Infinite Thoughts

Thoughts beyond imagination

ಕರಿಮಣಿ ತಾಳಿಯನ್ನೇ ಕಿತ್ತುಕೊಂಡ ಕ್ರಿಶ್ಚಿಯನ್ ಕಿಡಿಗೇಡಿಗಳು - ಆಂಧ್ರದಲ್ಲಿ ಮತ್ತೆ ಮತಾಂತರಿಗಳ ಅಟ್ಟಹಾಸ

ಕರಿಮಣಿ ತಾಳಿಯನ್ನೇ ಕಿತ್ತುಕೊಂಡ ಕ್ರಿಶ್ಚಿಯನ್ ಕಿಡಿಗೇಡಿಗಳು - ಆಂಧ್ರದಲ್ಲಿ ಮತ್ತೆ ಮತಾಂತರಿಗಳ ಅಟ್ಟಹಾಸ  

 
ಈಗ ಭಾರತದಲ್ಲಿರುವ ಕ್ರಿಶ್ಚಿಯನ್ನರಷ್ಟೂ ಜನರೂ ಮೂಲತಃ ಹಿಂದೂಗಳೇ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ... ಆಸೆ ಆಮಿಷಗಳಿಗೆ ಬಲಿಬಿದ್ದು ಮತಾಂತರಗೊಂಡು ಕೊರಳಿಗೆ ಶಿಲುಬೆ ಕಟ್ಟಿಕೊಂಡರೂ ತಮ್ಮ ಮೂಲ ಧರ್ಮದ ಆಚರಣೆಗಳನ್ನು ಬಿಡಲಿಕ್ಕಾಗದೆ ಇನ್ನೂ ಪಾಲಿಸುತ್ತಿರುವ ಅಸಂಖ್ಯಾತ ಕ್ರಿಶ್ಚಿಯನ್ನರು ಇಲ್ಲಿದ್ದಾರೆ...ಇಂಥವರ ಪೈಕಿ ಕೆಲವರು ಯೇಸುವಿನಲ್ಲಿ ವಿಶ್ವಾಸ ಕಳೆದುಕೊಂಡು, ಕ್ರಿಶ್ಚಿಯನ್ ಮತದ ಬಗ್ಗೆ ಭ್ರಮನಿರಸನಗೊಂಡು, ನಿಧಾನವಾಗಿ ಮತ್ತೆ ಮಾತೃಧರ್ಮಕ್ಕೆ ಮರಳಿ ಬರಲು ಉತ್ಸುಕರಾಗಿದ್ದಾರೆ. 
 
ಇದೆ ವೇಳೆಗೆ, ಫಾರಿನ್ ಫಂಡ್ ಗಳ ಬಲದೊಂದಿಗೆ ಸತತವಾಗಿ ಮತಾಂತರದಲ್ಲಿ ತೊಡಗಿಕೊಂಡು ಭಾರತವನ್ನು ಕ್ರಿಶ್ಚಿಯನ್ ದೇಶವಾಗಿ ಬದಲಿಸುತ್ತೇವೆಂಬ ಹುಚ್ಚು ಉಮೇದಿನಲ್ಲಿರುವ ಮತಾಂಧ ಕ್ರಿಶ್ಚಿಯನ್ನರೂ ಬಹಳ ದೊಡ್ಡ ಸಂಖ್ಯೆಯಲ್ಲಿದ್ದಾರೆ... ಇತ್ತೀಚಿನ ಕೆಲ ವರ್ಷಗಳಲ್ಲಂತೂ ಹಿಂದೂ ಧಾರ್ಮಿಕ ಆಚರಣೆಗಳನ್ನು ನಿಷೇಧಿಸುವ, ಹಿಂದೂ ದೇವಾಲಯಗಳ ಮೇಲೆ ದಾಳಿ ಮಾಡುವ ಈ ಮತಾಂಧ ಕ್ರಿಶ್ಚಿಯನ್ನರ ಮತಾಂತರದ ಆಟಗಳು ತೀರಾ ಹೆಚ್ಚಾಗಿದೆ. ಚರ್ಚ್ ಗಳ  ಹಿಡಿತದಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವ ಹಿಂದೂ ವಿದ್ಯಾರ್ಥಿ- ವಿದ್ಯಾರ್ಥಿನಿಯರ ಮೇಲೆ ದಬ್ಬಾಳಿಕೆ ನಡೆಸುವುದು, ಹಿಂದೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳನ್ನು, ಪದ್ಧತಿಗಳನ್ನು ಹೀಗಳೆಯುವುದು, ಗಂಡುಮಕ್ಕಳು ಹಣೆಗೆ ನಾಮವಿಟ್ಟುಕೊಂಡರೆ, ತಲೆಯಲ್ಲಿ ಜುಟ್ಟು ಇಟ್ಟುಕೊಂಡರೆ, ಹೆಣ್ಣುಮಕ್ಕಳು ಕೈಗೆ ಬಳೆ ಧರಿಸಿದರೆ, ತಲೆಗೆ ಹೂವು ಮುಡಿದರೆ, ಹಣೆಗೆ ಕುಂಕುಮವಿಟ್ಟುಕೊಂಡರೆ ಅವರನ್ನು ಹೀಯಾಳಿಸುವುದು, ಶಿಸ್ತಿನ ಹೆಸರಲ್ಲಿ  ಶಿಕ್ಷಿಸುವುದು ಮಾಮೂಲಿಯಾಗಿದೆ. ಹೆಣ್ಣುಮಕ್ಕಳು ಉದ್ದನೆಯ ಕೂದಲನ್ನು ಕತ್ತರಿಸಬೇಕು ಅಂತನ್ನೋದೂ ಕೂಡಾ ಶಿಸ್ತಿನ ಪರಿಧಿಯಲ್ಲೇ ಬರುತ್ತದೆ  ಇತ್ತೀಚೆಗೆ ಒಂದು ಕ್ರಿಶ್ಚಿಯನ್ ಶಾಲೆಯಲ್ಲಿ ಸಮಾರಂಭವೊಂದರ ವೇದಿಕೆಯಲ್ಲೇ, ಪಾದ್ರಿಗಳು ಶಿಕ್ಷರೆಲ್ಲರ ಸಮ್ಮುಖದಲ್ಲೇ ವಿದ್ಯಾರ್ಥಿನಿಯೊಬ್ಬಳ ಉದ್ದನೆಯ ಕೂದಲನ್ನು ಕತ್ತರಿಸುವ ವಿಡಿಯೋ ವೈರಲ್ ಆಗಿತ್ತು... ಆದರೆ ವಿದ್ಯಾರ್ಥಿನಿಯರ ಕೂದಲನ್ನು ಕತ್ತರಿಸಿ ಕ್ಯಾನ್ಸರ್ ರೋಗಿಗಳಿಗೆ ವಿಗ್ ಮಾಡಲು ದಾನ ನೀಡಲಾಗುತ್ತದೆ ಎಂಬ ಕಾರಣ ಹೇಳಲಾಯಿತು..! ತೆಲಂಗಾಣದ ಕ್ರಿಶ್ಚಿಯನ್ ಶಾಲೆಯೊಂದರಲ್ಲಿ ತನ್ನ ಹುಟ್ಟುಹಬ್ಬಕ್ಕೆ ಹಣೆಗೆ ತಿಲಕವನ್ನಿಟ್ಟು ಹೋಗಿದ್ದ ಪುಟ್ಟ ಹುಡುಗಿಯೊಬ್ಬಳಿಗೆ  ಎರಡು ಮೂರು ಗಂಟೆಗಳ ಕಾಲ ಪ್ರಾಂಶುಪಾಲರ ಕಚೇರಿಯ ಹೊರಗೆ ನಿಂತುಕೊಳ್ಳುವ ಶಿಕ್ಷೆ ವಿಧಿಸಲಾಯಿತು.. ತಮಿಳುನಾಡಿನ ಒಬ್ಬ ಹುಡುಗ ತನ್ನ ಮನೆಯ ಕಾರ್ಯಕ್ರಮದಲ್ಲಿ ಕೈಗೆ ಮದರಂಗಿ ಇಟ್ಟುಕೊಂಡಿದ್ದ ಎಂಬುದಕ್ಕೆ ಐನೂರು ರೂಪಾಯಿ ದಂಡ ವಿಧಿಸಲಾಗಿತ್ತು... ! ಹೈ ದರಾಬಾದ್ ನ ಹೈದರಗುಡದಲ್ಲಿನ ಶಾಲೆಯೊಂದರಲ್ಲಿ ಮೆಹಂದಿ ಇಟ್ಟದ್ದಕ್ಕಾಗಿ ಹುಡುಗಿಯರನ್ನು ಶಿಕ್ಷಿಸಲಾಗಿತ್ತು... ಹಣೆಯಲ್ಲಿ ವಿಭೂತಿ ಧರಿಸಿದ್ದಕ್ಕೆ ಸಸ್ಪೆಂಡ್, ಶಬರಿಮಲೆಯ ಮಾಲೆ ಧರಿಸಿದ್ದಕ್ಕೆ ಶಿಕ್ಷೆ... ಕೈಯಲ್ಲಿ ರಾಖೀ ಧರಿಸಿದ್ದಕ್ಕೆ ಶಿಕ್ಷೆ ... ಹೀಗೆ ಕ್ರಿಶ್ಚಿಯನ್ ಶಾಲೆಗಳು ಒಂದಿಲ್ಲೊಂದು ಹಿಂದೂ ಧಾರ್ಮಿಕ ಆಚರಣೆಗಳ ಮೇಲೆ ದಾಳಿ ನಡೆಸುತ್ತಾ ವಿಕೃತಿ ಮೆರೆಯುತ್ತವೆ. 
 
ಈಗ ಮೊನ್ನೆ ಆಂಧ್ರಪ್ರದೇಶದ ವಿಜಯವಾಡದ ಮೇರಿಸ್ ಸ್ಟೆಲ್ಲಾ ಕಾಲೇಜಿನಲ್ಲಿ ಪರೀಕ್ಷೆ ಬರೆಯಲು ಹೋದ ವಿದ್ಯಾರ್ಥಿನಿಯರನ್ನು ತಡೆದ ಅಲ್ಲಿನ ಪರೀಕ್ಷಾ ಸಿಬ್ಬಂದಿ ಅವರು ತಮ್ಮ ಮೈಯಲ್ಲಿನ ಒಡವೆಗಳನ್ನೆಲ್ಲಾ ಕಳಚಬೇಕೆಂದು ಹೇಳಿದರು...  ಆ ಪೈಕಿ ಕೆಲ ವಿವಾಹಿತ ವಿದ್ಯಾರ್ಥಿನಿಯರು ಧರಿಸಿದ ಕರಿಮಣಿ ಸರ, ತಾಳಿ, ಕಾಲುಂಗುರ ಮತ್ತು ಕಿವಿಯೋಲೆಗಳನ್ನು ಬಿಚ್ಚಿಸಿದ್ದಾರೆ. ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ ಪತಿ ಜೀವಂತ ಇರುವಾಗಲೇ ಕರೀಮಣಿಯನ್ನೂ, ತಾಳಿಯನ್ನೂ ಕಾಲುಂಗುರಗಳನ್ನೂ ಮೈಮೇಲಿನಿಂದ ತೆಗೆಯುವ ಪ್ರಶ್ನೆಯೇ ಇಲ್ಲ... ಅದು ಅಮಂಗಳ ಅಂತಲೂ, ಅದರಿಂದ ಗಂಡನಿಗೆ ವಿಪತ್ತೆಂದೂ ಭಾವಿಸಲಾಗುತ್ತದೆ. ಕರಿಮಣಿ ಮತ್ತು ತಾಳಿ ಎಂಬುದಕ್ಕೆ  ಭಾರತೀಯ ಸಂಸ್ಕೃತಿಯಲ್ಲಿ ಭಾರೀ ಮಹತ್ವದ ಸ್ಥಾನವಿದೆ. ಮೇರಿಸ್ ಸ್ಟೆಲ್ಲಾ ಕಾಲೇಜಿನ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿ ಯಾವುದೊ ಸಣ್ಣ ನೆಪ ಹಿಡಿದುಕೊಂಡು ಹಿಂದೂ ಹೆಣ್ಣುಮಕ್ಕಳ ಧಾರ್ಮಿಕ ಭಾವನೆ ಗಳಿಗೆ ತೀವ್ರ ಘಾಸಿಯುಂಟುಮಾಡಿದೆ... ಮತಾಂಧ ಕ್ರಿಶ್ಚಿಯನ್ ಮನಸ್ಸುಗಳಲ್ಲಿ ತುಂಬಿಕೊಂಡಿರುವ ವಿಕೃತಿಯ ಕೊಳಚೆಯನ್ನು ಈ ಘಟನೆ ಹೊರಹಾಕಿದೆ... ನಿನ್ನ ಶತ್ರುವನ್ನೂ ಪ್ರೀತಿಸು ಎಂದ ಏಸುವಿನ ಭೋದನೆಗಳನ್ನು ಬಿಡಿ,  ಏಸುವೇ ಇವರಿಗೆ ಲೆಕ್ಕಕ್ಕಿಲ್ಲ...  ಶಿಲುಬೆಗೇರಿದ ಏಸುವೀಣೆ ಮೂರ್ತಿ ಇವರಿಗೊಂದು ಮಾರ್ಕೆಟಿಂಗ್ ಟೂಲ್ ಇದ್ದ ಹಾಗೆ...ಅಷ್ಟೇ...!  
 
 
ಅಂದ ಹಾಗೆ ಭಾರತೀಯ ಸಂಸ್ಕೃತಿಯನ್ನೂ, ಹಿಂದೂ ಧಾರ್ಮಿಕ ನಂಬಿಕೆ, ಆಚರಣೆಗಳನ್ನೂ ತೀವ್ರವಾಗಿ ದ್ವೇಷಿಸುವ ಇದೇ ಕ್ರಿಶ್ಚಿಯನ್ ಮತಾಂಧರು, ಅದೇ ಹಿಂದೂ ಧಾರ್ಮಿಕ ಆಚರಣೆಗಳನ್ನು ತಮ್ಮ ಮತಾಂತರದ ಉದ್ದೇಶಕ್ಕೆ ಹೇರಳವಾಗಿ ಬಳಸಿಕೊಳ್ಳುತ್ತಾರೆ..!  ಅಷ್ಟೇ ಅಲ್ಲ ದಕ್ಷಿಣ ಭಾರತದ ಅದೆಷ್ಟೋ ಕ್ರಿಶ್ಚಿಯನ್ ಪಂಗಡಗಳು ಇವತ್ತಿಗೂ ತಮ್ಮ ಹಿಂದೂ ಹಿನ್ನೆಲೆಯನ್ನು, ತಮ್ಮ ಪೂರ್ವಜರು ಪಾಲಿಸುತ್ತಿದ್ದಂಥಾ ರೀತಿರಿವಾಜುಗಳನ್ನು ಮರೆತಿಲ್ಲ... ನಮ್ಮ ಕರ್ನಾಟಕದ ಅದರಲ್ಲೂ ಮಂಗಳೂರು ಭಾಗದ ಕೊಂಕಣಿ ಕ್ರಿಶ್ಚಿಯನ್ನರನ್ನೇ ನೋಡಿ... ಇವರ ಮದುವೆಯಲ್ಲಿ ಧಾರೆ ಸೀರೆಯೂ ಇದೆ... ಧಾರೆ ಮಣಿ ಅಂದರೆ ಕರೀಮಣಿಯೂ ಇದೆ...! ಅದಕ್ಕೆ ತಾಳಿಯೂ ಇದೆ...! ಈ ಕರಿಮಣಿ ಅಥವಾ ಮಾಂಗಲ್ಯಕ್ಕೆ ಅವರ ಕೊಂಕಣಿ ಭಾಷೆಯಲ್ಲಿ "ಪಿರ್ದುಕ್" ಅಂತ ಕರೀತಾರೆ...! ಈ ತಾಳಿಯಲ್ಲಿ ಶಿಲುಬೆ ಇರುತ್ತದೆ..! ಶಿಲುಬೆಯ ಮೇಲೆ ಪವಿತ್ರ ಪ್ರೇತಾತ್ಮನ ಸಂಕೇತವಾಗಿ ಪಾರಿವಾಳದ ಚಿತ್ರ ಇರುವುದೂ ಉಂಟು..!  ಅಂದ ಹಾಗೆ ಗೋವಾದ ಕೊಂಕಣಿಗಳಲ್ಲಿ ಕಾಶಿ ತಾಳಿ ಅಂತ ಇನ್ನೊಂದು ಮಾಂಗಲ್ಯ ಸರವಿರುತ್ತದೆ... ಅದನ್ನು ಹವಳದಿಂದ ಮಾಡಲಾಗುತ್ತದೆ... ಗೋವಾ ಮೂಲದ ಕೊಂಕಣಿ ಕ್ರಿಶ್ಚಿಯನ್ನರಲ್ಲೂ ಈ ಹವಳದ ಮಾಂಗಲ್ಯ ಕೂಡಾ ಇರುತ್ತದೆ...ಅದನ್ನವರು "ಕಂಠಿ" ಅಂತನ್ನುತ್ತಾರೆ... ಅಂದ ಹಾಗೆ ಈ ಮಂಗಳೂರು ಕೊಂಕಣಿ ಕ್ಯಾಥೋಲಿಕ್ ಕ್ರಿಶ್ಚಿಯನ್ನರಲ್ಲಿ ಮದುಮಗಳಿಗೆ ತಾಳಿಯನ್ನು ಮದುಮಗ ಕಟ್ಟುವುದಿಲ್ಲ... ಬದಲಿಗೆ ಮದುಮಗನ ತಾಯಿ ಅಂದರೆ ಅತ್ತೆ ಕಟ್ಟುತ್ತಾರೆ...! 
 
ಇನ್ನು ಕೇರಳದ ಕ್ರಿಶ್ಚಿಯನ್ನರಲ್ಲಿ ಹಲವಾರು ಪಂಗಡಗಳಿವೆ...ಹೆಚ್ಚಿನೆಲ್ಲ ಪಂಗಡಗಳಲ್ಲಿ ಅದರಲ್ಲೂ ಸಿರಿಯನ್ ಕ್ಯಾಥೋಲಿಕ್ಕರ ಮದುವೆಯಲ್ಲಿ ತಾಳಿ ಪ್ರಧಾನ ಪಾತ್ರವಹಿಸುತ್ತದೆ... ಕೇರಳದಲ್ಲಿ ಈ ತಾಳಿಗೆ  "ಮಿನಿನ್" ಅಥವಾ "ಮಿನ್ನು" ಅಂತ ಕರೆಯುತ್ತಾರೆ...   ಈ ತಾಳಿಯನ್ನು ಕಟ್ಟುವುದು ಗಂಡನೇ ಆದರೂ ಅದರಲ್ಲೊಂದು ವಿಶೇಷ ಇದೆ... ಮದುಮಗಳಿಗೆ ಗಂಡನ ಮನೆಯಿಂದ ಕೊಡುವ ಸೀರೆಯನ್ನು "ಮಂತ್ರಕೊಡಿ" ಅಂತನ್ನುತ್ತಾರೆ...! ಈ "ಮಂತ್ರಕೊಡಿ" ಅಂದರೆ ರೇಷ್ಮೆ ಸೀರೆಯಿಂದ ೨೧ ನೂಲಿನ ಎಳೆಗಳನ್ನು  ಜಾಗರೂಕತೆಯಿಂದ ಬಿಡಿಸಿಕೊಂಡು ಈ ನೂಲುಗಳನ್ನು ನೇಯ್ದು ಅದರಲ್ಲೇ ಆ ತಾಳಿಯನ್ನು ಕಟ್ಟಲಾಗುತ್ತದೆ...! 
 
ತಮಿಳುನಾಡಿನ ಕ್ರಿಶ್ಚಿಯನ್ ಪಂಗಡಗಳಲ್ಲೂ ತಾಳಿ ಕಟ್ಟುವ ಸಂಪ್ರದಾಯ ಇದೆ. ಅಲ್ಲಿಯೂ ತಾಳಿ ಮದುವೆಯಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ತಮಿಳು ಕ್ರಿಶ್ಚಿಯನ್ನರಲ್ಲಿ ಹಲವು ಪಂಗಡಗಳಿರುವಂತೆಯೇ ಹಲವು ರೀತಿಯ ತಾಳಿಗಳೂ ಇವೆ..   ಇದೆಲ್ಲವೂ ಭಾರತೀಯ ಹಿಂದೂ ಸಂಪ್ರದಾಯಗಳೇ..! ಹೀಗೆ ಹಿಂದೂ ಆಚರಣೆಗಳನ್ನೇ ಪಾಲಿಸುವ ಇದೇ ಕ್ರಿಶ್ಚಿಯನ್ನರು ಇನ್ನೊಂದು ಕಡೆ ಅದೇ ಹಿಂದೂ ಆಚರಣೆಗಳನ್ನು ಲೇವಡಿ ಮಾಡುತ್ತಾರೆ..! ನಿಕೃಷ್ಟವಾಗಿ ಕಾಣುತ್ತಾರೆ... ನಿಷೇಧಿಸುತ್ತಾರೆ... ತಮ್ಮ ಶಾಲೆಗಳಲ್ಲಿರುವ ಹಿಂದೂ ಮಕ್ಕಳು ತಮ್ಮ ಸಂಪ್ರದಾಯ ಪಾಲಿಸಿದರೆ ಶಿಕ್ಷಿಸುತ್ತಾರೆ...! ಅವರ ಮತಾಂಧ ಮನಸ್ಸುಗಳಿಗೆ, ಏಸುಕ್ರಿಸ್ತನ ಯಾವುದೇ ಬೋಧನೆಗಳೂ ನಾಟುವುದಿಲ್ಲ... ಆದರೆ  ಶಿಲುಬೆಗೆ ಮೊಳೆ  ಹೊಡೆದ  ಅದೇ  ಏಸು ಕ್ರಿಸ್ತನ ಮೂರ್ತಿಯನ್ನಿಟ್ಟುಕೊಂಡು ಬಡ ಮುಗ್ಧ ಜನರನ್ನು ಆಸೆ ಆಮಿಷಕ್ಕೊಳಪಡಿಸಿ ಮತಾಂತರ ಮಾಡಿ ಫಾರಿನ್ ಫಂಡ್ ಎತ್ತುತ್ತಾರೆ...! ಭಾರತದಲ್ಲಂತೂ ಇಂಥ ಮಿಷನರಿಗಳದ್ದೇ ದೊಡ್ಡ ಮಾಫಿಯಾ ನಡೆಯುತ್ತಿದೆ... 

Related posts