ವಿವೇಕಾನಂದ ಜಯಂತಿ!
ಇಂದು ವಿವೇಕಾನಂದ ಜಯಂತಿ.... ಆ ವೀರ ಸನ್ಯಾಸಿಯ ಮಾತುಗಳನ್ನು, ಕೃತಿಗಳನ್ನು ನಾವು ಮತ್ತೊಮ್ಮೆ ಮನನ ಮಾಡಿಕೊಳ್ಳಬೇಕಿದೆ...
೧೮೩೦ರ ಮೇ ೨೭ ನೇ ತಾರೀಕಿಗೆ ಅಲೆಕ್ಸಾಂಡರ್ ಡಫ್ ಎಂಬ ಹೆಸರಿನ ಸ್ಕಾಟ್ ಲ್ಯಾಂಡ್ ನ ಓರ್ವ ಕ್ರೈಸ್ತ ಮಿಷನರಿ ಕಲ್ಕತ್ತಾಗೆ ಕಾಲಿಟ್ಟ.... ಅಲ್ಲಿಯವರೆಗಿನ ಕ್ರೈಸ್ತ ಮಿಷನರಿಗಳ್ಯಾರೂ ಹಿಂದೂಗಳನ್ನು ಮತಾಂತರಿಸುವಲ್ಲಿ ಹೆಚ್ಚಿನ ಮಟ್ಟದ ಯಶಸ್ಸು ಪಡೆದಿರಲಿಲ್ಲ... ಅಲೆಕ್ಸಾಂಡರ್ ಡಫ್ ಭಾರತಕ್ಕೆ ಬಂದವನೇ ಯಾಕೆ ಇಲ್ಲಿ ಮತಾಂತರದ ಕೆಲಸ ಅಷ್ಟಾಗಿ ಯಶಸಾಗಿಲ್ಲ ಎಂಬುದನ್ನು ಅಧ್ಯಯನ ಮಾಡಿ ತನ್ನದೇ ಆದ ಥಿಯರಿಯನ್ನು ಹುಟ್ಟುಹಾಕುತ್ತಾನೆ... ಅಷ್ಟರವರೆಗೆ ಬಂಡ ಎಲ್ಲ ಮಿಷನರಿಗಳೂ ಕೆಲವೊಂದಷ್ಟು ಕೆಳವರ್ಗದ ಜಾಣರ್ಫ್ಯಾನ್ನಷ್ಟೇ ಕ್ರಿಶ್ಚಿಯನ್ನರಾಗಿ ಮತಾಂತರಿಸಲು ಯಶಸ್ವಿಯಾಗಿದ್ದರು... ಆದರೆ ಅಲೆಕ್ಸಾಂಡರ್ ಡಫ್ ತನ್ನ ಹೊಸ "ಡೌನ್ ವಾರ್ಡ್ ಫಿಲ್ಟರ್ ಥಿಯರಿ" ಅನ್ನು ನಿಧಾನಕ್ಕೆ ಜಾರಿಗೊಳಿಸಲು ಮುಂದಾದ... ಅವನ ಈ ಹೊಸ ಥಿಯರಿಯಂತೆ ಹಿಂದೂ ಸಮಾಜದ ಅತ್ಯಂತ ಮೇಲ್ವರ್ಗದ ಜನರನ್ನೇ ಮೊದಲು ಮತಾಂತರ ಮಾಡಬೇಕು. ಅವರಿಗೆ ಇಂಗ್ಲಿಷ್ ಶಿಕ್ಷಣ ನೀಡಬೇಕು, ಅವರ ಸಾಮಾಜಿಕ ಬದುಕಿನ ರೀತಿ ನೀತಿ ಸಂಪ್ರದಾಯಗಳನ್ನು ಬದಲಿಸಬೇಕು... ಹೀಗೆ ಮೇಲ್ವರ್ಗದ ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸಲು ಯಶಸ್ವಿಯಾದರೆ ಬಳಿಕ ಅದು ಕೆಳಮುಖವಾಗಿ ಪ್ರವಹಿಸಿ ಹಿಂದೂ ಸಮಾಜದ ಉಳಿದ ಎಲ್ಲಾ ವರ್ಗಗಳೂ ಕ್ರೈಸ್ತ ಧರ್ಮವನ್ನೊಪ್ಪಿ ಮತಾಂತರವಾಗುತ್ತದೆ... ಅದಕ್ಕೋಸ್ಕರ ಭಾರತದ ಶ್ರೀಮಂತರನ್ನು, ಉಚ್ಛ ಕುಲೀನ ವರ್ಗಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸಬೇಕು ಅಂತ ನಿರ್ಧರಿಸಿದ... ಈ ಹೊಅ ಥಿಯರಿಯನ್ನು ನಿಧಾನಕ್ಕೆ ಕಾರ್ಯಗತಗೊಳಿಸಿದ....
ಅಲೆಕ್ಸಾಂಡರ್ ಡಫ್ ತನ್ನ ಥಿಯರಿಯ ಪ್ರಕಾರವೇ ಮಾಡಿದ ಕೃಷ್ಣಮೋಹನ್ ಬ್ಯಾನರ್ಜಿ ಎಂಬಾತನನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿದ ... ಈ ಬ್ಯಾನರ್ಜಿ ಮುಂದಿನ ಕೆಲವೇ ವರ್ಷಗಳಲ್ಲಿ ತನ್ನಂಥ ವಿದ್ಯಾವಂತರನೇಕರನ್ನು ಕ್ರೈಸ್ತಧರ್ಮಕ್ಕೆ ಮತಾಂತರ ಮಾಡಿದ... ಮುಂದೆ ಕಾಳೀ ಚರಣ್ ಬ್ಯಾನರ್ಜಿ, ಲಾಲ್ ಬಿಹಾರೀ ಡೇ, ಮಧುಸೂಧನ್ ದತ್ತಾ , ಮುಂತಾದವರನ್ನು ಡಫ್ ಮತಾಂತರ ಮಾಡಿದ... ಈ ಮತಾಂತರಿ ವಿದ್ಯಾವಂತರು ಭಾರತೀಯ ವೇದಾಂತವನ್ನೇ ಕ್ರೈಸ್ತೀಕರಣಗೊಳಿಸಿ ಆ ಮೂಲಕವೇ ಭಾರತೀಯ ವಿದ್ಯಾವಂತ ಉಚ್ಚ ವರ್ಗವನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುವ ಕೆಲಸಕ್ಕೆ ಕೈ ಹಾಕಿ ಯಶಸ್ವಿಯಾಯಿತು....
ಅಲೆಕ್ಸಾಂಡರ್ ಡಫ್ ಪ್ರಕಾರ ಇಡೀ ಜಗತ್ತಿನಲ್ಲಿ ಶೈತಾನನ ಅತ್ಯಂತ ದೊಡ್ಡ ಸಾಮ್ರಾಜ್ಯ ಹಿಂದೂಸ್ತಾನವೇ ... ಇಲ್ಲಿನ ಮೂರ್ತಿಪೂಜಕರಾದ ಶೈತಾನನ ಅನುಯಾಯಿಗಳನ್ನೆಲ್ಲಾ ಕ್ರೈಸ್ತ ಧರ್ಮಕ್ಕೆ ಮತಾಂತರಿಸಿ ಅವರೆಲ್ಲ ಆತ್ಮಗಳಿಗೆ ಮೋಕ್ಷ ಕೊಡುವ ಕೆಲಸವನ್ನು ಕ್ರೈಸ್ತ ಮಿಷನರಿಗಳು ಮಾಡಬೇಕು... ಭಾರತ ಒಂದು ಅಭೇದ್ಯ ಕೋಟೆ ... ಇದನ್ನು ಬೇಧಿಸಲುಸತತವಾಗಿ ಭಾರೀ ಫಿರಂಗಿಗಳಿಂದ ದಾಳಿ ನಡೆಸಬೇಕು... ಒಂದಲ್ಲ ಒಂದು ದಿನ ಭಾರತದ ಈ ಬೃಹತ್ ಧಾರ್ಮಿಕ ಕೋಟೆ ಕುಸಿದು ಅದು ಕ್ರಿಶ್ಚಿಯನ್ ಧರ್ಮಕ್ಕೆ ಶರಣಾಗುತ್ತದೆ ಎಂಬ ಆಶಾಭಾವನೆ ಇಟ್ಟುಕೊಂಡಿದ್ದ ಅಲೆಕ್ಸಾಂಡರ್ ಡಫ್. ಆತ ಮೆಕಾಲೆಯ ಜೊತೆಗೆ ಸೇರಿ ಇಲ್ಲಿನ ಶಿಕ್ಷಣವನ್ನೇ ಬದಲಾಯಿಸಿ ಇಂಗ್ಲಿಷ್ ಭಾಷೆಯ ಶಿಕ್ಷಣ ಶುರುಮಾಡಿದ... ಈ ಶಿಕ್ಷಣದ ಮೂಲಕ ಭಾರತೀಯರು ತಮ್ಮ ಸಂಸ್ಕೃತಿ, ಧರ್ಮ, ದೇವರು , ಜೀವನ ವಿಧಾನ ಇದೆಲ್ಲವನ್ನೂ ತುಚ್ಛವಾಗಿ ಕಂಡಿ ತಮ್ಮವರನ್ನೇ ಲೇವಡಿ ಮಾಡಿಕೊಳ್ಳುವ ಹಂತಕ್ಕೆ ಬರುತ್ತಾರೆ... ಆಗ ತಮ್ಮ ಕೆಲಸ ಸುಲಭವಾಗುತ್ತದೆ ಎಂಬುದು ಇವರ ಪ್ಲಾನ್ ಆಗಿತ್ತು... ಇದಕ್ಕೊಂದು ಭದ್ರವಾದ ಫೌಂಡೇಶನ್ ಹಾಕಿಯೇ ಒಂದಲ್ಲ ಒಂದು ದಿನ ಭಾರತ ಎಂಬ ಈ ಬೃಹತ್ ಕೋಟೆ ಕ್ರೈಸ್ತ ಧರ್ಮಕ್ಕೆ ಶರಣಾಗುತ್ತದೆ ಎಂಬ ನಂಬಿಕೆಯೊಡನೆಯೇ ಅಲೆಕ್ಸಾಂಡರ್ ಡಫ್ ೧೮೬೩ರಲ್ಲಿ ಭಾರತವನ್ನು ತೊರೆದ... ಅಷ್ಟರಲ್ಲಾಗಲೇ ಕೋಲ್ಕತ್ತಾದ ಹಿಂದೂ ಸಮಾಜದ ಮುಖ್ಯಧಾರೆಗಳಲ್ಲಿ ಕ್ರಿಶ್ಚಿಯಾನಿಟಿಯನ್ನು ಬೆರೆಸುವ ಪ್ರಯತ್ನ ಮಾಡಿ ತಕ್ಕ ಮಟ್ಟಿಗೆ ಯಶಸ್ವಿಯೂ ಆದ...
ಅಲೆಕ್ಸಾಂಡರ್ ಡಫ್ ಭಾರತವನ್ನು ತೊರೆದ ವರ್ಷವೇ ಅಂದರೆ ೧೮೬೩ ರಂದೇ ನರೇಂದ್ರನಾಥರ ಜನನವಾಗಿತ್ತು... ಅದೇ ಅಲೆಕ್ಸಾಂಡರ್ ಡಫ್ ಪರಿಚಯಿಸಿದ್ದ ಇಂಗ್ಲಿಷ್ ಭಾಷೆಯಲ್ಲಿಯೇ ಅತ್ಯುತ್ತಮ ಪ್ರೌಢಿಮೆ ಪಡೆದು, ಆತನ ಕ್ರಿಶ್ಚಿಯನ್ ಧರ್ಮವನ್ನೂ ಆಳವಾಗಿ ತಿಳಿದು... ಮತ್ತದರ ಮಿಷನರಿಗಳ ಹುಳುಕುಗಳನ್ನೂ ಅಭ್ಯಸಿಸಿ, ಕ್ರಿಶ್ಚಿಯನ್ ಮತದ ಸೋಗಲಾಡಿತನಗಳನ್ನೂ, ಅದು ಹೇಗೆ ಆಧುನಿಕ ವಿಜ್ಞಾನಕ್ಕೆ ವಿರೋಧವಾಗಿದೆ ಎಂಬುದನ್ನೂ ಮನನ ಮಾಡಿಕೊಂಡು, ಕ್ರಿಶ್ಚಿಯನ್ ಮತ ಎಲ್ಲರನ್ನೂ ಪ್ರೀತಿ ಕರುಣೆಯಿಂದ ಕಾಣುತ್ತದೆ ಎಂಬ ಪೊಳ್ಳು ಪ್ರಚಾರವನ್ನು, ಮಿಷನರಿಗಳ ಕುತಂತ್ರವನ್ನೂ, ಬಯಲುಗೊಳಿಸಿ. ಅಮೆರಿಕಾದ ನೆಲದಲ್ಲೇ ನಿಂತು ಹಿಂದೂ ಧರ್ಮದ ಶ್ರೇಷ್ಠತೆಯನ್ನು, ಭಾರತೀಯ ತತ್ವಜ್ಞಾನದ ಆಳ ಅಗಲಗಳನ್ನು ಜಗತ್ತಿಗೇ ಸಾರಿದ ನರೇಂದ್ರನಾಥರ ಜಯಂತಿ ಇಂದು... ಅವರೇ ಸ್ವಾಮಿ ವಿವೇಕಾನಂದರು.
ವಿವೇಕಾನಂದರು ಮಾಡಿದ ಭಾಷಣಗಳಲ್ಲಿ ಕೆಲವನ್ನಷ್ಟೇ ಉರುಹೊಡೆದು, ಅವರಂತೆಯೇ ಫ್ಯಾನ್ಸೀ ಡ್ರೆಸ್ ಹಾಕಿ "ಏಳಿ ಎದ್ದೇಳಿ... ಗುರಿ ಮುಟ್ಟುವ ತನಕ ನಿಲ್ಲದಿರಿ" ಅನ್ನುವ ಅದೇ ವಾಕ್ಯವನ್ನು ಪುನರಾವರ್ತಿಸುತ್ತಾ ಅದನ್ನೇ ಸ್ವಾಮೀ ವಿವೇಕಾನಂದರ ಸ್ಮರಣೆ ಅಂತಂದು ಕೊಂಡರೆ ಅದು ನಮಗೆ ನಾವೇ ಮಾಡಿಕೊಳ್ಳುವ ಅನ್ಯಾಯವಾದೀತು. ವಿವೇಕಾನಂದರು ಹುಟ್ಟಿದ ಅಂದಿನ ಸಮಯ ಸಂದರ್ಭ ಹೇಗಿತ್ತು ? ಆಗಿನ ಭಾರತೀಯರ, ಅದರಲ್ಲೂ ಹಿಂದೂಗಳ ಪರಿಸ್ಥಿತಿ ಏನಿತ್ತು ..? ಒಂದು ಕಾಲದಲ್ಲಿ ಇಡೀ ಜಗತ್ತಿನಲ್ಲಿಯೇ ಅತ್ಯಂತ ಶ್ರೀಮಂತ ದೇಶವಾಗಿದ್ದ ಭಾರತ ಆ ಸಂದರ್ಭದಲ್ಲಿ ಅದೆಷ್ಟು ಬಡ ದೇಶವಾಗಿತ್ತು... ಸತತವಾಗಿ ಪರಕೀಯರು ಮಾಡಿದ್ದ ಲೂಟಿಗಳಿಂದ, ಭೀಕರ ಬರಗಾಲಗಳಿಂದ ಭಾರತೀಯರು ಅದೆಷ್ಟು ಕಂಗೆಟ್ಟಿದ್ದರು... ಅದೆಷ್ಟು ಸಾವಿರ ಸಾವಿರ ಜನ ಬರಗಾಲದಿಂದಾಗಿ ಹೊಟ್ಟೆಗೆ ಆಹಾರವಿಲ್ಲದೆ ಅತ್ತರು ಎಂಬುದನ್ನೆಲ್ಲ ನಾವು ಇವತ್ತು ತಿಳಿದುಕೊಳ್ಳಬೇಕಾಗಿದೆ... ಇಂಥ ಸಂದರ್ಭದಲ್ಲೇ ವಿವೇಕಾನಂದರು ಕ್ರಿಶ್ಚಿಯನ್ ಮಿಷನರಿಗಳ ಸೋಗಲಾಡಿತನವನ್ನು ಜಾಗತಿಕವಾಗಿ ಬಯಲು ಮಾಡಿ ಹಿಂದೂ ಧರ್ಮದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದ್ದು...
ಭೂಮಿ ಚಪ್ಪಟೆಯಾಗಿದೆ ಎಂಬ ಮಿಥ್ಯವನ್ನೇ ಸಾವಿರಾರು ವರ್ಷಗಳಿಂದಲೂ ನಂಬುತ್ತಾ ಬಂದಿದ್ದ ಕ್ರಿಶ್ಚಿಯನ್, ಮುಸ್ಲಿಮ ಮತಗಳೆಲ್ಲಾ ಅದು ಹೇಗೆ ಆಧುನಿಕ ವಿಜ್ಞಾನದ ಸಂಶೋಧನೆಗಳನ್ನೆಲ್ಲಾ ನಿರಾಕರಿಸಿ, ಆಧುನಿಕ ವಿಜ್ಞಾನಿಗಳನ್ನೇ ತಪ್ಪಿತಸ್ಥರ ರೀತಿ ನೋಡುತಿದೆ, ಎಂಬುದನ್ನೆಲ್ಲ ಪಾಶ್ಚಾತ್ಯ ಜಗತ್ತಿಗೆ ಮನದಟ್ಟು ಮಾಡಿಸಿ, ವಿಶ್ವದ ಸೃಷ್ಟಿಯ ಬಗ್ಗೆ ಸೆಮೆಟಿಕ್ ಮತಗಳ ನಂಬಿಕೆಗಳೆಲ್ಲಾ ಅದೆಷ್ಟು ಅವಾಸ್ತವಿಕ ನೆಲೆಗಟ್ಟಿನಲ್ಲಿದೆ, ಅದೇ ವೇಳೆ ಈ ಬ್ರಹ್ಮಾಂಡದ ಸೃಷ್ಟಿಯ ಬಗ್ಗೆ ವೇದಗಳಲ್ಲಿನ ಜ್ಞಾನ ಏನನ್ನು ಹೇಳುತ್ತದೆ... ಆಧುನಿಕ ವಿಜ್ಞಾನದ ಜೊತೆಗೆ ಅದನ್ನು ಸಮೀಕರಿಸಿದಾಗ ವೇದಗಳು ಅದೆಷ್ಟು ವೈಜ್ಞಾನಿಕವಾಗಿವೆ ಎಂಬುದನ್ನು ಪಾಶ್ಚಾತ್ಯ ಜಗತ್ತಿಗೆ ಅವರಿಗರ್ಥವಾಗುವ ಆಂಗ್ಲಭಾಷೆಯಲ್ಲಿಯೇ ಬಹಳ ಅರ್ಥಪೂರ್ಣವಾಗಿ ಕಂಚಿನ ಕಂಠದಿಂದ ಹೇಳಿದವರು ಸ್ವಾಮೀ ವಿವೇಕಾನಂದರು... ಸ್ವಾಮೀ ವಿವೇಕಾನಂದರು ಭಾರತೀಯ ಸಂಸ್ಕೃತಿಯನ್ನು, ಹಿಂದೂ ಧರ್ಮವನ್ನು ಜಗತ್ತಿಗೆ ಪರಿಚಯಿಸಿದ ಭಾರತದ ಮೊಟ್ಟಮೊದಲ ಸಾಂಸ್ಕೃತಿಕ ರಾಯಭಾರಿ. ಅಲ್ಲಿಂದ ಬಳಿಕ ಹಿಂದೂ ಧರ್ಮಡ್ ಕಡೆಗೆ ವಿದೇಶೀಯರು ವ್ಯಾಪಕವಾಗಿ ಆಕರ್ಷಿತರಾದರು...
ಭಾರತೀಯ ವೇದಗಳಲ್ಲಿನ ವೈಜ್ಞಾನಿಕ ಪರಮಸತ್ಯಗಳು ಜಗತ್ತಿನ ಆ ಕಾಲದ ಅನೇಕ ವಿಜ್ಞಾನಿಗಳನ್ನು ಆಕರ್ಷಿಸಲು ವಿವೇಕಾನಂದರೇ ಮೂಲ ಕಾರಣ... ಇವತ್ತು ಇಡೀ ಜಗತ್ತು ಮತ್ತು ಜನ ಜೀವನ ನಡೆಯುತ್ತಿರುವುದೇ ವಿದ್ಯುತ್ತಿನಿಂದ. ಅದರಲ್ಲೂ ಅಲ್ಟರ್ನೇಟಿವ್ ಕರೆಂಟ್ ಅಥವಾ ಎಸಿ ಅಂತ ಕರೆಯಲ್ಪಡುವ ವಿದ್ಯುತ್ತೇ ಎಲ್ಲದಕ್ಕೂ ಮೂಲಕಾರಣ. ಈ ವಿದ್ಯುತ್ತನ್ನು ಕಂಡುಹಿಡಿದು ಜಗತ್ತನ್ನೇ ಬದಲಾಯಿಸಿದ ಮಹಾನ್ ವಿಜ್ಞಾನಿ ನಿಕೋಲಾ ಟೆಸ್ಲಾ ವಿವೇಕಾನಂದರಿಂದ ಅತ್ಯಂತ ಪ್ರಭಾವಿತನಾಗಿದ್ದ... ಆತ ಅವರ ಭಾಷಣಗಳನ್ನು ಕೇಳಲು ಬರುತ್ತಿದ್ದ. ವಿವೇಕಾನಂದರು ವೇಧಗಳಲ್ಲಿನ ವಿಜ್ಞಾನದ ರಹಸ್ಯಗಳ ಬಗ್ಗೆ ಹೇಳುತ್ತಿದ್ದರೆ ಅಚ್ಚರಿಯಿಂದ ಕೇಳಿಸಿಕೊಳ್ಳುತ್ತಿದ್ದ... ಶಕ್ತಿಯು ರೂಪಾಂತರಗೊಂಡು ವಸ್ತುವಾಗುತ್ತದೆ ಎಂಬ ವೇದಕಾಲೀನ ಜ್ಞಾನದ ಬಗ್ಗೆ ಕೌತುಕನಾಗಿದ್ದ..! ಕ್ರಿಶ್ಚಿಯಾನಿಟಿ ಸೇರಿದಂತೆ ಯಾವುದೇ ಸೆಮೆಟಿಕ್ ಮತಗಳೂ ಕೂಡಾ ಪ್ರಪಂಚದ ಸೃಷ್ಟಿಯ ಬಗ್ಗೆ ನೀಡದ ವಿವರಣೆಗಳನ್ನು ವೇದಗಳು ವೈಜ್ಞಾನಿಕವಾಗಿ ಮುಂದಿಡುತ್ತವೆ ಎಂಬುದನ್ನು ಪಾಶ್ಚಾತ್ಯರು ಅರಿತದ್ದು ವಿವೇಕಾನಂದರಿಂದಲೇ... ಅದುವರೆಗೆ ಚರ್ಚ್ ಗಳು ಇವರೆಲ್ಲ ತಮ್ಮ ಬೈಬಲಿಗೆ ವಿರುದ್ಧವಾದುದನ್ನೇ ಪ್ರಚಾರ ಮಾಡುತ್ತಾರೆ ಅಂತ ವಿಜ್ಞಾನಿಗಳನ್ನು ಶಿಕ್ಷೆಗೆ ಗುರಿಪಡಿಸಿದ್ದನ್ನೇ ನೋಡಿದ್ದ ಜನ ಆಧುನಿಕ ವಿಜ್ಞಾನವನ್ನು ತನ್ನ ಧರ್ಮಗ್ರಂಥಗಳೊಡನೆ ತಾಳೆ ಮಾಡಿ ತನ್ನ ಧರ್ಮ ಇವನ್ನೆಲ್ಲ ಎಂದೋ ಹೇಳಿದೆ ಅಂತ ಸಾಬೀತು ಮಾಡುತ್ತಿದ್ದ ಓರ್ವ ಸನ್ಯಾಸಿಯನ್ನು ಮೊಟ್ಟಮೊದಲ ಬಾರಿಗೆ ನೋಡಿತು...!
ಇವತ್ತು ನಾವು ವಿವೇಕಾನಂದರನ್ನು ಮತ್ತೊಮ್ಮೆ ಕೇಳಬೇಕಿದೆ, ಓದಬೇಕಿದೆ, ಅರಿಯಬೇಕಿದೆ,,, ತಿಳಿಯಬೇಕಿದೆ... ವಿವೇಕಾನಂದರ ಕಾಲದಲ್ಲಿದ್ದಂತೆ ಇವತ್ತಿಗೂ ಮತಾಂತರ ಮಾಡುವ ಪಾದ್ರಿಗಳ ಕುತಂತ್ರಗಳು ಜಾರಿಯಲ್ಲಿಯೇ ಇದೆ... ಅದನ್ನು ಎದುರಿಸಲು ನಮಗೆ ವಿವೇಕಾನಂದರಂತಹ ಸಾವಿರಾರು ವೀರಾಗ್ರಣಿಗಳ ಅಗತ್ಯವಿದೆ... ವಿವೇಕಾನಂದರ ವೇಷ ಭೂಷಣ್, ಅವರ ಕೆಲವು ಭಾಷಣದ ತುಣುಕುಗಳಿಗಷ್ಟೇ ವಿವೇಕಾನಂದರ ಕುರಿತ ನಮ್ಮ ಜ್ಞಾನ ಸೀಮಿತವಾಗಬಾರದು... ಇವತ್ತು ಭಾರತದ ಅತ್ಯಂತ ಗೌರವಾನ್ವಿತ ವಿಜ್ಞಾನ ಸಂಸ್ಥೆ ಅಂತ ಕರೆಸಿಕೊಳ್ಳುವ ಇಂಡಿಯನ್ ಇನ್ಸ್ಟಿ ಟ್ಯೂಟ್ ಆಫ್ ಸಯನ್ಸ್ (ಐ.ಐ ಎಸ್.ಸಿ) ಅನ್ನು ಟಾಟಾ ಇನ್ಸ್ಟಿ ಟ್ಯೂಟ್ ಅಂತ ಇವತ್ತಿಗೂ ಕರೆಯುತ್ತಾರೆ ಯಾಕೆಂದರೆ ಇದನ್ನು ಸ್ಥಾಪಿಸಿದ್ದು ಜಮಶೇಡ್ ಜೀ ಟಾಟಾ ಅವರು... ಆದರೆ ಇದಕ್ಕೆ ಮೂಲ ಪ್ರೇರಣೆ ಇತ್ತದ್ದೇ ಸ್ವಾಮೀ ವಿವೇಕಾನಂದರು ..! ಒಮ್ಮೆ ಜಪಾನಿನಿಂದ ಅಮೆರಿಕಾಗೆ ಹಡಗಿನಲ್ಲಿ ಪ್ರಯಾಣಿಸುತ್ತಿದ್ದಾಗ ಜಮಶೇಡ್ ಜೀ ಟಾಟಾ ಅವರು ವಿವೇಕಾನಂದರನ್ನು ಭೇಟಿಯಾಗುತ್ತಾರೆ. ಆಗ ತಾವು ಭಾರತದಲ್ಲಿ ಉಕ್ಕು ಕಾರ್ಖಾನೆಯನ್ನು ಸ್ಥಾಪಿಸುವುದರ ಬಗ್ಗೆ ಹೇಳಿಕೊಳ್ಳುತ್ತಾರೆ. ಆಗ ಭಾರತದಲ್ಲಿ ವೈಜ್ಞಾನಿಕ ಶಿಕ್ಷಣದ ಅಗತ್ಯದ ಬಗ್ಗೆ, ಆಧುನಿಕ ವಿಜ್ಞಾನ ಮತ್ತು ವಿಜ್ಞಾನಿಗಳ ಅಗತ್ಯ ದೇಶಕ್ಕೆ ಇರುವುದರ ಬಗ್ಗೆ ಟಾಟಾ ಅವರಲ್ಲಿ ಮಾತಾಡಿದ್ದ ವಿವೇಕಾನಂದ ಅವರು ಟಾಟಾ ಅವರಿಗೆ ವೈಜ್ಞಾನಿಕ ಸಂಶೋಧನಾ ಸಂಸ್ಥೆಯೊಂದರ ಸ್ಥಾಪನೆಯ ಅಗತ್ಯವನ್ನು ಮನದಟ್ಟು ಮಾಡಿಸಿದ್ದರು... ವಿವೇಕಾನಂದರಿಂದಾಗಿಯೇ ಮುಂದೆ ಟಾಟಾ ಅವರು ಬೆಂಗಳೂರಿನ ಐ.ಐ ಎಸ್.ಸಿ ಸ್ಥಾಪನೆ ಮಾಡಿದರು... ಇಂಥಾ ವಿಚಾರಗಳನ್ನು ನಾವೀವತ್ತು ನಮ್ಮ ಮಕ್ಕಳಿಗೆ ತಿಳಿಸಬೇಕು..! ವಿವೇಕಾನಂದರ ವ್ಯಕ್ತಿತ್ವ ಮತ್ತು ವಿಚಾರಗಳ ಪ್ರಸ್ತುತತೆಯನ್ನು ನಾವೀವತ್ತು ವ್ಯಾಪಕವಾಗಿ ನಮ್ಮ ಯುವಜನತೆಗೆ ತಿಳಿಸಿಕೊಡಬೇಕು... ಪ್ರತೀ ವರ್ಷ ವಿವೇಕಾನಂದ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು...