Infinite Thoughts

Thoughts beyond imagination

74ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು!

ಎಪ್ಪತ್ತನಾಲ್ಕನೆಯ ಸ್ವಾತಂತ್ರ್ಯೋತ್ಸವ ಎಲ್ಲರಿಗೂ ಶುಭವ ತರಲಿ.... 

ಕರಾಳ ದಿನಗಳು ಕಳೆದು ಭರವಸೆಯ ಹೊಸಬೆಳಕು ಮೂಡಲಿ ... 

ಕಳೆದ ಆರುತಿಂಗಳು ಬಹುಶಃ ಜಗತ್ತಿನ ಇತ್ತೀಚಿನ ಇತಿಹಾಸದಲ್ಲೇ ಅತ್ಯಂತ ಅತ್ಯಂತ ಕರಾಳ ದಿನಗಳು... ಜಗತ್ತಿನಾದ್ಯಂತ ಅಸಂಖ್ಯಾತ ಜನ ತಮ್ಮ ಜೀವನಾಧಾರವನ್ನೇ ಕಳೆದುಕೊಂಡಿದ್ದಾರೆ... ಒಂದು ಹೊತ್ತಿನ ಊಟಕ್ಕೂ ಪರದಾಡಿದವರು, ಈಗಲೂ ಪರದಾಡುತ್ತಾ ಇರುವವರು... ತಮ್ಮ ಮಕ್ಕಳಿಗೂ ತುತ್ತಿನ ಚೀಲ ತುಂಬಿಸಲಾಗದ ಅಸಹಾಯಕತೆಯಿಂದ ಕಂಗಾಲಾದವರು... ಜೀವಮಾನವಿಡೀ ಸ್ವಂತ ದುಡಿಮೆಯಿಂದ ಸ್ವಾಭಿಮಾನದಿಂದ ಬದುಕಿದವರು ಇವತ್ತು ಒಂದು ತುತ್ತಿಗೆ ಕೈಚಾಚಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದೂ ಹೌದು... ಕೊರೋನಾ ಎಂಬ ಪೆಡಂಭೂತ ಮಟ್ಟಕ್ಕೆ ಜಗತ್ತನ್ನೇ ತಲ್ಲಣಗೊಳಿಸಿಬಿಟ್ಟಿದೆ... ಜಾಗತಿಕ ಆರ್ಥಿಕತೆಯನ್ನೇ ಹಾಳುಗೆಡವಿಬಿಟ್ಟಿದೆ.. 

 ಪ್ರಾರಂಭಿಕ ಹಂತದಲ್ಲಿ ಕೊರೋನಾ ಎಂಬುದು ಎಷ್ಟರಮಟ್ಟಿಗೆ ಅಪಾಯಕಾರಿ ಎಂದು ಭಾವಿಸಲಾಗಿತ್ತೋ ಮಟ್ಟಕ್ಕೆ ಅಲ್ಲ ಎಂಬುದು ನಿಧಾನಕ್ಕೆ ಅರಿವಾಗುತ್ತಿದೆ... ಜಗತ್ತಿನ ಬೇರೆಲ್ಲಾ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಂತೂ ಕೊರೋನಾದಿಂದಾದ ಜೀವಹಾನಿ ತುಂಬಾನೇ ಕಡಿಮೆ... ಆದರೆ ನೀವು ಯಾವುದೇ ಅಂಕಿ ಅಂಶಗಳನ್ನು ನೋಡಿದರೂ ಅದು ಒಂದು ನೈಜ ಚಿತ್ರಣವನ್ನು ಕಟ್ಟಿಕೊಡುವಲ್ಲಿ ಸಧ್ಯಕ್ಕಂತೂ ವಿಫಲವಾಗಿದೆ... ವೈರಸ್ಸು, ಖಾಯಿಲೆ, ಅದರ ಗುಣಲಕ್ಷಣಗಳು, ಎಲ್ಲವೂ ಮಾನವಜನಾಂಗಕ್ಕೇ ಹೊಸದು... ಹಾಗಾಗಿಯೇ ಗಾಬರಿ, ಹಡಾವಿಡೀ ಎಲ್ಲ... 

 ಸಧ್ಯದ ಪರಿಸ್ಥಿತಿ ತುಂಬಾ ಆಶಾದಾಯಕವಾಗಿಯೇ ತೋರುತ್ತಿದೆ... ಕೊರೋನಾ ಪ್ರಭಾವ ಕಡಿಮೆಯಾಗುತ್ತಾ... ನಿಧಾನವಾಗಿ ಜಗತ್ತು ಹಿಂದಿನ ಸ್ಥಿತಿಗೆ ಮರಳಲಿ.... ಕಳೆದುಹೋದ ದಿನಗಳು ಮರಳಲಿ, ಶಾಲಾ ಕಾಲೇಜುಗಳೆಲ್ಲಾ ಪ್ರಾರಂಭವಾಗಲಿ... ನಷ್ಟವಾದ ಉದ್ಯೋಗಗಳೆಲ್ಲಾ ಮರಳಿ ದೊರೆಯಲಿ.... ಎಂಬೆಲ್ಲಾ ಆಶಯಗಳೊಡನೆ ಬಾರಿಯ ಸ್ವಾತಂತ್ರ್ಯೋತ್ಸವ ಇದೆಲ್ಲಕ್ಕೂ ನಾಂದಿ ಹಾಡಲಿ, ಪ್ರಧಾನಿ ಮೋದೀಜಿಯವರ ದೂರದೃಷ್ಟಿಯ "ಆತ್ಮನಿರ್ಭರ ಭಾರತ" ಯಶಸ್ವಿಯಾಗಲಿ, ಸ್ವಾವಲಂಬೀ ಸಧೃಢ ಭಾರತ ಉದಯಿಸಲಿ ಅಂತ ಹಾರೈಸೋಣ... 

 ಕೊರೋನಾದ ಎಲ್ಲಾ ಕರಾಳತೆಯ ಮಧ್ಯೆಯೇ ಮೋದೀಜಿ ದೇಶ ಕಟ್ಟುವ ಕೆಲಸದ ಕಡೆಗೆ ತೀವ್ರ ಗಮನ ನೀಡಿದ್ದಾರೆ...ದೇಶದ ಶಿಕ್ಷಣ ವ್ಯವಸ್ಥೆಗೆ ಸಂಪೂರ್ಣ ಕಾಯಕಲ್ಪ ನೀಡುವಂಥಾ ಅಭೂತಪೂರ್ವ ನೂತನ ಶಿಕ್ಷಣ ನೀತಿ ಜಾರಿಗೆ ಬಂದಿದೆ... ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ತೆರಿಗೆ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಯನ್ನು ತರಲಾಗಿದೆ... ಪಾನ್ ಕಾರ್ಡ್ ಹೊಂದಿರುವ ಶೇಕಡಾ ಅರವತ್ತೈದರಷ್ಟು ಜನರ ಆಧಾರ್ ಕಾರ್ಡ್ ಅನ್ನು ಜೋಡಿಸಲಾಗಿದೆ... ಆರ್ಥಿಕ ವರ್ಷದ ಹೊತ್ತಿಗೆ ಸುಮಾರು ೫೦ ಕೋಟಿ ಗಿಂತಲೂ ಹೆಚ್ಚು ಜನ ಪಾನ್ ಕಾರ್ಡ್ ನೋಂದಣಿ ಮಾಡಿಸಿದ್ದಾರೆ... ಹೀಗಾಗಿ ದೇಶದ ತೆರಿಗೆ ವ್ಯವಸ್ಥೆ ಸಂಪೂರ್ಣವಾಗಿ ಪಾರದರ್ಶಕವಾಗುವತ್ತ ಸಾಗುತ್ತಿದೆ... ದೇಶದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಪ್ರಾಮಾಣಿಕ ತೆರಿಗೆ ಪಾವತಿದಾರರನ್ನು ಗುರುತಿಸುವ ಕೆಲಸ ಶುರುವಾಗಿದೆ... ಆದಾಯ ತೆರಿಗೆ ಇಲಾಖೆಯ ವ್ಯವಹಾರಗಳನ್ನೆಲ್ಲ್ಲಾ ಇನ್ನಷ್ಟು ಪಾರದರ್ಶಕವಾಗಿಸಲು ಕ್ರಮ ಕೈಗೊಳ್ಳಲಾಗಿದೆ... ಫೇಸ್ ಲೆಸ್ ಟ್ರಾನ್ಸಾಕ್ಷನ್ ಎಂಬ ಹೊಸ ಪದ್ಧತಿಯನ್ನು ಜಾರಿಗೆ ತರಲಾಗುತ್ತಿದೆ.. ತೆರಿಗೆ ಇಲಾಖೆಯಿಂದ ಯಾವುದೇ ನೋಟೀಸು ಬಂದರೂ ಅದು ಡಿನ್ (ಡಾಕ್ಯುಮೆಂಟ್ ಐಡೆಂಟಿಫಿಕೇಷನ್ ನಂಬರ್) ಮೂಲಕವೇ ಆಗುತ್ತದೆ... ಹಿಂದೆಲ್ಲ ತೆರಿಗೆ ವಂಚನೆ ಮುಂತಾದ ಕೇಸು ದಾಖಲಾದಾಗ ತೆರಿಗೆ ಅಧಿಕಾರಿಗಳು ದಂಡ ವಸೂಲಿ ಮಾಡಿ ಸರಕಾರಕ್ಕೆ ಸಲ್ಲಿಸುವ ಬದಲಿಗೆ ತೆರಿದಾರರ ಬಳಿಯೇ ಲಂಚ ಇಸಿದುಕೊಂಡು ವಂಚಿಸುವ ಪ್ರಕರಣಗಳು ನಡೆಯುತ್ತಿದ್ದವು... ಆದರೆ ಇನ್ನುಮುಂದೆ ಕೇಸುಗಳೆಲ್ಲ ಕಂಪ್ಯೂಟರ್ ಮೂಲಕವೇ ವಿತರಣೆಯಾಗುತ್ತದೆ... ಅದು ದೇಶದ ಯಾವುದೋ  ಮೂಲೆಯಲ್ಲಿರುವ ಯಾವುದೇ ತೆರಿಗೆ ಅಧಿಕಾರಿಗೂ ಹೋಗಬಹುದು.. ಹಾಗಾದಾಗ ತೆರಿಗೆ ಆರೋಪಿಗೂ ವಿಚಾರಣೆ ನಡೆಸುವ ಅಧಿಕಾರಿಗೂ ಪರಸ್ಪರ ಪರಿಚಯವೇ ಇರುವುದಿಲ್ಲ... ಆದುದರಿಂದ ಸಹಜವಾಗಿಯೇ ಲಂಚ ರುಷುವತ್ತುಗಳ ಡೀಲಿಂಗ್  ಕಡಿಮೆಯಾಗುತ್ತದೆ... ತೆರಿಗೆ ಸಂಗ್ರಹ ಹೆಚ್ಚಿ, ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ... 

 ಒಟ್ಟಿನಲ್ಲಿ ಕೊರೋನಾ  ಕರಾಳ ದಿನಗಳೆಲ್ಲಾ ಕಳೆದು ಒಳ್ಳೆಯ ದಿನಗಳು ಬರಲಿ ಅಂತ ಆಶಿಸುತ್ತಾ... ಹೊಸ  ಭರವಸೆಯ ಹೊಸಬೆಳಕು ಮೂಡಲೀ ಅಂತ ಹಾರೈಸುತ್ತಾ... ನಿಮಗೆಲ್ಲರಿಗೂ ಎಪ್ಪತ್ತನಾಲ್ಕನೆಯ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಸಲ್ಲಿಸುತ್ತಿದ್ದೇನೆ ... 

 ಜೈಹಿಂದ್ .... 

 #ಅನಂತಕುಮಾರಹೆಗಡೆ 

 

Related posts