Home / Media / Digital News

Digital News

ಕೆಂಪಂಗಿ ಕಪಿಗಳ ಕುತಂತ್ರ ಮತ್ತೆ ಪ್ರಾರಂಭ: ಅನಂತ್ ಹೆಗಡೆ

ಅನಂತ್ ಕುಮಾರ್ ಹೆಗಡೆ ವ್ಯಂಗ್ಯ

ಬೆಂಗಳೂರು: ಇದು ಇನ್ನು ಪ್ರಾರಂಭವಷ್ಟೇ…. ಇನ್ನು ಮುಂದೆ ಇದರ ವಿರಾಟ ವಿಕಟ ರೂಪ ಪ್ರಕಟವಾಗಲಿದೆ…

ದಿಲ್ಲಿಯಲ್ಲಿ ರಾಜ್ಯ ಬಿಜೆಪಿ ಸಭೆ ಸಂದರ್ಭದಲ್ಲಿ ತಮ್ಮನ್ನು ವೇದಿಕೆಯಿಂದ ಕೆಳಗಿಳಿಸಲಾಯಿತು ಎಂಬ ಮಾಧ್ಯಮ ವರದಿಗಳ ಬಗ್ಗೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ತಮ್ಮದೇ ಧಾಟಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ತಮ್ಮ ವೆಬ್‌ಸೈಟ್‌ನಲ್ಲಿ ಈ ಕುರಿತಾಗಿ ದೀಘಾವಾಗಿ ಬರೆದುಕೊಂಡಿರುವ ಸಚಿವರು ಅಂದ ಏನೇನಾಯಿತು ಎಂಬುದನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿಯೂ ಹಂಚಿಕೊಂಡಿದ್ದಾರೆ. ಅವರು ಹೇಳಿರುವುದಿಷ್ಟು…

ಇಷ್ಟು ಚಿಕ್ಕ ಘಟನೆಗೆ ಒಂದಷ್ಟು ರೆಕ್ಕೆ ಪುಕ್ಕ ಕಟ್ಟಿ, ಒಂದಿಷ್ಟು ಬಣ್ಣ ಮೆತ್ತಿ, ರೂಪಬದಲಿಸಿ ಹಾರಿಬಿಡಲು ಸಿದ್ಧವಾಗಿ ಕೂತಿದ್ದರಲ್ಲಾ ಕೆಲಮಂದಿ, ಅವರಿಗೆ ಒಂದೇ ಏಟಿಗೆ ಎರಡು ಮೂರು ಗುರಿಗಳನ್ನು ಹೊಡೆಯುವ ಕೆಟ್ಟ ಚಾಳಿ.

ರಾಜ್ಯದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿರುವ ಹೊತ್ತಿನಲ್ಲೇ ಇದು ನಡೆದದ್ದರಿಂದ, ಇದರಲ್ಲಿ ರಾಜ್ಯಾಧ್ಯಕ್ಷ ಯಡ್ಯೂರಪ್ಪನವರನ್ನೂ ಎಳೆದು ತರಲಾಯಿತು. ನಿಜಕ್ಕಾದರೆ ಕೆಳಗೆ ಕುಳಿತಿದ್ದ ನನ್ನನ್ನು ವೇದಿಕೆಯ ಮೇಲೆ ಕರೆಸಿ ಕೂರಿಸಿದವರೇ ಯಡ್ಯೂರಪ್ಪ.

ಆದರೆ ಅವರೇ ನನ್ನನ್ನು ಅವಮಾನಿಸಿದರು ಅನ್ನೋ ರೀತಿಯಲ್ಲಿ ಸುದ್ದಿ ಹಬ್ಬಿಸಲಾಯಿತು. ಇದರಿಂದ ಈ ವಿಘ್ನ ಸಂತೋಷಿ ಎಡಚರು ಎರಡು ರೀತಿಯ ಈಡು ಹೊಡೆದರು. ಒಂದು, ಅನಂತಕುಮಾರ ಹೆಗಡೆಯನ್ನು ತೇಜೋವಧೆ ಮಾಡುವುದು; ಇನ್ನೊಂದು, ಯಡ್ಯೂರಪ್ಪನವರ ಇಮೇಜನ್ನೂ ಹಾಳುಮಾಡುವುದು.

ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ. ಒಳಗೊಳಗೇ ಅವರ ನಾಯಕರ ಮಧ್ಯೆಯೇ ಕಚ್ಚಾಟ ಇದೆ ಅಂತ ತೋರಿಸುವುದು… ರಾಜ್ಯ ರಾಜಕಾರಣದಿಂದ ಹೆಗಡೆಯವರನ್ನು ದೂರವಿಡಲಾಗುತ್ತಿದೆ ಎಂದು ಬಿಂಬಿಸುವುದು ಇವರ ಹಿಡನ್ ಅಜೇಂಡಾ ಆಗಿತ್ತು. ಇದರಲ್ಲಿ ಈ ಮಂದಿ ತಕ್ಕ ಮಟ್ಟಿಗೆ ತಮ್ಮ ಕಾರ್ಯ ನಿರ್ವಹಿಸಿದರು..!

http://www.epatrike.com/central-minister-ananth-hegde-lashes-at-critics/

Related posts