖಾನನ್ ಎಂಬಾತ ಬಾಬರೀ ಮಸೀದಿಯ ಗೋಡೆಯಲ್ಲಿದ್ದ ಒಂದು ಪರ್ಷಿಯನ್ ಶಾಸನವನ್ನು ಉಲ್ಲೇಖಿಸಿ ಈ ಮಸೀದಿಯನ್ನು ಬಾಬರ್ ತನ್ನ ಸೇನೆಯ ದಂಡನಾಯಕ ಮೀರ್ ಬಾಖಿ ಕೈಯಲ್ಲಿ ಶ್ರೀರಾಮ ಮಂದಿರವನ್ನು ಧ್ವಂಸಗೊಳಿಸಿ ಅಲ್ಲಿ ಮಸೀದಿ ನಿರ್ಮಿಸಿದ ಎಂದು ಬರೆದಿರುವ ಬಗ್ಗೆ ಪ್ರಸ್ತಾಪಿಸುತ್ತಾನೆ. 

ಅದಾದ ಬಳಿಕ ಬಾಬರೀ ಮಸೀದಿಯ ಖತೀಬನಾಗಿದ್ದ ಮುಹಮ್ಮದ್ ಅಸಘರ್ ೧೮೫೮ ರಲ್ಲಿ ಫೈಝಬಾದ್ ನ ಬ್ರಿಟಿಷ್ ಜಿಲ್ಲಾಧಿಕಾರಿಯ ಬಳಿ ಒಂದು ದೂರು ಸಲ್ಲಿಸಿ ಹಿಂದೂಗಳು ಈ ಮಸೀದಿಯಲ್ಲಿ ಪೂಜೆ ಮಾಡುವುದನ್ನು ನಿಷೇಧಿಸಬೇಕೆಂದು ಅಹವಾಲು ಮಂಡಿಸುತ್ತಾನೆ... ಆ ಅರ್ಜಿಯಲ್ಲಿ ಆ ಖತೀಬ ಸ್ಪಷ್ಟವಾಗಿ ಇದನ್ನು ' ಮಸ್ಜಿದ್ ಇ  ಜನ್ಮಸ್ಥಾನ್ ' ಅಂತಲೇ ಉಲ್ಲೇಖಿಸುತ್ತಾನೆ. ಅಷ್ಟೇ ಅಲ್ಲ " ಮಖಾಮ್ ಜನ್ಮಸ್ಥಾನ್ ಕಾ ಸದ್- ಹಬರಸ್ ಸೇ ಪರೇಶಾನ್ ಪಡಾ ರಹತಾ ಥಾ... ಅಹ್ಲ್ ಇ ಹನೂದ್ ಪೂಜಾ ಕರ್ತೇ ಥೇ.." ಅಂತ ನಮೂದಿಸಿ ಹಿಂದೂಗಳು ಅಲ್ಲಿ ಪೂಜೆ ನಿರ್ವಹಿಸುತ್ತಿದ್ದರು ಅಂತ ಹೇಳುತ್ತಾನೆ... 

೧೮೫೫ನೇ ಇಸವಿಯಲ್ಲಿ ವಾಜಿದ್ ಅಲಿ ಶಾಹ್ ಆಡಳಿತದ ಕಾಲದಲ್ಲಿ ಅಮೀರ್ ಅಲಿ ಅಮೇಥ್ವೀ ಎಂಬಾತ ಬಾಬರೀ ಮಸೀದಿಯ ಸನಿಹದಲ್ಲಿಯೇ  ಇರುವ ಹನುಮಾನ್ ಘರೀ ದೇವಾಲಯದ ಮೇಲೆ ಜಿಹಾದೀ  ದಾಳಿ ನಡೆಸಿ  ಅದನ್ನು ಹಿಂದೂಗಳಿಂದ ವಶಪಡಿಸಿಕೊಂಡ ಬಗ್ಗೆ ನೇರ ಸಾಕ್ಷಿಯನ್ನು ಮಿರ್ಜಾ ಜಾನ್ ಎಂಬಾತ ಬರೆದ 'ಹಾದಿಖಾ ಇ ಶುಹಾದಾ' ಎಂಬ ಪುಸ್ತಕದಲ್ಲಿ ದಾಖಲಿಸುತ್ತಾನೆ.  ಮಿರ್ಜಾ ಜಾನ್ ತಾನೇ ಈ ದಾಳಿಯಲ್ಲಿ ಪಾಲ್ಗೊಂಡಿದ್ದೆ ಅಂತಲೂ ಬರೆಯುತ್ತಾನೆ ಮಾತ್ರವಲ್ಲದೆ.."ಸಯ್ಯದ್ ಸಾಲಾರ್ ಮಸೂದ್ ಗಾಝಿ ಯ ಆಳ್ವಿಕೆ ಶುರುವಾದಂದಿನಿಂದ ಯಾವಾಗೆಲ್ಲ ಹಿಂದೂಗಳ ಬೃಹತ್ ದೇವಾಲಯಗಳು ಕಣ್ಣಿಗೆ ಬೀಳುತ್ತವೋ ಅವನ್ನೆಲ್ಲ ಮುಸ್ಲಿಂ ಅರಸರು ಧ್ವಂಸ ಮಾಡಿ ಅಲ್ಲಿ ಮಸೀದಿ ನಿರ್ಮಾಣ ಮಾಡಿ ಮುಆಜ್ಜಿನ್ ಗಳನ್ನೂ ಶಿಕ್ಷಕರನ್ನು ನೇಮಕ ಮಾಡಿ ಕಾಫಿರರನ್ನು ದಮನ ಮಾಡುತ್ತಿದ್ದರು... ಅದೇ ರೀತಿ ಫೈಜಾಬಾದ್ ಮತ್ತು ಅವಧ್ ನಲ್ಲಿ ಕೂಡಾ ಅಂಧವಿಶ್ವಾಸದ ಕೊಳೆಯನ್ನು ಶುಚಿಗೊಳಿಸಿದರು... ಯಾಕೆಂದರೆ ಅದು ಬಹಳ ಪ್ರಮುಖ ಪೂಜಾಸ್ಥಳವಾಗಿತ್ತು ಮತ್ತು ರಾಮನ ತಂದೆ ದಶರಥನ ರಾಜಧಾನಿಯಾಗಿತ್ತು... ಮತ್ತು ಅಲ್ಲಿದ್ದ ಬೃಹತ್ ದೇವಾಲಯ ( ಜನ್ಮಭೂಮಿ ದೇವಾಲಯ) ಇದ್ದ ಜಾಗದಲ್ಲಿ ಭಾರೀ ಗಾತ್ರದ ಮಸೀದಿಯನ್ನು ನಿರ್ಮಿಸಿದರು ಮತ್ತು ಚಿಕ್ಕ ಮಂಟಪವಿದ್ದ ಜಾಗದಲ್ಲಿ ಕಿರು ಮಸೀದಿಯೊಂದನ್ನು ನಿರ್ಮಿಸಿದರು.. ಈ ಜನ್ಮಭೂಮಿ ದೇವಾಲಯ ರಾಮ ಅವತಾರವೆತ್ತಿದ್ದ ಜಾಗ, ಅದರ ಪಕ್ಕದಲ್ಲೇ ಸೀತಾಕಾ ರಸೋಯಿ(ಸೀತಾಮಾತೆಯ ಅಡುಗೆಮನೆ) ಇದೆ. ಆದ್ದರಿಂದಲೇ ಮೂಸಾ ಅಶಿಖಾನನ ಆಶೀರ್ವಾದದೊಂದಿಗೆ ಬಾಬರನು ಭಾರೀ ಮಸೀದಿಯೊಂದನ್ನು ನಿರ್ಮಿಸಿದ್ದಾನೆ...ಮತ್ತು ಆ ದೇವಾಲಯ ಈಗಲೂ ಮೂಲೆಯೊಂದರಲ್ಲಿದೆ..." ಅಂತ ವಿವರ ನೀಡುತ್ತಾನೆ. 

೧೮೦೧ ಮತ್ತು ೧೮೯೩ ರ ನಡುವೆ ಜೀವಿಸಿದ್ದ ಶೇಖ್ ಅಝಮತ್ ಅಲಿ ಕಾಕೋರಾವಿ ನಾಮಿ ಎಂಬಾತ ವಾಜಿದ್ ಆಲಿ ಶಾಹ್ ಕಾಲದಲ್ಲಿ ನಡೆದ ಘಟನೆಗಳಿಗೆ ಸಾಕ್ಷಿಯಾಗಿದ್ದಾತ.. ಆತ ತನ್ನ ಪುಸ್ತಕ 'ಮ್ರಕ್ಖಾಹ್ ಇ ಖುಸ್ರಾವಿ' ಯಾನೆ " ತಾರೀಖ್ ಇ ಅವಧ್" ನಲ್ಲಿ ಈ ರೀತಿ ಬರೆದಿದ್ದಾನೆ..." ಹಿಂದಿನ ದಾಖಲೆಗಳ ಪ್ರಕಾರ  ಎಲ್ಲೆಲ್ಲಾ ಇಸ್ಲಾಮನ್ನು ಪ್ರಬಲವಾಗಿ ನಿರಾಕರಿಸಲಾಗುತ್ತದೋ, ಅಂತಲ್ಲೆಲ್ಲಾ ಮುಸ್ಲಿಂ ಆರಸರು ಮಸೀದಿಗಳನ್ನು ಆಶ್ರಮಗಳನ್ನು ನಿರ್ಮಾಣ ಮಾಡಿ ಇಸ್ಲಾಮನ್ನು ಪಸರಿಸಿ ಇಸ್ಲಾಮೇತರ ಆಚರಣೆಗಳನ್ನು ಸಮಾಪ್ತಿಗೊಳಿಸುತ್ತಾರೆ...  ಇದೆ ಖಾಯಿದೆಯಾಗಿದೆ... ಅದೇ ರೀತಿ ಇಸ್ಲಾಮಿಕ್ ಅಲ್ಲದ ಆಚರಣೆಗಳನ್ನು ಸಮಾಪ್ತಿಗೊಳಿಸಿ ಮಥುರಾ, ಬೃಂದಾಬನ್ ಗಳನ್ನೆಲ್ಲ ಶುಚಿಗೊಳಿಸಿದ್ದಾರೆ... ಅದೇ ರೀತಿ ಸಯ್ಯದ್ ಮೂಸಾ ಅಶೀಖಾನ್ ಆಶೀರ್ವಾದದೊಂದಿಗೆ ಫೈಝಯಾಬಾದ್- ಅವಧ್ ನಲ್ಲಿದ್ದ ಜನ್ಮಸ್ಥಾನ ದೇವಾಲಯದಲ್ಲಿ ಬಾಬರೀ ಮಸೀದಿಯನ್ನು ಹಿಜ್ರಾ ೯೨೩(?) ರಲ್ಲಿ ನಿರ್ಮಾಣ ಮಾಡಿದ್ದಾರೆ... ಅದು ಬಹಳ ಪ್ರಮುಖ ಪೂಜಾಸ್ಥಳವಾಗಿತ್ತು ಮತ್ತು ರಾಮನ ತಂದೆ ದಶರಥನ ರಾಜಧಾನಿಯಾಗಿತ್ತು... ಹಿಂದೂಗಳು ಅದನ್ನು 'ಸೀತಾ ಕಾ ರಸೋಯಿ' ಎಂಬ ಹೆಸರಿನಿಂದ ಕರೆಯುತ್ತಿದ್ದರು" ಇಲ್ಲೂ ಕೂಡಾ ಶ್ರೀ ರಾಮ್ ಜನ್ಮಸ್ಥಾನದಲ್ಲಿದ್ದ ಭವ್ಯ ದೇಗುಲವನ್ನು ಧ್ವಂಸಗೊಳಿಸಿ ಮಸೀದಿ ನಿರ್ಮಿಸಲಾಯಿತು ಎಂಬುದನ್ನು ಶೇಖ್ ಅಝಮತ್ ಅಲಿ ಸ್ಪಷ್ಟವಾಗಿ ದಾಖಲಿಸುತ್ತಾನೆ... 

೧೭೮೭- ೧೮೬೭ ರ ನಡುವೆ ಜೀವಿಸಿದ್ದ ಉರ್ದು ಕವಿ ಮಿರ್ಜಾ ರಜಬ್ ಅಲಿ ಬೇಗ್ ಸುರೂರ್ ತನ್ನ 'ಫಸಾನಾ  ಇ  ಇಬ್ರಾತ್' ಎಂಬ ಪುಸ್ತಕದಲ್ಲಿ ಹೇಗೆ ಬರೆದಿದ್ದಾನೆ.." ಸೀತಾ ಕಾ ರಸೋಯಿ ಇದ್ದ ಜಾಗದಲ್ಲಿ ಬಹಳ ಶ್ರೇಷ್ಠ ಮಸೀದಿಯೊಂದನ್ನು ನಿರ್ಮಿಸಲಾಗಿದೆ. ಬಾಬರನ ಕಾಲದಲ್ಲಿ ಮುಸ್ಲಿಮರನ್ನು ಸರಿಗಟ್ಟಲು ಹಿಂದೂಗಳಿಗೆ ಧೈರ್ಯವೇ ಇರಲಿಲ್ಲ... ಮಸೀದಿಯನ್ನು ಹಿಜ್ರಿ ೯೨೩(?) ರಲ್ಲಿ ಸಯ್ಯದ್ ಮೂಸಾ ಅಶೀಖಾನ್ ಆಶೀರ್ವಾದದೊಂದಿಗೆ ಕಟ್ಟಲಾಯಿತು... ಹನುಮಾನ್ ಗಢಿ ಯಾ ಮೇಲೆ ಔರಂಗಝೇಬ್ ಮಸೀದಿ ನಿರ್ಮಾಣ ಮಾಡಿದ್ದರು... ಆದರೆ ಬೈರಾಗಿಗಳು ಮಸೀದಿಯನ್ನು ನಿರ್ನಾಮ ಮಾಡಿ ಅದೇ ಜಾಗದಲ್ಲಿ ದೇವಾಲಯ ನಿರ್ಮಾಣ ಮಾಡಿದರು.. ಬಳಿಕ ಮಸೀದಿಯ ಒಳಗಡೆಯೇ ಸೀತಾ ರಸೋಯಿ ಇದ್ದ ಜಾಗದಲ್ಲಿ ಮೂರ್ತಿಗಳನ್ನು ಇರಿಸಿ ಬಹಿರಂಗವಾಗಿಯೇ ಪೂಜೆಗಳನ್ನು ಮಾಡಲಾರಂಭಿಸಲಾಯಿತು" 

ಹೀಗೆ ಸ್ವತಹಾ ಮುಸ್ಲಿಮರೇ ಶ್ರೀ ರಾಮ ಜನ್ಮ ಭೂಮಿಯಲ್ಲಿ ಶ್ರೀರಾಮಚಂದ್ರನ  ಬೃಹತ್ ದೇವಾಲಯವಿದ್ದ ಬಗ್ಗೆಯೂ, ಅದನ್ನು ಧ್ವಂಸಗೊಳಿಸಿ ಮಸೀದಿ ನಿರ್ಮಾಣ ಮಾಡಲಾಯಿತೆಂದೂ ಬೇಕಾದಷ್ಟು ಪುರಾವೆಗಳನ್ನು ನೀಡುತ್ತಾರೆ... ಆದರೆ ಕಾಂಗಿಗಳೂ ಮತ್ತು ಕಮ್ಯುನಿಸ್ಟರೂ ಅದೆಷ್ಟರ ಮಟ್ಟಿಗೆ ಮುಸ್ಲಿಂ ಓಲೈಕೆಯಲ್ಲಿ ತೊಡಗುತ್ತಾರೆ ಎಂದರೆ ಹಿಂದೂ ಧರ್ಮದ ವಿರುದ್ಧ, ಅದರ ನಂಬಿಕೆಗಳ ವಿರುದ್ಧ ಅದ್ಯಾವ ಮಟ್ಟಕ್ಕಾದರೂ ಇಳಿದು ಟೀಕಿಸುತ್ತಾರೆ... ಶ್ರೀರಾಮ ಜನ್ಮ ಭೂಮಿ ವಿಚಾರದಲ್ಲೂ ಅಷ್ಟೇ... ಇವತ್ತಿನ ದಿನದವರೆಗೂ, ಪ್ರಾಚ್ಯ ವಾಸ್ತು ಇಲಾಖೆಯ ವರದಿಯಲ್ಲಿ ಅಲ್ಲಿ ಹಿಂದೆ ದೇವಾಲಯ ಇದ್ದದ್ದಕೆ ಬೇಕಾದ್ಷ್ಟು ಪುರಾವೆಗಳು ಸಿಕ್ಕಿದ ಬಳಿಕವೂ, ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕವೂ ಶ್ರೀರಾಮ ಮಂದಿರದ ವಿರುದ್ಧವೇ, ಬಾಬರೀ ಮಸೀದಿಯ ಪರವಾಗಿಯೇ ಹುಚ್ಚು ಉನ್ಮಾದದೊಂದಿಗೆ ವಾದಿಸುವ ಕಾಂಗಿಗಳು, ಕಮ್ಯುನಿಷ್ಟರು ನಮ್ಮ ನಿಮ್ಮ ನಡುವೆಯೇ ಇದ್ದಾರೆ...! 

ಹಾಗೆ ನೋಡಿದರೆ  ಶ್ರೀರಾಮ ಜನ್ಮ ಭೂಮಿ ಹೋರಾಟ ನಿಜಕ್ಕೂ ಐತಿಹಾಸಿಕವೇ... ಇಡೀ ದೇಶಾದ್ಯಂತ ಕೋಟ್ಯಾಂತರ ಜನರು ಭಾವುಕರಾಗಿ ಈ ಸ್ವಾಭಿಮಾನದ ಹೋರಾಟದಲ್ಲಿ ತೊಡಗಿಕೊಂಡದ್ದು, ಕೋಟ್ಯಾಂತರ ಕಾರ್ಯಕರ್ತರು, ಕರಸೇವಕರು, ಹಗಲಿರುಳೆನ್ನುವ ಪರಿವೆಯೇ ಇಲ್ಲದೆ, ಪ್ರತಿಯೊಂದು ಮನೆಗೂ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಇಟ್ಟಿಗೆಗಳನ್ನು ಹಿಡಿದು ಪೂಜೆಗೈದ "ಶ್ರೀ ರಾಮ ಮಂದಿರ ಶಿಲಾ  ಪೂಜನ" ಎಂಬ ಅದ್ಭುತ ಕಾರ್ಯಕ್ರಮವನ್ನು ನೆನೆದರೇ ಮೈನವಿರೇಳುತ್ತದೆ... ಶ್ರೀ ಅಡ್ವಾಣೀಜಿ ಯವರ ರಥಯಾತ್ರೆ ಮೂಡಿಸಿದ ಸಂಚಲನಾವೆಂಥಾದ್ದು, ಶ್ರೀ ವಾಜಪೇಯೀಜಿಯವರ ನಾಯಕತ್ವವೆಂಥಾದ್ದು ... ಶ್ರೀ ಮುರಳೀ ಮನೋಹರ ಜೋಶಿ ಮುಂತಾದ ಹಿರಿಯರ ಮಾರ್ಗದರ್ಶನವೆಂಥಾದ್ದು ... ಸಾಧ್ವಿ ಉಮಾಭಾರತಿ, ಕಲ್ಯಾಣ ಸಿಂಗ್, ವಿನಯ್ ಕಟಿಯಾರ್ , ಸಾಧ್ವಿ ಋತಂಭರಾ ಮುಂತಾದವರ ಮೈನವಿರೇಳಿಸುವ ಭಾಷಣಗಳೆಂಥಾದ್ದು... ಒಂದೇ ಎರಡೇ... ಇವತ್ತಿನ ಯುವಜನಾಂಗಕ್ಕೆ ಈ ಬಗ್ಗೆ ಗೊತ್ತಿಲ್ಲದೇ ಇರಬಹುದು... ಆದರೆ ಆ ಸಂದರ್ಭದಲ್ಲಿ ದೇಶಾದ್ಯಂತ ಶ್ರೀರಾಮ ಜನ್ಮಭೂಮಿ ಹೋರಾಟ ಮೂಡಿಸಿದ್ದ ಸಂಚಲನ ನ ಭೂತೋ ನ ಭವಿಷ್ಯತಿ ಅನ್ನೋ ರೀತಿಯದ್ದು... ಸಂಘ ಪರಿವಾರದ ಕಾರ್ಯಕರ್ತರು ಮಾತ್ರವಲ್ಲ, ಅದೆಷ್ಟು ಜನ ರಾಮ ಭಕ್ತರು ಯಾವುದೇ ಪಕ್ಷ ಸಂಘಟನೆಗೂ ಸೇರಿರದ ಜನ ಸಾಮಾನ್ಯರು ಈ ಹೋರಾಟದಲ್ಲಿ ಪಾಲ್ಗೊಂಡಂಥ ರೀತಿಯೇ ಅನನ್ಯ... ಈ ಸುಧೀರ್ಘ ಹೋರಾಟದಲ್ಲಿ ಬಹಳಷ್ಟು ಕಹಿ ನೆನಪುಗಳೂ ಇದ್ದಾವೆ... ನೂರಾರು ಮುಗ್ಧ ಕರಸೇವಕರು ಈ ಮಹತ್ತರ ಹೋರಾಟದ ಮುಂಚೂಣಿಯಲ್ಲಿ ನಿಂತು ಬಲಿದಾನ ನೀಡಿದರು... ಪ್ರಾಣಾರ್ಪಣೆ ಮಾಡಿದರು... ಮುಲ್ಲಾ ಮುಲಾಯಂ ಸಿಂಗ್ ನ ಪೊಲೀಸರ ಗುಂಡಿಗೆ ಅದೆಷ್ಟು ಕರಸೇವಕರ ಆಹುತಿಯಾಯಿತೋ, ಅದೆಷ್ಟು ಕುಟುಂಬಗಳು ತಮ್ಮ ಜೀವನಾಧಾರವನ್ನೇ ಕಳೆದುಕೊಂಡವೋ... 

ಆದರೆ ಅದೆಷ್ಟೋ ಜನರ ತ್ಯಾಗ ಬಲಿದಾನಗಳಿಗೆ ಇಂದು ಖಂಡಿತಾ ನ್ಯಾಯ ಸಲ್ಲುತ್ತಿದೆ.. ನಾವೇ ಹುಟ್ಟಿ ಬೆಳೆದ ನಮ್ಮದೇ ದೇಶದಲ್ಲಿ, ನಮ್ಮದೇ ಧರ್ಮದ ಬಂಧುಗಳಿಂದ ಅವಹೇಳನೆಗೆ, ಅವಗಣನೆಗೆ, ಭರ್ತ್ಸನೆಗೆ ಗುರಿಯಾದ, ಅವಮಾನ ಅನುಭವಿಸಿದ, ನಮ್ಮ ಧಾರ್ಮಿಕ ನಂಬಿಕೆಗಳಿಗೇ ಬೆಲೆಸಿಗದಂಥ, ನಮ್ಮ ಆತ್ಮಾಭಿಮಾನಕ್ಕೇ ಸವಾಲೆಸೆಯುವಂಥ ರೀತಿಯ ಕಳಂಕವೊಂದನ್ನು ನಿವಾರಿಸಿಕೊಳ್ಳುವುದು ಕೂಡಾ ಸಾಧ್ಯವಾಗದ ಅಸಹಾಯಕತೆಗೆ ನಮ್ಮನ್ನು ಗುರಿಮಾಡಿದ, ದೇಶದ ಬಹುಸಂಖ್ಯಾಕ ಸಮುದಾಯವೊಂದರ ನಂಬಿಕೆಯ ಮೂಲವನ್ನೇ ಚಿವುಟಿಹಾಕುವ ಅತ್ಯಂತ ವಿಕೃತ ಮಾನಸಿಕತೆಯನ್ನೇ "ಸೆಕ್ಯುಲರಿಸಂ" ಅಂತ ಕರೆದು ನೈಜ ಜಾತ್ಯತೀತ ಮನೋಭಾವದ ಹಿಂದುಗಳನ್ನೇ ಮತೀಯ ಮೂಲಭೂತವಾದಿಗಳೆಂಬಂತೆ ಹೀಗಳೆದ ಹೊಲಸು ರಾಜಕೀಯ ವ್ಯವಸ್ಥೆಯೊಂದರ ಸಂಪೂರ್ಣ ಅವಸಾನಕ್ಕೆ ಇವತ್ತಿನ ದಿನ ನಾಂದಿ ಹಾಡಬಹುದೆಂಬ ಆಶಯ ನನ್ನದು. ಯಾಕೆಂದರೆ ಈ "ಸೋಗಲಾಡಿ ಜಾತ್ಯಾತೀತ" ಮುಖವಾಡ ಹಾಕಿಕೊಂಡ ಪ್ರಗತಿಪರ ಪೋಷಾಕಿನ ಮಂದಿಗೆ ಅಯೋಧ್ಯೆಯಲ್ಲಾಗುವ ಶ್ರೀರಾಮ ಮಂದಿರ ನಿರ್ಮಾಣವೇ ಅವರ ಜೀವಮಾನದ ಅತ್ಯಂತ ದೊಡ್ಡ ಸೋಲು.... ಈಗಾಗಲೇ ಸೋತು ಸೋತು ಹೈರಾಣಾಗಿರುವ ಕಾಂಗ್ರೆಸ್ಸಿಗರಿಗೆ, ಕಮ್ಯುನಿಸ್ಟರಿಗೆ ಬಹುಶ ಈ ಒಂದು ಸೋಲನ್ನು ಅರಗಿಸಿಕೊಳ್ಳುವ ಶಕ್ತಿಯಿರಲಿಕ್ಕಿಲ್ಲ... ಮುಂಬರುವ ದಿನಗಳಲ್ಲಿ ಅವರ ಮನೆಮಕ್ಕಳೇ ಅವರ ಸೋಗಲಾಡಿತನಕ್ಕೆ ಮದ್ದರೆಯುವ ದಿನಗಳು ದೂರವಿಲ್ಲ...  

 ಅಂದ ಹಾಗೆ  ಪ್ರಭು ಶ್ರೀರಾಮಚಂದ್ರನ ಜನ್ಮಭೂಮಿಯನ್ನು ಪಡೆಯುವುದಕ್ಕಾಗಿನ ನೂರಾರು ವರ್ಷಗಳ ಈ ಹೋರಾಟದ ಹಾದಿಯಲ್ಲಿ ಕೋಟ್ಯಾಂತರ ಮಂದಿಯ ಶ್ರಮವಿದೆ... ಆದರೆ ಕೆಲವೊಂದಷ್ಟು ಮಂದಿ ಯಾವುದೇ ಸಂಘಟನೆಗೂ ಸೇರಿರದೆಯೇ ಇದ್ದರೂ ಈ ಹೋರಾಟದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದವರಿದ್ದಾರೆ... ಅವರಲ್ಲಿ ಅತ್ಯಂತ ವಿಶಿಷ್ಟ ಪಾತ್ರ ವಹಿಸಿದ ಕೆಲವರನ್ನಷ್ಟೇ ನಾನು ಉಲ್ಲೇಖಿಸುತ್ತೇನೆ... ಮೊತ್ತ ಮೊದಲನೆಯದಾಗಿ ೧೬೮೮ ರಿಂದ ೧೭೪೩ ರವರೆಗೆ ಜೀವಿಸಿದ್ದ ಜೈಪುರನ ಮಹಾರಾಜ, ರಜಪೂತ ವೀರ ಎರಡನೇ ಸವಾಯ್ ಜೈ ಸಿಂಗ್... ಜೈಪುರ ನಗರದ ನಿರ್ಮಾತೃವೂ ಆದ ಜೈಸಿಂಗ್ ಅಮೋಘ ಖಗೋಳ ಶಾಸ್ತ್ರಜ್ಞ ಕೂಡಾ ಹೌದು. ಖಗೋಳಾಧ್ಯಯನಕ್ಕೆಂದೇ ಜಂತರ್ ಮಂತರ್ ರೂಪಿಸಿದ ಮಹಾಜ್ಞಾನಿ... ಆತ ಮೊಘಲರ ಅಧಿಪತ್ಯದಲ್ಲಿ ಸೊರಗಿ ಹೋದ ಹಿಂದೂ ಧರ್ಮದ ಪುನರುತ್ಥಾನಕ್ಕಾಗಿ ಶ್ರಮಿಸಿದ ಪುಣ್ಯಾತ್ಮ. ಮುಸ್ಲಿಮರ ಬರ್ಬರ ದಾಳಿಗೆ ಒಳಗಾಗಿದ್ದ ಮಥುರಾ, ವೃಂದಾವನ, ಕಾಶಿ, ಅಲಹಾಬಾದ್, ಉಜ್ಜಯಿನಿ, ಮುಂತಾದ ಕಡೆಗಳಲ್ಲಿ ದೇವಾಲಯಗಳ ಭೂಮಿಯನ್ನೇ ಕೊಂಡುಕೊಂಡರು ಮತ್ತು ಅಲ್ಲಿನ ದೇವರನ್ನೇ ಆ ಭೂಮಿಯಾ ಒಡೆಯನ್ನನ್ನಾಗಿ ಮಾಡಿದರು. ಇಂಥಾ ಪುಣ್ಯಾತ್ಮ ಜೈ ಸಿಂಗ್ ೧೭೧೭ರಲ್ಲಿ ರಾಮ ಜನ್ಮ ಭೂಮಿ ದೇವಾಲಯವಿದ್ದ ಜಾಗವನ್ನು ಹಣ ನೀಡಿ ಖರೀದಿಸಿದ್ದರು. ಹೀಗೆ ಎಲ್ಲ ಕಡೆಗಳಲ್ಲಿ ದೇವಾಲಯಗಳ ಜಾಗ ಖರೀದಿಸಿದ ನಂತರ ಅಲ್ಲೆಲ್ಲಾ ಆತ ತನ್ನದೇ ಹೆಸರಿನ 'ಜೈಸಿಂಗ್ ಪುರ' ಗಳನ್ನೂ ಸ್ಥಾಪಿಸಿದರು... ಈ ಜೈಸಿಂಗ್ ಪುರಗಳಲ್ಲಿ  ಆತ ತನ್ನದೇ ಆಡಳಿತ ಮತ್ತು ಕಾನೂನುಗಳನ್ನು ಸ್ಥಾಪಿಸಿದ...ಮುಘಲರ ಆಡಳಿತಡಿಯಲ್ಲಿ ಸರಯೂ ನದಿಯಲ್ಲಿ ತೀರ್ಥ ಸ್ನಾನ ಮಾಡಾದಂತೆ ನಿರ್ಬಂಧ ಹೇರಲಾಗಿತ್ತು...ಆದರೆ ಜೈಸಿಂಗ್ ಈ ನಿರ್ಬಂಧ ತೆಗೆದು ಹಾಕಿದರು...

ಇನ್ನೋರ್ವ ಗೋರಖನಾಥ ಮಠದ ಹಿಂದಿನ  ಮಹಾಂತ ಶ್ರೀ ದಿಗ್ವಿಜಯನಾಥ್. ೧೯೪೯ನೇ ಇಸವಿಯಲ್ಲಿ ಹಿಂದೂ ಮಹಾಸಭಾದ ಉಪಶಾಖೆಯಾದ ಅಖಿಲ ಭಾರತೀಯ ರಾಮಾಯಣ ಮಹಾಸಭಾ ರಾಮಜನ್ಮಭೂಮಿಗಾಗಿ ಹೋರಾಟ ಸಂಘಟಿಸಿತು. ಮಹಾಂತ ಶ್ರೀ ದಿಗ್ವಿಜಯನಾಥ್ ಈ ಹೋರಾಟದಲ್ಲಿ ಮಹತ್ತರ ಪಾತ್ರ ವಹಿಸಿದ್ದರು... ಮಹಾಸಭಾ ಒಂಭತ್ತು ದಿನಗಳ ಕಾಲ ಅಖಂಡ ರಾಮಚರಿತ ಮಾನಸ ಪಠಣವನ್ನು ಜನ್ಮಭೂಮಿಯಲ್ಲಿ ಹಮ್ಮಿಕೊಂಡಿತ್ತು... ಪಠಣದ ಕೊನೆಯದಿನ ೧೯೪೯ರ ಡಿಸೇಂಬರ್ ೨೨, ಮಹಾಂತ ಶ್ರೀ ದಿಗ್ವಿಜಯನಾಥರ ನೇತೃತ್ವದಲ್ಲಿ ಮಹಾಸಭಾ ಕಾರ್ಯಕರ್ತರು ರಾಮಲಲ್ಲಾನ ಮೂರ್ತಿಯನ್ನು ತಥಾಕಥಿತ ಬಾಬರೀ ಮಸೀದಿಯೊಳಗೆ ಪ್ರತಿಷ್ಠಾಪನೆ ಮಾಡಿಯೇಬಿಟ್ಟರು... ಇದು ಇಡೀ ರಾಮಮಂದಿರ ಹೋರಾಟದಲ್ಲಿನ ಒಂದು ಮಹತ್ತರ ತಿರುವು... ಇವತ್ತು ಅದೇ ಗೋರಖನಾಥ ಮಠದ ಮಹಾಂತ ಶ್ರೀ ಯೋಗಿ ಆದಿತ್ಯನಾಥ್ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದಾರೆ ... ಅವರ ನೇತೃತ್ವದಲ್ಲೇ ಭವ್ಯ ರಾಮಮಂದಿರದ ನಿರ್ಮಾಣವಾಗುತ್ತಿದೆ.

ರಾಮ ಮಂದಿರ ಹೋರಾಟದ ಹಾದಿಯಲ್ಲಿ ಇನ್ನೊಂದು ಮಹತ್ವದ  ತಿರುವಿಗೆ ಕಾರಣರಾದದ್ದು ಅಯೋಧ್ಯೆಯಿಂದ ತುಂಬಾ ದೂರದ ಕೇರಳದಲ್ಲಿನ ಓರ್ವ ವ್ಯಕ್ತಿ.. ಹೆಸರು ಕೆ.ಕೆ.ನಾಯರ್.. ಪೂರ್ತಿ ಹೆಸರು ಕಂಡಂಗಲತಿಲ್ ಕರುಣಾಕರ ನಾಯರ್.. ಆತ ಬ್ರಿಟಿಷ್ ಸರಕಾರದಲ್ಲಿದ್ದರು. ೧೯೪೯ರ ಡಿಸೇಂಬರ್ ನಲ್ಲಿ ಬಾಬರ್ ಮಸೀದಿಯೊಳಗೇ ಮಹಾತ ದಿಗ್ವಿಜಯನಾಥ್ ಮತ್ತು ಹಿಂದೂ ಕಾರ್ಯಕರ್ತರು ರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರಿಂದ ಸೆಕ್ಯುಲರ್ ಪೋಷಾಕಿನ  ಮಹಾನಾಯಕರುಗಳು ಕೆಂಡಾಮಂಡಲರಾದರು... ಉತ್ತರ ಪ್ರದೇಶದ ಮುಖ್ಯಮಂತ್ರಿ ಗೋವಿಂದ ವಲ್ಲಭ ಪಂತ್ ರಿಗೆ ಕೂಡಲೇ ರಾಮಲಲ್ಲಾನ ಮೂರ್ತಿಗಳನ್ನು ತೆಗೆಸುವಂತೆ ಆದೇಶಿಸಿದರು. ಗೋವಿಂದ ವಲ್ಲಭ ಪಂತ್ ಕೂಡಾಲೇ ನೆಹರೂ ಆಜ್ಞೆಯನ್ನು ಕಾರ್ಯಗತಗೊಳಿಸುವಂತೆ ಫೈಝಬಾದಿನ ಜಿಲ್ಲಾಧಿಕಾರಿ- ಜಿಲ್ಲಾ ಮ್ಯಾಜಿಸ್ಟ್ರೇಟರಿಗೆ ಹೇಳಿದರು ಆಗ ಆ ಹುದ್ದೆಯಲ್ಲಿದ್ದದ್ದು ಇದೆ ಕೆ.ಕೆ.ನಾಯರ್..! ಆತ ಮುಖ್ಯಮಂತ್ರಿ ಮತ್ತು ಪ್ರಧಾನಿಯ ಆಜ್ಞೆಗೂ ಬಗ್ಗಲಿಲ್ಲ..! ಕೂಡಲೇ ತನ್ನ ಸಹಾಯಕ ಗುರುದತ್ತ ಸಿಂಗ್ ರನ್ನು ಜನ್ಮಭೂಮಿಯ ವಿವಾದಿತ ಕಟ್ಟಡಕ್ಕೆ ಕಳಿಸಿದರು.. ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿದ ಗುರುದತ್ತ ಸಿಂಗ್ ಅಲ್ಲಿಯೇ  ಭವ್ಯ ರಾಮ ಮಂದಿರ ನಿರ್ಮಿಸಬೇಕೆಂಬ ಶಿಫಾರಸು ಮಾಡಿದರು...! ಕೆ ಕೆ ನಾಯರ್ ರಾಮಲಲ್ಲಾನ ಮೂರ್ತಿಗಳನ್ನು ತೆರವುಗೊಳಿಸಲು ಒಪ್ಪಲೇ ಇಲ್ಲ... ನೆಹರೂ ಸುದ್ದಿ ತಿಳಿದು ಉರಿದು ಹೋದರು... ಗೋವಿಂದ ವಲ್ಲಭ  ಪಂತರು ಕೆ ಕೆ ನಾಯರ್ ರನ್ನು ಅಮಾನತು ಮಾಡಿದರು... ಆದರೆ ನಾಯರ್ ನ್ಯಾಯಾಲಯದ ಮೆಟ್ಟಿಲೇರಿದರು... ವ್ಯಾಜ್ಯ ನಡೆದು ಮುಖ್ಯಮಂತ್ರಿ ಪಂಥ್    ಸೋತು ಹೋದರು ... ಜೊತೆಗೆಯೇ ನೆಹರೂ ಕೂಡಾ ಸೋತು ಹೋದರು... ನಾಯರ್ ಗೆದ್ದರೂ ಮತ್ತೆ ಕೆಲಸಕ್ಕೆ ಸೇರಲಿಲ್ಲ... ಬದಲಿಗೆ ರಾಮಮಂದಿರಕ್ಕಾಗಿ ಹೋರಾಡಲು ಜನಸಂಘಕ್ಕೆ ಸೇರಿದರು. ನಾಯರ್ ಮತ್ತವರ ಪತ್ನಿ ಇಬ್ಬರೂ ಭಾರತೀಯ ಜನಸಂಘದಿಂದ ವಿಧಾನ ಸಭೆಗೂ - ಲೋಕ ಸಭೆಗೂ ಆಯ್ಕೆ ಆದರು .. ಪ್ರಧಾನಿ ನೆಹರೂ ಮತ್ತು ಮುಖ್ಯಮಂತ್ರಿ ಪಂತ್  ವಿರುದ್ಧವೇ ತಿರುಗಿ ಬಿದ್ದ ಕೆ.ಕೆ.ನಾಯರ್ ನಿಂದಾಗಿಯೇ  ರಾಮ ಲಲ್ಲಾನ ಮೂರ್ತಿಗಳು ರಾಮ ಚಬೂತರದೊಳಗೆ ಪ್ರತಿಷ್ಠಾಪನೆಯಾಯಿತು...  

ಮತ್ತೋರ್ವ ಮಹಾನುಭಾವ ದೇವಕೀ ನಂದನ್ ಅಗರವಾಲ್... ಅವರ ತಂದೆ ಸ್ಕೂಲ್ ಇನ್ಸ್ಪೆಕ್ಟರ್ ಆದುದರಿಂದ ಆತ ತನ್ನ ಬಾಲ್ಯವನ್ನು ಫೈಝ ಬಾದ್ ನಲ್ಲಿಯೇ ಕಳೆದವರು... ಮುಂದೆ ವಕೀಲರಾಗಿ ಆ ಬಳಿಕ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರಾದರು. ೧೯೮೩ರಲ್ಲಿ ನಿವೃತ್ತಿಯಾದೊಡನೆಯೇ ಆತ ಫೈಝ ಬಾದ್ ಗೆ ತೆರಳಿ ರಾಮ ಜನ್ಮಭೂಮಿಗೆ ಸೇರಿದ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿದರು... ಮತ್ತು ರಾಮಜನ್ಮ ಭೂಮಿಯ ಜಮೀನಿನ ಅಸಲಿ ವಾರಸುದಾರ ಪ್ರಭು ಶ್ರೀರಾಮಚಂದ್ರನೇ ಅಂತ ದಾಖಲೆ ಸಮೇತ ನ್ಯಾಯಾಲಯದಲ್ಲಿ ಸಾಬೀತುಪಡಿಸಿದರು... ಹಾಗಾಗಿ ಸ್ವತಃ ಭಗವಾನ್ ಶ್ರೀರಾಮಚಂದ್ರನೇ ಜನ್ಮಭೂಮಿ ಮಸೀದಿ ಕೇಸಿನಲ್ಲಿ ಪಾರ್ಟಿಯಾದದ್ದು.. ಸ್ವತಹಾ ಶ್ರೀರಾಮಚಂದ್ರನನ್ನೇ ನ್ಯಾಯಾಲಯದಲ್ಲಿ ದೇವಕಿ ನಂದನ ಅಗರವಾಲ್ ಪ್ರತಿನಿಧಿಸುತ್ತಿದ್ದದ್ದರಿಂದ ತನ್ನನ್ನು ತಾನೇ ಭಗವಾನ್ ರಾಮಚಂದ್ರನ ಸಖ, ಗೆಳೆಯ ಅಂತ ಕರೆದುಕೊಂಡರು... ಅಂದ ಹಾಗೆ ಅಗರ್ವಾಲರ  ತಾಯಿ ಮಹಾ ರಾಮ ಭಕ್ತೆ . ಆಕೆಯ ಹೆಸರು ರಾಮಸಖಿ...! ತಾಯಿ ಶ್ರೀ ರಾಮನ ಗೆಳತಿ ... ಮಗನೂ ಶ್ರೀರಾಮನ ಗೆಳೆಯ... ಅದನ್ನು ನ್ಯಾಯಾಲಯವೇ ಒಪ್ಪಿಕೊಂಡಿದೆ...! ಇದು ನಿಜಕ್ಕೂ ಪವಾಡ ಸದೃಶವೇ ಸರಿ... !  

ಹೀಗೆ ಜೈಪುರದ ಮಹಾರಾಜಾ ಸವಾಯ್ ಎರಡನೆಯ  ಜೈ ಸಿಂಗ್ ಅಯೋಧ್ಯಾದಲ್ಲಿನ ಬಾಬರೀ ಮಸೀದಿ ಇದ್ದ ಶ್ರೀರಾಮಜನ್ಮ ಸ್ಥಾನದ ಜಗವನ್ನೇ ಕೊಂಡುಕೊಂಡು ಅದಕ್ಕೆ ಸ್ವತಹಾ ಭಗವಾನ್ ಶ್ರೀರಾಮನನ್ನೇ ಒಡೆಯನನ್ನಾಗಿಸಿದರು... ಅದನ್ನೇ ದಾಖಲೆಯಾಗಿಟ್ಟುಕೊಂಡು  ನ್ಯಾಯಮೂರ್ತಿ ದೇವಕೀ ನಂದನ್ ಅಗರವಾಲ್ ನ್ಯಾಯಾಲಯದ ಜನ್ಮಭೂಮಿ ದಾವೆಯಲ್ಲೂ ಶ್ರೀರಾಮಚಂದ್ರನ ಹೆಸರಲ್ಲೇ ದಾವೆ ನಡೆಯುವಂತೆ ಮಾಡಿದರು.. ಗೋರಖನಾಥ ಮಠದ ಹಿಂದಿನ  ಮಹಾಂತ ಶ್ರೀ ದಿಗ್ವಿಜಯನಾಥ್ ಶ್ರೀ ರಾಮಲಲ್ಲಾನ ಮೂರ್ತಿಯನ್ನು ಚಭೂತರಾದೊಳಗೆ ಪ್ರತಿಷ್ಠಾಪಿಸಿದವರು...  

ಇನ್ನು ಕೆ.ಕೆ. ನಾಯರ್ ಶ್ರೀರಾಮನ ಮೂರ್ತಿಯನ್ನು ಆ ವಿವಾದಿತ ಕಟ್ಟಡದೊಳಗಿನಿಂದ ತೆರವು ಮಾಡದೇ ಬಹಳ ಮಹತ್ತರ ಕೆಲಸವನ್ನು ಮಾಡಿದ್ದರು. 

ಇವತ್ತು ನಮ್ಮ ನೆಚ್ಚಿನ ಪ್ರಧಾನಿ ಮೋದೀಜಿಯವರ ಮುಂದಾಳತ್ವದಲ್ಲಿ ಭವ್ಯ ರಾಮ ಮಂದಿರಕ್ಕೆ ಭೂಮಿ ಪೂಜೆ ನಡೆದಿದೆ.. ಈ ಸಂದರ್ಭದಲ್ಲಿ ರಾಮಜನ್ಮ ಭೂಮಿ ಮತ್ತೆ ಶ್ರೀರಾಮಚಂದ್ರನ ಅಧೀನಕ್ಕೆ ಬರಲು ಕೋಟ್ಯಂತರ ಜನರ ಹೋರಾಡಿದ್ದಾರೆ... ನೂರಾರು ವರ್ಷಗಳ ಹೋರಾಟಕ್ಕೆ ಇವತ್ತು ಫಲ ಸಿಕ್ಕಿದೆ... ಇದಕ್ಕಾಗಿ ಲಕ್ಷಾಂತರ ಜನರ ಬಲಿದಾನವೂ ನಡೆದಿದೆ... ಅವರೆಲ್ಲರನ್ನೂ ಈ ಹೊತ್ತಿನಲ್ಲಿ ಸ್ಮರಿಸುತ್ತ... ಈ ಇಡೀ ಪ್ರಕರಣದಲ್ಲಿ ಅತ್ಯಂತ ವಿಶಿಷ್ಟ ಪಾತ್ರವಹಿಸಿ ಜನಸಾಮಾನ್ಯರ ದೃಷ್ಟಿಯಲ್ಲಿ ಮರೆಯಾಗಿಯೇ ಉಳಿದ ಮಹಾರಾಜಾ ಸವಾಯ್ ಎರಡನೆಯ  ಜೈ ಸಿಂಗ್ ,  ಗೋರಖನಾಥ ಮಠದ ಹಿಂದಿನ  ಮಹಾಂತ ಶ್ರೀ ದಿಗ್ವಿಜಯನಾಥ್. ಕಂಡಂಗಲತಿಲ್ ಕರುಣಾಕರ ನಾಯರ್ ಮತ್ತು ದೇವಕೀ ನಂದನ್ ಅಗರವಾಲ್ ಇವರೆಲ್ಲರನ್ನು ಅವರ ವಿಶಿಷ್ಟ ಸೇವೆಗಾಗಿ ಸ್ಮರಿಸೋಣ... ಶತಶತಮಾನಗಳ ಕಳಂಕದ ಕೊಳೆ  ಕೊನೆಗೂ ಅಧಿಕೃತವಾಗಿಯೇ ಇವತ್ತು ಹಿಂದೂ ಜನಮಾನಸದಿಂದ ಸ್ವಚ್ಛವಾದದ್ದಕ್ಕೆ  ಸಂಭ್ರಮಿಸೋಣ.... 

ಜಯ  ಶ್ರೀ ರಾಮ....  

#ಅನಂತಕುಮಾರಹೆಗಡೆ 

Related posts