ಮಧ್ವನವಮಿ
ಭಾರತೀಯ ತತ್ವಶಾಸ್ತ್ರದ ಇತಿಹಾಸದಲ್ಲಿ ಮೇರು ಸ್ಥಾನ ಪಡೆದ, ತತ್ವವಾದ ಸಿದ್ಧಾಂತದ ಪ್ರವರ್ತಕರಾದ ಆಚಾರ್ಯ ಮಧ್ವರು ಇಂದು ಉಡುಪಿಯಿಂದ ಬದರಿಗೆ ಸಾಗಿದ ದಿನ. ಮಾಘಮಾಸ ಶುಕ್ಲಪಕ್ಷದ ನವಮಿಯ ದಿನವನ್ನು ಆಚಾರ್ಯ ಮಧ್ವರ ಸ್ಮರಣೆಯಲ್ಲಿ 'ಮಧ್ವನವಮಿ' ಎಂದು ಆಚರಿಸಲಾಗುತ್ತದೆ.
ಪ್ರಪಂಚದಾದ್ಯಂತ ಮಾಧ್ವ ವಾಙ್ಮಯವನ್ನು ಒಪ್ಪಿ, ಆಚಾರ್ಯ ಮಧ್ವರ ತತ್ವ ಸಿದ್ಧಾಂತದ ಅನುಗುಣವಾಗಿ ಬದುಕು ಸಾಗಿಸುತ್ತಿರುವ ಲಕ್ಷಾಂತರ ಭಕ್ತರಿಗೆ ಈ ದಿನ ಅತ್ಯಂತ ಮಹತ್ವದ್ದು. ಆಚಾರ್ಯರು ತಮ್ಮ ಶಿಷ್ಯರಿಗೆ ಸಶರೀರರಾಗಿ ದರ್ಶನವಿತ್ತ ಕೊನೆಯ ದಿನ ಇವತ್ತು.
ಬ್ರಹ್ಮಸೂತ್ರ, ಉಪನಿಷತ್ತು ಹಾಗೂ ಭಗವದ್ಗೀತೆ ಈ ಪ್ರಸ್ಥಾನತ್ರಯಗಳಿಗೆ ಭಾಷ್ಯವನ್ನು ರಚಿಸಿದ ಪ್ರಸ್ಥಾನಾಚಾರ್ಯರು ಆಚಾರ್ಯ ಮಧ್ವರು.
ಅವರ ಬದುಕು, ಬರಹ ಹಾಗೂ ಸಿದ್ಧಾಂತ ನಿಜಕ್ಕೂ ಅನನ್ಯವಾದದ್ದು..
ಆಚಾರ್ಯ ದೇವೋ ಭವ!
#ಅನಂತಕುಮಾರಹೆಗಡೆ