ಹಿರಿಯರ ಮೇಲ್ಪಂಕ್ತಿಯಂತೆ ದಲಿತ ಕೇರಿಗೆ ಪೇಜಾವರ ಶ್ರೀ ಭೇಟಿ....ಹಿಂದೂ ಸಮಾಜದ ಸಂಘಟನೆಗಾಗಿ ದಿಟ್ಟ ಹೆಜ್ಜೆಯಿಟ್ಟ ಯತಿವರೇಣ್ಯರಿಗೆ ನನ್ನ ಅನಂತ ಪ್ರಣಾಮಗಳು..........
ಹಿರಿಯರ ಮೇಲ್ಪಂಕ್ತಿಯಂತೆ ದಲಿತ ಕೇರಿಗೆ ಪೇಜಾವರ ಶ್ರೀ ಭೇಟಿ....ಹಿಂದೂ ಸಮಾಜದ ಸಂಘಟನೆಗಾಗಿ ದಿಟ್ಟ ಹೆಜ್ಜೆಯಿಟ್ಟ ಯತಿವರೇಣ್ಯರಿಗೆ ನನ್ನ ಅನಂತ ಪ್ರಣಾಮಗಳು..........
ಹಿಂದೂ ಸಮಾಜದಲ್ಲಿದ್ದ ಅಸ್ಪೃಶ್ಯತೆಯನ್ನು ನಿವಾರಿಸಿ ಸಶಕ್ತ ಸುದೃಢಗೊಳಿಸುವ ನಿಮಿತ್ತ ದೇಶದ ಹಲವೆಡೆ ದಲಿತರ ಕಲೋನಿಗಳಿಗೆ ಭೇಟಿ ನೀಡಿ ಕ್ರಾಂತಿಕಾರ್ಯ ನಡೆಸಿ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಸಂಚಲನ ಮೂಡಿಸಿದ್ದರು.
ಅಂತೆಯೇ, ಇದೀಗ ಅವರ ಶಿಷ್ಯ ಶ್ರೀ ವಿಶ್ವಪ್ರಸನ್ನ ತೀರ್ಥರು ಗುರುವಿನ ದಾರಿಯಲ್ಲಿ ಹೆಜ್ಜೆ ಹಾಕುವ ಮಹತ್ವದ ನಿರ್ಧಾರ ಕೈಗೊಂಡಿದ್ದು ಭಾನುವಾರ ಉಡುಪಿಯ ಕೊಡವೂರು ಗ್ರಾಮದ ಪಾಳೆಕಟ್ಟೆ ಎಂಬಲ್ಲಿ ಪರಿಶಿಷ್ಟರ ಬಡಾವಣೆಗೆ ತಮ್ಮ ಮೊದಲ ಭೇಟಿ ನೀಡಿ ಹಿಂದೂ ಸಮಾಜ ಸಂಘಟನೆಗೆ ತಾವೂ ಸಿದ್ದ ಎಂದಿದ್ದಾರೆ.
ಅಯೋದ್ಯೆ ರಾಮ ಮಂದಿರ ನಿರ್ಮಾಣವನ್ನು ಮುಂದಿಟ್ಟುಕೊಂಡು ಮತ್ತೊಮ್ಮೆ ಭಾರತದಲ್ಲಿ ಹಿಂದೂ ಸಮಾಜವನ್ನು ಸಂಘಟನಾತ್ಮಕವಾಗಿ ಸಶಕ್ತ ಮತ್ತು ಸದೃಢಗೊಳಿಸಬೇಕಾಗಿದೆ. ಈ ಆಶಯದೊಂದಿಗೆ ಸುಮಾರು 120 ದಲಿತ ಬಂಧುಗಳ ಮನೆಗಳನ್ನು ಹೊಂದಿರುವ ಈ ಬಡಾವಣೆಗೆ ತಮ್ಮ ಮೊದಲ ಭೇಟಿ ನೀಡಿ ಆಶೀರ್ವದಿಸಿದರು.
ಹಿಂದೂ ಸಮಾಜದಲ್ಲಿನ ಜಾತಿ ತಾರತಮ್ಯವನ್ನು ದೂರಗೊಳಿಸಲು ತಮ್ಮ ಹಿರಿಯರು ಹಾಕಿಕೊಟ್ಟ ಸಂಪ್ರದಾಯದಂತೆಯೇ ತಾವೂ ಮುಂದಡಿಯಿಟ್ಟಿದ್ದು, ಅವೆರ ಚಾರಣ ಕಮಲಗಳಲ್ಲಿ ನನ್ನ ಶಿರಾ ಸಾಸ್ಟಾಂಗ ನಮನಗಳನ್ನು ಸಲ್ಲಿಸುತ್ತಿದ್ದೇನೆ.
#ಅನಂತಕುಮಾರಹೆಗಡೆ