Infinite Thoughts

Thoughts beyond imagination

ಭಾಜಪದ ಭೀಷ್ಮಪಿತಾಮಹ ಶ್ರೀ ಲಾಲ್ ಕೃಷ್ಣ ಅಡ್ವಾಣೀಜಿ ಯವರ ೯೪ನೇ ಜನುಮದಿನದ ಹಾರ್ದಿಕ ಶುಭಾಶಯಗಳು

ಭಾಜಪದ  ಭೀಷ್ಮಪಿತಾಮಹ ಶ್ರೀ ಲಾಲ್ ಕೃಷ್ಣ ಅಡ್ವಾಣೀಜಿ ಯವರ ೯೪ನೇ ಜನುಮದಿನದ ಹಾರ್ದಿಕ ಶುಭಾಶಯಗಳು 

ಇವತ್ತು ಸುಮಾರು ಹದಿನೆಂಟು ಕೋಟಿ ಅಧಿಕೃತ ಸದಸ್ಯರಿರುವ ಜಗತ್ತಿನ ಅತೀದೊಡ್ಡ ರಾಜಕೀಯ ಪಕ್ಷವಾದ ಭಾರತೀಯ ಜನತಾ ಪಕ್ಷವನ್ನು ಹುಟ್ಟುಹಾಕಿ ಕಟ್ಟಿ ಬೆಳೆಸಿದ ಪಿತಾಮಹ ಶ್ರೀ ಲಾಲ್  ಕೃಷ್ಣ  ಅಡ್ವಾಣೀಜಿಯರಿಗೆ  ಇಂದು ತಮ್ಮ ೯೪ನೆಯ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಶ್ರೀ ಅಟಲ್ ಬಿಹಾರೀ ವಾಜಪೇಯಿಯವರ ಜೊತೆಗೆ ಹೇಗೆಲೆಣೆಯಾಗಿ ದುಡಿದು ಪಕ್ಷ ಕಟ್ಟಿ ಬೆಳೆಸಿದ  ಅಡ್ವಾಣೀಜಿಯವರು ಪಕ್ಷವನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ದ ಜನನಾಯಕ.  ತನ್ನ ಹದಿನಾಲಕನೆಯ ವಯಸ್ಸಿಗೇ ಆರೆಸ್ಸೆಸ್ ಸೇರಿದ ಅಡ್ವಾಣೀಜಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿ ರಾಜಸ್ತಾನದಲ್ಲಿ ತಮ್ಮ ಸಾರ್ವಜನಿಕ ಜೀವನ ಶುರುಮಾಡಿದರು. ಬಳಿಕ ಕಾರ್ಯವಾಹರಾಗಿ ಅಲ್ಲಿ ಸಂಘವನ್ನು ಬೇರುಮಟ್ಟದಿಂದ ಬಲಪಡಿಸಲು ಕಾರಣರಾದರು. ಅಡ್ವಾಣೀಜಿಯವರು ಬಳಿಕ ಭಾರತೀಯ ಜನಸಂಘ ಸೇರಿ ರಾಜಸ್ತಾನದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಲು ಅಪಾರವಾಗಿ ಶ್ರಮಿಸಿದರು.  ೧೯೫೭ರಲ್ಲಿ ದೆಹಲಿಗೆ ಬಂದು ರಾಷ್ಟ್ರಮಟ್ಟದ ರಾಜಕಾರಕ್ಕೆ ಪ್ರವೇಶಿಸಿದರು. ಅಲ್ಲಿಂದ ಅವರು ಮೊದಲಿಗೆ ಭಾರತೀಯ ಜನಸಂಘ ಬಳಿಕ ಭಾರತೀಯ ಜನತಾ ಪಕ್ಷವನ್ನು ಭಾರತದ್ದದ್ಯಂತ ಸಂಘಟಿಸಲು ಪಟ್ಟ ಶ್ರಮ ಅಪಾರ. ಅವರು ಭಾರತದ ಮೂಲೆ ಮೂಲೆಗೂ ಸಂಚರಿಸಿ ಪಕ್ಷವನ್ನು ಸಂಘಟಿಸಿದರು. ರಾಮಜನ್ಮಭೂಮಿಯ ಅವರ ಹೋರಾಟ ಮತ್ತು ರಥಯಾತ್ರೆ ಭಾರತದ ರಾಜಕೀಯ ಚಿತ್ರಣವನ್ನೇ ಸಂಪೂರ್ಣ ಬದಲಿಸಿತು. 

ಇವತ್ತು ಶ್ರೀ ನರೇಂದ್ರ ಮೋದೀಜಿಯವರ ನೇತೃತ್ವದಲ್ಲಿ ಭಾರತ ಜಗತ್ತಿನಾದ್ಯಂತ ತನ್ನದೇ ಆದ ಛಾಪು ಮೂಡಿಸುತ್ತಿದ್ದರೆ...ಜಗತ್ತಿನಾದ್ಯಂತ ಎಲ್ಲ ದೇಶಗಳೂ ಭಾರತದತ್ತ ಬೆರಗಿನಿಂದ ನೋಡುತ್ತಿದ್ದರೆ, ಅದರ ಹಿಂದೆ ಶ್ರೀ ಲಾಲ್ ಕೃಷ್ಣ  ಅಡ್ವಾಣೀಜಿ ಯವರ  ಅಪಾರ ಶ್ರಮವಿದೆ. ಕರಾಚಿಯ ಸಾಮಾನ್ಯ ಕುಟುಂಬವೊಂದರಲ್ಲಿ ಜನಿಸಿದ  ಅಡ್ವಾಣೀಜಿ ಯವರು ಭಾರತದ ಉಪಪ್ರಧಾನಿಯಾಗುವವರೆಗೆ ಸಾಗಿದ ಹಾದಿ ರೋಚಕ. ಇವತ್ತು ಭಾರತೀಯ ಜನತಾ ಪಕ್ಷದಲ್ಲಿದ್ದು ಅದರ ಸಕ್ರಿಯ ಸದಸ್ಯರಾಗಿಯೋ, ಕಾರ್ಯಕರ್ತರಾಗಿಯೋ, ಪದಾಧಿಕಾರಿಗಳಾಗಿಯೋ ಹೆಮ್ಮೆಯಿಂದ ಎದೆತಟ್ಟಿಕೊಂಡು 'ನಾನು ಬಿಜೆಪಿ" ಅಂತ ಹೇಳಿಕೊಳ್ಳುವ ಪ್ರತಿಯೊಬ್ಬರೂ ದಿನವೂ ನೆನಪುಮಾಡಿಕೊಳ್ಳಬೇಕಾದ ಪ್ರಾತಃಸ್ಮರಣೀಯರು  ಶ್ರೀ ಲಾಲ್ ಕೃಷ್ಣ  ಅಡ್ವಾಣೀಜಿ. ಹಾಗಾಗಿಯೇ ಅವರಿಗೆ ಸಹಜವಾಗಿಯೇ ಭಾಜಪದ ಭೀಷ್ಮ ಪಿತಾಮಹ ಎಂಬ ಸಾರ್ಥಕ ಅನ್ವರ್ಥಕ ಅಭಿದಾನವಿದೆ. ಇವತ್ತು ಈ ಪಿತಾಮಹ ತೊಂಭತ್ತನಾಲ್ಕನೆಯ ಜನುಮದಿನ.  ಶ್ರೀ ಲಾಲ್ ಕೃಷ್ಣ  ಅಡ್ವಾಣೀಜಿಯವರಿಗೆ ಆ ಭಗವಂತ ಉತ್ತಮ ಆಯುರಾರೋಗ್ಯ ನೀಡಿ ಹರಸಲಿ ಅಂತ ಪ್ರಾರ್ಥಿಸುತ್ತಾ ಅವರ ಚರಣಗಳಲ್ಲಿ  ಶಿರಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸುತ್ತೇನೆ...

Related posts