Home / Media / Digital News

Digital News

ಉಗ್ರನ ಹೊಗಳಿಕೆ ತಂದ ಸಂಕಷ್ಟ; ಮುಸ್ಕಾನ್ ವಿಚಾರಣೆ ನಡೆಸುವಂತೆ ಸಿಎಂಗೆ ಪತ್ರ ಬರೆದ ಸಂಸದ ಹೆಗಡೆ

ಅಲ್ ಖೈದಾ ಉಗ್ರ ಅಲ್ ಝವಾಹಿರಿ ಹೊಗಳಿಕೆ ಬಳಿಕ ಮಂಡ್ಯದ ಯುವತಿ ಮುಸ್ಕಾನ್ ಗೆ ಧರ್ಮ ಸಂಕಟ ಶುರುವಾಗಿದೆ.‌ ಒಂದು ಕಡೆ ರಾಜ್ಯ ಸರ್ಕಾರ ಉಗ್ರನ ಹೇಳಿಕೆ ಬಳಿಕ ಹಿಜಾಬ್ ವಿವಾದದಲ್ಲಿ ಹಿಜಾಬ್ ಗಾಗಿ ಪಟ್ಟು ಹಿಡಿದಿದ್ದ ಯುವತಿಯರಿಗೂ ಉಗ್ರ ಸಂಘಟನೆಗಳಿಗೂ ಲಿಂಕ್ ಇದ್ಯಾ ಎಂಬ ನಿಟ್ಟಿನಲ್ಲಿ ತನಿಖೆಗೆ ಮುಂದಾಗುತ್ತಿದೆ.

 
ಮುಸ್ಕಾನ್

ಮುಸ್ಕಾನ್

  • SHARE THIS:
  •  
  •  
  •  
  •  

ಅಲ್ಲಾ ಹೋ ಅಕ್ಬರ್ ಎಂದು ಕೂಗಿದ್ದ ವಿದ್ಯಾರ್ಥಿನಿ ಮುಸ್ಕಾನ್ (Student Muskan) ಳನ್ನು ತನಿಖೆಗೆ ಒಳಪಡಿಸಬೇಕೆಂದು ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Boomai) ಅವರಿಗೆ ಸಂಸದ ಅನಂತಕುಮಾರ್ ಹೆಗಡೆ (MP Ananth kumar Hegde) ಪತ್ರ ಬರೆದಿದ್ದಾರೆ. ಹಿಜಾಬ್ ವಿವಾದ (Hijab Row) ವೇಳೆ ಕಾಲೇಜಿನ ಮುಂಭಾಗದಲ್ಲಿ ಕೇಸರಿ ಶಾಲು (Saffron Shawl) ಧರಿಸಿದ ವಿದ್ಯಾರ್ಥಿಗಳು ಆಕೆಯ ಮುಂದೆ ಜೈ ಶ್ರೀರಾಮ ಘೋಷಣೆ ಕೂಗಿದ್ದಾಗ, ವಿದ್ಯಾರ್ಥಿನಿ ಪ್ರತಿಯಾಗಿ ಅಲ್ಲಾ ಹು ಅಕ್ಬರ್ ಎಂದು ಕೂಗಿದ್ದಳು. ಈ ವಿಷಯ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಚರ್ಚೆಗೆ ಗ್ರಾಸವಾಗಿತ್ತು. ಇತ್ತಿಚೆಗೆ ಈ ಯುವತಿಯನ್ನು ಭಾರತದ ಶ್ರೇಷ್ಠ ಮಹಿಳೆ ಎಂದು ಅಲ್ ಖೈದಾ ಭಯೋತ್ಪಾದಕ ಎಂದು ಹೇಳಿದ್ದನು. ಇದೀಗ ಕಾಣದ ಕೈಗಳು ಮತ್ತು ನಿಷೇಧಿತ ಮುಸ್ಲಿಂ ಸಂಘಟನೆ ಜೊತೆ ಇರುವ ಸಂಬಂಧದ ಬಗ್ಗೆ ತನಿಖೆ ಮಾಡುವಂತೆ ಆಗ್ರಹ ಪಡಿಸಿ ಅನಂತ್ ಕುಮಾರ್ ಹೆಗಡೆ ಪತ್ರ ಬರೆದಿದ್ದಾರೆ.


ಅಲ್ ಖೈದಾ ಉಗ್ರ ಅಲ್ ಝವಾಹಿರಿ ಹೊಗಳಿಕೆ ಬಳಿಕ ಮಂಡ್ಯದ ಯುವತಿ ಮುಸ್ಕಾನ್ ಗೆ ಧರ್ಮ ಸಂಕಟ ಶುರುವಾಗಿದೆ.‌ ಒಂದು ಕಡೆ ರಾಜ್ಯ ಸರ್ಕಾರ ಉಗ್ರನ ಹೇಳಿಕೆ ಬಳಿಕ ಹಿಜಾಬ್ ವಿವಾದದಲ್ಲಿ ಹಿಜಾಬ್ ಗಾಗಿ ಪಟ್ಟು ಹಿಡಿದಿದ್ದ ಯುವತಿಯರಿಗೂ ಉಗ್ರ ಸಂಘಟನೆಗಳಿಗೂ ಲಿಂಕ್ ಇದ್ಯಾ ಎಂಬ ನಿಟ್ಟಿನಲ್ಲಿ ತನಿಖೆಗೆ ಮುಂದಾಗುತ್ತಿದೆ.

ಹೀಗಿರುವಾಗಲೇ ಮಂಡ್ಯದಲ್ಲಿ ಮುಸ್ಕಾನ್ ಕುಟುಂಬದ ವಿಚಾರಣೆ ನಡೆಸುವಂತೆ ಪೊಲೀಸರಿಗೆ ದೂರು ನೀಡಲಾಗಿದೆ. ಹೀಗಾಗಿ ಪೊಲೀಸರು ಮುಸ್ಕಾನ್ ಕುಟುಂಬವನ್ನ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

Source : https://kannada.news18.com/news/state/bk-hariprasad-slams-minister-araga-jnanendra-on-chandru-murder-case-and-psi-exams-scam-mrq-753810.html


Related posts