ರಾಷ್ಟ್ರೀಯ ಉತ್ತಮ ಆಡಳಿತ ದಿನ!!
ಭಾರತೀಯ ಪಾರಂಪರಿಕ ಚಿಂತನೆಯಲ್ಲಿ ಸಮಾಜವೇ ಪ್ರಧಾನ, ರಾಜಕೀಯಕ್ಕೆ ನಂತರದ ಸ್ಥಾನ, ಅರ್ಥಕ್ಕೆ ಕೊನೆಯ ಸ್ಥಾನ, ಇದೆಲ್ಲದಕ್ಕೂ ಮೀರಿ ಧರ್ಮಕ್ಕೆ ಅಗ್ರ ಸ್ಥಾನ. ಧರ್ಮ- ಸಮಾಜ- ರಾಜ್ಯ- ಅರ್ಥ: ಇದು ಆಡಳಿತದ ಸಂರಚನೆ.
ಸಾವಿರಾರು ವರ್ಷಗಳ ಈ ಯಶಸ್ವೀ ಮಾದರಿಯನ್ನು ಇಂದಿನ ಆಧುನಿಕ ರಾಜಕೀಯ ಪ್ರೇರಿತ ಆಡಳಿತದಲ್ಲಿ ಪುನರಾತ್ಥಾನಗೊಳಿಸುವ ಸಮಯ ಒದಗಿ ಬಂದಿದೆ.
Less Government and More Governance (ಸರಕಾರ ಗೌಣ, ಆಡಳಿತವೇ ಪ್ರಧಾನ) ಎಂಬುದು ಪ್ರಸಿದ್ಧ ರೂಢಿಮಾತು. ರಾಷ್ಟ್ರದ ಅಭ್ಯುದಯಕ್ಕೆ ಹಾಗೂ ಜನಹಿತಕ್ಕೆ ಉತ್ತಮ ಯೋಜನೆಗಳನ್ನು (Policy) ಸಿದ್ಧಪಡಿಸಿ ಅವುಗಳನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತರುವುದೇ ಉತ್ತಮ ಆಡಳಿತ (Good Governance).
ಭಾರತ ಕಂಡ ಧೀಮಂತ ರಾಜಕಾರಣಿ, ಅಜಾತಶತ್ರು, ಮಾಜಿ ಪ್ರಧಾನಿ ಶ್ರೀ ಅಟಲ ಬಿಹಾರಿ ವಾಜಪೇಯಿ ಅವರ ಜನ್ಮದಿನವನ್ನು ರಾಷ್ಟ್ರೀಯ ಉತ್ತಮ ಆಡಳಿತ ದಿನ (National Good Governance Day) ವನ್ನಾಗಿ ರಾಷ್ಟ್ರಾದ್ಯಂತ ಆಚರಿಸುತ್ತಿರುವುದು ಸ್ತುತ್ಯಾರ್ಹ ಸಂಗತಿ.
ಸನ್ಮಾನ್ಯ ಅಟಲ್ ಜಿ ಅವರು ಪ್ರಧಾನಿಗಳಾಗಿದ್ದಾಗ ಕೈಗೊಂಡ ಯೋಜನೆಗಳು, ತಂದ ಸುಧಾರಣೆಗಳು, ನಿರ್ಮಿಸಿದ ಅಭಿವೃದ್ಧಿ ಕಾರ್ಯಗಳು ಅನನ್ಯ. ವಿಜ್ಞಾನ, ಮಾಹಿತಿ ಮತ್ತು ತಂತ್ರಜ್ಞಾನದ ಸಹಾಯದಿಂದ ಭಾರತದ ಪ್ರಗತಿಯ ವೇಗವನ್ನು ಹೆಚ್ಚಿಸಿದ ಕೀರ್ತಿ ವಾಜಪೇಯಿ ಅವರಿಗೆ ಸಲ್ಲುತ್ತದೆ.
ರಾಜಕೀಯ ಸೈದ್ಧಾಂತಿಕ ನಿಲುವುಗಳನ್ನು ಮೀರಿ ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋದ ಅವರ ಹೃದಯ ವೈಶಾಲ್ಯತೆ, ಆಡಳಿತ ನಿಪುಣತೆ ಹಾಗೂ ವಾಕ್ಚಾತುರ್ಯ ಎಂದಿದಿಗೂ ಮಾದರಿ.
ಆ ಮಹಾನ್ ನಾಯಕನಿಗೆ ಜನ್ಮದಿನದ ಶುಭಾಶಯಗಳು