ಗೀತಾ ಜಯಂತಿ!!
ಆತ್ಮವಿಸ್ಮೃತಿಯಿಂದ ಯುದ್ಧಭೂಮಿಯಲ್ಲಿ ಶಸ್ತ್ರತ್ಯಾಗ ಮಾಡಿ ನಿಂತ ಅರ್ಜುನನಿಗೆ
"ಕ್ಲೈಬ್ಯಂ ಮಾ ಸ್ಮ ಗಮಃ ಪಾರ್ಥ ನೈತತ್ತ್ವಯ್ಯುಪಪದ್ಯತೇ ।
ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ" ಎಂದು ಚಾಟಿಯಿಂದ ಹೊಡೆದ ಹಾಗೆ ಬಡಿದೆಬ್ಬಿಸಿ "ಯುದ್ಧಾಯ ಕೃತನಿಶ್ಚಯಃ" ಎಂದು ಸಾರಿದ ಗೀತಾಚಾರ್ಯ ಶ್ರೀಕೃಷ್ಣ.
ಜಗತ್ತಿನ ಅನೇಕ ದಾರ್ಶನಿಕರಿಗೆ ಅಧ್ಯಾತ್ಮದ ಹೆಬ್ಬಾಗಿಲು ಶ್ರೀ ಭಗವದ್ಗೀತೆ, ಗೀತೆ ಬೀರಿದ ಬೆಳಕು, ತೋರಿದ ದಾರಿ ಅನನ್ಯ. ಪ್ರಸ್ಥಾನತ್ರಯಗಳಲ್ಲಿ ಒಂದಾದ ಭಗವದ್ಗೀತೆ ಸನಾತನ ಸಂಸ್ಕೃತಿಯ ಅದಮ್ಯ ಪ್ರತೀಕ.
ಇಂದು ಗೀತಾ ಜಯಂತಿ, ಕೃಷ್ಣ ಗೀತೆಯ ಸಾರವನ್ನು ಅರ್ಜುನನಿಗೆ ತಿಳಿಸಿದ ಪವಿತ್ರ ದಿನ.
ಎಲ್ಲರಿಗೂ ಗೀತಾ ಜಯಂತಿಯ ಶುಭಾಶಯಗಳು!!
#ಅನಂತಕುಮಾರಹೆಗಡೆ